ಬ್ರೇಕಿಂಗ್ ನ್ಯೂಸ್
11-08-21 01:30 pm Headline Karanataka ದೇಶ - ವಿದೇಶ
ಅಮೆರಿಕದಲ್ಲಿ ಕೊರೊನಾವೈರಸ್ ಪ್ರಕರಣಗಳು ಹಾಗೂ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಕಳೆದ ಆರು ತಿಂಗಳಲ್ಲಿ ಹೆಚ್ಚಾಗಿದೆ. ಲಸಿಕೆ ವಿತರಣೆ ಪ್ರಮಾಣ ಕಡಿಮೆಯಾಗುತ್ತಿದ್ದು, ಡೆಲ್ಟಾ ರೂಪಾಂತರಿ ಪ್ರಕರಣ ಹೆಚ್ಚಾಗುತ್ತಿದೆ.
ಅಮೆರಿಕದ ಸ್ಯಾನ್ ಡಿಯೋಗೊದಲ್ಲಿರುವ ಲಾ ಜೊಲ್ಲಾ ಇನ್‌ಸ್ಟಿಟ್ಯೂಟ್ ಫಾರ್ ಇಮ್ಯುನಾಲಜಿ ನೀಡಿರುವ ಮಾಹಿತಿ ಪ್ರಕಾರ ಚೀನಾದಲ್ಲಿ ಡೆಲ್ಟಾ ಪ್ಲಸ್ ಸೋಂಕಿಗೆ ಒಳಗಾದ ಜನರು ತಮ್ಮ ಮೂಗುಗಳಲ್ಲಿ 1260 ಪಟ್ಟು ಹೆಚ್ಚು ವೈರಸ್‌ಗಳನ್ನು ಹೊಂದಿರುವುದು ತಿಳಿದುಬಂದಿದೆ.
ಸಾಮಾನ್ಯವಾಗಿ ಒರಿಜಿನಲ್ ಕೊರೊನಾ ಸೋಂಕು ತಗುಲಿ ಅದರ ಲಕ್ಷಣಗಳು ಕಾಣಿಸಿಕೊಳ್ಳಲು ಕನಿಷ್ಠ ಒಂದು ವಾರ ಬೇಕು ಆದರೆ ಡೆಲ್ಟಾ ಪ್ಲಸ್ ತಗುಲಿ ಒಂದೆರೆಡು ದಿನಗಳಲ್ಲೇ ಸೋಂಕಿನ ತೀವ್ರತೆ, ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂಬ ಮಾಹಿತಿ ಲಭ್ಯವಾಗಿದೆ.
ಡೆಲ್ಟಾ ಪ್ಲಸ್ 35 ದೇಶಗಳಿಗೆ ದಾಳಿ ಇಟ್ಟಿದ್ದು, ಅದರ ಪೈಕಿ 5 ದೇಶಗಳಲ್ಲಿ ಅತಿಯಾಗಿ ಹರಡುತ್ತಿದೆ. ಕಳೆದ ಮೂರು ದಿನಗಳಿಂದ ಅಮೆರಿಕದಲ್ಲಿ ಸರಾಸರಿ ಒಂದು ಲಕ್ಷ ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ. ಇದರೊಂದಿಗೆ ಹೊಸ ಪ್ರಕರಣಗಳ ಪ್ರಮಾಣದಲ್ಲಿ ಶೇ.35ರಷ್ಟು ಏರಿಕೆಯಾಗಿದೆ. ಲೂಯಿಸಿಯಾನ, ಫ್ಲೋರಿಡಾ, ಅರ್ಕಾನ್ಸಾಸ್‌ಗಳಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ.
ಕೊರೊನಾ ವೈರಾಣುವಿನ ಹೊಸ ರೂಪಾಂತರದ ವಿರುದ್ಧ ಹೋರಾಟಕ್ಕೆ ಭಾರತ ಸಜ್ಜಾಗುತ್ತಿದೆ. ಯಾವುದೇ ಕಾರಣಕ್ಕೂ ಜನರು ಇನ್ನಷ್ಟು ದಿನ ಗುಂಪುಗೂಡದೆ ಕಾರ್ಯನಿರ್ವಹಿಸಬೇಕು. ಕೊರೊನಾ ವೈರಸ್‌ನ ನಿಯಂತ್ರಣ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲೇ ಬೇಕು.
ಪ್ರದೇಶಗಳನ್ನು ಕ್ಲಸ್ಟರ್‌ಗಳ ರೂಪದಲ್ಲಿ ವಿಂಗಡಿಸಿ ಜನರ ಚಟುವಟಿಕೆ ಮೇಲೆ ನಿಗಾ ವಹಿಸಬೇಕು. ಪರೀಕ್ಷೆಯ ಪ್ರಮಾಣ ಹೆಚ್ಚಾಗಬೇಕು. ಆದಷ್ಟು ಬೇಗ ಲಸಿಕಾ ಅಭಿಯಾನ ಪೂರ್ಣಗೊಳ್ಳಬೇಕಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರ ಪ್ರಕಾರ, ಭಾರತದಲ್ಲಿ ಲಭ್ಯವಿರುವ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಎರಡೂ ಲಸಿಕೆಗಳೂ ಡೆಲ್ಟಾ ಪ್ಲಸ್ ವಿರುದ್ಧ ಪರಿಣಾಮಕಾರಿ. ಆದ್ರೆ ಎಷ್ಟರಮಟ್ಟಿಗೆ ಪರಿಣಾಮಕಾರಿ? ದೇಹದ ರೋಗ ನಿರೋಧಕ ಶಕ್ತಿಯನ್ನು ವೈರಸ್ ಭೇದಿಸುವಾಗ ತಡೆಯುತ್ತದೆಯೇ..? ಈ ಕುರಿತಾಗಿ ಇನ್ನಷ್ಟು ಅಧ್ಯಯನಗಳು ನಡೆಯಬೇಕಿದೆ.
ಯಾವ್ಯಾವ ದೇಶಗಳಲ್ಲಿ ಡೆಲ್ಟಾ ರೂಪಾಂತರಿ ಇದೆ:
ಭಾರತ, ಅಮೆರಿಕ, ಚೀನಾ, ಆಸ್ಟ್ರೇಲಿಯಾ, ಫ್ರಾನ್ಸ್‌ನಲ್ಲಿ ಡೆಲ್ಟಾ ಪ್ಲಸ್ ಸೋಂಕಿನ ಪ್ರಮಾಣ ಹೆಚ್ಚಾಗಿದೆ. ಇಂಗ್ಲೆಂಡ್‌ನಲ್ಲಿ ಈ ವೈರಾಣು ಮೊದಲು ಪತ್ತೆಯಾಗಿದೆಯಾದ್ರೂ, ತಜ್ಞರ ಪ್ರಕಾರ ಈ ವೈರಾಣುವಿನ 6 ವಂಶವಾಹಿಗಳು ಜೂನ್ 7ರಂದೇ ಭಾರತದಲ್ಲಿ ಪತ್ತೆಯಾಗಿದೆ. ಆದ್ರೆ, ಭಾರತದ ಆರೋಗ್ಯ ಇಲಾಖೆ ಮೂಲಗಳ ಪ್ರಕಾರ, ಇಂಗ್ಲೆಂಡ್‌ನಿಂದ ಎಚ್ಚರಿಕೆ ಬಂದ ಬಳಿಕವಷ್ಟೇ ಭಾರತದಲ್ಲಿ ಮಾದರಿಗಳ ಪರೀಕ್ಷೆ ನಡೆಸಿ ವೈರಸ್ ಪತ್ತೆ ಹಚ್ಚಲಾಗಿದೆ. ಏಪ್ರಿಲ್ 5ರಂದು ಸಂಗ್ರಹಿಸಲಾಗಿದ್ದ ಮಾದರಿಯಲ್ಲಿ ಡೆಲ್ಟಾ ಪ್ಲಸ್ ವೈರಸ್ ಪತ್ತೆಯಾಗಿದೆ ಎಂದು ಭಾರತ ಸರ್ಕಾರದ ಆರೋಗ್ಯ ಇಲಾಖೆ ತಿಳಿಸಿದೆ.
ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಭಾರತದಲ್ಲಿ ಆರಂಭದಲ್ಲಿ 40 ಡೆಲ್ಟಾ ಪ್ಲಸ್ ಕೇಸ್‌ಗಳು ಪತ್ತೆಯಾದವು. ಮಹಾರಾಷ್ಟ್ರ, ಕೇರಳ, ಮಧ್ಯ ಪ್ರದೇಶಗಳಲ್ಲಿ ಡೆಲ್ಟಾ ಪ್ಲಸ್ ವೈರಾಣು ಮೊದಲಿಗೆ ಪತ್ತೆಯಾಗಿದೆ. ನಂತರದ ದಿನಗಳಲ್ಲಿ ಪಂಜಾಬ್, ತಮಿಳುನಾಡು, ಆಂಧ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಪತ್ತೆಯಾದವು.
ಭಾರತ ಮಾತ್ರವಲ್ಲ, ಅಮೆರಿಕ, ಇಂಗ್ಲೆಂಡ್, ಪೋರ್ಚುಗಲ್, ಸ್ವಿಟ್ಜರ್‌ಲೆಂಡ್, ಜಪಾನ್, ಪೋಲೆಂಡ್, ನೇಪಾಳ, ಚೀನಾ ಹಾಗೂ ರಷ್ಯಾದಲ್ಲೂ ಡೆಲ್ಟಾ ಪ್ಲಸ್ ಪತ್ತೆಯಾಗಿದೆ. ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣವೂ ಶೇ.40ರಷ್ಟು ಹೆಚ್ಚಾಗಿದೆ.
ಕಳೆದ ವಾರಕ್ಕೆ ಹೋಲಿಸಿದರೆ ಇದು ಶೇ.18ರಷ್ಟು ಹೆಚ್ಚಾಗಿದೆ. ಕೊರೊನಾ ವೈರಸ್ ಸೋಂಕಿನ ಡೆಲ್ಟಾ ಪ್ರಭೇದ ವೈರಸ್ ಕುರಿತು ಈವರೆಗೂ ತಿಳಿದಿರುವ ಲಕ್ಷಣಗಳಿಗಿಂತಲೂ ಹೆಚ್ಚು ಗಂಭೀರ ಕಾಯಿಲೆಗೆ ಕಾರಣವಾಗಬಹುದು ಮತ್ತು ಚಿಕನ್‌ಪಾಕ್ಸ್‌ನಂತೆ ಬಹಳ ಸುಲಭವಾಗಿ ಹರಡಬಹುದು ಎಂದು ಅಮೆರಿಕ ಆರೋಗ್ಯ ಪ್ರಾಧಿಕಾರದ ಆಂತರಿಕ ದಾಖಲೆಗಳನ್ನು ಉಲ್ಲೇಖಿಸಿ ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.
ಕಾಯಿಲೆ ನಿಯಂತ್ರಣ ಮತ್ತು ತಡೆ ಕೇಂದ್ರ (ಸಿಡಿಸಿ) ನೀಡಿರುವ ದಾಖಲೆಗಳ ಪ್ರಕಾರ, ಸಂಪೂರ್ಣವಾಗಿ ಲಸಿಕೆ ಡೋಸ್ ಪಡೆದುಕೊಂಡಿರುವ ವ್ಯಕ್ತಿಗಳು, ಲಸಿಕೆ ಪಡೆದುಕೊಳ್ಳದ ಜನರಷ್ಟೇ ಪ್ರಮಾಣದಲ್ಲಿ ಡೆಲ್ಟಾ ಪ್ರಭೇದದ ವೈರಸ್ ಹರಡುತ್ತಾರೆ ಎಂದು ವರದಿ ತಿಳಿಸಿದೆ.
ಡೆಲ್ಟಾ ಪ್ಲಸ್ ಎಷ್ಟು ಅಪಾಯಕಾರಿಯಾದ ರೂಪಾಂತರಿ:
ಅತಿ ವೇಗವಾಗಿ ಪ್ರಸರಣವಾಗಬಲ್ಲ ಶಕ್ತಿ ಇರುವ ಕಾರಣ, ಡೆಲ್ಟಾ ಪ್ಲಸ್ ವೈರಾಣುವನ್ನು ಆತಂಕಕಾರಿ ಎಂದೇ ಬಣ್ಣಿಸಲಾಗಿದೆ. ದೇಹದ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುವ ಈ ವೈರಾಣು, ಲಸಿಕೆಯ ಕ್ಷಮತೆಯನ್ನು ಕುಗ್ಗಿಸುವ ಸಾರಮರ್ಥ್ಯ ಹೊಂದಿರಬಹುದು ಎನ್ನಲಾಗ್ತಿದೆ.
ವಿಶ್ವ ಆರೋಗ್ಯ ಸಂಸ್ಥೆ ಕೂಡಾ ಈ ವೈರಾಣುವಿನ ಪ್ರಸರಣದ ಮೇಲೆ ನಿಗಾ ಇರಿಸಿದೆ. ಅಚ್ಚರಿಯ ವಿಷಯವೆಂದರೆ, ಈ ವೈರಾಣುವಿನ ವರ್ತನೆ ಸಾಮಾನ್ಯ ವೈರಾಣುವಿನಂತೆ ಕಂಡು ಬರ್ತಿಲ್ಲ. ಹೀಗಾಗಿ, ಸಾರ್ವಜನಿಕ ಆರೋಗ್ಯದ ಮೇಲೆ ಗಮನಾರ್ಹ ಪರಿಣಾಮ ಬೀರಬಹುದು ಎಂದೇ ಆತಂಕ ವ್ಯಕ್ತವಾಗಿದೆ.
These five Countries Stifled Covid 19 Now the Delta Variant Has Left Them Vulnerable These five Countries Stifled Covid 19 Now the Delta Variant Has Left Them Vulnerable. Not long ago, governments and officials in many Asia-Pacific countries saw their relative trickle of Covid-19 cases as a strength. Now it is looking like a vulnerability. The Delta variant has backed many countries into a corner, short of vaccines and left with strategies that worked in the past but appear insufficient against this highly transmissible version of the virus
26-11-24 11:52 am
HK News Desk
ಜೆಡಿಎಸ್ ನಲ್ಲಿ ಭವಿಷ್ಯ ಇಲ್ಲ, ದೇವೇಗೌಡರಿಗೆ ಜನ ಗೌರ...
25-11-24 05:51 pm
ಮನೆಯೊಂದು ಮೂರು ಬಾಗಿಲು, ಗೆಲುವು ಕಸಿದ ಬಿಜೆಪಿ ಒಳಜಗ...
25-11-24 03:28 pm
Bjp, D K Shivakumar : ಚನ್ನಪಟ್ಟಣ ಗೆಲ್ಲಲು ಬಿಜೆಪ...
24-11-24 08:39 pm
CM Siddaramaiah, BJP, Congress ಆರ್. ಅಶೋಕ್ ಕಾ...
23-11-24 07:43 pm
23-11-24 11:07 pm
HK News Desk
ಬಿಜೆಪಿ ‘ಗ್ಯಾರಂಟಿ’ಗೆ ಕೈಹಿಡಿಯದ ಜಾರ್ಖಂಡ್ ಮತದಾರ,...
23-11-24 05:34 pm
ಮಹಾರಾಷ್ಟ್ರದಲ್ಲಿ ಕೇಸರಿ ಕಮಾಲ್ ; ನಿರೀಕ್ಷೆಗೂ ಮೀರಿ...
23-11-24 04:33 pm
ಭಾರೀ ವಿವಾದ ಸೃಷ್ಟಿಸಿದ್ದ 'ಎಮರ್ಜೆನ್ಸಿ' ಚಿತ್ರ ಬಿಡ...
18-11-24 03:54 pm
ಶ್ರದ್ಧಾ ವಾಳ್ಕರ್ ಹತ್ಯೆಗೆ ಸೇಡು ತೀರಿಸಲು ಬಿಷ್ಣೋಯಿ...
18-11-24 01:09 pm
25-11-24 11:14 pm
Mangalore Correspondent
Vithoba Rukumai temple case, Mangalore: ವಿಠೋಬ...
25-11-24 10:39 pm
Ullal Dargah, Mangalore: ಎಪ್ರಿಲ್ 24 ರಿಂದ ಮೇ...
25-11-24 02:44 pm
Kukke Subrahmanya Temple, Mangalore: ನ.27ರಿಂದ...
24-11-24 09:13 pm
Hariprasad, Mangalore, Congress: ಮಹಾರಾಷ್ಟ್ರದಲ...
24-11-24 05:16 pm
26-11-24 03:10 pm
Mangalore Correspondent
ಹುಬ್ಬಳ್ಳಿ ದರೋಡೆ ಪ್ರಕರಣದಲ್ಲಿ ಮಂಗಳೂರು ನಂಟು ; ಉಳ...
25-11-24 06:17 pm
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm
Rowdy sheeter Dawood, Mangalore Crime, Police...
23-11-24 10:49 am
ಟ್ರಾಯ್ ಕಂಪನಿ ಸೋಗಿನಲ್ಲಿ ಕರೆ ; ಅಮೆರಿಕಾದ ಸಾಫ್ಟ್...
22-11-24 10:47 pm