ಬ್ರೇಕಿಂಗ್ ನ್ಯೂಸ್
17-06-21 11:12 am Headline Karnataka News Network ದೇಶ - ವಿದೇಶ
Photo credits : Timesofindia
ಮುಂಬೈ, ಜೂನ್ 17: ಕೊರೊನಾ ಸೋಂಕಿನ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ತೆಗೆದುಕೊಂಡಿದ್ದು, 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆಯನ್ನು ನೀಡುತ್ತಿದೆ. ಲಸಿಕಾ ಕೇಂದ್ರಗಳ ಜೊತೆಯಲ್ಲೇ ಅಲ್ಲಲ್ಲಿ ಕೊರೊನಾ ಲಸಿಕಾ ಕ್ಯಾಂಪ್ ಆಯೋಜಿಸಿ ಲಸಿಕೆ ನೀಡಲಾಗುತ್ತಿದೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ವಂಚಕರು ನಕಲಿ ಲಸಿಕಾ ಕ್ಯಾಂಪ್ ನಡೆಸಿ ವಂಚಿಸಿರುವ ಘಟನೆ ಮುಂಬೈನಲ್ಲಿ ಬೆಳಕಿಗೆ ಬಂದಿದೆ.
ಮುಂಬೈನ ಕಾಂದಿವಲಿ ಪ್ರದೇಶದಲ್ಲಿರುವ ಹೀರಾನಂದಾನಿ ಎಸ್ಟೇಟ್ ನಲ್ಲಿ ಮೇ 30 ರಲ್ಲಿ ವ್ಯಾಕ್ಸಿನ್ ಕ್ಯಾಂಪ್ ಆಯೋಜಿಸಲಾಗಿತ್ತು. ಕ್ಯಾಂಪ್ ನಲ್ಲಿ 390 ಜನರು ಕೋವಿಶೀಲ್ಡ್ ಲಸಿಕೆ ಪಡೆದಿದ್ದರು. ಆದರೆ ಲಸಿಕೆ ಪಡೆದವರಲ್ಲಿ ಯಾರಿಗೂ ಲಸಿಕೆ ಪಡೆದ ನಂತರ ಕಂಡು ಬರುವ ಕೈ ನೋವು, ಜ್ವರ ಸೇರಿದಂತೆ ಯಾವುದೇ ಲಕ್ಷಣ ಕಂಡು ಬಂದಿಲ್ಲ. ಜೊತೆಗೆ ಲಸಿಕೆ ಪಡೆದ ಬಳಿಕ ಮೊಬೈಲ್ ಬರುವ ಮೆಸೇಜ್ ಸಹ ಬಂದಿಲ್ಲ ಹಾಗೂ ಅದೇ ದಿನ ಲಸಿಕೆ ಪಡೆದ ಸರ್ಟಿಫಿಕೇಟ್ ಸಹ ಜನರೇಟ್ ಆಗಿಲ್ಲ. ಈ ಎಲ್ಲಾ ಬೆಳವಣಿಗೆಗಳು ಲಸಿಕೆ ಪಡೆದವರಲ್ಲಿ ಹಲವು ಗೊಂದಲಗಳಿಗೆ ಕಾರಣವಾಗಿವೆ. ಅವರು ಇದೊಂದು ವಂಚನೆ ಇರಬಹುದು ಎಂದು ಶಂಕಿಸುತ್ತಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.
ಅಂದು ನಡೆದದ್ದೇನು?
ಕೋಕಿಲಬೆನ್ ಅಂಬಾನಿ ಆಸ್ಪತ್ರೆಯ ಪ್ರತಿನಿಧಿ ಎಂದು ಹೇಳಿಕೊಂಡ ರಾಜೇಶ್ ಪಾಂಡೆ ಎಂಬಾತ ಹೀರಾನಂದಾನಿ ಎಸ್ಟೇಟ್ ನಲ್ಲಿ ಕೊರೊನಾ ಲಸಿಕಾ ಕ್ಯಾಂಪ್ ಆಯೋಜಿಸುವ ಸಂಬಂಧ ಸೊಸೈಟಿಯ ಸಮಿತಿಯನ್ನು ಸಂಪರ್ಕಿಸಿದ್ದ. ಆ ಬಳಿಕ ಮೇ 30 ರಂದು ಲಸಿಕಾ ಕ್ಯಾಂಪ್ ಆಯೋಜಿಸಲಾಗಿತ್ತು. ಸಂಜಯ್ ಗುಪ್ತಾ ಎಂಬಾತ ಕ್ಯಾಂಪ್ ಆಯೋಜಿಸಿದ್ದರು ಮತ್ತು ಮಹೇಂದ್ರ ಸಿಂಗ್ ಎಂಬಾತ ಲಸಿಕೆ ಪಡೆದವರಿಂದ ನಗದು ಸಂಗ್ರಹಿಸಿದ್ದ.
ನನ್ನ ಪುತ್ರ ಕ್ಯಾಂಪ್ ನಲ್ಲಿ ಲಸಿಕೆ ಪಡೆದಿದ್ದ. ಪ್ರತಿ ಡೋಸ್ ಗೆ 1260 ರೂ. ಪಡೆದಿದ್ದರು. ಲಸಿಕೆ ಪಡೆದ ಬಳಿಕ ಆತನ ಮೊಬೈಲ್ ಗೆ ಮೆಸೇಜ್ ಸಹ ಬಂದಿರಲಿಲ್ಲ. ಜೊತೆಗೆ ಕ್ಯಾಂಪ್ ನಲ್ಲಿ ಫೋಟೋ ಮತ್ತು ಸೆಲ್ಫಿ ತೆಗೆದುಕೊಳ್ಳಲು ಅವಕಾಶವನ್ನೂ ನೀಡಿರಲಿಲ್ಲ ಎಂದು ಸೊಸೈಟಿಯ ನಿವಾಸಿ ಹಿತೀಶ್ ಪಾಟೀಲ್ ಎಂಬುವವರು ತಿಳಿಸಿದ್ದಾರೆ.
390 ಜನರಿಗೆ ಲಸಿಕೆ ನೀಡಲಾಗಿದೆ. ಪ್ರತಿ ಡೋಸ್ ಗೆ 1260 ರೂ. ನಂತೆ ಸುಮಾರು 5 ಲಕ್ಷ ರೂ. ಸಂಗ್ರಹಿಸಲಾಗಿದೆ. ಲಸಿಕೆ ಪಡೆದ ಬಳಿಕ ನಮಗೆ ಯಾವುದೇ ಲಕ್ಷಣ ಮತ್ತು ಅಡ್ಡ ಪರಿಣಾಮ ಕಂಡು ಬಂದಿಲ್ಲ. ಲಸಿಕೆ ಪಡೆದ ದಿನ ನಮಗೆ ಸರ್ಟಿಫಿಕೇಟ್ ಸಹ ಸಿಕ್ಕಿರಲಿಲ್ಲ. ಲಸಿಕೆ ಪಡೆದು 10-15 ದಿನವಾದ ಬಳಿಕ ಸರ್ಟಿಫಿಕೇಟ್ ದೊರೆತಿತ್ತು. ಅದೂ ಸಹ ನಾನಾವತಿ ಲೈಫ್ ಲೈನ್, ನೆಸ್ಕೋ ಬಿಎಂಸಿ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಪಡೆದಿರುವುದಾಗಿ ನಮೂದಾಗಿರುವ ಸರ್ಟಿಫಿಕೇಟ್ ದೊರೆತಿದೆ. ಈ ಹಿನ್ನೆಲೆಯಲ್ಲಿ ಸಂಶಯಗೊಂಡ ಸೊಸೈಟಿ ನಿವಾಸಿಗಳು ಸರ್ಟಿಫಿಕೇಟ್ ಬಂದಿರುವ ಆಸ್ಪತ್ರೆಗಳನ್ನು ಸಂಪರ್ಕಿಸಿದಾಗ ಹೌಸಿಂಗ್ ಸೊಸೈಟಿಯಲ್ಲಿ ವ್ಯಾಕ್ಸಿನ್ ಕ್ಯಾಂಪ್ ಆಯೋಜಿಸಿರಲಿಲ್ಲ ಎಂದು ತಿಳಿಸಿವೆ ಎಂದು ನಿವಾಸಿಗಳು ತಿಳಿಸಿದ್ಧಾರೆ. ಕೋಕಿಲಬೆನ್ ಅಂಬಾನಿ ಆಸ್ಪತ್ರೆ ಸಹ ಹೌಸಿಂಗ್ ಸೊಸೈಟಿಯಲ್ಲಿ ನಾವು ಕೊರೊನಾ ಲಸಿಕಾ ಕ್ಯಾಂಪ್ ಆಯೋಜಿಸಿರಲಿಲ್ಲ. ನಾವು ಅಲ್ಲಿ ಲಸಿಕೆ ನೀಡೇ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಅಂದು 390 ಜನರಿಗೆ ಲಸಿಕೆ ನೀಡಲಾಗಿದೆ. ನಮಗೆ ನೀಡಿದ್ದು ಕೋವಿಶೀಲ್ಡ್ ಲಸಿಕೆಯೇ ಅಥವಾ ಬೇರೆ ಏನು ಎಂಬುದರ ಕುರಿತು ನಮಗೆ ಸ್ಪಷ್ಟನೆ ಬೇಕಾಗಿದೆ. ಇಂತಹುದೇ ಲಸಿಕಾ ಕ್ಯಾಂಪ್ ಗಳು ಬೇರೆ ಸ್ಥಳಗಳಲ್ಲೂ ನಡೆದಿರುವ ಮಾಹಿತಿ ಇದೆ. ಹಾಗಾಗಿ ಸರ್ಕಾರ ಮಧ್ಯಪ್ರವೇಶಿಸಿ ಮತ್ತಷ್ಟು ಜನರಿಗೆ ವಂಚನೆಯಾಗುವುದನ್ನು ತಪ್ಪಿಸಬೇಕು. ತಕ್ಷಣ ಪೊಲೀಸರು ಕ್ರಮ ತೆಗೆದುಕೊಳ್ಳಬೇಕು ಎಂದು ಸೊಸೈಟಿ ಸದಸ್ಯರು ಒತ್ತಾಯಿಸಿದ್ದಾರೆ. ಪೊಲೀಸರು ರಾಜೇಶ್ ಪಾಂಡೆ ಮತ್ತು ಸಂಜಯ್ ಗುಪ್ತಾ ಅವರನ್ನು ವಿಚಾರಣೆ ನಡೆಸಿದ್ದಾರೆ. ಆದರೆ ಮತ್ತೊಬ್ಬ ಆರೋಪಿ ಮಹೇಂದ್ರ ಸಿಂಗ್ ನಾಪತ್ತೆಯಾಗಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
The Mumbai Police has detained three people who were allegedly carrying out fraudulent Covid-19 vaccination drives in the city.
25-11-24 05:51 pm
Bangalore Correspondent
ಮನೆಯೊಂದು ಮೂರು ಬಾಗಿಲು, ಗೆಲುವು ಕಸಿದ ಬಿಜೆಪಿ ಒಳಜಗ...
25-11-24 03:28 pm
Bjp, D K Shivakumar : ಚನ್ನಪಟ್ಟಣ ಗೆಲ್ಲಲು ಬಿಜೆಪ...
24-11-24 08:39 pm
CM Siddaramaiah, BJP, Congress ಆರ್. ಅಶೋಕ್ ಕಾ...
23-11-24 07:43 pm
B Y Vijayendra, DK Shivkumar: ವಿಜಯೇಂದ್ರಗೆ ತೀವ...
23-11-24 02:15 pm
23-11-24 11:07 pm
HK News Desk
ಬಿಜೆಪಿ ‘ಗ್ಯಾರಂಟಿ’ಗೆ ಕೈಹಿಡಿಯದ ಜಾರ್ಖಂಡ್ ಮತದಾರ,...
23-11-24 05:34 pm
ಮಹಾರಾಷ್ಟ್ರದಲ್ಲಿ ಕೇಸರಿ ಕಮಾಲ್ ; ನಿರೀಕ್ಷೆಗೂ ಮೀರಿ...
23-11-24 04:33 pm
ಭಾರೀ ವಿವಾದ ಸೃಷ್ಟಿಸಿದ್ದ 'ಎಮರ್ಜೆನ್ಸಿ' ಚಿತ್ರ ಬಿಡ...
18-11-24 03:54 pm
ಶ್ರದ್ಧಾ ವಾಳ್ಕರ್ ಹತ್ಯೆಗೆ ಸೇಡು ತೀರಿಸಲು ಬಿಷ್ಣೋಯಿ...
18-11-24 01:09 pm
25-11-24 11:14 pm
Mangalore Correspondent
Vithoba Rukumai temple case, Mangalore: ವಿಠೋಬ...
25-11-24 10:39 pm
Ullal Dargah, Mangalore: ಎಪ್ರಿಲ್ 24 ರಿಂದ ಮೇ...
25-11-24 02:44 pm
Kukke Subrahmanya Temple, Mangalore: ನ.27ರಿಂದ...
24-11-24 09:13 pm
Hariprasad, Mangalore, Congress: ಮಹಾರಾಷ್ಟ್ರದಲ...
24-11-24 05:16 pm
25-11-24 06:17 pm
HK News Desk
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm
Rowdy sheeter Dawood, Mangalore Crime, Police...
23-11-24 10:49 am
ಟ್ರಾಯ್ ಕಂಪನಿ ಸೋಗಿನಲ್ಲಿ ಕರೆ ; ಅಮೆರಿಕಾದ ಸಾಫ್ಟ್...
22-11-24 10:47 pm
Mangalore crime, Sexual Harrasment, Police: ಮ...
22-11-24 09:37 pm