ಕುದಿಯುವ ನೀರಿನಲ್ಲಿ ಕೊರೊನಾವೈರಸ್ ಸಾವು: ರಷ್ಯಾ

31-07-20 02:43 pm       Headline Karnataka News Network   ದೇಶ - ವಿದೇಶ

ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಅನೇಕ ದೇಶಗಳಲ್ಲಿ ಲಸಿಕೆ ಸಂಶೋಧನೆ ಜೋರಾಗಿ ನಡೆದಿದೆ ಇದರ ಜೊತೆಗೆ ವೈರಾಣು ನಿಯಂತ್ರಣ, ತಡೆಗಟ್ಟುವ ಬಗ್ಗೆ ರಷ್ಯಾದ ಸಂಶೋಧಕರು ಹೊಸ ಅಂಶವನ್ನು ಪ್ರಕಟಿಸಿದ್ದಾರೆ.

ಮಾಸ್ಕೋ, ಜುಲೈ 31: ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಅನೇಕ ದೇಶಗಳಲ್ಲಿ ಲಸಿಕೆ ಸಂಶೋಧನೆ ಜೋರಾಗಿ ನಡೆದಿದೆ ಇದರ ಜೊತೆಗೆ ವೈರಾಣು ನಿಯಂತ್ರಣ, ತಡೆಗಟ್ಟುವ ಬಗ್ಗೆ ರಷ್ಯಾದ ಸಂಶೋಧಕರು ಹೊಸ ಅಂಶವನ್ನು ಪ್ರಕಟಿಸಿದ್ದಾರೆ. ನಿರಂತರವಾಗಿ ಹ್ಯಾಂಡ್ ಸ್ಯಾನಿಟೈಜರ್ ಅಥವಾ ಸೋಪಿನಿಂದ ಸ್ವಚ್ಛವಾಗಿ ಕೈ ತೊಳೆಯುವುದರಿಂದ ಕೊರೊನಾವೈರಸ್ ಹರಡುವುದನ್ನು ನಿಯಂತ್ರಿಸಬಹುದು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ರಷ್ಯಾ ವಿಜ್ಞಾನಿಗಳು ಕುದಿಯುವ ನೀರಿನಲ್ಲಿ ಕೊರೊನಾ ಸಾಯಬಲ್ಲದು ಎಂದು ಹೇಳಿದ್ದಾರೆ.

72 ಗಂಟೆಯೊಳಗೆ ನೀರಿನಲ್ಲಿ ಕೊರೊನಾ ವೈರಸ್ ಸಂಪೂರ್ಣವಾಗಿ ನಿರ್ಮೂಲನೆಗೊಳ್ಳುತ್ತದೆ ಎಂದು ರಷ್ಯಾ ವಿಜ್ಞಾನಿಗಳು ಹೇಳಿದ್ದಾರೆ ಎಂದು ಟರ್ಕಿಯ ಅಂಕಾರದ ಸುದ್ದಿ ಸಂಸ್ಥೆ ಪ್ರಕಟಿಸಿದೆ.

ಈ ಹೊಸ ಅಧ್ಯಯನದ ಪ್ರಕಾರ, ಶೇಕಡಾ 90 ರಷ್ಟು ವೈರಸ್ ಕಣಗಳು 24 ಗಂಟೆಗಳಲ್ಲಿ ಸಾಯುತ್ತವೆ. ಶೇಕಡಾ 99.9 ರಷ್ಟು ಕಣಗಳು 72 ಗಂಟೆಗಳಲ್ಲಿ ಸಾಯುತ್ತವೆ. ವೈರಸ್ ನೀರಿನ ತಾಪಮಾನವನ್ನು ನೇರವಾಗಿ ಅವಲಂಬಿಸಿರುತ್ತದೆ. ಕೋಣೆಯ ಸಾಮಾನ್ಯ ತಾಪಮಾನದಲ್ಲಿರುವ ನೀರಿನಲ್ಲಿ ಸಾಯುತ್ತವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ ಎಂದು ವರದಿ ಮಾಡಲಾಗಿದೆ.

ದಿನ ಬಳಕೆ ಸೋಂಕು ನಿವಾರಕಗಳು ಕೂಡಾ ವೈರಸ್ ನಿಯಂತ್ರಿಸಬಹುದು. ಈಥಿಲ್, ಐಸೊ ಪ್ರೊಪೈಲ್ ವುಳ್ಳ ಆಲ್ಕೋಹಾಲ್ ಆಧಾರಿತ ಸೋಂಕು ನಿವಾರಕ, ಸ್ಯಾನಿಟೈಸರ್ ಗಳು ಪರಿಣಾಮಕಾರಿ ಕಾರ್ಯ ನಿರ್ವಹಿಸುತ್ತವೆ ಎಂದು ರಷ್ಯಾ ವಿಜ್ಞಾನಿಗಳು ಹೇಳಿದ್ದಾರೆ. ರಷ್ಯಾದ ಗಮೆಲೆನಾ ಸಂಶೋಧನಾ ಕೇಂದ್ರದ ಲಸಿಕೆ ಆಗಸ್ಟ್ 12ರಂದು ನೋಂದಣಿಯಾಗಲಿದೆ. ಆದರೆ ಈ ಲಸಿಕೆಯ ವೈಜ್ಞಾನಿಕ ಅಂಶಗಳನ್ನು ಇನ್ನೂ ಬಹಿರಂಗಪಡಿಸಿಲ್ಲ. ಆಗಸ್ಟ್ 3ರಂದು ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆಸುವ ಸಾಧ್ಯತೆಯಿದೆ.