ಬ್ರೇಕಿಂಗ್ ನ್ಯೂಸ್
12-03-21 10:04 pm Headline Karnataka News Network ದೇಶ - ವಿದೇಶ
ತಿರುವನಂತಪುರ, ಮಾ.12: ಕೇರಳದ ಅಸೆಂಬ್ಲಿ ಚುನಾವಣೆಯಲ್ಲಿ ಈ ಬಾರಿ ಒಂದಷ್ಟು ಸ್ಥಾನಗಳನ್ನು ಪಡೆಯಲು ಶತಪ್ರಯತ್ನ ನಡೆಸಿರುವ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಕಡೆಗೂ ಅಂತಿಮಗೊಳಿಸಿದೆ. ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸಮ್ಮುಖದಲ್ಲಿ ಶನಿವಾರ ಬಿಡುಗಡೆಗೊಳಿಸುವ ನಿರೀಕ್ಷೆಯಿದೆ.
ಬಿಜೆಪಿ ರಾಜ್ಯ ಚುನಾವಣಾ ಸಮಿತಿ ಗುರುವಾರ ತೃಶ್ಶೂರಿನಲ್ಲಿ ಸಭೆ ಸೇರಿದ್ದು, ಅಭ್ಯರ್ಥಿಗಳ ಸಂಭಾವ್ಯರ ಪಟ್ಟಿಯನ್ನು ಅಂತಿಮಗೊಳಿಸಿ ಕೇಂದ್ರಕ್ಕೆ ಕಳಿಸಿಕೊಟ್ಟಿತ್ತು. ಶುಕ್ರವಾರ ಕೇಂದ್ರೀಯ ಚುನಾವಣಾ ಸಮಿತಿ ಸದಸ್ಯರು ಅಭ್ಯರ್ಥಿಗಳನ್ನು ಫೈನಲ್ ಮಾಡಿದ್ದಾರೆ ಎನ್ನಲಾಗುತ್ತಿದ್ದು, ನಿರೀಕ್ಷೆಯಂತೆ ನಡೆದರೆ ಮಾ.13ರ ಶನಿವಾರವೇ ಅಭ್ಯರ್ಥಿಗಳ ಪಟ್ಟಿ ಹೊರಬೀಳಲಿದೆ.
ಮೂಲಗಳ ಪ್ರಕಾರ, ಬಿಜೆಪಿ ರಾಜ್ಯಾಧ್ಯಕ್ಷ ಸುರೇಂದ್ರನ್, ಈ ಹಿಂದೆ ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ಕೃಷ್ಣದಾಸ್, ಮುರಲೀಧರನ್, ಕುಮ್ಮನಂ ರಾಜಶೇಖರನ್ ದೆಹಲಿಯಲ್ಲಿ ಬೀಡು ಬಿಟ್ಟಿದ್ದು, ಕೇಂದ್ರ ನಾಯಕರ ಸಮ್ಮುಖದಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದಾರೆ. ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಮಂದಿಯ ಹೆಸರು ಮತ್ತು ಅವರ ಬಯೋಡಾಟಾವನ್ನು ಕೇಂದ್ಪ ತಂಡಕ್ಕೆ ಕಳಿಸಿಕೊಡಲಾಗಿದ್ದು, ಕೇಂದ್ರ ನಾಯಕರು ಅಭ್ಯರ್ಥಿ ಲಿಸ್ಟನ್ನು ಅಂತಿಮ ಮಾಡಲಿದ್ದಾರೆ.
ಕೊನ್ನಿ ಕ್ಷೇತ್ರಕ್ಕೆ ಸುರೇಂದ್ರನ್ ಸಾಧ್ಯತೆ
ಪತ್ತನಂತಿಟ್ಟ ಜಿಲ್ಲೆಯ ಕೊನ್ನಿ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಬಾರಿ ಸ್ಪರ್ಧಿಸಿರುವ ಸುರೇಂದ್ರನ್, ಈ ಬಾರಿಯೂ ಅದೇ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದೆ. ಬುಧವಾರ ಪತ್ತನಂತಿಟ್ಟದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದ ಸುರೇಂದ್ರನ್, ಬಿಜೆಪಿಯ ಅಭ್ಯರ್ಥಿಗಳ ಪಟ್ಟಿಯನ್ನು ಬಹುತೇಕ ಅಂತಿಮಗೊಳಿಸಲಾಗಿದೆ. ಆದರೆ, ನಾವಿನ್ನೂ ಯುಡಿಎಫ್ ಅಭ್ಯರ್ಥಿಗಳ ಪಟ್ಟಿಯನ್ನು ಎದುರು ನೋಡುತ್ತಿದ್ದೇವೆ. ಈ ಬಾರಿ ಬಹಳಷ್ಟು ಮಂದಿ ನಾಯಕರು ಎನ್ ಡಿಎ ಸೇರಲಿದ್ದಾರೆ. ಹಾಗಾಗಿ ಅಭ್ಯರ್ಥಿಗಳ ಲಿಸ್ಟ್ ಅನ್ನು ವಿಳಂಬ ಮಾಡಲಾಗಿದೆ ಎಂದು ಹೇಳಿದ್ದರು.
The BJP’s candidate list for the assembly election is expected to be announced in Delhi by Saturday. After approval by the BJP state election committee which meets in Thrissur on Thursday, the party’s central election committee will take up the shortlist for consideration late on Friday and a formal announcement is expected the next day.
24-03-25 11:04 pm
HK News Desk
BJP, Phone Tapping, Karnataka, Ashok: ಹನಿಟ್ರ್...
24-03-25 10:42 pm
Big boss Vinay Gowda, Rajat Arrest, Bangalore...
24-03-25 09:24 pm
DK Shivakumar, Muslim, BJP: ಮುಸ್ಲಿಮರಿಗೆ ಮೀಸಲು...
24-03-25 07:23 pm
Kannada Bigg Boss, Rajat, Vinay Gowda, FIR: ರ...
24-03-25 02:36 pm
24-03-25 03:54 pm
HK News Desk
Delhi High Court judge Varma: ಹೈಕೋರ್ಟ್ ಜಡ್ಜ್...
23-03-25 02:40 pm
15 ವರ್ಷದ ಹುಡುಗನಿಂದ ಗರ್ಭವತಿ ; ಹರೆಯದಲ್ಲಿ ಮಾಡಿದ...
22-03-25 09:50 pm
ದೆಹಲಿ ಹೈಕೋರ್ಟ್ ಜಡ್ಜ್ ಮನೆಯಲ್ಲಿ ಅಗಣಿತ ನಗದು ಪತ್ತ...
21-03-25 04:46 pm
Rana Daggubati, Vijay Deverakonda, Prakash Ra...
20-03-25 10:40 pm
24-03-25 03:56 pm
Mangalore Correspondent
Mangalore, Swimming pool, Death, Madikeri: ಚಿ...
24-03-25 01:35 pm
Mangalore Jyotiraj, Kotiraj: ಕಾರಿಂಜೇಶ್ವರ ಬೆಟ...
23-03-25 10:44 pm
MP Govinda Karajola, Mangalore, Honey Trap: ಸ...
22-03-25 06:48 pm
Mangalore, BJP protest, MLC Bharathi Shetty,...
22-03-25 05:45 pm
23-03-25 03:56 pm
HK News Desk
Mangalore Fraud, Online, Telagram: ಟೆಲಿಗ್ರಾಂನ...
22-03-25 10:51 pm
Bangalore Fake Police, Crime: ಪಾರ್ಕ್ನಲ್ಲಿ ಜೋ...
21-03-25 12:44 pm
Mangalore, Bangalore Airport Drugs; ಮಂಗಳೂರು ಪ...
20-03-25 05:29 pm
Mangalore crime, Kukkeshree PG, Kadri: ಪಿಜಿ ಚ...
20-03-25 04:13 pm