ಲಾಕ್‌ಡೌನ್ ಎಫೆಕ್ಟ್ ; ಚಿನ್ನಾಭರಣ ಅಂಗಡಿಯ ಮಾಲಕರಿಬ್ಬರು ಆತ್ಮಹತ್ಯೆ

27-08-20 02:32 pm       ಆರ್ಥಿಕ ಬಿಕ್ಕಟ್ಟು: ಚಿನ್ನಾಭರಣ ಅಂಗಡಿಯ ಮಾಲಕರಿಬ್ಬರು ಆತ್ಮಹತ್ಯೆ   ದೇಶ - ವಿದೇಶ

ಚಿನ್ನಾಭರಣ ಅಂಗಡಿಯ ಮೂರನೇ ಮಾಳಿಗೆಯಲ್ಲಿ ಅಣ್ಣ-ತಮ್ಮಂದಿರ ಮೃತದೇಹಗಳು ಪತ್ತೆಯಾಗಿವೆ. ಘಟನೆಯ ವೇಳೆ ಈ ಇಬ್ಬರು ಸಹೋದರರ ತಂದೆ ಮೊದಲ ಮಹಡಿಯಲ್ಲಿದ್ದರು ಎಂದು ಪೊಲೀಸ್ ಉಪಾಯುಕ್ತೆ ಮೋನಿಕಾ ಭಾರದ್ವಾಜ್ ತಿಳಿಸಿದ್ದಾರೆ.

ಹೊಸದಿಲ್ಲಿ, ಆ.27: ಕೇಂದ್ರ ದಿಲ್ಲಿಯ ಚಾಂದನಿ ಚೌಕದಲ್ಲಿರುವ ಚಿನ್ನಾಭರಣ ಅಂಗಡಿಯ ಮಾಲಕರಾಗಿದ್ದ ಸಹೋದರರಿಬ್ಬರು ಇಂದು ಬೆಳಗ್ಗಿನ ಜಾವ 3ರ ಸುಮಾರಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಿನ್ನಾಭರಣ ಅಂಗಡಿಯ ಮೂರನೇ ಮಾಳಿಗೆಯಲ್ಲಿ ಅಣ್ಣ-ತಮ್ಮಂದಿರ ಮೃತದೇಹಗಳು ಪತ್ತೆಯಾಗಿವೆ. ಘಟನೆಯ ವೇಳೆ ಈ ಇಬ್ಬರು ಸಹೋದರರ ತಂದೆ ಮೊದಲ ಮಹಡಿಯಲ್ಲಿದ್ದರು ಎಂದು ಪೊಲೀಸ್ ಉಪಾಯುಕ್ತೆ ಮೋನಿಕಾ ಭಾರದ್ವಾಜ್ ತಿಳಿಸಿದ್ದಾರೆ.

ಮೃತಪಟ್ಟಿರುವ ಸಹೋದರರನ್ನು ಅರ್ಪಿತ್(42 ವರ್ಷ) ಹಾಗೂ ಅಂಕಿತ್(47)ಎಂದು ಗುರುತಿಸಲಾಗಿದೆ. ಈರ್ವರು ದಿಲ್ಲಿಯ ಬಝಾರ್ ಸೀತಾರಾಮ್ ಪ್ರದೇಶದಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದರು.

ಸಹೋದರರಿಬ್ಬರು ಸುಸೈಡ್ ನೋಟ್ ಬರೆದಿಟ್ಟಿದ್ದು, ಸಾವಿಗೆ ಆರ್ಥಿಕ ಮುಗ್ಗಟ್ಟು ಕಾರಣ ಎಂದು ಬರೆದಿಟ್ಟು ಕುಟುಂಬದವರಲ್ಲಿ ಕ್ಷಮೆಯಾಚಿಸಿದ್ದಾರೆ.

ಕೊರೋನ ವೈರಸ್ ಲಾಕ್‌ಡೌನ್‌ನಿಂದಾಗಿ ಈ ಇಬ್ಬರಿಗೆ ಸಾಲವನ್ನು ಮರುಪಾವತಿಸಲು ಸಾಧ್ಯವಾಗಿರಲಿಲ್ಲ. ಸಾಲಗಾರರು ಇವರಿಬ್ಬರಿಗೆ ಸಾಲ ಹಿಂತಿರುಗಿಸುವಂತೆ ಹಿಂಸೆ ನೀಡಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.