ಕೋವಿಡ್​ ವಿರುದ್ಧದ ಹೋರಾಟಕ್ಕೆ SBI ಸಾಥ್ ; 71 ಕೋಟಿ ರೂ. ನೆರವು ಘೋಷಣೆ

03-05-21 03:09 pm       Headline Karnataka News Network   ದೇಶ - ವಿದೇಶ

ಕೊರೊನಾ ಎರಡನೇ ಅಲೆಯಲ್ಲಿ ಸಿಲುಕಿರುವ ಭಾರತಕ್ಕೆ ದೇಶದ ಅತೀ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್​ ಬ್ಯಾಂಕ್​ ಆಫ್ ಇಂಡಿಯಾ 71 ಕೋಟಿ ರೂ. ಆರ್ಥಿಕ ನೆರವು ಘೋಷಿಸಿದೆ.

ನವದೆಹಲಿ, ಮೇ 3: ಕೊರೊನಾ ಎರಡನೇ ಅಲೆಯಲ್ಲಿ ಸಿಲುಕಿರುವ ಭಾರತಕ್ಕೆ ದೇಶದ ಅತೀ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್​ ಬ್ಯಾಂಕ್​ ಆಫ್ ಇಂಡಿಯಾ (ಎಸ್‌ಬಿಐ) 71 ಕೋಟಿ ರೂ. ಆರ್ಥಿಕ ನೆರವು ಘೋಷಿಸಿದೆ.

ಇದರಲ್ಲಿ 1000 ಹಾಸಿಗೆ ಸಾಮರ್ಥ್ಯದ ತಾತ್ಕಾಲಿಕ ಆಸ್ಪತ್ರೆಗಳು, 250 ಐಸಿಯು ಬೆಡ್​ ಸೌಲಭ್ಯಗಳು ಮತ್ತು 1000 ಹಾಸಿಗೆಗಳ ಐಸೋಲೇಷನ್​ ಕೇಂದ್ರಗಳನ್ನು ಸ್ಥಾಪಿಸಲು ಬ್ಯಾಂಕ್ 30 ಕೋಟಿ ರೂ. ಮೀಸಲಿಡಲಾಗುವುದು. ಎನ್‌ಜಿಒಗಳೊಂದಿಗೆ ಸಹಭಾಗಿತ್ವದಲ್ಲಿ ಕೋವಿಡ್ -19 ಸಂಬಂಧಿತ ವಿಷಯಗಳಿಗೆ ಸಹಾಯವಾಣಿ ರಚಿಸಲು, ವ್ಯಾಕ್ಸಿನೇಷನ್ ಡ್ರೈವ್‌ ಬಲಪಡಿಸಲು 10 ಕೋಟಿ ರೂ. ನೀಡಲಾಗುವುದು ಎಂದು ಎಸ್‌ಬಿಐ ಹೇಳಿದೆ.

ಉಳಿದ ಹಣವನ್ನು ಆಮ್ಲಜನಕದ ಪೂರೈಕೆ ಸೇರಿದಂತೆ ಕೊರೊನಾ ರೋಗಿಗಳ ಚಿಕಿತ್ಸೆಗೆ ಬೇಕಾಗುವ ತುರ್ತು ವೈದ್ಯಕೀಯ ಅಗತ್ಯಗಳನ್ನು ಒದಗಿಸಲು ಬಳಸಲಾಗುವುದು. ಈ ಸೌಲಭ್ಯಗಳನ್ನು ಆಯಾ ನಗರಗಳ ಸರ್ಕಾರಿ ಆಸ್ಪತ್ರೆಗಳು ಮತ್ತು ಮಹಾನಗರ ಪಾಲಿಕೆಗಳ ಸಹಯೋಗದೊಂದಿಗೆ ಸ್ಥಾಪಿಸಲಾಗುವುದು ಎಂದು ಸ್ಟೇಟ್​ ಬ್ಯಾಂಕ್​ ಆಫ್ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ.

"ಕೋವಿಡ್​ ಎರಡನೇ ಅಲೆಯ ವಿರುದ್ಧದ ಹೋರಾಟದಲ್ಲಿ ಸಮಾಜಕ್ಕೆ ಸಣ್ಣ ಕೊಡುಗೆ ನೀಡಲು ನಾವು ನಮ್ಮ ಕೈಲಾದಷ್ಟು ಪ್ರಯತ್ನ ಮಾಡುತ್ತಿದ್ದೇವೆ" ಎಂದು ಎಸ್‌ಬಿಐ ಮುಖ್ಯಸ್ಥ ದಿನೇಶ್ ಕುಮಾರ್ ಖಾರಾ ಹೇಳಿದ್ದಾರೆ.

The State Bank of India (SBI) has allocated ₹71 crores to help combat the second wave of coronavirus disease (Covid-19) in the country. The bank has also dedicated ₹30 crores to set up 1,000-bed makeshift hospitals, 250 bed ICU facilities, and 1,000-bed isolation facilities in some of the worst-hit states, news agency ANI quoted SBI as saying on Monday.