ಮಕ್ಕಳಂತೆ ಸಾಕಿದ ಸಿಂಹಗಳ ಕೈಯಲ್ಲೆ ಕೊಲ್ಲಲ್ಪಟ್ಟ ದಕ್ಷಿಣ ಆಫ್ರಿಕಾದ ರೇಂಜರ್ !

29-08-20 11:47 am       Headline Karnataka News Network   ದೇಶ - ವಿದೇಶ

ಪ್ರಾಣಿ ಸಂರಕ್ಷಣಾಕಾರನನ್ನು ತಾವೇ ಸಾಕಿದ ಸಿಂಹಗಳೇ ಕೊಂದು ಹಾಕಿದ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ.

ದಕ್ಷಿಣ ಆಫ್ರಿಕಾ, ಆಗಸ್ಟ್ 29: ಪ್ರಾಣಿ ಸಂರಕ್ಷಣಾಕಾರನನ್ನು ತಾವೇ ಸಾಕಿದ ಸಿಂಹಗಳೇ ಕೊಂದು ಹಾಕಿದ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ. 

69 ರ ಹರೆಯದ ವೆಸ್ಟ್ ಮ್ಯಾಥ್ಯೂಸನ್ ಬುಧವಾರ ಎರಡು ಬಿಳಿ ಸಿಂಹಿಣಿಗಳ ಜೊತೆ ನಡೆದುಕೊಂಡು ಹೋಗುತ್ತಿದ್ದಾಗ ಅವು ಏಕಾಏಕಿ ದಾಳಿ ಮಾಡಿದೆ. ದಕ್ಷಿಣ ಆಫ್ರಿಕಾದ ಉತ್ತರ ಲಿಂಪೊಪೊ ಪ್ರಾಂತ್ಯದ, ಮ್ಯಾಥ್ಯೂಸನ್ ಕುಟುಂಬ ಸ್ವಾಮ್ಯದ ಲಯನ್ ಟ್ರೀ ಟಾಪ್ ಲಾಡ್ಜ್‌ನ ಬಳಿ ಈ ಘಟನೆ ನಡೆದಿದೆ.

ಅಂಕಲ್ ವೆಸ್ಟ್ ಎಂದೇ ಖ್ಯಾತರಾಗಿರುವ ಮ್ಯಾಥ್ಯೂಸನ್ ಸಿಂಹಗಳನ್ನು ಸಣ್ಣ ಮರಿಗಳಿದ್ದಾಗಲೇ ಸಾಕುತ್ತಿದ್ದರು. ಇವು ಆತ್ಮೀಯವಾಗಿದ್ದವು ಎಂದು ಕೂಡ ತಿಳಿದುಬಂದಿದೆ. ಆದರೇ ಕಳೆದ ಗುರುವಾರ ತಾವು ಪ್ರೀತಿಯಿಂದ ಸಾಕಿದ ಸಿಂಹಗಳಿಗೆ ಬಲಿಯಾಗಿದ್ದರು. ಇವುಗಳು ಆಕ್ರಮಣ ಮಾಡಿದಾಗ ಮ್ಯಾಥ್ಯೂಸನ್ ಪತ್ನಿ ಕೂಡ ರಕ್ಷಿಸಲು ಪ್ರಯತ್ನಸಿದಾಗ ಸಾಧ್ಯವಾಗಿರಲಿಲ್ಲ.

ಇದೀಗ ಸಿಂಹಗಳನ್ನು ತಾತ್ಕಾಲಿಕವಾಗಿ ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಮ್ಯಾಥ್ಯೂಸನ್ ತನ್ನ ಕನಸುಗಳೊಂದಿಗೆ ಬಾಳುತ್ತಿದ್ದರು. ಪ್ರಕೃತಿಯಲ್ಲಿ ಅವರ ಹೃದಯಕ್ಕೆ ತುಂಬಾ ಹತ್ತಿರವಿದ್ದವರು ಎಂದರೇ ಸಿಂಹಗಳು ಮಾತ್ರ. ಇದೀಗ ಅದೇ ಸಿಂಹಗಳಿಂದ ಹತ್ಯೆಯಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ