ಬ್ರೇಕಿಂಗ್ ನ್ಯೂಸ್
24-05-21 09:33 pm Headline Karnataka News Network ದೇಶ - ವಿದೇಶ
ಅಮರಾವತಿ, ಮೇ 24: ಕೊರೊನಾ ಸೋಂಕಿಗೆ ಪವಾಡ ಮಾಡಬಲ್ಲ ಆಯುರ್ವೇದ ಔಷಧಿ ಪತ್ತೆಯಾಗಿದೆ ಎಂಬ ವದಂತಿ ಕೇಳಿ ಸಾವಿರಾರು ಜನರು ಮುಗಿಬಿದ್ದ ಘಟನೆ ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ನಡೆದಿದೆ. ನೆಲ್ಲೂರು ಜಿಲ್ಲೆಯ ಕೃಷ್ಣಪಟ್ಟಿಣಂ ಎನ್ನುವ ಗ್ರಾಮದಲ್ಲಿ ಘಟನೆ ನಡೆದಿದ್ದು, ಹತ್ತು ಸಾವಿರಕ್ಕೂ ಹೆಚ್ಚು ಜನರು ಸೇರಿದ್ದಲ್ಲದೆ, ಕೊರೊನಾ ಔಷಧಿಗಾಗಿ ಲಾಕ್ಡೌನ್ ನಿಯಮ, ಸೋಂಕಿನ ಭಯವನ್ನೇ ಮರೆತು ನೂಕುನುಗ್ಗಲು ನಡೆಸಿದ್ದಾರೆ.
ಹಿಂದೆ ಮಂಡಲ ಪರಿಷದ್ ಸದಸ್ಯರಾಗಿದ್ದ ಆಬಳಿಕ ಆಯುರ್ವೇದಿಕ್ ಪಂಡಿತರಾಗಿ ಬದಲಾಗಿದ್ದ ಬಿ.ಆನಂದಯ್ಯ ಎಂಬವರು ಎ.21ರಿಂದ ಕೊರೊನಾಗೆ ಔಷಧಿ ನೀಡಲು ಆರಂಭಿಸಿದ್ದರು. ಕಳೆದ ವಾರ ಈ ಔಷಧಿಯನ್ನು ಬೃಹತ್ ಮಟ್ಟದಲ್ಲಿ ನೀಡಲು ಆಂಧ್ರ ಪ್ರದೇಶದ ಆಡಳಿತಾರೂಢ ವೈಎಸ್ಸಾರ್ ಪಕ್ಷದ ನಾಯಕರು ಮುಂದಾಗಿದ್ದರು. ವೈಎಸ್ಸಾರ್ ಜಿಲ್ಲಾ ಸಮಿತಿ ಅಧ್ಯಕ್ಷ ಮತ್ತು ಸ್ಥಳೀಯ ಶಾಸಕರಾಗಿರು ಗೋವರ್ಧನ್ ರೆಡ್ಡಿ ಸ್ವಂತ ಖರ್ಚಿನಲ್ಲಿ ಔಷಧಿ ವಿತರಣೆ ಕಾರ್ಯಕ್ರಮ ಏರ್ಪಡಿಸಿದ್ದು ವಿಷಯ ತಿಳಿದ ಜನರು ಭಾರೀ ಸಂಖ್ಯೆಯಲ್ಲಿ ಮುಗಿಬಿದ್ದಿದ್ದರು. ಕೃಷ್ಣಪಟ್ಟಣಂ ಆಯುರ್ವೇದ ಹೆಸರಲ್ಲಿ ಔಷಧಿ ನೀಡಲಾಗುತ್ತಿತ್ತು. ಕೊನೆಗೆ, ಜನರು ಮುಗಿಬೀಳುತ್ತಿದ್ದಂತೆ ಇಡೀ ಕಾರ್ಯಕ್ರಮವನ್ನು ರದ್ದುಪಡಿಸಲು ರಾಜ್ಯ ಸರಕಾರ ಸೂಚನೆ ನೀಡಿದೆ. ಅಲ್ಲದೆ, ಯಾವ ಔಷಧಿ ನೀಡಲಾಗುತ್ತಿದೆ ಎನ್ನುವ ಬಗ್ಗೆ ವರದಿ ನೀಡುವಂತೆ ಆರೋಗ್ಯ ಇಲಾಖೆಗೆ ಸೂಚನೆ ನೀಡಿದೆ.

ಔಷಧಿಯ ವಿಚಾರ ತಿಳಿದ ಮೂಲತಃ ಇದೇ ನೆಲ್ಲೂರು ಜಿಲ್ಲೆಯವರಾಗಿರುವ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಕೂಡಲೇ ಆಯುಷ್ ಇಲಾಖೆಯ ಸಚಿವ ಕಿರಣ್ ರಿಜಿಜು ಮತ್ತು ಐಸಿಎಂಆರ್ ಅಧ್ಯಕ್ಷ ಬಲರಾಂ ಭಾರ್ಗವ ಅವರಿಗೆ ವರದಿ ತರಿಸುವಂತೆ ಸೂಚನೆ ನೀಡಿದ್ದಾರೆ. ಇತ್ತ ಆಂಧ್ರ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿಯೂ ತನಿಖೆಗೆ ಆದೇಶ ಮಾಡಿದ್ದು, ಔಷಧಿ ಬಗ್ಗೆ ವರದಿ ತರಿಸಿಕೊಳ್ಳಲು ಸೂಚನೆ ನೀಡಿದ್ದಾರೆ. ಇದೇ ವೇಳೆ, ನಾವು ಔಷಧಿ ಬಗ್ಗೆ ವರದಿ ತರಿಸುತ್ತಿದ್ದೇವೆ. ಔಸಿಎಂಆರ್ ಮತ್ತು ವೈದ್ಯಕೀಯ ತಜ್ಞರು ನೀಡುವ ವರದಿ ಆಧಾರದಲ್ಲಿ ಮುಂದುವರಿಯುತ್ತೇವೆ ಎಂದು ಆರೋಗ್ಯ ಸಚಿವ ಎ.ಕೆ.ಕೆ. ಶ್ರೀನಿವಾಸ್ ಹೇಳಿದ್ದಾರೆ.
ಆಯುರ್ವೇದಿಕ್ ಔಷಧಿ ಕೊಡುತ್ತಿರುವ ಬಗ್ಗೆ ತಿಳಿದು ಕೆಲವು ದಿನಗಳ ಹಿಂದೆಯೇ ಆಯುರ್ವೇದಿಕ್ ವೈದ್ಯರ ತಂಡ ಗ್ರಾಮಕ್ಕೆ ಬಂದು ಔಷಧಿ ಕುರಿತಾಗಿ ರಾಜ್ಯ ಸರಕಾರಕ್ಕೆ ವರದಿ ಕೊಟ್ಟಿತ್ತು. ಔಷಧಿ ತಯಾರಿಕೆ, ಚಿಕಿತ್ಸಾ ವಿಧಾನ ಮತ್ತು ಚಿಕಿತ್ಸೆ ನಂತರದ ಪರಿಣಾಮಗಳ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಬೇಕಾಗಿದೆ ಎಂದು ಹೇಳಿದ್ದರು. ಆದರೆ, ಔಷಧಿ ಪಡೆದ ಯಾರಿಗೂ ಅಡ್ಡ ಪರಿಣಾಮ ಆಗಿಲ್ಲ ಎಂದು ವರದಿಯಲ್ಲಿ ಹೇಳಿದ್ದರು.

ಆಯುರ್ವೇದಿಕ್ ಪಂಡಿತ ಆನಂದಯ್ಯ ಅವರು, ಜೇನು ಮತ್ತು ಆಯುರ್ವೇದ ಗಿಡಮೂಲಿಕೆಗಳನ್ನು ಬಳಸ್ಕೊಂಡು ಐದು ರೀತಿಯ ಔಷಧಿಗಳನ್ನು ತಯಾರಿಸಿದ್ದರು. ಇದನ್ನು ಕೋವಿಡ್ ಸೋಂಕಿತರಿಗೆ, ಕೋವಿಡ್ ಲಕ್ಷಣಗಳಿದ್ದವರಿಗೆ ಮತ್ತು ಶ್ವಾಸಕೋಶದ ಸಮಸ್ಯೆ ಇದ್ದವರಿಗೆ ನೀಡುತ್ತಿದ್ದರು. ಔಷಧಿ ಸೇವಿಸಿದ್ದ ಬಹಳಷ್ಟು ಮಂದಿ ಗುಣಮುಖರಾಗಿದ್ದು ಜನರಲ್ಲಿ ಔಷಧಿ ಬಗ್ಗೆ ಕುತೂಹಲ ಉಂಟಾಗಿತ್ತು. ಅದರಲ್ಲೂ ಆಕ್ಸಿಜನ್ ಲೆವೆಲ್ ಕಡಿಮೆಯಾಗಿದ್ದ ವ್ಯಕ್ತಿಗೆ ಎರಡು ಹನಿ ಔಷಧಿ ಕೊಟ್ಟ ಎರಡೇ ಗಂಟೆಯಲ್ಲಿ 83 ಇದ್ದ ಆಕ್ಸಿಜನ್ ಪಲ್ಸ್ 95ಕ್ಕೆ ಬಂದಿತ್ತು. ಈ ಬಗ್ಗೆ ರೋಗಿಯಲ್ಲಿ ಮಾತನಾಡಿದ್ದೇವೆ ಎಂಬುದಾಗಿ ಆಯುರ್ವೇದಿಕ್ ವೈದ್ಯರು ಸರಕಾರಕ್ಕೆ ನೀಡಿರುವ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಮೊನ್ನೆ ಶುಕ್ರವಾರ ಔಷಧಿಗಾಗಿ ಹತ್ತು ಸಾವಿರಕ್ಕೂ ಹೆಚ್ಚು ಜನ ಸೇರಿದ್ದರಿಂದ ಔಷಧಿ ಖಾಲಿಯಾಗಿದ್ದಲ್ಲದೆ, ಜನರು ಔಷಧಿಗಾಗಿ ನೂಕುನುಗ್ಗಲು ಮಾಡಿದ್ದರು. ಔಷಧಿ ಕೊಡುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. (ಇಂಡಿಯನ್ ಎಕ್ಸ್ ಪ್ರೆಸ್ ವರದಿ)
Hundreds of critical COVID patients were seen thronging the Krishnapatnam village in Andhra Pradesh’s Nellore district on Friday to get a ‘miracle’ Covid-19 drug. Even though there is no scientific evidence as yet to confirm that the drug is effective against the coronavirus.
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm