ಬ್ರೇಕಿಂಗ್ ನ್ಯೂಸ್
10-03-21 10:19 pm Headline Karnataka News Network ದೇಶ - ವಿದೇಶ
ನವದೆಹಲಿ, ಮಾ.10: ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳ ಧರಣಿ ನಾಲ್ಕು ತಿಂಗಳು ಪೂರೈಸುವ ಹೊತ್ತಲ್ಲೇ ಭಾರತ್ ಬಂದ್ ನಡೆಸಲು ರೈತ ಸಂಘಟನೆಗಳು ನಿರ್ಧರಿಸಿವೆ. ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಮಾ.26ರಂದು ಒಂದು ದಿನ ದೇಶವ್ಯಾಪಿ ಬಂದ್ ನಡೆಸಲು ಕರೆ ನೀಡಿವೆ.
ಮಾ.26ರಂದು ಸಂಪೂರ್ಣ ಭಾರತ ಬಂದ್ ನಡೆಸಲಿದ್ದೇವೆ. ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆ ಅದೇ ನಾಲ್ಕು ತಿಂಗಳು ಪೂರೈಸಲಿದೆ. ಅದು ದೇಶವ್ಯಾಪಿ ಶಾಂತಿಯುತವಾಗಿ ಪ್ರತಿಭಟನೆ, ಬಂದ್ ನಡೆಸಲಿದ್ದೇವೆ ಎಂದು ರೈತ ಮುಖಂಡ ಬೂಟಾ ಸಿಂಗ್ ದೆಹಲಿಯ ಸಿಂಘು ಗಡಿಯಲ್ಲಿ ಹೇಳಿದ್ದಾರೆ.
ಮಾ.15ರಂದು ಪೆಟ್ರೋಲ್ ಬೆಲೆಯೇರಿಕೆ ಮತ್ತು ರೈಲ್ವೇ ಖಾಸಗೀಕರಣ ವಿರೋಧಿಸಿ ದೇಶವ್ಯಾಪಿ ಪ್ರತಿಭಟನೆಯನ್ನು ಕಾರ್ಮಿಕ ಸಂಘಟನೆಗಳು ಹಮ್ಮಿಕೊಂಡಿದ್ದು, ಅಂದಿನ ಧರಣಿಗೆ ರೈತ ಸಂಘಟನೆಗಳೂ ಬೆಂಬಲ ಘೋಷಿಸಿವೆ. ಮಾ.19ರಂದು ರೈತರು ಮಂಡಿ ಬಚಾವೋ, ಖೇತಿ ಬಚಾವೋ ದಿನ ಆಚರಿಸಲಿದ್ದಾರೆ. ಆಬಳಿಕ 28ರಂದು ರಾಜಗುರು, ಸುಖದೇವ್, ಭಗತ್ ಸಿಂಗ್ ಸ್ಮರಣೆಯಲ್ಲಿ ಹುತಾತ್ಮ ದಿನ ಆಚರಿಸಲಿದ್ದೇವೆ. ರೈತ ಕಾಯ್ದೆಗಳ ಪ್ರತಿಯನ್ನು ಸುಡುವ ಮೂಲಕ ಹೋಲಿ ಕಾ ದಹನ್ ಕಾರ್ಯಕ್ರಮವನ್ನೂ ಮಾಡಲಿದ್ದೇವೆ ಎಂದು ಬೂಟಾಸಿಂಗ್ ತಿಳಿಸಿದ್ದಾರೆ.
ಪಂಜಾಬ್, ಹರ್ಯಾಣ, ಉತ್ತರ ಪ್ರದೇಶ ಗಡಿಭಾಗ ಮತ್ತು ದೆಹಲಿಯ ಗಡಿಭಾಗದಲ್ಲಿ ಕಳೆದ ಮೂರು ತಿಂಗಳಿಂದ ರೈತರು ನಿರಂತರವಾಗಿ ಧರಣಿ, ಪ್ರತಿಭಟನೆ ನಡೆಸುತ್ತಿದ್ದು, ಕೇಂದ್ರದ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಪಟ್ಟು ಹಿಡಿದಿದ್ದಾರೆ.
The farmers protesting against the Centre's farm laws have called an all-India strike on March 26. A joint convention will be organised with trade unions and other mass organisations for planning the Bharat Bandh, the Samyukta Kisan Morcha, an umbrella body to farmer unions, has said.
03-09-25 02:30 pm
Bangalore Correspondent
Mangalore, Moodbidri Police, Constable Shanta...
03-09-25 01:36 pm
ಬಿಬಿಎಂಪಿ ಬದಲು ಗ್ರೇಟರ್ ಬೆಂಗಳೂರು ಅಸ್ತಿತ್ವಕ್ಕೆ ;...
02-09-25 11:04 pm
Sowjanya Case, Dharmasthala: ಸೌಜನ್ಯಾ ಪ್ರಕರಣ ;...
02-09-25 08:37 pm
ಮಕ್ಕಳ ಕಳ್ಳರು ಹೀಗೂ ಮಾಡುತ್ತಾರೆ..! ಶಾಲಾ ವಾಹನ ಎಂದ...
02-09-25 08:00 pm
01-09-25 01:06 pm
HK News Desk
ಮೋದಿ ಜಪಾನ್ ಪ್ರವಾಸದಲ್ಲಿ 13 ಒಪ್ಪಂದಗಳಿಗೆ ಸಹಿ ; ರ...
31-08-25 01:32 pm
Kannur Blast ; ಕಣ್ಣೂರಿನ ಮನೆಯಲ್ಲಿ ಭಾರೀ ಸ್ಫೋಟ ;...
31-08-25 01:04 pm
ಟ್ರಂಪ್ ಸುಂಕ ನೀತಿ ಕಾನೂನುಬಾಹಿರ ; ಅಮೆರಿಕದ ಫೆಡರಲ್...
31-08-25 12:00 pm
ಹಿಮಂತ ಬಿಸ್ವ ಶರ್ಮಗೆ ಟಿಕೆಟ್ ಕೊಡಬೇಡಿ ಎಂದು ಸೋನಿಯಾ...
30-08-25 06:44 pm
03-09-25 03:45 pm
Mangalore Correspondent
College student Missing, Mangalore: ಮಂಗಳೂರಿನಲ...
03-09-25 11:53 am
ಧರ್ಮಸ್ಥಳ ಪ್ರಕರಣ ಮತ್ತೆ ತಿರುವು ; ಹತ್ಯೆಗೀಡಾದವರ ಸ...
02-09-25 10:26 pm
Mangalore Mukka Accident: ಮುಕ್ಕ ಜಂಕ್ಷನ್ನಲ್ಲಿ...
02-09-25 04:44 pm
Bribe Puttur, Tahsildar Absconding, Lokayukta...
02-09-25 02:17 pm
03-09-25 05:40 pm
Bangalore Correspondent
Gold Theft, Mangalore, Airport: ವಿಮಾನ ಪ್ರಯಾಣಿ...
02-09-25 07:09 pm
Valachil, Rape, College, Mangalore Crime: ಇನ್...
02-09-25 04:31 pm
Mangalore Auto Driver, Fake story, Falnir att...
02-09-25 11:22 am
Udupi, Brahmavar Suicide: 16 ವರ್ಷ ಹಿಂದಿನ ಕೊಲೆ...
01-09-25 09:21 pm