ಮಾಜಿ ಸ್ವೀಕರ್ ಸುಮಿತ್ರಾ ಮಹಾಜನ್ ನಿಧನದ ಬಗ್ಗೆ ಟ್ವೀಟ್ ಮಾಡಿ ಬೇಸ್ತು ಬಿದ್ದ ಶಶಿ ತರೂರ್ !

23-04-21 05:59 pm       Headline Karnataka News Network   ದೇಶ - ವಿದೇಶ

ಬಿಜೆಪಿಯ ಮಾಜಿ ಸಂಸದೆ ಸುಮಿತ್ರಾ ಮಹಾಜನ್ ನಿಧನರಾಗಿರುವರೆಂದು ತಿಳಿದು ಕಾಂಗ್ರೆಸ್ ಸಂಸದ ಶಶಿ ತರೂರ್ ಸಂತಾಪ ಸೂಚಿಸಿ ಟ್ವೀಟ್ ಮಾಡುವ ಮೂಲಕ ಹೊಸ ವಿವಾದಕ್ಕೆ ತುತ್ತಾಗಿದ್ದಾರೆ.

ನವದೆಹಲಿ, ಎ.23: ಲೋಕಸಭೆ ಮಾಜಿ ಸ್ಪೀಕರ್, ಬಿಜೆಪಿಯ ಮಾಜಿ ಸಂಸದೆ ಸುಮಿತ್ರಾ ಮಹಾಜನ್ ನಿಧನರಾಗಿರುವರೆಂದು ತಿಳಿದು ಕಾಂಗ್ರೆಸ್ ಸಂಸದ ಶಶಿ ತರೂರ್ ಸಂತಾಪ ಸೂಚಿಸಿ ಟ್ವೀಟ್ ಮಾಡುವ ಮೂಲಕ ಹೊಸ ವಿವಾದಕ್ಕೆ ತುತ್ತಾಗಿದ್ದಾರೆ.

ನಿನ್ನೆ ರಾತ್ರಿ 11.16ಕ್ಕೆ ತಿರುವನಂತಪುರದ ಸಂಸದ ಶಶಿ ತರೂರ್ ಟ್ವೀಟ್ ಮಾಡಿದ್ದು, ಸುಮಿತ್ರಾ ಮಹಾಜನ್ ನಿಧನರಾಗಿರುವರೆಂದು ತಿಳಿದು ದುಃಖಿತನಾಗಿದ್ದೇನೆ. ಅವರ ಜೊತೆಗಿನ ದಿನಗಳನ್ನು ನೆನೆದು, ಸುಮಿತ್ರಾ ಮತ್ತು ಸುಷ್ಮಾ ಸ್ವರಾಜ್ ಸೇರಿ ನಮ್ಮನ್ನು ಬ್ರಿಕ್ಸ್ ಸಮ್ಮೇಳನಕ್ಕೆ ಕರೆದೊಯ್ದಿದ್ದು ಸ್ಮರಣಾರ್ಹ. ಅವರನ್ನು ಅಗಲುವಿಕೆಯ ಭರಿಸುವ ಶಕ್ತಿಯನ್ನು ದೇವರು ನೀಡಲೆಂದು ಹಾರೈಸುತ್ತೇನೆ ಎಂದಿದ್ದರು.

ಕೂಡಲೇ ಶಶಿ ತರೂರ್ ಟ್ವೀಟಿಗೆ ಸೋಶಿಯಲ್ ಮೀಡಿಯಾ ಬಳಕೆದಾರರಿಂದ ಟೀಕೆ ಬಂದಿತ್ತು. ಸುಮಿತ್ರಾ ಆರೋಗ್ಯವಾಗಿದ್ದಾರೆ. ಸುಮ್ಮನೆ ಅವರನ್ನೇಕೆ ಕೊಲ್ಲುವಿರಿ ಎಂದು ಕಾಲೆಳೆಯುವ ಕೆಲಸ ಮಾಡಿದ್ದರು. ಪ್ರತಿಕ್ರಿಯಿಸಿದ್ದ ತರೂರ್, ನನಗೆ ಬಂದಿದ್ದ ಮೂಲಗಳಿಂದ ಹಾಗೆ ಬರೆದಿದ್ದೇನೆ. ಇಲ್ಲಾಂದ್ರೆ, ಟ್ವೀಟನ್ನು ಡಿಲೀಟ್ ಮಾಡುತ್ತೇನೆ ಎಂದಿದ್ದರು.

ಆಬಳಿಕ ಬಿಜೆಪಿ ಜನರಲ್ ಸೆಕ್ರಟರಿ ವಿಜಯ್ ವರ್ಗೀಯ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಸುಮಿತ್ರಾರವರು ಪೂರ್ತಿ ಆರೋಗ್ಯವಾಗಿದ್ದಾರೆ. ಅವರಿಗೆ ದೇವರು ದೀರ್ಘಾಯುಷ್ಯ ಕೊಟ್ಟಿದ್ದಾರೆ ಎನ್ನುವ ಮೂಲಕ ಸ್ಪಷ್ಟನೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಶಶಿ ತರೂರ್, ತುಂಬಾ ಥ್ಯಾಂಕ್ಸ್ ವಿಜಯ್ ವರ್ಗೀಯ. ಕೆಲವು ಜನ ಸುಮ್ಮನೆ ವದಂತಿ ಹಬ್ಬಿಸುತ್ತಾರೆ. ನಾನು ನನ್ನು ಟ್ವೀಟನ್ನು ಡಿಲೀಟ್ ಮಾಡುತ್ತೇನೆ. ಸುಮಿತ್ರಾರಿಗೆ ದೇವರು ದೀರ್ಘಾಯುಷ್ಯ ನೀಡಲೆಂದು ದೇವರಲ್ಲಿ ಹಾರೈಸುತ್ತೇನೆ ಎಂದು ಮರು ಟ್ವೀಟ್ ಮಾಡಿದ್ದಾರೆ.

ಬಿಜೆಪಿ ನಾಯಕಿಯಾಗಿರುವ ಸುಮಿತ್ರಾ ಮಹಾಜನ್ ಮಧ್ಯಪ್ರದೇಶದ ಇಂದೋರ್ ಕ್ಷೇತ್ರದಲ್ಲಿ 1989ರಿಂದ 2019ರ ವರೆಗೆ ಸಂಸದೆಯಾಗಿದ್ದರು. ಸುದೀರ್ಘ ಕಾಲ ಸಂಸತ್ತಿನಲ್ಲಿದ್ದ ಮಹಿಳಾ ಸಂಸದೆ ಎಂಬ ಹೆಗ್ಗಳಿಕೆಯನ್ನೂ ಪಡೆದಿದ್ದಾರೆ. ಅಲ್ಲದೆ, 2014ರಿಂದ 2019ರ ವರೆಗೆ ಲೋಕಸಭಾ ಸ್ವೀಕರ್ ಕೂಡ ಆಗಿದ್ದರು. 

Former Lok Sabha speaker Sumitra Mahajan is 'absolutely fine', said the BJP after Congress MP Shashi Tharoor mistakenly sent out a condolence message for her family on Thursday night. The Congress legislator from Kerala's Thiruvananthapuram later retracted his tweet and issued an apology.