ಡೊನಾಲ್ಡ್‌ ಟ್ರಂಪ್‌ ಅಮೆರಿಕಾದ ಅಸಮರ್ಥ ಅಧ್ಯಕ್ಷ ; ಒಬಾಮ ಪತ್ನಿ ಮಿಶೆಲ್ ಒಬಾಮ ವಾಗ್ದಾಳಿ

18-08-20 02:21 pm       Headline Karnataka News Network   ದೇಶ - ವಿದೇಶ

ಡೊನಾಲ್ಡ್‌ ಟ್ರಂಪ್‌ ಅಮೆರಿಕಾದ ಅಸಮರ್ಥ ಅಧ್ಯಕ್ಷರಾಗಿದ್ದು, ಇದನ್ನು ತಮ್ಮ ಕಾರ್ಯಗಳ ಮೂಲಕ ಅನೇಕ ಬಾರಿ ಸಾಧಿಸಿ ತೋರಿಸಿದ್ದಾರೆ’ ಎಂದು ಬರಾಕ್ ಒಬಾಮ ಪತ್ನಿ ಮಿಶೆಲ್ ಒಬಾಮ ಅವರು ಟ್ರಂಪ್ ಆಡಳಿತದ ವಿರುದ್ಧ ಹರಿಹಾಯ್ದಿದ್ದಾರೆ.

ನ್ಯೂಯಾರ್ಕ್: ಡೊನಾಲ್ಡ್‌ ಟ್ರಂಪ್‌ ನಮ್ಮ ದೇಶದ ಅಸಮರ್ಥ ಅಧ್ಯಕ್ಷರಾಗಿದ್ದು, ಇದನ್ನು ತಮ್ಮ ಕಾರ್ಯಗಳ ಮೂಲಕ ಅನೇಕ ಬಾರಿ ಸಾಧಿಸಿ ತೋರಿಸಿದ್ದಾರೆ’ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಪತ್ನಿ ಮಿಶೆಲ್ ಒಬಾಮ ಅವರು ಟ್ರಂಪ್ ಆಡಳಿತದ ವಿರುದ್ಧ ಹರಿಹಾಯ್ದಿದ್ದಾರೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಹಿನ್ನೆಲೆಯಲ್ಲಿ ಸೋಮವಾರದಿಂದ ಇಲ್ಲಿನ ವಿಸ್ಕಾನ್ಸಿನ್‌ನಲ್ಲಿ ಆರಂಭವಾದ ನಾಲ್ಕು ದಿನಗಳ ’ಡೆಮಾಕ್ರಟಿಕ್ ನ್ಯಾಷನಲ್‌ ಕನ್ವೆನ್ಷನ್‌’ನಲ್ಲಿ ಅವರು ಮಾತನಾಡಿದರು. ಕೋವಿಡ್ 19 ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಸಮಾವೇಶವನ್ನು ವರ್ಚುವಲ್ ಆಗಿ ಆಯೋಜಿಸಲಾಗಿತ್ತು. ಟ್ರಂಪ್ ನಮ್ಮ ದೇಶಕ್ಕೆ ಸಮರ್ಥವಾದ ಅಧ್ಯಕ್ಷರಾಗಿಲ್ಲ ಎಂಬುದು ನನ್ನ ಪ್ರಾಮಾಣಿಕ ಅನಿಸಿಕೆ. ಈ ದೇಶದ ನಾಗರಿಕರ ಅವಶ್ಯಕತೆಗಳನ್ನು ಪೂರೈಸುವಲ್ಲಿ ವಿಫಲರಾಗಿದ್ದಾರೆ’ ಎಂದು ಪ್ರತಿಪಾದಿಸಿದ ಅವರು, ನಾವು ಕಪ್ಪು, ಬಿಳಿ ವರ್ಣೀಯರಿಂದ ವಿಭಜಿಸಲ್ಪಟ್ಟ ರಾಷ್ಟ್ರದಲ್ಲಿ ವಾಸಿಸುತ್ತಿದ್ದೇವೆ.

ನಾನೀಗ ಕಪ್ಪು ಮಹಿಳೆಯಾಗಿ ಮಾತನಾಡುತ್ತಿದ್ದೇನೆ. ನನ್ನ ಮಾತನ್ನು ಹಲವರು ಕೇಳದಿರುವ ಸಾಧ್ಯತೆಯೂ ಇದೆ’ ಎಂದು ಟ್ರಂಪ್ ಆಡಳಿತದ ಕಾರ್ಯವೈಖರಿಯನ್ನು ಮಿಶೆಲ್ ಟೀಕಿಸಿದರು. ಈಗಲೂ ದೇಶದ ವ್ಯವಸ್ಥೆಯನ್ನು ಬದಲಾಯಿಸಲು ಸಾಧ್ಯವಾಗದಿದ್ದರೆ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ’ ಎಂದು ಎಚ್ಚರಿಸಿರುವ ಅವರು, ಈ ಚುನಾವಣೆ ಮೂಲಕ ನಾವು ವ್ಯವಸ್ಥೆಯನ್ನು ಬದಲಾಯಿಸದಿದ್ದರೆ, ಈಗಿರುವ ಆಡಳಿತ ಹಾಗೆಯೇ ಮುಂದುವರಿಯುತ್ತದೆ. ಈಗಿರುವ ವ್ಯವಸ್ಥೆಯನ್ನು ಕೊನೆಗೊಳಿಸುವ ಭರವಸೆ ಇದ್ದರೆ, ಈ ಚುನಾವಣೆಯಲ್ಲಿ ಜೊಬೈಡೆನ್ ಅವರನ್ನು ಬೆಂಬಲಿಸಬೇಕಿದೆ’ ಎಂದು ಹೇಳಿದರು.