ಬ್ರೇಕಿಂಗ್ ನ್ಯೂಸ್
20-08-21 12:47 pm Headline Karnataka News Network ದೇಶ - ವಿದೇಶ
ಅಂತರ್ ಸರ್ಕಾರಿ ಸಮಿತಿಯನ್ನು ಆಧರಿಸಿದ ಇತ್ತೀಚಿನ ವಿಶ್ವಸಂಸ್ಥೆ ಹವಾಮಾನ ವರದಿ ಅಪಾಯಕಾರಿ ಮಾಹಿತಿ ನೀಡಿದ್ದು ಹವಾಮಾನ ಬದಲಾವಣೆಯ ಕುರಿತು ಎಚ್ಚರಿಕೆ ನೀಡಿದೆ. ಈ ವರದಿಯ ಪ್ರಕಾರ 2030ರ ಸುಮಾರಿಗೆ ಪ್ರಪಂಚವು 1.5 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೆಚ್ಚಳಕ್ಕೆ ಒಳಗಾಗಲಿದೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ವಿಶ್ವಸಂಸ್ಥೆ ತಿಳಿಸಿರುವ ಪ್ರಕಾರ ಹವಾಮಾನ ಬದಲಾವಣೆ ನೈಸರ್ಗಿಕ ವಿಕೋಪವಾಗಿದ್ದು ಅಧಿಕ ಮಳೆ, ಚಂಡಮಾರುತ, ಸುನಾಮಿಯಂತೆಯೇ ಹವಾಮಾನ ವೈಪರೀತ್ಯ ಕೂಡ ಪ್ರಾಕೃತಿಕ ವಿಕೋಪವಾಗಿದೆ ಎಂಬುದಾಗಿ ತಿಳಿಸಿದೆ.
ಇದರ ನಡುವೆಯೇ ಆಫ್ರಿಕಾ ಜನರು ನೈಸರ್ಗಿಕ ವಿಕೋಪ ತಡೆಯುವ ನಿಟ್ಟಿನಲ್ಲಿ ಕೈಜೋಡಿಸಿದ್ದು ಹಳ್ಳಿಗರ ಈ ಬುದ್ಧಿವಂತಿಕೆಗೆ ಸಂಪೂರ್ಣ ವಿಶ್ವವೇ ತಲೆದೂಗಿದೆ. ತೋಟಗಾರಿಕೆಯಲ್ಲಿ ಇವರು ವಿನೂತನ ಮಾದರಿ ಅನುಸರಿಸಿದ್ದು ವೃತ್ತಾಕಾರವಾಗಿ ಸಸಿಗಳನ್ನು ನೆಟ್ಟು ತೋಟಗಾರಿಕೆ ಮಾಡುತ್ತಿದ್ದಾರೆ. ಬೆಳೆಗಳ ಒಂದು ವರ್ತುಲದಂತೆ ಈ ತೋಟಗಳು ಕಾಣುತ್ತಿದ್ದು ಇದರಿಂದ ಹವಾಮಾನ ವೈಪರೀತ್ಯ ತಡೆಗಟ್ಟಬಹುದು ಎಂಬುದು ತಿಳಿದು ಬಂದಿದೆ.
ಈ ತೋಟಗಾರಿಕೆಯ ಹಿಂದಿರುವ ವ್ಯಕ್ತಿ ಸೆನೆಗಲ್‌ನ ಮೌಸ್ಸಾ ಕಮಾರಾ. ರಾಯಿಟರ್ಸ್ ಸುದ್ದಿ ಸಂಸ್ಥೆ ಇವರ ತೋಟಗಾರಿಕೆಯ ಕುರಿತು ವರದಿ ಮಾಡಿದ್ದು, ಸೆನೆಗಲ್‌ನ ವೊಲೊಫ್ ಭಾಷೆಯಲ್ಲಿ ಇಂತಹ ತೋಟಗಾರಿಕೆಗೆ ‘ಟೊಲೌ ಕೂರ್’ ಎಂದು ಹೆಸರಿಸಲಾಗಿದೆ. ಈ ರೀತಿಯ ತೋಟಗಾರಿಕೆಯು ಆಹಾರ ಭದ್ರತೆಯನ್ನು ವರ್ಧಿಸುತ್ತದೆ ಎಂದು ತಿಳಿಸಿದ್ದು ಪ್ರಾದೇಶಿಕ ಬರಗಾಲ, ಅರಣ್ಯನಾಶ ಹಾಗೂ ಫಲವತ್ತಾದ ಭೂಮಿಯು ಮರುಭೂಮಿಯಾಗುವುದನ್ನು ತಡೆಯುತ್ತದೆ. ಈ ರೀತಿಯಾಗಿ ಸಾವಿರಾರು ಸಮುದಾಯದವರಿಗೆ ಉದ್ಯೋಗ ದೊರೆಯುತ್ತದೆ ಎಂಬುದು ಕಮಾರಾ ಅಭಿಪ್ರಾಯವಾಗಿದೆ.
ಈ ಯೋಜನೆ ಅತ್ಯಂತ ಮಹತ್ವದ್ದಾಗಿದ್ದು ಇದರಿಂದ ದೊರೆಯುವ ಪ್ರಯೋಜನವನ್ನು ಮಾತುಗಳಲ್ಲಿ ವರ್ಣಿಸಲಾಗುವುದಿಲ್ಲ ಎಂದು ಅಭಿಪ್ರಾಯ ನೀಡಿದ್ದಾರೆ. ಬೇಕರಿಯಲ್ಲಿ ಕೆಲಸ ಮಾಡುವುದರ ಜತೆಗೆ ತೋಟದಲ್ಲಿ ತಿನ್ನಲು ಯೋಗ್ಯವಾಗಿರುವ ಹಾಗೂ ಔಷಧೀಯ ಸಸ್ಯಗಳನ್ನು ಬೆಳೆಸುತ್ತಿದ್ದಾರೆ.
2007ರಲ್ಲಿ ಆರಂಭವಾದ ಗ್ರೀನ್ ವಾಲ್ ಯೋಜನೆಯ ಭಾಗವಾಗಿ ಕಮಾರಾ ಕಾರ್ಯನಿರ್ವಹಿಸುತ್ತಿದ್ದಾರೆ. ಹವಾಮಾನ ವೈಪರೀತ್ಯ ಹಾಗೂ ಇನ್ನಿತರ ಪ್ರಾಕೃತಿಕ ವಿಕೋಪಗಳಿಂದಾಗಿ ಫಲವತ್ತಾಗಿರುವ ಭೂಮಿ ಮರುಭೂಮಿಯಾಗಿ ಮಾರ್ಪಡುತ್ತಿದೆ. ಗ್ರೀನ್ ವಾಲ್ ಯೋಜನೆಯು ಇಂತಹ ಸವಾಲುಗಳನ್ನು ಎದುರಿಸುವ ಆಶಾಕಿರಣವಾಗಿ ರೂಪುಗೊಂಡಿದೆ. ಆಫ್ರಿಕಾ ಸಂಘಟನೆಯು 2007ರಲ್ಲಿ ಆರಂಭಿಸಿದ ಈ ಯೋಜನೆ ಪ್ರಸ್ತುತ ವಿಶ್ವದ ಅತ್ಯಂತ ಬಡ ದೇಶಗಳಲ್ಲೊಂದಾದ ಸಹೇಲ್‌ನಲ್ಲಿ ಹದಗೆಟ್ಟ ಕೃಷಿ ಭೂಮಿ ಫಲವತ್ತಾಗಿಸಲು ಜೊತೆಗೆ ಲಕ್ಷಾಂತರ ಜೀವಗಳನ್ನು ಬರದಿಂದ ಬಡತನದಿಂದ ಸಂರಕ್ಷಿಸುವ ಗುರಿ ಹೊಂದಿದೆ.
ಗ್ರೀನ್ ವಾಲ್ ಯೋಜನೆಯು ಒಮ್ಮೆ ಪೂರ್ಣಗೊಂಡ ನಂತರ ಅತಿದೊಡ್ಡ ಜೀವವಿಕಾಸ ಗೋಡೆ ಎಂಬುದಾಗಿ ಖ್ಯಾತಿಗಳಿಸಲಿದೆ. ವಿಶ್ವದ 8,000 ಕಿಮೀ ಉದ್ದದ ನೈಸರ್ಗಿಕ ಅದ್ಭುತವು ಆಫ್ರಿಕಾ ಖಂಡವನ್ನು ಸಂಪೂರ್ಣವಾಗಿ ವ್ಯಾಪಿಸಲಿದೆ. ಕೋವಿಡ್ ಸಾಂಕ್ರಾಮಿಕದ ನಂತರ ಈ ಯೋಜನೆ ಲಕ್ಷಾಂತರ ಜನರಿಗೆ ಉದ್ಯೋಗವನ್ನು ನೀಡಿದೆ. ಸೆನೆಗಲ್ ಸಾಂಕ್ರಾಮಿಕದ ಭೀತಿಯಿಂದಾಗಿ ತನ್ನ ಗಡಿಗಳನ್ನು ಮುಚ್ಚಿತು ಹಾಗೂ ಆಮದುಗಳನ್ನು ಕಡಿತಗೊಳಿಸಿತು ಜೊತೆಗೆ ವಿದೇಶಿ ಆಹಾರ ಮತ್ತು ಔಷಧಿಯ ಮೇಲೆ ಗ್ರಾಮೀಣ ಸಮುದಾಯಗಳ ಅವಲಂಬನೆಯನ್ನು ಬಹಿರಂಗಪಡಿಸಿತು. ಇದರಿಂದಾಗಿ ಮರು ಅರಣ್ಯೀಕರಣ ಸಂಸ್ಥೆಗಳು ಹಳ್ಳಿಗರು ಸ್ವಾವಲಂಬಿಯಾಗಲು ಸಹಕಾರ ನೀಡುವ ವಿಧಾನಗಳನ್ನು ಹುಡುಕಲು ಪ್ರೇರೇಪಿಸಿತು.
ಹವಾಮಾನ ವೈಪರೀತ್ಯಗಳಿಂದ ಬಂಜರು ಭೂಮಿಯ ಸಂಕಷ್ಟವನ್ನು ಎದುರಿಸುತ್ತಿರುವ ಸಹೇಲ್ ಪ್ರದೇಶವು ಈಗಾಗಲೇ ಬರಗಾಲ, ಆಹಾರದ ಕೊರತೆ, ನೈಸರ್ಗಿಕ ಸಂಪನ್ಮೂಲಗಳ ಇಳಿಕೆ ಮೊದಲಾದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹಾಗಾಗಿ ಗ್ರೀನ್ ವಾಲ್ ಯೋಜನೆಯು ಗ್ರಾಮೀಣ ಜನರಿಗೆ ಸ್ವಾವಲಂಬಿಯಾಗುವ ದಾರಿಯನ್ನು ತೋರಿಸಿದ್ದು ನೈಸರ್ಗಿಕ ಸಂರಕ್ಷಣೆಗೂ ರಹದಾರಿಯಾಗಿದೆ ಎಂಬುದಾಗಿ ವೆಬ್‌ಸೈಟ್ ಹೇಳಿಕೆ ನೀಡಿದೆ.
Great Green Wall Farmers in Senegal Growing Circular Gardens to fight Climate change.
26-11-24 11:52 am
HK News Desk
ಜೆಡಿಎಸ್ ನಲ್ಲಿ ಭವಿಷ್ಯ ಇಲ್ಲ, ದೇವೇಗೌಡರಿಗೆ ಜನ ಗೌರ...
25-11-24 05:51 pm
ಮನೆಯೊಂದು ಮೂರು ಬಾಗಿಲು, ಗೆಲುವು ಕಸಿದ ಬಿಜೆಪಿ ಒಳಜಗ...
25-11-24 03:28 pm
Bjp, D K Shivakumar : ಚನ್ನಪಟ್ಟಣ ಗೆಲ್ಲಲು ಬಿಜೆಪ...
24-11-24 08:39 pm
CM Siddaramaiah, BJP, Congress ಆರ್. ಅಶೋಕ್ ಕಾ...
23-11-24 07:43 pm
23-11-24 11:07 pm
HK News Desk
ಬಿಜೆಪಿ ‘ಗ್ಯಾರಂಟಿ’ಗೆ ಕೈಹಿಡಿಯದ ಜಾರ್ಖಂಡ್ ಮತದಾರ,...
23-11-24 05:34 pm
ಮಹಾರಾಷ್ಟ್ರದಲ್ಲಿ ಕೇಸರಿ ಕಮಾಲ್ ; ನಿರೀಕ್ಷೆಗೂ ಮೀರಿ...
23-11-24 04:33 pm
ಭಾರೀ ವಿವಾದ ಸೃಷ್ಟಿಸಿದ್ದ 'ಎಮರ್ಜೆನ್ಸಿ' ಚಿತ್ರ ಬಿಡ...
18-11-24 03:54 pm
ಶ್ರದ್ಧಾ ವಾಳ್ಕರ್ ಹತ್ಯೆಗೆ ಸೇಡು ತೀರಿಸಲು ಬಿಷ್ಣೋಯಿ...
18-11-24 01:09 pm
26-11-24 05:37 pm
Mangaluru Correspondent
Mangalore Astra Group, lucky draw: ಕಾರು, ಫ್ಲಾ...
25-11-24 11:14 pm
Vithoba Rukumai temple case, Mangalore: ವಿಠೋಬ...
25-11-24 10:39 pm
Ullal Dargah, Mangalore: ಎಪ್ರಿಲ್ 24 ರಿಂದ ಮೇ...
25-11-24 02:44 pm
Kukke Subrahmanya Temple, Mangalore: ನ.27ರಿಂದ...
24-11-24 09:13 pm
26-11-24 03:10 pm
Mangalore Correspondent
ಹುಬ್ಬಳ್ಳಿ ದರೋಡೆ ಪ್ರಕರಣದಲ್ಲಿ ಮಂಗಳೂರು ನಂಟು ; ಉಳ...
25-11-24 06:17 pm
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm
Rowdy sheeter Dawood, Mangalore Crime, Police...
23-11-24 10:49 am
ಟ್ರಾಯ್ ಕಂಪನಿ ಸೋಗಿನಲ್ಲಿ ಕರೆ ; ಅಮೆರಿಕಾದ ಸಾಫ್ಟ್...
22-11-24 10:47 pm