ಪಶ್ಚಿಮ ಬಂಗಾಳ; ಟಿಎಂಸಿ ಜಯಭೇರಿ ಬೆನ್ನಲ್ಲೇ ಬಿಜೆಪಿ ಕಚೇರಿಗೆ ಬೆಂಕಿ

02-05-21 10:44 pm       Headline Karnataka Political Bureau   ದೇಶ - ವಿದೇಶ

ಇದೀಗ ಪಶ್ಚಿಮ ಬಂಗಾಳ ಚುನಾವಣೆ ಫಲಿತಾಂಶದ ದಿನ ಅರಂಭಾಗ್‌ನ ಬಿಜೆಪಿ ಕಚೇರಿಗೆ ಪುಂಡರು ಬೆಂಕಿ ಇಟ್ಟಿದ್ದಾರೆ.

ಕೋಲ್ಕತಾ, ಮೇ.02: ಜಿದ್ದಾ-ಜಿದ್ದಿನ ಕಣವಾಗಿದ್ದ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿಯು ಅಭೂತಪೂರ್ವ ಗೆಲುವು ಸಾಧಿಸಿದೆ.

ಚುನಾವಣೆ ಆರಂಭವಾಗುವುದಕ್ಕೂ ಮುಂಚಿನಿಂದಲೂ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ನಡುವೆ ಭಾರಿ ಪೈಪೋಟಿ ಏರ್ಪಟ್ಟಿತ್ತು. ರಾಜಕೀಯ ನಾಯಕರ ಹೇಳಿಕೆಗಳು, ಪ್ರಚಾರ ಸಮಯದ ಬೆಳವಣಿಗೆಗಳು ಪರಸ್ಪರ ಕಾರ್ಯಕರ್ತರಲ್ಲಿ ದ್ವೇಷವನ್ನೂ ಬೆಳೆಸಿತ್ತು.

ಇದೀಗ ಪಶ್ಚಿಮ ಬಂಗಾಳ ಚುನಾವಣೆ ಫಲಿತಾಂಶದ ದಿನ ಅರಂಭಾಗ್‌ನ ಬಿಜೆಪಿ ಕಚೇರಿಗೆ ಪುಂಡರು ಬೆಂಕಿ ಇಟ್ಟಿದ್ದಾರೆ. ಈ ಘಟನೆ ಇಂದು ಬೆಳಿಗ್ಗೆ ನಡೆದಿದೆ ಎನ್ನಲಾಗುತ್ತಿದೆ. ಮಾಧ್ಯಮವೊಂದರ ವರದಿಗಾರರೊಬ್ಬರು ವಿಡಿಯೋ ಹಂಚಿಕೊಂಡಿದ್ದಾರೆ.

ಇದೇ ವಿಡಿಯೋವನ್ನು ನಿರ್ಮಲಾ ಸೀತಾರಾಮನ್ ಸೇರಿ ಹಲವು ಬಿಜೆಪಿ ಮುಖಂಡರು ಹಂಚಿಕೊಂಡಿದ್ದು, ಟಿಎಂಸಿ ಕಾರ್ಯಕರ್ತರ ಕಾರ್ಯ ಇದೆಂದು ಆರೋಪಿಸಿದ್ದಾರೆ. ಆದರೆ ಅರಂಭಾಗ್‌ ಟಿಎಂಸಿಯು ಆರೋಪವನ್ನು ನಿರಾಕರಿಸಿದೆ. ಇದೇ ದಿನ ಬೆಳಿಗ್ಗೆ ಕೊಲ್ಕತ್ತದ ಬಿಜಿಪಿ ಕಚೇರಿ ಮೇಲೂ ಕಲ್ಲು ತೂರಾಟ ನಡೆಯಿತು. ಆರಂಭದಲ್ಲಿ ಟಿಎಂಸಿ ಮುನ್ನಡೆಗೆ ಬರುತ್ತಿದ್ದಂತೆ ಕೆಲವು ಟಿಎಂಸಿ ಕಾರ್ಯಕರ್ತರು ಈ ದುಷ್ಕೃತ್ಯ ಎಸಗಿದರು ಎಂದು ಬಿಜೆಪಿ ಆರೋಪಿಸಿದೆ.

ಪಶ್ಚಿಮ ಬಂಗಾಳದಲ್ಲಿ ದ್ವೇಷ ರಾಜಕಾರಣ ಹೊಸದೇನೂ ಅಲ್ಲ ರಾಜ್ಯದಲ್ಲಿ ಚುನಾವಣೆ ವಿಷಯವಾಗಿ ಜಗಳಗಳು, ಹಿಂಸಾಚಾರ ನಡೆಯುತ್ತಲೇ ಇರುತ್ತವೆ. ಇತ್ತೀಚೆಗಷ್ಟೆ ಮಮತಾ ಬ್ಯಾನರ್ಜಿ ರ್ಯಾಲಿ ಮೇಲೆ , ಬಿಜೆಪಿ ರ್ಯಾಲಿ ಮೇಲೆ ಕಲ್ಲು ತೂರಾಟ ಮಾಡಲಾಗಿತ್ತು.

West Bengal is out with its mandate for assembly elections with the Trinamool Congress (TMC) emerging victorious against a major contest with the Bharatiya Janata Party (BJP). However, hours after the indication of TMC's victory, Union finance minister Nirmala Sitharaman tweeted about the BJP's Bengal arm office set on fire.