ಆರ್ಮಿ ಲೆಫ್ಟಿನೆಂಟ್ ಜನರಲ್ ಆದ ಹೆಮ್ಮೆಯ ಕನ್ನಡತಿ!

29-08-20 11:32 am       Dhruthi Anchan - Correspondant   ದೇಶ - ವಿದೇಶ

ರಾಜ್ಯದ ಧಾರವಾಡ ಮೂಲದ ಡಾ. ಮಾಧುರಿ ಕಾನಿಟ್ಕರ್ ಅವರು ಭಾರತೀಯ ಸೇನೆಯ ತ್ರಿ ಸ್ಟಾರ್ ರ‍್ಯಾಂಕ್‌ ಪಡೆಯುವ ಮೂಲಕ, ತ್ರಿ ಸ್ಟಾರ್ ಗೌರವ ಪಡೆದ ಮೂರನೇ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ.

ನವದೆಹಲಿ, ಆಗಸ್ಟ್ 29: ರಾಜ್ಯದ ಧಾರವಾಡ ಮೂಲದ ಡಾ. ಮಾಧುರಿ ಕಾನಿಟ್ಕರ್ ಅವರು ಭಾರತೀಯ ಸೇನೆಯ ತ್ರಿ ಸ್ಟಾರ್ ರ‍್ಯಾಂಕ್‌ ಪಡೆಯುವ ಮೂಲಕ, ತ್ರಿ ಸ್ಟಾರ್ ಗೌರವ ಪಡೆದ ಮೂರನೇ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ. ಆ ಮೂಲಕ ಲೆಫ್ಟಿನೆಂಟ್ ಜನರಲ್ ಹುದ್ದೆಗೆ ಭಡ್ತಿ ಹೊಂದಿ ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ.

ಈ ಹಿಂದೆ ಲೆಫ್ಟಿನೆಂಟ್‌ ಜನರಲ್‌ ಪುನೀತಾ ಅರೋರಾ ಮತ್ತು ಏರ್‌ ಮಾರ್ಷಲ್‌ ಪದ್ಮಾ ಬಂಡೋಪಾಧ್ಯಾಯ ಈ ಗೌರವವನ್ನು ಪಡೆದಿರುತ್ತಾರೆ. 

ಮಾಧುರಿ ವೈದ್ಯೆಯಾಗುವ ಕನಸನ್ನು ಹೊಂದಿ ಯಶಸ್ವಿಯಾದವರು. ಪುಣೆ ವಿವಿಯಲ್ಲಿ ಎಂಬಿಬಿಎಸ್ ಪದವಿ ಓದಿರುವ ಇವರು ಉತ್ಕೃಷ್ಟ ದರ್ಜೆಯ ಜೊತೆಗೆ ಪ್ರಥಮ ರ‍್ಯಾಂಕ್‌ ಗಳಿಸಿದ್ದರು. ಪಠ್ಯ-ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಾಧನೆ ಮೆರೆದಿದ್ದ ಮಾಧುರಿ ಅವರಿಗೆ 1982 ರಲ್ಲಿ ರಾಷ್ಟ್ರಪತಿಗಳಿಂದ ಬಂಗಾರದ ಪದಕವೂ ಲಭಿಸಿತ್ತು.

ಇವರ ಪತಿ ರಾಜೀವ್ ಕಾನಿಟ್ಕರ್ ಅವರೂ ಸೇನೆಯಲ್ಲಿ ಲೆಫ್ಟಿನೆಂಟ್ ಜನರಲ್ ಹುದ್ದೆ ಪಡೆದು ನಿವೃತ್ತಿ ಹೊಂದಿದ್ದಾರೆ.