ಬ್ರೇಕಿಂಗ್ ನ್ಯೂಸ್
28-06-21 08:04 pm Headline Karnataka News Network ದೇಶ - ವಿದೇಶ
Photo credits : Wei Gao
ಬೀಜಿಂಗ್, ಜೂನ್ 28: ಚೀನಾದಲ್ಲಿ ಅತ್ಯಂತ ಪ್ರಾಚೀನ ಮಾನವನ ತಲೆಬುರುಡೆಯ ಅವಶೇಷ ಪತ್ತೆಯಾಗಿದ್ದು, ಮಾನವನ ವಿಕಾಸವಾದಕ್ಕೆ ಹೊಸ ಸಾಕ್ಷ್ಯ ದೊರೆತಿದೆ ಎನ್ನುವ ವಾದವನ್ನು ಅಲ್ಲಿನ ವಿಜ್ಞಾನಿಗಳು ಮುಂದಿಟ್ಟಿದ್ದಾರೆ.
1 ಲಕ್ಷ 40 ಸಾವಿರ ವರ್ಷಗಳ ಹಿಂದೆ, ಹಳೆ ಶಿಲಾಯುಗ ಕಾಲದಲ್ಲಿ ಜೀವಿಸಿದ್ದ ಮಾನವನ ತಲೆಬುರುಡೆ ಎಂದು ಚೀನಾದ ವಿಜ್ಞಾನಿಗಳು ಅಂದಾಜಿಸಿದ್ದಾರೆ. ಅಲ್ಲದೆ, ಈ ತಲೆಬುರುಡೆಯ ಗಾತ್ರ ಈಗಿನ ಮನುಷ್ಯನಿಗಿಂತ ದೊಡ್ಡದಾಗಿದ್ದು, ಅತ್ಯಂತ ಬಲಶಾಲಿ ಮತ್ತು ಗಾತ್ರದಲ್ಲಿ ದೊಡ್ಡದಾಗಿರುವ ಮಾನವ ಜನಾಂಗ ಇತ್ತೇ ಎನ್ನುವ ಬಗ್ಗೆ ಅಧ್ಯಯನಕ್ಕೆ ವೇದಿಕೆ ಒದಗಿಸಿದೆ. ಚೀನಾ ವಿಜ್ಞಾನಿಗಳು ಈ ತಲೆಬುರುಡೆಯನ್ನು ಡ್ರ್ಯಾಗನ್ ಮ್ಯಾನ್ ಎಂದು ಬಣ್ಣಿಸಿದ್ದಾರೆ.

ಹರ್ದಿನ್ ಪ್ರಾಂತ್ಯದಲ್ಲಿ ಪತ್ತೆಯಾದ ಈ ತಲೆಬುರುಡೆಯು ಈಗಿನ ಮಾನವ ಜನಾಂಗಕ್ಕೆ ತುಂಬ ಹತ್ತಿರದ ನಂಟು ಹೊಂದಿರುವಂತಿದೆ. ಇದರಿಂದಾಗಿ ನಿಯಾಂಡರ್ತಾಲ್ ಮಾನವನ ಉಗಮಕ್ಕಿಂತ ಹೊಸ ರೀತಿಯ ವಾದಕ್ಕೆ ಪುಷ್ಠಿ ಸಿಕ್ಕಂತಾಗಿದೆ ಎಂದಿದ್ದಾರೆ ವಿಜ್ಞಾನಿಗಳು. ತಲೆಬರುಡೆಯು 23 ಸೆಂಟಿ ಮೀಟರ್ ಉದ್ದ ಮತ್ತು 15 ಸೆಂಟಿ ಮೀಟರ್ ಅಗಲ ಹೊಂದಿದ್ದು, ಇದು ಈಗಿನ ಮಾನವರ ತಲೆಬುರುಡೆಗಿಂತ ದೊಡ್ಡದು. ಅಲ್ಲದೆ, ಇದರ ಬ್ರೈನ್ ಕೂಡ ದೊಡ್ಡದಿರುವುದು ಕಂಡುಬರುತ್ತದೆ. ದಪ್ಪಗಿನ ಕಣ್ಣು ಮತ್ತು ರೆಪ್ಪೆ ಇರುವಂತಿದ್ದು, ಸಂಶೋಧಕರು ಇದನ್ನು 50 ವರ್ಷ ಪ್ರಾಯದ ಮಧ್ಯವಯಸ್ಕ ಮಾನವನ ತಲೆಬುರುಡೆ ಎಂದು ಅಂದಾಜಿಸಿದ್ದಾರೆ.
ಹಿಮದ ನಡುವೆ ಅತ್ಯಂತ ಬಲಶಾಲಿ ಮಾನವ ಬದುಕಿದ್ದ. ತಲೆಬುರುಡೆಯ ಆಕಾರ ಗಮನಿಸಿದರೆ, ಕೆನ್ನೆಯ ಮೂಳೆಗಳು ಕಿರಿದಾಗಿದ್ದವು. ಬಾಯಿ ಅಗಲವಾಗಿತ್ತು. ಕೆಳ ದವಡೆ ತಪ್ಪಿ ಹೋಗಿದ್ದರಿಂದ ಅದರ ಆಕಾರವನ್ನು ಖಚಿತವಾಗಿ ಹೇಳುವಂತಿಲ್ಲ. ಆದರೆ, ಮಾನವನ ದೇಹದ ಗಾತ್ರ ತುಂಬ ಭಿನ್ನವಾಗಿತ್ತು ಎಂಬುದನ್ನು ಹೇಳಬಹುದು ಎಂದಿದ್ದಾರೆ ವಿಜ್ಞಾನಿಗಳು.
The discovery of a huge fossilised skull that was wrapped up and hidden in a Chinese well nearly 90 years ago has forced scientists to rewrite the story of human evolution. Analysis of the remains has revealed a new branch of the human family tree that points to a previously unknown sister group more closely related to modern humans than the Neanderthals.
20-03-26 06:10 pm
HK News Staffer
ಫೇಸ್ಬುಕ್ ಪೋಸ್ಟ್ನಿಂದ ಹುಟ್ಟಿದ ಜೀವಭಯ ; ನೀಲಿ ‘ಡ...
20-03-26 12:02 pm
ಹುಬ್ಬಳ್ಳಿ ; ರೀಲ್ಸ್ ಹುಚ್ಚಾಟಕ್ಕೆ 15 ವರ್ಷದ ಬಿಜೆಪ...
20-03-26 12:00 pm
ಶಿವಮೊಗ್ಗದ ಹುಲಿ ಸಿಂಹ ಧಾಮದಲ್ಲಿ ನೀರಾನೆ ದಾಳಿ ; 26...
20-03-26 10:03 am
ಗ್ಯಾಸ್ ಸಿಲಿಂಡರ್ ಅಭಾವ; ಬಹುತೇಕ ಹೋಟೆಲ್ ಗಳು ಬಂದ್...
19-03-26 05:01 pm
20-03-26 05:32 pm
HK News Staffer
ಲಂಡನ್ ರಸ್ತೆಯಲ್ಲಿ ಪಾನ್ ಉಗುಳಿದ ಭಾರತ ಮೂಲದ ಇಬ್ಬರ...
19-03-26 04:51 pm
ಹೊರ್ಮುಜ್ ಜಲಸಂಧಿಯತ್ತ ಭಾರತ ನೌಕಾಪಡೆ ; ಗಲ್ಫ್ ನಲ್ಲ...
19-03-26 04:35 pm
ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇಲ್ಲ ಎನ್ನುವುದೇ ಅಪ...
18-03-26 07:11 pm
ಎಲ್ಲರನ್ನೂ ಕ್ಷಮಿಸಿ ಬಿಡು..! ದಯಾಮರಣಕ್ಕೆ ಅನುಮತಿ ಪ...
16-03-26 11:05 pm
20-03-26 11:26 pm
HK News Staffer
ಮಂಗಳೂರು ಪೊಲೀಸರ ತನಿಖೆಯ ಮೇಲೆ ನಂಬಿಕೆ ಇಲ್ಲ, ಇವರದ್...
20-03-26 09:44 pm
Peace Festival in Udupi Amid Protests; High C...
20-03-26 07:54 pm
Mohan C Lazarus Udupi, Protest: ಹಿಂಜಾವೇ ಪ್ರತಿ...
20-03-26 07:36 pm
Sandesh PG, Inspector: ಮೂಡುಬಿದ್ರೆ ಇನ್ಸ್ ಪೆಕ್ಟ...
20-03-26 06:56 pm
20-03-26 04:09 pm
HK News Desk
Mannagudda Petrol Pump Fight: ಮಣ್ಣಗುಡ್ಡ ಪೆಟ್ರ...
19-03-26 10:38 pm
ಉಜಿರೆ ಜಾತ್ರೆಗೆ ಬಂದಿದ್ದ ಮುಸ್ಲಿಂ ಬಾಲಕನ ಅಪಹರಿಸಿ...
19-03-26 12:16 pm
Mangalore Crime: 9ರ ಹರೆಯದ ಬಾಲಕನಿಗೆ ಅಶ್ಲೀಲ ವೀಡ...
18-03-26 11:01 pm
Indian American Family Robbery: ಒಂದೇ ನಿಮಿಷದಲ್...
15-03-26 12:49 pm