ಬ್ರೇಕಿಂಗ್ ನ್ಯೂಸ್
23-02-21 12:26 pm Headline Karnataka News Network ದೇಶ - ವಿದೇಶ
ಭೋಪಾಲ್, ಫೆ.23: ನಿಂತಿದ್ದ ಟ್ಯಾಂಕರ್ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ 6 ಜನ ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಮಧ್ಯಪ್ರದೇಶದ ಇಂದೋರ್ನ ತಲವಾಲಿ ಚಾಂದ್ ಬಳಿ ನಡೆದಿದೆ.
ಬೆಳಗಿನ ಜಾವ 2 ಗಂಟೆ ಸುಮಾರಿಗೆ ಘಟನೆ ನಡೆದಿರುವುದಾಗಿ ಅಂದಾಜಿಸಲಾಗಿದ್ದು, ವೇಗವಾಗಿ ಚಲಿಸುತ್ತಿದ್ದ ಕಾರು ಪೆಟ್ರೋಲ್ ಬಂಕ್ ಸಮೀಪದಲ್ಲಿ ನಿಂತಿದ್ದ ತೈಲ ಸಾಗಣೆ ಟ್ಯಾಂಕರ್ಗೆ ಗುದ್ದಿದೆ. ಗುದ್ದಿದ ರಭಸಕ್ಕೆ ಕಾರು ಸಂಪೂರ್ಣ ಜಖಂ ಆಗಿದ್ದು, ಕಾರಿನಲ್ಲಿದ್ದ 6 ಜನ ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತರಾಗಿದ್ದಾರೆ.
ಮೃತ ಯುವಕರೆಲ್ಲರೂ ಇಂದೋರ್ನ ನಿವಾಸಿಗಳಾಗಿದ್ದು, 18 ರಿಂದ 28 ವರ್ಷ ಪ್ರಾಯದವರೆಂದು ತಿಳಿದುಬಂದಿದೆ. ಈ ಯುವಕರ ತಂಡವು ಇಂದೋರ್ನ ಹೊರ ಪ್ರಾಂತ್ಯದಲ್ಲಿರುವ ಮಾಂಗ್ಲಿಯಾದಿಂದ ತಮ್ಮ ನಗರಕ್ಕೆ ಮರಳುತ್ತಿದ್ದರು ಎಂದು ಲಸುದಿಯ ಪೊಲೀಸ್ ಠಾಣೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಘಟನೆ ನಡೆದ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ಮೃತರನ್ನು ರಿಶಿ ಪವಾರ್, ಸೂರಜ್, ಚಂದ್ರಭಾನ್ ರಘುವಂಶಿ, ಸೋನು ಜತ್, ಸುಮಿತ್ ಸಿಂಗ್ ಮತ್ತು ದೇವ್ ಎಂದು ಗುರುತಿಸಲಾಗಿದೆ.
ಅಪಘಾತವು ನಸುಕಿನ ವೇಳೆಯಲ್ಲಿ ನಡೆದಿರುವುದರಿಂದ ಚಾಲಕನಿಗೆ ನಿದ್ರೆ ಮಂಪರು ಆವರಿಸಿರುವುದು ಕಾರಣವಾಗಿರಬಹುದು ಎಂದು ಅನುಮಾನಿಸಲಾಗಿದೆ. ಜೊತೆಗೆ, ಅತಿಯಾದ ವೇಗ ಮತ್ತು ಅಜಾಗರೂಕತೆಯೂ ಅಪಘಾತಕ್ಕೆ ದಾರಿಯಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿರುವರಾದರೂ ಬದುಕಿ ಬಾಳಬೇಕಿದ್ದ ಆರು ಯುವಕರು ಹೀಗೆ ರಸ್ತೆ ಅಪಘಾತದಲ್ಲಿ ಅಕಾಲಿಕ ಮರಣ ಹೊಂದಿರುವುದು ಅತ್ಯಂತ ಖೇದಕರ ಸಂಗತಿ.
After a Car ramed a parked tanker truck six students in car died on spot in Bhopal, Indore.
27-09-26 03:21 pm
HK News Desk
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
ಕರಾವಳಿಯಲ್ಲಿ ನೀರು ಸಂರಕ್ಷಣೆಗೆ ವೈಜ್ಞಾನಿಕ ಮಾಸ್ಟರ್...
23-09-26 11:02 pm
ಬರ ಪಟ್ಟಿಯಿಂದ ಇಂಡಿ, ಚಡಚಣ ಕೈಬಿಟ್ಟಿದ್ದಕ್ಕೆ ಅಸಮಾಧ...
23-09-26 05:14 pm
26-09-26 07:01 pm
HK News Staffer
ವೃದ್ಧಾಶ್ರಮ ಸೇರಿದ ವಿನೋದ್ ಕಾಂಬ್ಳಿ: ವಿಡಿಯೋ ವೈರಲ್...
26-09-26 11:51 am
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಂದ್ರ ಕುಮಾರ್ ದೇಶದ್ರ...
24-09-26 09:42 pm
"ನಾವು ಚುನಾವಣೆ ಗೆದ್ದರೆ, ಟೆಕ್ಸಾಸ್ ಹನುಮಾನ್ ವಿಗ್...
23-09-26 04:21 pm
ಪಶುವೈದ್ಯರ ಹುದ್ದೆಗೆ ₹80 ಲಕ್ಷದ ಡೀಲ್ ಆರೋಪ: ಪ್ರಶ್...
22-09-26 09:42 am
29-09-26 10:45 am
HK News Staffer
ದೇಶದಲ್ಲಿ 13 ಕೋಟಿ ಮತ ಡಿಲೀಟ್ ಆಗಿದ್ದು ಹೇಗೆ ? ಆಳು...
28-09-26 11:08 pm
ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಕರಾವಳಿಗೇನು ಕೊಟ್ಟಿ...
28-09-26 09:33 pm
30 ನಿಮಿಷದಲ್ಲಿ 3 ಸಾವಿರಕ್ಕೂ ಹೆಚ್ಚು ಬಾರಿ ಮುಂಗೈ ಸ...
28-09-26 08:33 pm
ದಸರಾಗೆ ಕಾನ್ವೆಂಟ್ ಸ್ಕೂಲ್ ಗಳಲ್ಲಿ ರಜೆ ಯಾಕಿಲ್ಲ, ರ...
28-09-26 08:29 pm
29-09-26 09:20 am
HK News Staffer
ಮಾಡೂರು ಇಸುಬು ಹತ್ಯೆ ಪ್ರಕರಣ ; ನಾಲ್ವರು ಆರೋಪಿಗಳು...
28-09-26 11:03 pm
ಮಂಗಳೂರಲ್ಲಿ ಡ್ರಗ್ಸ್ ಜಾಲಕ್ಕೆ ಸಿಸಿಬಿ ಶಾಕ್ : ₹ 24...
28-09-26 03:08 pm
ಹೆಲ್ಮೆಟ್ ರಹಿತ ಚಾಲನೆಯಿಂದ ಹೆಚ್ಚುತ್ತಿರುವ ಸಾವು- ನ...
27-09-26 08:06 pm
Suhas Shetty: ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರಕ...
27-09-26 06:10 pm