ಕೊರೊನಾ ಆರ್ಭಟ; ನಿತ್ಯಾನಂದನ ಕೈಲಾಸಕ್ಕೆ ಭಾರತೀಯರಿಗೆ ಇಲ್ಲವಂತೆ ಎಂಟ್ರಿ

22-04-21 11:07 am       Headline Karnataka News Network   ದೇಶ - ವಿದೇಶ

ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಕೂಡ ತನ್ನ ದೇಶ ಕೈಲಾಸಕ್ಕೆ ಭಾರತದ ಭಕ್ತರಿಗೆ ನಿರ್ಬಂಧ ವಿಧಿಸಿದ್ದಾರೆ.

ನವದೆಹಲಿ, ಏ.22: ನಿತ್ಯಾನಂದ ಸ್ವಾಮಿಯ ಕೈಲಾಸಕ್ಕೆ ಭಾರತೀಯರ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

ಬ್ರಿಟನ್​, ಅಮೆರಿಕ, ಹಾಂಕ್​ಕಾಂಗ್​ ಮತ್ತು ಸಿಂಗಾಪೂರ ದೇಶಗಳು ತಮ್ಮ ದೇಶದ ಜನರಿಗೆ ಭಾರತ ಪ್ರವಾಸವನ್ನು ಮುಂದೂಡುವಂತೆ ತಿಳಿಸಿದೆ. ಈಗ ಇದರ ಬೆನ್ನಲ್ಲೇ ಈಗ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಕೂಡ ತನ್ನ ದೇಶ ಕೈಲಾಸಕ್ಕೆ ಭಾರತದ ಭಕ್ತರಿಗೆ ನಿರ್ಬಂಧ ವಿಧಿಸಿದ್ದಾರೆ.

ಕಳೆದ ಬಾರಿ ಕೋವಿಡ್​ ನಿಯಂತ್ರಣವನ್ನು ಯಶಸ್ವಿಯಾಗಿ ನಿರ್ವಹಿಸಿದ್ದ ಭಾರತ ಎರಡನೇ ಅಲೆ ಕೊರೋನಾದಿಂದ ತತ್ತರಿಸಿದೆ. ಲಸಿಕೆಯ ಲಭ್ಯತೆ ನಡುವೆಯೂ ದೇಶದಲ್ಲಿ ದಾಖಲೆ ಪ್ರಮಾಣದ ಸೋಂಕು ಪತ್ತೆಯಾಗುತ್ತಿರುವುದು ಆತಂಕ ಮೂಡಿಸಿದೆ. ದೇಶದಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನಲೆ ಭಾರತವನ್ನ ಕೆಂಪು ಪಟ್ಟಿಗೆ ಸೇರಿಸಲಾಗಿದೆ.

ನಿತ್ಯಾನಂದರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ ಆಗಿದ್ದು, ನಿತ್ಯಾನಂದನ ಕುರಿತು ಮೇಮ್​, ಜೋಕ್​ಗಳು ಟ್ವಿಟರ್​ನಲ್ಲಿ ಹರಿದಾಡುತ್ತಿವೆ.

ಭಾರತ ಮಾತ್ರವಲ್ಲದೇ ಬ್ರೆಜಿಲ್​, ಯುರೋಪಿಯನ್ ಯೂನಿಯನ್​ ಮತ್ತು​ ಮಲೇಷ್ಯಾ ದೇಶದ ಭಕ್ತರಿಗೂ ಕೂಡ ಪ್ರವೇಶ ನಿರಾಕರಿಸಿದ್ದಾರೆ. ಈ ಕುರಿತು ವಿಡಿಯೋ ಬಿಡುಗಡೆ ಮಾಡಿರುವ ನಿತ್ಯಾನಂದ ಕೋವಿಡ್​ ಹೆಚ್ಚಳದ ಹಿನ್ನಲೆ ಈ ಕ್ರಮಕ್ಕೆ ಮುಂದಾಗಿರುವುದಾಗಿ ತಿಳಿಸಿದ್ದಾರೆ.

ನಿತ್ಯಾನಂದರ ಕೈಲಾಸದಲ್ಲಿ ಹಣದ ಹರಿವಿಗೆ ಕ್ರಿಪ್ಟೋಕರೆನ್ಸಿ ಅಥವಾ ಡಿಜಿಟಲ್ ರೂಪದ ಗೂಢ ಹಣ ಚಲಾವಣೆ ಪದ್ಧತಿಗೆ ಅವಕಾಶ ಕೊಡಲಾಗಿದೆ. ಹಿಂದೂ ಧಾರ್ಮಿಕ ಭಕ್ತರು ಕೈಲಾಸದಲ್ಲಿ ಹಣ ಹೂಡಿಕೆ ಮಾಡಬಹುದು. ಇಲ್ಲಿ ಹೂಡಿಕೆದಾರರಿಗೆ ಆಕರ್ಷಕ ಲಾಭ ಸಿಗುತ್ತದೆ ಎಂದು ಈ ವೆಬ್​ಸೈಟ್ ಹೇಳಿಕೊಂಡಿತು.

ಲೈಂಗಿಕ ದೌರ್ಜನ್ಯದ ಆರೋಪ ಹೊಂದಿರುವ ನಿತ್ಯಾನಂದ ಸ್ವಾಮಿ 2019ರಲ್ಲಿ ದೇಶ ಬಿಟ್ಟು ಪರಾರಿಯಾಗಿದ್ದ, ಈಕ್ವೆಡಾರ್​ನಲ್ಲಿ ಕೈಲಾಸ ಎಂಬ ತನ್ನದೇ ಆದ ದೇಶ ನಿರ್ಮಿಸಿದ್ದ, ಕಳೆದ ವರ್ಷ ಆಶ್ರಮದ ವೆಬ್​ಸೈಟ್​ ಬಿಡುಗಡೆ ಮಾಡಲಾಗಿತ್ತು.

Rise in Covid Cases Entry to Nithyanandas Kailsa is Banned to visitors from India.