ಭಾರತ ಮೂಲದ ವಿದ್ಯಾರ್ಥಿನಿ ಅನ್ವಿ ಆಕ್ಸ್‌ಫರ್ಡ್ ವಿವಿಯ ವಿದ್ಯಾರ್ಥಿ ಸಂಘಕ್ಕೆ ಅಧ್ಯಕ್ಷೆ

22-05-21 12:13 pm       Headline Karnataka News Network   ದೇಶ - ವಿದೇಶ

ಆಕ್ಸ್‌ಫರ್ಡ್ ವಿವಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿ ಭಾರತ ಮೂಲದ ವಿದ್ಯಾರ್ಥಿನಿ ಅನ್ವಿ ಭೂತಾನಿ ಅವರು ಆಯ್ಕೆಯಾಗಿದ್ದಾರೆ. 

ಲಂಡನ್‌, ಮೇ 21 : ಪ್ರತಿಷ್ಠಿತ  ಆಕ್ಸ್‌ಫರ್ಡ್ ವಿವಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿ ಭಾರತ ಮೂಲದ ವಿದ್ಯಾರ್ಥಿನಿ ಅನ್ವಿ ಭೂತಾನಿ ಅವರು ಆಯ್ಕೆಯಾಗಿದ್ದಾರೆ. 

ಅನ್ವಿ ಭೂತಾನಿ ಅವರು ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಮ್ಯಾಗ್ಡಲೇನ್ ಕಾಲೇಜಿನ ಮಾನವ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾಗಿದ್ದು, ಆಕ್ಸ್‌ಫರ್ಡ್‌ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.

ಇವರು ಆಕ್ಸ್‌ಫರ್ಡ್ ನಲ್ಲಿ ಜನಾಂಗೀಯ ಜಾಗೃತಿ, ಸಮಾನತೆ ಅಭಿಯಾನದ ಅಧ್ಯಕ್ಷೆ ಹಾಗೂ ಆಕ್ಸ್‌ಫರ್ಡ್‌ ಇಂಡಿಯಾ ಸೊಸೈಟಿಯ ಅಧ್ಯಕ್ಷೆಯೂ ಆಗಿದ್ದಾರೆ.

ಈ ಹಿಂದೆ ಭಾರತ ಮೂಲದ ವಿದ್ಯಾರ್ಥಿನಿ ರಶ್ಮಿ ಸಾವಂತ್‌ ಅವರ ರಾಜೀನಾಮೆಯಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಈ ಚುನಾವಣೆ ನಡೆದಿದ್ದು, ಗುರುವಾರ ರಾತ್ರಿ ಚುನಾವಣೆಯ ಫಲಿತಾಂಶ ಪ್ರಕಟಿಸಲಾಗಿದೆ.

"2021-22ರ ಸಾಲಿನ ಆಕ್ಸ್‌ಫರ್ಡ್ ವಿದ್ಯಾರ್ಥಿ ಸಂಘದ ಉಪ ಚುನಾವಣೆಯಲ್ಲಿ ಈ ಸ್ಥಾನಕ್ಕೆ ಮೊದಲ ಬಾರಿ 11 ವಿದ್ಯಾರ್ಥಿಗಳು ಸ್ಪರ್ಧೆಗಿಳಿದಿದ್ದರು. 2,506 ವಿದ್ಯಾರ್ಥಿಗಳು ಮತ ಚಲಾಯಿಸಿದ್ದಾರೆ" ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

An Indian-origin Human Sciences student from Magdalen College at the University of Oxford has been declared the winner at the end of a Student Union (SU) byelection.