LIVE Assembly Election Results 2021: 5 ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ

02-05-21 11:59 am       Headline Karnataka Political Bureau   ದೇಶ - ವಿದೇಶ

ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ದೇಶದಲ್ಲಿ ಕುತೂಹಲ ಮೂಡಿಸಿದೆ. ಅಸ್ಸಾಂ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಪುದುಚೇರಿ ರಾಜ್ಯಗಳಲ್ಲಿ ವಿವಿಧ ಹಂತಗಳಲ್ಲಿ ಮತದಾನ ನಡೆದಿದ್ದು, ಇಂದು ಮತ ಎಣಿಕೆ ನಡೆಯುತ್ತಿದೆ.

LIVE Assembly Election Results 2021: 5 ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ 


  • 7:34 PM May 2, 2021 ಕೇರಳ ಕೇರಳದಲ್ಲಿ ಎಲ್‌ಡಿಎಫ್ 99, ಯುಡಿಎಫ್ 41 ಸ್ಥಾನಗಳಲ್ಲಿ ಜಯಗಳಿಸಿದೆ.

  • 7:32 PM May 2, 2021 ಕರ್ನಾಟಕ ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶದ ಕುರಿತು ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತಾನು ದೇಶದ ಪ್ರಧಾನಿ ಎನ್ನುವುದನ್ನೇ ಮರೆತು, ಪೂರ್ಣಾವಧಿ ಬಿಜೆಪಿಯ ನಾಯಕನ ರೀತಿ ಅಲ್ಲಿ ಚುನಾವಣಾ ಪ್ರಚಾರ ನಡೆಸಿದ್ದ ನರೇಂದ್ರ ಮೋದಿ ಅವರಿಗೆ ಏಕಾಂಗಿಯಾಗಿ ಹೋರಾಟ ನಡೆಸಿದ್ದ ಮಮತಾ ಬ್ಯಾನರ್ಜಿ ಮರ್ಮಾಘಾತ ನೀಡಿದ್ದಾರೆ ಎಂದು ಹೇಳಿದ್ದಾರೆ.

  • 7:29 PM May 2, 2021 ಪಶ್ಚಿಮ ಬಂಗಾಳ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ 172 ಗೆಲುವು, ಬಿಜೆಪಿ 62 ಗೆಲುವು, ಇತರರು 1 ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.

  • 7:23 PM May 2, 2021 ಅಸ್ಸಾಂ ಅಸ್ಸಾಂನಲ್ಲಿ ಬಿಜೆಪಿ ಮೈತ್ರಿಕೂಟ 71, ಕಾಂಗ್ರೆಸ್ ಮೈತ್ರಿಕೂಟ 42, ಇತರರು 1 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ.

  • 7:19 PM May 2, 2021 ಪುದುಚೇರಿ ಪುದುಚೇರಿಯಲ್ಲಿ ಬಿಜೆಪಿ ಮೈತ್ರಿಕೂಟ 10, ಕಾಂಗ್ರೆಸ್ ಮೈತ್ರಿಕೂಟ 5, ಇತರರು 4 ಕ್ಷೇತ್ರಗಳಲ್ಲಿ ಜಯಗಳಿಸಿದ್ದಾರೆ. ಒಟ್ಟು 30 ವಿಧಾನಸಭಾ ಕ್ಷೇತ್ರಗಳು ಕೇಂದ್ರಾಡಳಿತ ಪ್ರದೇಶದಲ್ಲಿವೆ.

  • 7:14 PM May 2, 2021 ತಮಿಳುನಾಡು ತಮಿಳುನಾಡಿನಲ್ಲಿ ಡಿಎಂಕೆ ಮೈತ್ರಿಕೂಟ 101 ಸೀಟು, ಎಐಎಡಿಎಂಕೆ 38 ಸೀಟುಗಳಲ್ಲಿ ಜಯಗಳಿಸಲಿದೆ.

  • 7:11 PM May 2, 2021 ಕೇರಳ ಸೋಮವಾರ ಪ್ರಮಾಣ ವಚನ ಸಮಾರಂಭ ನಡೆಯಲಿದೆ ಎಂಬ ಸುದ್ದಿಯನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಳ್ಳಿ ಹಾಕಿದ್ದಾರೆ. ನಾನು ನಾಳೆ ತಿರುವನಂತಪುರಕ್ಕೆ ಭೇಟಿ ನೀಡಿದ ಬಳಿಕ ರಾಜೀನಾಮೆ ನೀಡಲಿದ್ದೇನೆ. ಮುಂದಿನ ಪ್ರಕ್ರಿಯೆಗಳನ್ನು ನಂತರ ತೀರ್ಮಾನಿಸಲಾಗುತ್ತದೆ ಎಂದು ಹೇಳಿದ್ದಾರೆ.

  • 7:06 PM May 2, 2021 ಅಸ್ಸಾಂ ಭಾರತೀಯ ಜನತಾ ಪಕ್ಷ ಸರ್ಕಾರವನ್ನು ರಚನೆ ಮಾಡಲಿದೆ. ಬಿಜೆಪಿ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಬಿಜೆಪಿ ನಾಯಕ ಮತ್ತು ಸಚಿವ ಹಿಮಂತ್ ಬಿಸ್ವಾಸ್ ಶರ್ಮಾ ಹೇಳಿದ್ದಾರೆ.

  • 7:05 PM May 2, 2021 ಕೇರಳ ಕೇರಳದಲ್ಲಿ ಎಲ್‌ಡಿಎಫ್ 89 ಕ್ಷೇತ್ರ, ಯುಡಿಎಫ್ 41 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಎಲ್‌ಡಿಎಫ್ ಇನ್ನೂ 99 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ.

  • 6:59 PM May 2, 2021 ತಮಿಳುನಾಡು ಕೊಯಮತ್ತೂರು ದಕ್ಷಿಣ ಕ್ಷೇತ್ರದಲ್ಲಿ ನಟ ಕಮಲ್ ಹಾಸನ್ ಹಿನ್ನಡೆ ಅನುಭವಿಸಿದ್ದಾರೆ. ಬಿಜೆಪಿಯ ವನತಿ ಶ್ರೀನಿವಾಸನ್ 900 ಮತಗಳ ಮುನ್ನಡೆ ಪಡೆದಿದ್ದಾರೆ. 23ನೇ ಸುತ್ತಿನ ಎಣಿಕೆ ಮುಕ್ತಾಯಗೊಂಡಿದೆ.

  • 6:55 PM May 2, 2021 ಪಶ್ಚಿಮ ಬಂಗಾಳ ನಂದಿಗ್ರಾಮದಲ್ಲಿ ಮರು ಮತ ಎಣಿಕೆ ನಡೆಸಬೇಕು ಎಂದು ಟಿಎಂಸಿ ಒತ್ತಾಯಿಸಿದೆ. ಮಮತಾ ಬ್ಯಾನರ್ಜಿ ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಸೋಲು ಕಂಡಿದ್ದಾರೆ ಎಂಬ ವರದಿ ಈಗ ಬರುತ್ತಿದೆ.

  • 6:53 PM May 2, 2021 ಪಶ್ಚಿಮ ಬಂಗಾಳ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ 168, ಬಿಜೆಪಿ 47 ಮತ್ತು ಇತರರು 1 ಸ್ಥಾನಗಳಲ್ಲಿ ಜಯಗಳಿಸಿದ್ದಾರೆ.

  • 6:49 PM May 2, 2021 ಪಶ್ಚಿಮ ಬಂಗಾಳ ವಿಜಯೋಯ್ಸವ ಆಚರಣೆ ಮಾಡಬೇಡಿ, ಜಾಥಾಗಳನ್ನು ನಡೆಸಬೇಡಿ ಎಂದು ಮಮತಾ ಬ್ಯಾನರ್ಜಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

  • 6:44 PM May 2, 2021 ಕರ್ನಾಟಕ ಬೆಳಗಾವಿ ಲೋಕಸಭಾ ಉಪ ಚುನಾವಣೆ ಫಲಿತಾಂಶ. ಬಿಜೆಪಿಯ ಮಂಗಲ ಸುರೇಶ್ ಅಂಗಡಿ 4,35,202 ಮತಗಳು. ಕಾಂಗ್ರೆಸ್‌ನ ಸತೀಶ್ ಜಾರಕಿಹೊಳಿ 4,32,299 ಮತಗಳು. ಬಿಜೆಪಿ ಅಭ್ಯರ್ಥಿ ಗೆಲುವಿನ ಅಂತರ 2,903 ಮತಗಳು.

  • 6:38 PM May 2, 2021 ತಮಿಳುನಾಡು ಸಹಕಾರ ಸಚಿವ ಸೆಲ್ಲೂರು ಕೆ. ರಾಜು ಮಧುರೈ ಪಶ್ಚಿಮ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ ಎಂದು ಘೋಷಣೆ ಮಾಡಲಾಗಿದೆ.

  • 6:36 PM May 2, 2021 ಕೇರಳ ಕೇರಳದ ತಿರುವಲ್ಲ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮ್ಯಾಥ್ಯೂ ಥಾಮಸ್ ಅವರು ಜಯಗಳಿಸಿದ್ದಾರೆ.

  • 6:34 PM May 2, 2021 ಕರ್ನಾಟಕ ಬಸವಕಲ್ಯಾಣದಲ್ಲಿ ಜೆಡಿಎಸ್‌ ಅಭ್ಯರ್ಥಿಗೆ ಮತ ನೀಡಿದ ಎಲ್ಲರಿಗೂ ಧನ್ಯವಾದ. ಪಕ್ಷಕ್ಕಾಗಿ ಶ್ರಮಿಸಿದ ಕಾರ್ಯಕರ್ತರು, ಮುಖಂಡರ ಪರವಾಗಿ ನಾನು ಇರಲಿದ್ದೇನೆ. ಅಪಪ್ರಚಾರ, ಹಣಬಲ ನಮ್ಮ ಗೆಲುವು ಕಸಿದಿರಬಹುದು. ನಮ್ಮ ಅಸ್ತಿತ್ವವನ್ನಲ್ಲ. ರಾಷ್ಟ್ರೀಯ ಪಕ್ಷಗಳ ವಿರುದ್ಧ ಸೆಣಸಲು ನಾವು ಶಕ್ತರೆಂಬ ಸಂದೇಶ ರವಾನಿಸಿದ ಕಾರ್ಯಕರ್ತರಿಗೆ ನಾನು ಋಣಿ ಎಂದು ಬಸವಕಲ್ಯಾಣ ಚುನಾವಣೆ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

  • 6:32 PM May 2, 2021 ಪುದುಚೇರಿ ಪುದುಚೇರಿಯಲ್ಲಿ ಬಿಜೆಪಿ ಮೈತ್ರಿಕೂಟ 10, ಕಾಂಗ್ರೆಸ್ ಮೈತ್ರಿಕೂಟ 7ರಲ್ಲಿ, ಇತರರು 2 ಕ್ಷೇತ್ರಗಳಲ್ಲಿ ಜಯಗಳಿಸಿದ್ದಾರೆ. ಒಟ್ಟು 30 ವಿಧಾನಸಭಾ ಕ್ಷೇತ್ರಗಳನ್ನು ಕೇಂದ್ರಾಡಳಿತ ಪ್ರದೇಶ ಒಳಗೊಂಡಿದೆ.

  • 6:30 PM May 2, 2021 ಪಶ್ಚಿಮ ಬಂಗಾಳ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ 157, ಬಿಜೆಪಿ 46, ಇತರರು 1 ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.

  • 6:28 PM May 2, 2021 ಪಶ್ಚಿಮ ಬಂಗಾಳ ನಂದಿಗ್ರಾಮದ ಜನರು ಅವರಿಗೆ ಬೇಕಾದ ಫಲಿತಾಂಶವನ್ನು ಕೊಟ್ಟಿದ್ದಾರೆ. ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನಾವು 221ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದೇವೆ ಮತ್ತು ಬಿಜೆಪಿ ಚುನಾವಣೆ ಸೋತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

  • 6:24 PM May 2, 2021 ಪಶ್ಚಿಮ ಬಂಗಾಳ ಇದು ನನ್ನ ಹಿನ್ನಡೆಯಲ್ಲಿ ಎಂದು ಸುದ್ದಿಗೋಷ್ಠಿಯಲ್ಲಿ ಮಮತಾ ಬ್ಯಾನರ್ಜಿ ಹೇಳಿದರು. 1200 ಮತಗಳಿಂದ ಅವರು ಗೆಲುವು ಕಂಡಿದ್ದಾರೆ ಎಂದು ಮೊದಲು ಸುದ್ದಿ ಹಬ್ಬಿತ್ತು.

  • 6:22 PM May 2, 2021 ಪಶ್ಚಿಮ ಬಂಗಾಳ ಪಶ್ಚಿಮ ಬಂಗಾಳದ ನಂದಿಗ್ರಾಮದಲ್ಲಿ ಸುವೇಂದು ಅಧಿಕಾರಿ ವಿರುದ್ಧ ಮಮತಾ ಬ್ಯಾನರ್ಜಿ ಸೋಲು ಕಂಡಿದ್ದಾರೆ. ಮೊದಲು ಮಮತಾ ಬ್ಯಾನರ್ಜಿ ಗೆದ್ದಿದ್ದಾರೆ ಎಂಬ ಸುದ್ದಿ ಹೊರಬಿದ್ದಿತ್ತು. 1622 ಮತಗಳಿಂದ ಅವರು ಸೋಲು ಕಂಡಿದ್ದಾರೆ.

  • 6:20 PM May 2, 2021 ಪಶ್ಚಿಮ ಬಂಗಾಳ ಇಂತಹ ಗೆಲುವಿಗಾಗಿ ನಾವು ಜನರಿಗೆ ಅಭಾರಿಯಾಗಿರುತ್ತೇವೆ. ಕೋವಿಡ್ ವಿರುದ್ಧ ನಾವು ತಕ್ಷಣದಿಂದಲೇ ಕಾರ್ಯ ಆರಂಭಿಸುತ್ತೇವೆ. ಕೋವಿಡ್ ಕಾರಣದಿಂದಾಗಿ ಪ್ರಮಾಣ ವಚನ ಸಮಾರಂಭ ಸರಳವಾಗಿ ನಡೆಯಲಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದರು.

  • 6:16 PM May 2, 2021 ಕೇರಳ ಕೇರಳದಲ್ಲಿ ಎಲ್‌ಡಿಎಫ್ 81, ಯುಡಿಎಫ್ 35 ಸ್ಥಾನಗಳಲ್ಲಿ ಜಯಗಳಿಸಿದೆ.

  • 6:15 PM May 2, 2021 ಪಶ್ಚಿಮ ಬಂಗಾಳ ಟಿಎಂಸಿ ಉಪಾಧ್ಯಕ್ಷ ಯಶವಂತ್ ನಿನ್ಹಾ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಪಶ್ಚಿಮ ಬಂಗಾಳದ ಫಲಿತಾಂಶ ಉತ್ತರ ಪ್ರದೇಶ ಮತ್ತು 2024ರ ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ.

  • 5:58 PM May 2, 2021 ಪಶ್ಚಿಮ ಬಂಗಾಳ ಸೋನಾರಪುರ್ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅಂಜನ್ ಬಸು ವಿರುದ್ಧ ಟಿಎಂಸಿ ಅಭ್ಯರ್ಥಿ ಅರುಂಧತಿ ಮೊತ್ರಾ ಗೆಲುವು ಸಾಧಿಸಿದ್ದಾರೆ.

  • 5:55 PM May 2, 2021 ಪುದುಚೇರಿ ಇಂದಿರಾನಗರ್ ವಿಧಾನಸಭಾ ಕ್ಷೇತ್ರದಲ್ಲಿ ಐಎನ್ ಸಿ ಅಭ್ಯರ್ಥಿ ಕಣ್ಣನ್ ಎದುರು ಎಕೆಡಿ ಆರುಮುಗಂ ದಿಗ್ವಿಜಯ ಸಾಧಿಸಿದ್ದಾರೆ.

  • 5:48 PM May 2, 2021 ಜಲುಕಬರಿ ವಿಧಾನಸಭಾ ಕ್ಷೇತ್ರದಿಂದ ಸಚಿವ ಹಿಮಂತ್ ಬಿಸ್ವಾ ಶರ್ಮಾ ಅವರು 5ನೇ ಬಾರಿ 1,01,911 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.

  • 5:44 PM May 2, 2021 ಕೇರಳ ಗೆಲುವಿನ ಕುರಿತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿಕೆ

  • 5:40 PM May 2, 2021 ಕೋಲ್ಕತ್ತಾದಲ್ಲಿ ಟಿಎಂಸಿ ಕಾರ್ಯಕರ್ತರ ಸಂಭ್ರಮ

           

  • 5:38 PM May 2, 2021 ಪುದುಚೇರಿಯಲ್ಲಿ ಬಿಜೆಪಿ ಮೈತ್ರಿಕೂಟ 10, ಕಾಂಗ್ರೆಸ್ ಮೈತ್ರಿಕೂಟ 3, ಇತರರು 2 ಕ್ಷೇತ್ರಗಳಲ್ಲಿ ಜಯಗಳಿಸಿದ್ದಾರೆ.

  • 5:36 PM May 2, 2021 ಪಶ್ಚಿಮ ಬಂಗಾಳದಲ್ಲಿ ಟಿಎಂಸಿ 125, ಬಿಜೆಪಿ 32, ಇತರರು 1 ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.

  • 5:35 PM May 2, 2021 ಅಸ್ಸಾಂನಲ್ಲಿ ಬಿಜೆಪಿ ಮೈತ್ರಿಕೂಟ 10, ಕಾಂಗ್ರೆಸ್ ಮೈತ್ರಿಕೂಟ 3, ಇತರರು 3 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ.

  • 5:33 PM May 2, 2021 ಮಧುರೈ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ 25 ಸುತ್ತುಗಳ ಮತ ಎಣಿಕೆ ಪೂರ್ಣಗೊಂಡಿದ್ದು ಡಿಎಂಕೆಯ ಪಳನಿವೇಲ್ ತ್ಯಾಗರಾಜನ್ ಗೆಲುವು ಸಾಧಿಸಿದ್ದಾರೆ. 72,034 ಮತಗಳನ್ನು ಪಡೆದಿರುವ ಅವರು 33,394 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

  • 5:26 PM May 2, 2021 ತಮಿಳುನಾಡಿನಲ್ಲಿ ಡಿಎಂಕೆ ಮೈತ್ರಿಕೂಟ 50, ಎಐಎಡಿಎಂಕೆ ಮೈತ್ರಿಕೂಟ 14 ಸೀಟುಗಳಲ್ಲಿ ಜಯಗಳಿಸಿದೆ.

  • 5:22 PM May 2, 2021 ಅಸ್ಸಾಂನಲ್ಲಿ ಸಚಿವ ಹಿಮಂತ ಬಿಸ್ವಾ ಶರ್ಮಾ 1,01,911 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಸತತ 5ನೇ ಬಾರಿಗೆ ಅವರು ಗೆಲುವು ಸಾಧಿಸಿದ್ದಾರೆ.

  • 5:20 PM May 2, 2021 ಕೇರಳದಲ್ಲಿ ಎಲ್‌ಡಿಎಫ್ 75, ಯುಡಿಎಫ್ 27 ಸ್ಥಾನಗಳಲ್ಲಿ ಜಯಗಳಿಸಿದೆ.

  • 5:17 PM May 2, 2021 ಅಸ್ಸಾಂನಲ್ಲಿ ಬಿಜೆಪಿ ಮೈತ್ರಿಕೂಟ 36, ಕಾಂಗ್ರೆಸ್ ಮೈತ್ರಿಕೂಟ 18 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.

  • 5:15 PM May 2, 2021 ಜನರಿಗೆ ಧನ್ಯವಾದ ತಿಳಿಸಿದ ಕೇರಳ ಆರೋಗ್ಯ ಸಚಿವೆ ಕೆ. ಕೆ. ಶೈಲಜಾ

  • 5:14 PM May 2, 2021 ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 6 ಗಂಟೆಗೆ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಲಿದ್ದಾರೆ.

  • 5:12 PM May 2, 2021 ಡಿಎಂಕೆ ಮುಖ್ಯಸ್ಥ ಎಂ. ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಚೆಪಾಕ್ ಕ್ಷೇತ್ರದಲ್ಲಿ 68,000 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

  • 5:11 PM May 2, 2021 ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಧರ್ಮಡಂ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.

  • 5:09 PM May 2, 2021 ತಮಿಳುನಾಡಿನಲ್ಲಿ 41 ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿದೆ. ಡಿಎಂಕೆ 24, ಎಐಎಡಿಎಂಕೆ 9, ಐಎನ್‌ಸಿ 5, ಸಿಪಿಐ 2, ಸಿಪಿಐಎಂ 1 ಕ್ಷೇತ್ರದಲ್ಲಿ ಜಯಗಳಿಸಿದೆ.

  • 5:07 PM May 2, 2021 ಆಂಧ್ರಪ್ರದೇಶದ ತಿರುಪತಿ ಲೋಕಸಭಾ ಕ್ಷೇತ್ರದಲ್ಲಿ ಡಾ. ಎಂ. ಗುರುಮೂರ್ತಿ ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ಕೆ. ರತ್ನಪ್ರಭಾ ಸೋಲು ಕಂಡಿದ್ದಾರೆ.

  • 5:05 PM May 2, 2021 ಕೇರಳದ ಆರೋಗ್ಯ ಸಚಿವೆ ಶೈಲಜಾ ಅವರು ಮಟ್ಟನ್ನೂರು ಕ್ಷೇತ್ರದಲ್ಲಿ ದಾಖಲೆಯ 61 ಸಾವಿರ ಮತಗಳ ಅಂತರದಿಂದ ಗೆದ್ದಿದ್ದಾರೆ.

  • 5:03 PM May 2, 2021 ಕೇರಳದಲ್ಲಿ ಎಲ್‌ಡಿಎಫ್ 75, ಯುಡಿಎಫ್ 25 ಸ್ಥಾನಗಳಲ್ಲಿ ಜಯಗಳಿಸಿದೆ. ಎಲ್‌ಡಿಎಫ್ 99 ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಪಡೆದುಕೊಂಡಿದೆ.

  • 5:02 PM May 2, 2021 ಕೇರಳದ ಗೆಲುವಿಗೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಪಿಣರಾಯಿ ವಿಜಯನ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ.

  • 4:58 PM May 2, 2021 ಅಸ್ಸಾಂ ಚುನಾವಣೆ ಫಲಿತಾಂಶದ ಬಗ್ಗೆ ಸರ್ಬಾನಂದ ಸೊನೊವಾಲ್ ಹೇಳಿಕೆ.

  • 4:55 PM May 2, 2021 ಎಲ್‌ಡಿಎಫ್‌ನ ಪಿ. ಬಾಲಚಂದರ್ 946 ಮತಗಳ ಅಂತರದಲ್ಲಿ ತ್ರಿಶೂರ್ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಪದ್ಮಜಾ ವೇಣುಗೋಪಾಲ್ ವಿರುದ್ಧ ಜಯಗಳಿಸಿದ್ದಾರೆ.

  • 4:53 PM May 2, 2021 ತಮಿಳುನಾಡು ವಿಧಾನಸಭೆ ಚುನಾವಣೆ ಫಲಿತಾಂಶದ ಬಗ್ಗೆ ನಟ ಸಿದ್ಧಾರ್ಥ ಟ್ವೀಟ್

  • 4:51 PM May 2, 2021 ತಮಿಳುನಾಡಿನಲ್ಲಿ ಡಿಎಂಕೆ ಮೈತ್ರಿಕೂಟ 31, ಎಐಎಡಿಎಂಕೆ ಮೈತ್ರಿಕೂಟ 9 ಸೀಟುಗಳಲ್ಲಿ ಜಯಗಳಿಸಿದೆ.

  • 4:50 PM May 2, 2021 ಡಿಎಂಕೆ ತಿರುವಳ್ಳೂರ್, ತಿರುವಣ್ಣಮಲೈ, ಮಧುರೈ ಪೂರ್ವ ಸೇರಿದಂತೆ 19 ಸೀಟುಗಳನ್ನು ಗೆದ್ದಿದೆ.

  • 4:47 PM May 2, 2021 ಪಶ್ಚಿಮ ಬಂಗಾಳದಲ್ಲಿ ಟಿಎಂಸಿ 78, ಬಿಜೆಪಿ 18, ಇತರರು 1 ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.

  • 4:44 PM May 2, 2021 ಕೇರಳದಲ್ಲಿ ಎಲ್‌ಡಿಎಫ್ 99, ಯುಡಿಎಫ್ 41 ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ.

  • 4:43 PM May 2, 2021 ಪಶ್ಚಿಮ ಬಂಗಾಳದ ಗೆಲುವಿಗೆ ಮಮತಾ ಬ್ಯಾನರ್ಜಿಗೆ ಅಭಿನಂದನೆ ಸಲ್ಲಿಸಿದ ಕಾಂಗ್ರೆಸ್ ನಾಯಕ ಶಶಿ ತರೂರ್

  • 4:40 PM May 2, 2021 ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ತಮಿಳುನಾಡಿನ ಗೆಲುವಿಗಾಗಿ ಎಂ. ಕೆ. ಸ್ಟಾಲಿನ್ ಅಭಿನಂದಿಸಿದ್ದಾರೆ.

  • 4:39 PM May 2, 2021 ಬೆಳಗಾವಿಯಲ್ಲಿ ಕಾಂಗ್ರೆಸ್‌ನ ಸತೀಶ್ ಜಾರಕಿಹೊಳಿ 6,292 ಮತಗಳ ಮುನ್ನಡೆಯನ್ನು ಪಡೆದಿದ್ದಾರೆ. 74ನೇ ಸುತ್ತಿನ ಎಣಿಕೆ ಮುಕ್ತಾಯಗೊಂಡಿದೆ.

  • 4:37 PM May 2, 2021 ಹಿರಿಯ ಬಿಜೆಪಿ ನಾಯಕ, ಕೇಂದ್ರದ ಮಾಜಿ ಸಚಿವ ಪೊನ್ ರಾಧಾಕೃಷ್ಣನ್ 1,11,491 ಮತಗಳ ಅಂತರದಿಂದ ಕನ್ಯಾಕುಮಾರಿ ಲೋಕಸಭಾ ಕ್ಷೇತ್ರದಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಕಾಂಗ್ರೆಸ್‌ನ ವಿಜಯ್ ವಸಂತ್ ಮುನ್ನಡೆಯಲ್ಲಿದ್ದಾರೆ.

  • 4:31 PM May 2, 2021 ಪಶ್ಚಿಮ ಬಂಗಾಳದಲ್ಲಿ ಟಿಎಂಸಿ 66, ಬಿಜೆಪಿ 16, ಇತರರು 1 ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.

  • 4:30 PM May 2, 2021 20ನೇ ಸುತ್ತಿನ ಎಣಿಕೆ ಬಳಿಕ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಎಡಪ್ಪಾಡಿ ಕ್ಷೇತ್ರದಲ್ಲಿ 65,548 ಮತಗಳ ಮುನ್ನಡೆ ಪಡೆದಿದ್ದಾರೆ.

  • 4:27 PM May 2, 2021 ನಂದಿಗ್ರಾಮದಲ್ಲಿ ಗೆದ್ದು ಪಕ್ಷವನ್ನು ರಾಜ್ಯದಲ್ಲಿ 3ನೇ ಬಾರಿಗೆ ಅಧಿಕಾರಕ್ಕೆ ತಂದ ಮಮತಾ ಬ್ಯಾನರ್ಜಿ

  • 4:26 PM May 2, 2021 ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿಗೆ ಗೆಲುವು. 1,200 ಮತಗಳ ಅಂತರದಿಂದ ಗೆದ್ದು ಬೀಗಿದ ಮಮತಾ.

  • 4:21 PM  May 2, 2021 ಕೃಷ್ಣಾ ನಗರ್ ಉತ್ತರ ಕ್ಷೇತ್ರದಿಂದ ಬಿಜೆಪಿಯ ಮುಕುಲ್ ರಾಯ್ 30 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

  • 4:18 PM  May 2, 2021 ಮೋದಿ ಮತ್ತು ಅಮಿತ್ ಶಾ ಸೋಲು ಇಲ್ಲದವರಲ್ಲ. ಅವರನ್ನು ಸಹ ಸೋಲಿಸಬಹುದು ಎಂಬ ಸಂದೇಶವನ್ನು ಮಮತಾ ಬ್ಯಾನರ್ಜಿ ರವಾನೆ ಮಾಡಿದ್ದಾರೆ ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಹೇಳಿದ್ದಾರೆ.

  • 4:14 PM May 2, 2021 ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಭವ್ ಠಾಕ್ರೆ ತಮಿಳುನಾಡಿನ ಗೆಲುವಿಗಾಗಿ ಎಂ. ಕೆ. ಸ್ಟಾಲಿನ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ.

  • 4:08 PM May 2, 2021 ಮೆಟ್ರೋ ಮ್ಯಾನ್ ಖ್ಯಾತಿಯ ಇ. ಶ್ರೀಧರನ್ ಕೇರಳದ ಪಾಲಕ್ಕಾಡ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಶಫಿ ಪರಂಬಿ ವಿರುದ್ಧ ಸುಮಾರು 3000 ಮತಗಳ ಅಂತದಲ್ಲಿ ಸೋತಿದ್ದಾರೆ.

  • 4:05 PM May 2, 2021 ಕೇರಳ ಬಿಜೆಪಿ ಅಧ್ಯಕ್ಷ ಕೆ. ಸುರೇಂದ್ರನ್ ಮಂಜೇಶ್ವರ ಕ್ಷೇತ್ರದಲ್ಲಿ ಸೋಲು ಕಂಡಿದ್ದಾರೆ. ಐಯುಎಂಎಲ್‌ನ ಎಕೆಎಂ ಅಶ್ರಫ್ ಗೆಲುವು ಸಾಧಿಸಿದ್ದಾರೆ

  • 4:02 PM May 2, 2021 68ನೇ ಸುತ್ತಿನ ಮತ ಎಣಿಕೆ ಮುಕ್ತಾಯಗೊಂಡಿದ್ದು ಬೆಳಗಾವಿಯಲ್ಲಿ ಕಾಂಗ್ರೆಸ್‌ನ ಸತೀಶ್ ಜಾರಕಿಹೊಳಿ 8380 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.

  • 3:59 PM May 2, 2021 ಪಶ್ಚಿಮ ಬಂಗಾಳದಲ್ಲಿ ಟಿಎಂಸಿ 209 (47 ಗೆಲುವು), ಬಿಜೆಪಿ 80 (13 ಗೆಲುವು) ಸ್ಥಾನಗಳಲ್ಲಿ ಮುನ್ನಡೆ ಪಡೆದಿವೆ. ಎಡಪಕ್ಷ 2, ಇತರರು 1 ಕ್ಷೇತ್ರದಲ್ಲಿ ಗೆದ್ದಿದ್ದು, 1 ಕ್ಷೇತ್ರದಲ್ಲಿ ಮುನ್ನಡೆಯಲ್ಲಿದೆ.

  • 3:55 PM May 2, 2021 ಕೇರಳದ ಆರೋಗ್ಯ ಸಚಿವೆ ಮಟ್ಟನ್ನೂರು ಕ್ಷೇತ್ರದಲ್ಲಿ 61 ಸಾವಿರ ಮತಗಳ ಅಂತರದಲ್ಲಿ ಮುನ್ನಡೆ ಪಡೆದಿದ್ದಾರೆ. ಕೇರಳದ ಚುನಾವಣೆ ಇತಿಹಾಸದಲ್ಲಿಯೇ ಅಭ್ಯರ್ಥಿಯೊಬ್ಬರ ಅತಿ ಹೆಚ್ಚಿನ ಅಂತರ ಇದಾಗಿದೆ.

  • 3:53 PM May 2, 2021 ಕೇರಳದ ಮಾಜಿ ಮುಖ್ಯಮಂತ್ರಿ ಉಮನ್ ಚಾಂಡಿ ಪೂತುಪಲ್ಲಿ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.

  • 3:51 PM May 2, 2021 ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯ ಗೆಲುವಿಗೆ ಮಮತಾ ಬ್ಯಾನರ್ಜಿಕಾರಣ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯರ್ಶಿ ಕೈಲಾಶ್ ವಿಜಯ್ ವರ್ಗಿಯಾ ಹೇಳಿದ್ದಾರೆ.

  • 3:48 PM May 2, 2021 ಅಸ್ಸಾಂ ಬಿಜೆಪಿ ರಾಜ್ಯಾಧ್ಯಕ್ಷ ಪಟಾಚಕುರ್ಚಿ ಕ್ಷೇತ್ರದಲ್ಲಿ 27,659 ಮರಗಳ ಮುನ್ನಡೆಯನ್ನು ಪಡೆದಿದ್ದಾರೆ.

  • 3:44 PM May 2, 2021 ಕೇರಳದಲ್ಲಿ ಎಲ್‌ಡಿಎಫ್ 94, ಯುಡಿಎಫ್ 44 ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ.

  • 3:41 PM May 2, 2021 ನಂದಿಗ್ರಾಮದಲ್ಲಿ ಸುವೇಂದು ಅಧಿಕಾರಿ 6 ಮತಗಳ ಮುನ್ನಡೆಯಲ್ಲಿದ್ದಾರೆ. 16ನೇ ಸುತ್ತಿನ ಎಣಿಕೆ ನಡೆಯುತ್ತಿದ್ದು, ಕೊನೆಯ ಸುತ್ತು ಬಾಕಿ ಉಳಿದಿದೆ.

  • 3:40 PM May 2, 2021 ಕೇರಳದ ಚಿಟ್ಟೂರು ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶ್ರೀ ಕೃಷ್ಣ ಕುಟ್ಟಿ ಅವರು 35 ಸಾವಿರಕ್ಕೂ ಆಧಿಕ ಮತಗಳಿಂದ ಜಯಗಳಿಸಿದ್ದಾರೆ.

  • 3:37 PM May 2, 2021 ಅಸ್ಸಾಂನಲ್ಲಿ ಬಿಜೆಪಿ ಮೈತ್ರಿಕೂಟ 73, ಕಾಂಗ್ರೆಸ್ ಮೈತ್ರಿಕೂಟ 50 ಮತ್ತು ಇತರರು 3 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದುಕೊಂಡಿದ್ದಾರೆ.

  • 3:35 PM May 2, 2021 ಪಶ್ಚಿಮ ಬಂಗಾಳದಲ್ಲಿ ಟಿಎಂಸಿ 209 (32 ಗೆಲುವು), ಬಿಜೆಪಿ 80 (7 ಗೆಲುವು) ಸ್ಥಾನಗಳಲ್ಲಿ ಮುನ್ನಡೆ ಪಡೆದಿವೆ. ಎಡಪಕ್ಷ 2 ಕ್ಷೇತ್ರದಲ್ಲಿ ಮುನ್ನಡೆಯಲ್ಲಿದೆ.

  • 3:32 PM  May 2, 2021 ಕೇರಳದ ಆರೋಗ್ಯ ಸಚಿವೆ ಮಟ್ಟನ್ನೂರು ಕ್ಷೇತ್ರದಲ್ಲಿ 60 ಸಾವಿರ ಮತಗಳ ಅಂತರದಲ್ಲಿ ಮುನ್ನಡೆಯಲ್ಲಿದ್ದಾರೆ.

  • 3:30 PM May 2, 2021 ಕೇರಳದ ಆರೋಗ್ಯ ಸಚಿವೆ ಮಟ್ಟನ್ನೂರು ಕ್ಷೇತ್ರದಲ್ಲಿ 60 ಸಾವಿರ ಮತಗಳ ಅಂತರದಲ್ಲಿ ಮುನ್ನಡೆಯಲ್ಲಿದ್ದಾರೆ.

  • 3:29 PM May 2, 2021 64ನೇ ಸುತ್ತಿನಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್‌ನ ಸತೀಶ್ ಜಾರಕಿಹೊಳಿ 10 ಮತಗಳ ಮುನ್ನಡೆಯನ್ನು ಪಡೆದಿದ್ದಾರೆ.

  • 3:27 PM May 2, 2021 ಪಾಲಕ್ಕಾಡ್‌ನಲ್ಲಿ ಇ. ಶ್ರೀಧರನ್ ಹಿನ್ನಡೆ ಅನುಭವಿಸಿದ್ದಾರೆ. ಯುಡಿಎಫ್ 1000 ಮತಗಳ ಮುನ್ನಡೆ ಪಡೆದಿದೆ.

  • 3:25 PM May 2, 2021 ಕೇರಳದಲ್ಲಿ ಎಲ್‌ಡಿಎಫ್ 41, ಯುಡಿಎಫ್ 12 ಕೇತ್ರದಲ್ಲಿ ಗೆಲುವು ಸಾಧಿಸಿದೆ.

  • 3:21 PM May 2, 2021 14ನೇ ಸುತ್ತಿನ ಎಣಿಕೆ ಬಳಿಕ ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ 1900 ಮತಗಳ ಮುನ್ನಡೆ ಪಡೆದಿದ್ದಾರೆ.

  • 3:19 PM May 2, 2021ಪುದುಚೇರಿಯಲ್ಲಿ ಬಿಜೆಪಿ ಮೈತ್ರಿಕೂಟ 7, ಕಾಂಗ್ರೆಸ್ ಮೈತ್ರಿಕೂಟ 3ರಲ್ಲಿ ಜಯಗಳಿಸಿದೆ. ಒಟ್ಟು 30 ವಿಧಾನಸಭಾ ಕ್ಷೇತ್ರಗಳನ್ನು ಕೇಂದ್ರಾಡಳಿತ ಪ್ರದೇಶ ಒಳಗೊಂಡಿದೆ.

  • 3:17 PM May 2, 2021ಬೋದಿನಾಯಕನ್ನೂರ್ ಕ್ಷೇತ್ರದಲ್ಲಿ ಓ. ಪನ್ನೀರ್ ಸೆಲ್ವಂ 3822 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ಡಿಎಂಕೆಯ ತಂಗ ತಮಿಳು ಸೆಲ್ವಂ 20,825 ಮತಗಳನ್ನು ಪಡೆದಿದ್ದಾರೆ.

  • 3:15 PM May 2, 2021 ಬೆಳಗಾವಿಯಲ್ಲಿ 59ನೇ ಸುತ್ತಿನಲ್ಲಿ 8976 ಮತಗಳ ಮುನ್ನಡೆ ಪಡೆದ ಕಾಂಗ್ರೆಸ್‌ನ ಸತೀಶ್ ಜಾರಕಿಹೊಳಿ

  • 3:14 PM May 2, 2021 ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಧರ್ಮಡಂ ಕ್ಷೇತ್ರದಲ್ಲಿ 40,000 ಮತಗಳ ಮುನ್ನಡೆಯನ್ನು ಪಡೆದಿದ್ದಾರೆ.

  • 3:10 PM May 2, 2021 ಅಸ್ಸಾಂನಲ್ಲಿ ಬಿಜೆಪಿ ಮೈತ್ರಿಕೂಟ 8, ಕಾಂಗ್ರೆಸ್ ಮೈತ್ರಿಕೂಟ 3 ಸ್ಥಾನಗಳಲ್ಲಿ ಜಯಗಳಿಸಿವೆ.

  • 3:08 PM May 2, 2021 ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ 3,800 ಮತಗಳ ಮುನ್ನಡೆ ಪಡೆದಿದ್ದಾರೆ. ಬಿಜೆಪಿಯ ಸುವೇಂದು ಮುಖರ್ಜಿ ಭಾರೀ ಪೈಪೋಟಿ ನೀಡುತ್ತಿದ್ದಾರೆ.

  • 3:06 PM May 2, 2021 ಮಧುರೈ ಪಶ್ಚಿಮದಲ್ಲಿ 14ನೇ ಸುತ್ತಿನ ಎಣಿಕೆ ಮುಕ್ತಾಯಗೊಂಡಿದೆ. ಸಚಿವ ಸೆಲ್ಲೂರು ಕೆ. ರಾಜು 2,671 ಮಗಳ ಮುನ್ನಡೆಯಲ್ಲಿದ್ದಾರೆ. ಡಿಎಂಕೆ ಅಭ್ಯರ್ಥಿ 35,755 ಮತಗಳನ್ನು ಪಡೆದಿದ್ದಾರೆ.

  • 3:03 PM May 2, 2021 ಉತ್ತರ ಪ್ರದೇಶ ಮಾಜಿ ಸಿಎಂ ಅಖಿಲೇಶ್ ಯಾದವ್ ತಮಿಳುನಾಡಿನ ಗೆಲುವಿಗಾಗಿ ಎಂ. ಕೆ. ಸ್ಟಾಲಿನ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ.

  • 2:59 PM May 2, 2021 ನಂದಿಗ್ರಾಮದಲ್ಲಿ 3 ಸುತ್ತಿನ ಮತಎಣಿಕೆ ಮಾತ್ರ ಬಾಕಿ ಇದೆ. ಸುವೇಂದು ಅಧಿಕಾರಿ, ಮಮತಾ ಬ್ಯಾನರ್ಜಿ ನಡುವೆ ತೀವ್ರ ಪೈಪೋಟಿ ಇದೆ.

  • 2:57 PM May 2, 2021 15ನೇ ಸುತ್ತಿನ ಬಳಿಕ ಛೆಪಾಕ್‌ನಲ್ಲಿ ಉದಯನಿಧಿ ಸ್ಟಾಲಿನ್ 36,081 ಮತಗಳ ಮುನ್ನಡೆ ಪಡೆದಿದ್ದಾರೆ. ಡಿಎಂಕೆ 51,399 ಮತ, ಪಿಎಂಕೆ 15,381 ಮತಗಳನ್ನು ಪಡೆದಿದೆ.

  • 2:55 PM May 2, 2021 ಪಶ್ಚಿಮ ಬಂಗಾಳದ ಗೆಲುವಿಗಾಗಿ ಮಮತಾ ಬ್ಯಾನರ್ಜಿಗೆ ಅಭಿನಂದನೆ ಸಲ್ಲಿಸಿದ ಬಿಹಾರ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್

  • 2:52 PM May 2, 2021 57ನೇ ಸುತ್ತಿನಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್‌ಗೆ 5,362 ಮತಗಳ ಮುನ್ನಡೆ. ಏಕಾಏಕಿ ಇಳಿಕೆ ಕಂಡ ಮುನ್ನಡೆಯ ಮತಗಳು.

  • 2:51 PM May 2, 2021 ತಮಿಳುನಾಡಿನಲ್ಲಿ ಡಿಎಂಕೆ ಮೈತ್ರಿಕೂಟ 147, ಎಐಎಡಿಎಂಕೆ ಮೈತ್ರಿಕೂಟ 86, ಎಂಎನ್‌ಎಂ 1 ಕ್ಷೇತ್ರದಲ್ಲಿ ಮುನ್ನಡೆಯನ್ನು ಪಡೆದಿದ್ದಾರೆ.

  • 2:48 PM May 2, 2021 ಅಸ್ಸಾಂನಲ್ಲಿ ಬಿಜೆಪಿ ಮೈತ್ರಿಕೂಟ 58 (4 ಗೆಲುವು), ಕಾಂಗ್ರೆಸ್ ಮೈತ್ರಿಕೂಟ 48 (3 ಗೆಲುವು), ಇತರರು 3 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

  • 2:47 PM May 2, 2021 ಪಾಲಕ್ಕಾಡ್‌ನಲ್ಲಿ ಯುಡಿಎಫ್ 1200 ಮತಗಳ ಮುನ್ನಡೆ ಪಡೆದಿದೆ. ಒಂದು ಪಂಚಾಯಿತಿ ಎಣಿಕೆ ಮಾತ್ರ ಬಾಕಿ ಇದ್ದು, ಇ. ಶ್ರೀಧರನ್ ಸೋಲುವ ಸಾಧ್ಯತೆ ಇದೆ.

  • 2:44 PM May 2, 2021 ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

  • 2:43 PM May 2, 2021 ನಂದಿಗ್ರಾಮದಲ್ಲಿ ಸುವೇಂದು ಅಧಿಕಾರಿ 1000 ಮತಗಳ ಮುನ್ನಡೆಯಲ್ಲಿದ್ದಾರೆ. ಕೇವಲ 2-3 ಸುತ್ತಿನ ಎಣಿಕೆ ಬಾಕಿ ಇದ್ದು, ಯಾರಿಗೆ ಗೆಲುವು? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

  • 2:41 PM May 2, 2021 55ನೇ ಸುತ್ತಿನಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್‌ನ ಸತೀಶ್ ಜಾರಕಿಹೊಳಿ 9975 ಮತಗಳ ಮುನ್ನಡೆಯನ್ನು ಪಡೆದುಕೊಂಡಿದ್ದಾರೆ.

  • 2:40 PM May 2, 2021 ನಾವು ಸಂಭ್ರಮಾಚರಣೆ ಮಾಡಲ್ಲ. ಟಿಎಂಸಿ ವಿರುದ್ಧ ಅಪಪ್ರಚಾರವನ್ನು ಮಾಡಲಾಗುತ್ತಿದೆ. ಚುನಾವಣಾ ಫಲಿತಾಂಶ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದೆ. ಕೋವಿಡ್ ಕಾರಣಕ್ಕಾಗಿ ಸಂಭ್ರಮಾಚರಣೆ ಮಾಡದಂತೆ ನಾವು ಮನವಿ ಮಾಡುತ್ತೇವೆ ಎಂದು ಪಕ್ಷದ ಕಾರ್ಯದರ್ಶಿ ಸಯನ್ ದೇವ್ ಚಟರ್ಜಿ ಹೇಳಿದ್ದಾರೆ.

  • 2:35 PM May 2, 2021 ಶಿವಪುರ್ ಕ್ಷೇತ್ರದಲ್ಲಿ ಮನೋಜ್ ತಿವಾರಿ ಜಯಗಳಿಸಿದ್ದಾರೆ.

  • 2:33 PM May 2, 2021 ಪಾಲಕ್ಕಾಡ್‌ನಲ್ಲಿ ಮುನ್ನಡೆಯಲ್ಲಿದ್ದ ಬಿಜೆಪಿಯ, ಇ. ಶ್ರೀಧರನ್ ಅವರನ್ನು ಯುಡಿಎಫ್‌ನ ಶಫಿ ಪರಂಬಿಲ್ 2ನೇ ಸ್ಥಾನಕ್ಕೆ ತಳ್ಳಿದ್ದಾರೆ. ಯುಡಿಎಫ್ 178 ಮತಗಳ ಮುನ್ನಡೆಯಲ್ಲಿದೆ.

  • 2:31 PM May 2, 2021 ನಂದಿಗ್ರಾಮದಲ್ಲಿ ಸುವೇಂದು ಅಧಿಕಾರಿ 3500 ಮತಗಳ ಮುನ್ನಡೆ ಪಡೆದಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸುವೇಂದು ಅಧಿಕಾರಿ ನಡುವೆ ನೇರ ಪೈಪೋಟಿ ನಡೆಯುತ್ತಿದೆ.

  • 2:28 PM May 2, 2021 ಕೇರಳದಲ್ಲಿ ಎಲ್‌ಡಿಎಫ್ 29, ಯುಡಿಎಫ್ 7 ಕೇತ್ರದಲ್ಲಿ ಗೆಲುವು ಸಾಧಿಸಿದೆ. 94 ಕ್ಷೇತ್ರಗಳಲ್ಲಿ ಎಪ್‌ಡಿಎಫ್ ಮುನ್ನಡೆಯಲ್ಲಿದೆ.

  • 2:21 PM May 2, 2021 ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ ಪಂಚ ರಾಜ್ಯ ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳುತ್ತಿರುವ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಪ್ರದರ್ಶನ ನೀಡಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪರ ಜನ ಒಲವು ತೋರಿಸಿದ್ದು,ಮತ ಗಳಿಕೆ ವಿಚಾರದಲ್ಲಿ ಬಿಜೆಪಿಗೆ ನಂಬರ್ ಒನ್ ಸ್ಥಾನದಲ್ಲಿದೆ. ಸೀಟು ಕಡಿಮೆ ಬಂದಿದ್ದರೂ ಮತ ಗಳಿಗೆಯಲ್ಲಿ ಬಿಜೆಪಿ ಅಗ್ರಸ್ಥಾನದಲ್ಲಿದೆ. ಬಂಗಾಳದಲ್ಲಿ ದೀದಿಯ ಪ್ರಭಾವ ಕಡಿಮೆಯಾಗಿರೋದು ಬಹಳ ಸ್ಪಷ್ಟವಾಗಿದೆ ಅಂತಾ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

  • 2:07 PM May 2, 2021 200ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಳ್ಳುತ್ತಿದ್ದಂತೆ ಟಿಎಂಸಿ ಕಾರ್ಯಕರ್ತರಿಂದ ಸಂಭ್ರಮಾಚರಣೆ.

  • 1:55 PM May 2, 2021 ಕೇರಳದಲ್ಲಿ ಎಲ್ ಡಿಎಫ್ 96ರಲ್ಲಿ ಮುನ್ನಡೆಯಲ್ಲಿದೆ (22 ಗೆಲುವು), ಯುಡಿಎಫ್ 43 ಮುನ್ನಡೆ (4 ಗೆಲವು). ಜೆಪಿ ಮೈತ್ರಿಕೂಟ 1 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದುಕೊಂಡಿದೆ.

  • 1:52 PM May 2, 2021 ಪಶ್ಚಿಮ ಬಂಗಾಳದ ಗೆಲುವಿಗಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಶುಭಾಶಯಗಳನ್ನು ಹೇಳಿದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್

  • 1:50 PM May 2, 2021 ಬೆಳಗಾವಿಯಲ್ಲಿ ಬಿಜೆಪಿಯ ಮಂಗಲ ಸುರೇಶ್ ಅಂಗಡಿ 1,90,132 ಮತಗಳು. ಕಾಂಗ್ರೆಸ್‌ನ ಸತೀಶ್ ಜಾರಕಿಹೊಳಿ 1,86,758 ಮತಗಳನ್ನು ಪಡೆದಿದ್ದಾರೆ. ಮತ ಎಣಿಕೆ ಇನ್ನೂ ಮುಂದುವರೆದಿದೆ.

  • 1:48 PM May 2, 2021 ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಬಿಜೆಪಿ ಮೈತ್ರಿಕೂಟ 8ರಲ್ಲಿ ಮುನ್ನಡೆಯಲ್ಲಿದ್ದು 6 ಕ್ಷೇತ್ರಗಳಲ್ಲಿ ಗೆದ್ದಿದೆ. ಕಾಂಗ್ರೆಸ್ ಮೈತ್ರಿಕೂಟ 4ರಲ್ಲಿ ಮುನ್ನಡೆಯಲ್ಲಿದ್ದು 1ರಲ್ಲಿ ಗೆದ್ದಿದೆ.

  • 1:46 PM May 2, 2021 ಉಪ ಮುಖ್ಯಮಂತ್ರಿ ಒ. ಪನ್ನೀರ್ ಸೆಲ್ವಂ ಬೋದಿನಾಯಕನ್ನೂರ್ ಕ್ಷೇತ್ರದಲ್ಲಿ 5ನೇ ಸುತ್ತಿನ ಎಣಿಕೆ ಬಳಿಕ ಮುನ್ನಡೆಯಲ್ಲಿದ್ದಾರೆ. 17,825 ಮತಗಳನ್ನು ಪಡೆದಿದ್ದಾರೆ. ಡಿಎಂಕೆ ಅಭ್ಯರ್ಥಿ 15,341 ಮತಗಳಿಸಿದ್ದಾರೆ.

  • 1:44 PM May 2, 2021 ಮಮತಾ ಬ್ಯಾನರ್ಜಿ 3ನೇ ಬಾರಿ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹಲವು ಬಾರಿ ಹೇಳಿದ್ದೆ. ಎಡಪಕ್ಷಗಳು ಪಶ್ಚಿಮ ಬಂಗಾಳದಿಂದ ಈಗ ಹೊರ ಹೋಗಿವೆ ಎಂದು ಟಿಎಂಸಿ ಮುಖಂಡ ಫರೀದ್ ಹಕೀಮ್ ಹೇಳಿದ್ದಾರೆ.

  • 1:41 PM  May 2, 2021ಬೆಳಗಾವಿಯಲ್ಲಿ 9596 ಮತಗಳ ಮುನ್ನಡೆಯನ್ನು ಕಾಂಗ್ರೆಸ್‌ನ ಸತೀಶ್ ಜಾರಕಿಹೊಳಿ ಪಡೆದಿದ್ದಾರೆ. 49ನೇ ಸುತ್ತಿನ ಎಣಿಕೆ ಮುಕ್ತಾಯವಾಗಿದೆ.

  • 1:38 PM May 2, 2021 ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ 2700 ಮತಗಳ ಮುನ್ನಡೆಯನ್ನು ಪಡೆದಿದ್ದಾರೆ. ಸುವೇಂದು ಅಧಿಕಾರಿ ಮತ್ತು ಮಮತಾ ನಡುವಿನ ಪೈಪೋಟಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ.

  • 1:35 PM May 2, 2021 47ನೇ ಸುತ್ತಿನ ಎಣಿಕೆಯಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್‌ನ ಸತೀಶ್ ಜಾರಕಿಹೊಳಿ 8,595 ಮತಗಳ ಮುನ್ನಡೆಯನ್ನು ಪಡೆದಿದ್ದಾರೆ.

  • 1:33 PM May 2, 2021 ಕೇರಳದ ಅಲಪುಝ ಜಿಲ್ಲೆಯಲ್ಲಿ ಎಲ್‌ಡಿಎಫ್ 7 ಕ್ಷೇತ್ರಗಳು, ಯುಡಿಎಫ್ 2 ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಪಡೆದುಕೊಂಡಿವೆ.

  • 1:29 PM May 2, 2021 ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್‌ನ ಬಸನಗೌಡ ತುರುವಿನಾಳಗೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಕರೆ ಮಾಡಿ ಅಭಿನಂದನೆ ಸಲ್ಲಿಸಿದರು.

  • 1:26 PM May 2, 2021 ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್‌ನ ಬಸನಗೌಡ ತುರುವಿನಾಳಗೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಕರೆ ಮಾಡಿ ಅಭಿನಂದನೆ ಸಲ್ಲಿಸಿದರು.

  • 1:24 PM May 2, 2021 ರಾಯಚೂರು ಜಿಲ್ಲೆಯ ಮಸ್ಕಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಬಸನಗೌಡ ತುರುವಿನಾಳ ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ಪ್ರತಾಪ್ ಗೌಡ ಪಾಟೀಲ್ ಸೋಲು ಕಂಡಿದ್ದಾರೆ.

  • 1:22 PM May 2, 2021 10ನೇ ಸುತ್ತಿನ ಎಣಿಕೆ ಬಳಿಕ ಮಧುರೈ (ಪಶ್ಚಿಮ)ದಲ್ಲಿ ಎಐಎಡಿಎಂಕೆಯ ಸೆಲ್ಲೂರು ರಾಜು 29,063 ಮತಗಳನ್ನು ಪಡೆದಿದ್ದಾರೆ. ಡಿಎಂಕೆ ಅಭ್ಯರ್ಥಿ 26,345 ಮತಗಳಿಸಿದ್ದಾರೆ.

  • 1:18 PM  May 2, 2021 ಕೇರಳದ ಇಡುಕ್ಕಿಯಲ್ಲಿ ಎಲ್‌ಡಿಎಫ್ ಅಭ್ಯರ್ಥಿ ಗೆಲುವಿನ ಸನಿಹಕ್ಕೆ ಬಂದಿದ್ದಾರೆ.

  • 1:16 PM May 2, 2021 43 ಸುತ್ತಿನ ಮತ ಎಣಿಕೆ ಮುಕ್ತಾಯ. ಬೆಳಗಾವಿಯಲ್ಲಿ ಕಾಂಗ್ರೆಸ್‌ನ ಸತೀಶ್ ಜಾರಕಿಹೊಳಿ ಮುನ್ನಡೆ ಪಡೆದುಕೊಂಡಿದ್ದಾರೆ. ಬಿಜೆಪಿ ಮಂಗಲ ಸುರೇಶ್ ಅಂಗಡಿ ಹಿನ್ನಡೆ.

  • 1:15 PM May 2, 2021 ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು. ಧನ್ಯವಾದ ಸಲ್ಲಿಸಿ ಟ್ವೀಟ್ ಮಾಡಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ

  • 1:13 PM May 2, 2021 ತಮಿಳುನಾಡಿನಲ್ಲಿ ಡಿಎಂಕೆ 112, ಎಐಎಡಿಎಂಕೆ 79, ಎಂಎನ್‌ಎಂ 1 ಸ್ಥಾನಗಳಲ್ಲಿ ಮುಂದಿದೆ.

  • 1:11 PM May 2, 2021 ಕೋವಿಡ್ ನಿಯಮಗಳನ್ನು ಉಲ್ಲಂಘನೆ ಮಾಡಿ ಸಂಭ್ರಮಾಚರಣೆ ಮಾಡುವುದನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿದೆ. ಇಂತಹ ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸಬೇಕು ಎಂದು ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದೆ.

  • 1:09 PM May 2, 2021 ಬಸವಕಲ್ಯಾಣದಲ್ಲಿ ಕಾಂಗ್ರೆಸ್‌ನ ಮಾಲಾ ಬಿ. ನಾರಾಯಣರಾವ್ ಸೋಲು ಕಂಡಿದ್ದಾರೆ.

  • 1:07 PM May 2, 2021 ಅಸ್ಸಾಂನಲ್ಲಿ ಬಿಜೆಪಿ ಮೈತ್ರಿಕೂಟ 76, ಕಾಂಗ್ರೆಸ್ ಮೈತ್ರಿಕೂಟ 47, ಇತರರು 3 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದಾರೆ.

  • 1:05 PM May 2, 2021 6ನೇ ಸುತ್ತಿನ ಬಳಿಕ ಮಧುರೈ (ಉತ್ತರ)ದಲ್ಲಿ ಬಿಜೆಪಿಯ ಡಾ. ಶರವಣ 2,261 ಮತಗಳ ಅಂತರದಿಂದ ಹಿನ್ನಡೆ ಸಾಧಿಸಿದ್ದಾರೆ. ಡಿಎಂಕೆ ಅಭ್ಯರ್ಥಿ 16,655 ಮತಗಳನ್ನು ಪಡೆದಿದ್ದಾರೆ.

  • 1:02 PM May 2, 2021ಬಸವಕಲ್ಯಾಣದ 20,904 ಮತಗಳ ಅಂತರದಿಂದ ಶರಣು ಸಲಗರ ಗೆಲುವು

  • 12:57 PM May 2, 2021 ಚೆನ್ನೈನಲ್ಲಿ ಪಕ್ಷದ ಕಚೇರಿ ಮುಂದೆ ಡಿಎಂಕೆ ಕಾರ್ಯಕರ್ತರು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಪಕ್ಷ 144 ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಪಡೆದಿದೆ.

  • 12:55 PM May 2, 2021 ಬೆಳಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಮುನ್ನಡೆ ಸಾಧಿಸಿದ್ದಾರೆ. ಇದುವರೆಗೂ ಬಿಜೆಪಿ ಅಭ್ಯರ್ಥಿ ಮುನ್ನಡೆಯಲ್ಲಿದ್ದರು.

  • 12:54 PM May 2, 2021 ಉತ್ತಮ ಸಂಸದ ಎಂದು ಹೆಸರು ಪಡೆದಿರುವ ಮಾಜಿ ಸಂಸದರಾದ ಪಿ. ರಾಜೀವ್ ಕಲಮಸ್ಸೇರಿ ಕ್ಷೇತ್ರದಲ್ಲಿ 5000 ಮತಗಳ ಮುನ್ನಡೆಯನ್ನು ಪಡೆದಿದ್ದಾರೆ.

  • 12:51 PM May 2, 2021 ಪಶ್ಚಿಮ ಬಂಗಾಳದಲ್ಲಿ ಟಿಎಂಸಿ 203, ಬಿಜೆಪಿ 84, ಎಡಪಕ್ಷ 2, ಇತರರು 3 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದಾರೆ.

  • 12:48 PM May 2, 2021 ಅಸ್ಸಾಂನಲ್ಲಿ ಬಿಜೆಪಿ ಮೈತ್ರಿಕೂಟ 76, ಕಾಂಗ್ರೆಸ್ ಮೈತ್ರಿಕೂಟ 47, ಇತರರು ಮೂರು ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದಾರೆ.

  • 12:47 PM May 2, 2021 ಪಾಲಕ್ಕಾಡ್‌ನಲ್ಲಿ ಮೆಟ್ರೋ ಮ್ಯಾನ್, ಬಿಜೆಪಿ ಅಭ್ಯರ್ಥಿ ಇ. ಶ್ರೀಧರನ್ 7000 ಮತಗಳ ಅಂತರದ ಮುನ್ನಡೆಯನ್ನು 10ನೇ ಸುತ್ತಿನ ಎಣಿಕೆಯಲ್ಲಿ ಕಾಯ್ದುಕೊಂಡಿದ್ದಾರೆ.

  • 12:45 PM May 2, 2021ಸುತ್ತಿನ ಎಣಿಕೆ ಬಳಿಕ ಬಿಜೆಪಿಯ ಸುವೇಂದು ಅಧಿಕಾರಿ 7 ಸಾವಿರ ಮತಗಳಿಂದ ಮುನ್ನಡೆ ಪಡೆದಿದ್ದಾರೆ. ನಂದಿಗ್ರಾಮದ ಬ್ಲಾಕ್ 1ರ ಫಲಿತಾಂಶ ಯಾರು ಗೆಲವು ಸಾಧಿಸಲಿದ್ದಾರೆ ಎನ್ನುವುದನ್ನು ತೀರ್ಮಾನಿಸಲಿದೆ.

  • 12:43 PM May 2, 2021 ಪುದುಚೇರಿಯಲ್ಲಿ ಬಿಜೆಪಿ ಮೈತ್ರಿಕೂಟ 6 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, 8 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ ಮೈತ್ರಿಕೂಟ 1 ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದು, 4ರಲ್ಲಿ ಮುನ್ನಡೆ ಸಾಧಿಸಿದೆ.

  • 12:40 PM May 2, 2021 ಕೇರಳದಲ್ಲಿ ಎಲ್‌ಡಿಎಫ್ 95 ಕ್ಷೇತ್ರ, ಯುಡಿಎಫ್ 43 ಕ್ಷೇತ್ರ ಮತ್ತು ಬಿಜೆಪಿ ಮೈತ್ರಿಕೂಟ 2 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

  • 12:35 PM May 2, 2021 ಪಶ್ಚಿಮ ಬಂಗಾಳದಲ್ಲಿ ಟಿಎಂಸಿ 203, ಬಿಜೆಪಿ 84 ಮತ್ತು ಇತರರು 3 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.

  • 12:31 PM May 2, 2021 ಚುನಾವಣಾ ಆಯೋಗದ ಮಾಹಿತಿಯಂತೆ 3ನೇ ಹಂತದ ಮತ ಎಣಿಕೆ ಬಳಿಕ ನಂದಿಗ್ರಾಮದಲ್ಲಿ ಸುವೇಂದು ಅಧಿಕಾರಿ 30,655 ಮತ್ತು ಮಮತಾ ಬ್ಯಾನರ್ಜಿ 34,430 ಮತಗಳನ್ನು ಪಡೆದಿದ್ದಾರೆ.

  • 12:29 PM May 2, 2021 ತಮಿಳುನಾಡಿನಲ್ಲಿ ಡಿಎಂಕೆ ಮೈತ್ರಿಕೂಟ 112, ಎಐಎಡಿಎಂಕೆ ಮೈತ್ರಿಕೂಟ 94, ಎಂಎನ್‌ಎಂ 1 ಸ್ಥಾನದಲ್ಲಿ ಮುನ್ನಡೆಯನ್ನು ಪಡೆದಿದೆ.

  • 12:28 PM May 2, 2021 ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗಲ ಸುರೇಶ್ ಅಂಗಡಿ ಮುನ್ನಡೆಯ ಅಂತರ ಕಡಿಮೆಯಾಗುತ್ತಿದೆ. 5709 ಮತಗಳ ಮುನ್ನಡೆಯಲ್ಲಿದ್ದಾರೆ. ಕಾಂಗ್ರೆಸ್‌ನ ಸತೀಶ್ ಜಾರಕಿಹೊಳಿ ತೀವ್ರ ಪೈಪೋಟಿ ನೀಡುತ್ತಿದ್ದಾರೆ.

  • 12:27 PM May 2, 2021 ಕೇರಳದ ಆರೋಗ್ಯ ಸಚಿವೆ ಕೆ. ಕೆ. ಶೈಲಜಾ ಮತ್ತನೂರ್ ಕ್ಷೇತ್ರದಲ್ಲಿ ಗೆಲುವಿನ ಸನಿಹಕ್ಕೆ ಬಂದಿದ್ದಾರೆ.

  • 12:24 PM May 2, 2021 ಕನ್ಯಾಕುಮಾರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ವಿಜಯ್ ವಸಂತ್ ಕುಮಾರ್ 38,844 ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ 81,862 ಮತಗಳನ್ನು ಪಡೆದಿದ್ದಾರೆ.

  • 12:20 PM May 2, 2021 ತಮಿಳುನಾಡಿನ ಥೌಸೆಂಡ್ಸ್‌ ಲೈಟ್ಸ್‌ ಕ್ಷೇತ್ರದಲ್ಲಿ ನಟಿ, ಬಿಜೆಪಿ ಅಭ್ಯರ್ಥಿ ಖುಷ್ಬೂ ಸುಂದರ್ ಹಿನ್ನಡೆ ಅನುಭವಿಸಿದ್ದಾರೆ.

  • 12:18 PM May 2, 2021 ಬೆಳಗಾವಿ ಲೋಕಸಭಾ ಕ್ಷೇತ್ರದ 34ನೇ ಸುತ್ತಿನ ಮತ ಏಣಿಕೆಯಲ್ಲಿ ಬಿಜೆಪಿಯ ಮಂಗಲ ಸುರೇಶ್ ಅಂಗಡಿ 6,593 ಮತಗಳ ಮುನ್ನಡೆ ಪಡೆದಿದ್ದಾರೆ

  • 12:17 PM May 2, 2021 ಕೇರಳದ ಮಾಜಿ ಮುಖ್ಯಮಂತ್ರಿ ಓಮನ್ ಚಾಂಡಿ ಪುತುಪಲ್ಲಿ ಕ್ಷೇತ್ರದಲ್ಲಿ ಮುನ್ನಡೆಯನ್ನು ಪಡೆದುಕೊಂಡಿದ್ದಾರೆ.

  • 12:10 PM May 2, 2021 ಅಸ್ಸಾಂನಲ್ಲಿ ಬಿಜೆಪಿ ಮೈತ್ರಿಕೂಟ 80, ಕಾಂಗ್ರೆಸ್ ಮೈತ್ರಿಕೂಟ 40, ಇತರರು 40 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

  • 12:07 PM May 2, 2021 ಕೊಲತೂರ್ ವಿಧಾನಸಭೆ ಕ್ಷೇತ್ರದಲ್ಲಿ ಡಿಎಂಕೆ ಅಧ್ಯಕ್ಷ ಎಂ ಕೆ ಸ್ಟಾಲಿನ್ ಮುನ್ನಡೆ ಸಾಧಿಸಿದ್ದಾರೆ.

  • 12:00 PM May 2, 2021 ನಂದಿಗ್ರಾಮ್ ವಿಧಾನಸಭಾ ಕ್ಷೇತ್ರದಲ್ಲಿ ಟಿಎಂಸಿ ಅಭ್ಯರ್ಥಿ ಮಮತಾ ಬ್ಯಾನರ್ಜಿ ವಿರುದ್ಧ ಮತ್ತೊಮ್ಮೆ ಮುನ್ನಡೆ ಸಾಧಿಸಿದ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ.

  • 11:40 AM May 2, 2021 ಪಶ್ಚಿಮ ಬಂಗಾಳ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ 193, ಬಿಜೆಪಿ 95 ಮತ್ತು ಇತರರು 3 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.

  • 11:39 AM May 2, 2021 ಕೇರಳ ಕೇರಳದ ಕೊಯಿಕ್ಕೋಡ್‌ನ ಪೆರಂಬ್ರಾ ಕ್ಷೇತ್ರದಲ್ಲಿ ಎಲ್‌ಡಿಎಫ್ ಅಭ್ಯರ್ಥಿ ಟಿ. ಪಿ. ರಾಮಕೃಷ್ಣ ಗೆಲುವು

  • 11:37 AM May 2, 2021 ತಮಿಳುನಾಡು ತಮಿಳುನಾಡಿನ ಅರವಕುರುಚಿಯಲ್ಲಿ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ 500 ಮತಗಳ ಹಿನ್ನಡೆಯನ್ನು ಅನುಭವಿಸಿದ್ದಾರೆ.

  • 11:37 AM May 2, 2021 ಪುದುಚೇರಿ ಪುದುಚೇರಿಯ ಮನ್ನಾಡಿಪಟ್ಟುವಿನಲ್ಲಿ ಬಿಜೆಪಿಯ ನಾಮಚಿವಯನ್ ಗೆಲುವು ಸಾಧಿಸಿದ್ದಾರೆ.

  • 11:35 AM May 2, 2021 ಅಸ್ಸಾಂ ಈಗಿನ ಟ್ರೆಂಡ್ ಪ್ರಕಾರ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ರಚನೆ ಮಾಡಲಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಹೇಳಿದರು.

  • 11:33 AM May 2, 2021 ಕೇರಳ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಧರ್ಮಡಂ ಕ್ಷೇತ್ರದಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ. ಪಕ್ಷದ ಕಾರ್ಯಕರ್ತರ ಜೊತೆ ಅವರು ಫಲಿತಾಂಶದ ಟ್ರೆಂಡ್ ವೀಕ್ಷಣೆ ಮಾಡುತ್ತಿದ್ದಾರೆ.

  • 11:32 AM May 2, 2021 ಪುದುಚೇರಿ ಕಾಂಗ್ರೆಸ್ ಮೊದಲ ಗೆಲುವು ಪುದುಚೇರಿಯ ಕಾತಿಗಾಮನ್ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ರಮೇಶ್ ಗೆಲುವು ಸಾಧಿಸಿದ್ದಾರೆ.

  • 11:31 AM May 2, 2021 ಪುದುಚೇರಿ ಬಿಜೆಪಿಯ ಮೊದಲ ಗೆಲುವು ಪುದುಚೇರಿಯ ಕಾಮ್‌ರಾಜ್ ನಗರ ಕ್ಷೇತ್ರದಲ್ಲಿ ಬಿಜೆಪಿಯ ಜಾನ್ ಕುಮಾರ್ ಗೆಲುವು ಸಾಧಿಸಿದ್ದಾರೆ.

  • 11:29 AM May 2, 2021 ಪಶ್ಚಿಮ ಬಂಗಾಳ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ 194, ಬಿಜೆಪಿ 94 ಮತ್ತು ಇತರರು 3 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ರಾಜ್ಯದಲ್ಲಿ ಟಎಂಸಿ ಮುನ್ನಡೆ ಪಡೆದರೂ ಮಮತಾ ಬ್ಯಾನರ್ಜಿ ಹಿನ್ನಡೆ ಅನುಭವಿಸಿದ್ದಾರೆ.

  • 11:27 AM May 2, 2021 ಕರ್ನಾಟಕ ಬೆಳಗಾವಿಯಲ್ಲಿ 27ನೇ ಸುತ್ತಿನ ಮತ ಎಣಿಕೆ ನಡೆಯುತ್ತಿದ್ದು, 12,361 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿಗೆ ಮುನ್ನಡೆ ಪಡೆದಿದ್ದಾರೆ.

  • 11:25 AM May 2, 2021 ಪಶ್ಚಿಮ ಬಂಗಾಳ ಕೇಂದ್ರ ಸಚಿವ ಮತ್ತು ಸಂಸದ ಬಬೂಲ್ ಸುಪ್ರಿಯೊ ತೋಲಿಗಂಜ್ ಕ್ಷೇತ್ರದಲ್ಲಿ 800 ಮತಗಳ ಹಿನ್ನಡೆ ಪಡೆದಿದ್ದಾರೆ. ಟಿಎಂಸಿಯ ಅರೂಪ್ ಬಿಸ್ವಾಸ್ ಕ್ಷೇತ್ರದಲ್ಲಿ ಮುನ್ನಡೆ ಪಡೆದುಕೊಂಡಿದ್ದಾರೆ.

  • 11:22 AM May 2, 2021 ಕೇರಳ ಕೇರಳದಲ ಪಾಲದಲ್ಲಿ ಎಲ್‌ಡಿಎಫ್ ಟಿಕೆಟ್ ನೀಡದಿರುವುದಕ್ಕೆ ಪಕ್ಷ ತೊರೆದಿದ್ದ ಮಣಿ ಸಿ. ಕಪ್ಪನ್ ಭಾರೀ ಮುನ್ನಡೆಯನ್ನು ಪಡೆದುಕೊಂಡಿದ್ದಾರೆ.


Counting of votes to the by-elections held in the Parliamentary constituency of Malappuram (Kerala) and Kanniyakumari (Tamil Nadu) held on April 6, and Tirupati (Andhra Pradesh) and Belgaum (Karnataka) held on April 17 began at 8 am today.