ಬ್ರೇಕಿಂಗ್ ನ್ಯೂಸ್
12-09-20 02:43 pm Headline Karnataka News Network ದೇಶ - ವಿದೇಶ
ಮಂಡ್ಯ, ಸೆಪ್ಟೆಂಬರ್ 12: ಡ್ರಗ್ಸ್ ದಂಧೆಯಲ್ಲಿ ಜಮೀರ್ 100% ಇದ್ದಾರೆ, ಅದರಲ್ಲಿ ಸಂಶಯವಿಲ್ಲ. ರಾಜಕಾರಣದಲ್ಲಿ ಇಂಟರ್ನಲ್ ವ್ಯವಹಾರ ಇಟ್ಟುಕೊಂಡಿರೋದರಿಂದ ಜಮೀರನನ್ನು ಅರೆಸ್ಟ್ ಮಾಡ್ತಿಲ್ಲ. ಹೀಗೆಂದು ಸರಕಾರವನ್ನು ಜರೆದವರು ಶ್ರೀರಾಮ ಸೇನೆ ವರಿಷ್ಠ ಪ್ರಮೋದ್ ಮುತಾಲಿಕ್.
ಮಂಡ್ಯದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಮುತಾಲಿಕ್, ಈ ಡ್ರಗ್ಸ್ ದಂಧೆಯಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಲ್ಲ ಪಕ್ಷಗಳವರೂ ಇದ್ದಾರೆ. ಇವ್ರೀಗ ಧಮ್ ತೋರಿಸಬೇಕು. ಜಮೀರ ಆಗಿರಲಿ, ಯಾರೇ ಇದ್ದರೂ ಒದ್ದು ಒಳಗೆ ಹಾಕಬೇಕು ಎಂದು ಆಗ್ರಹಿಸಿದ್ದಾರೆ.
ನಟಿ ಸಂಜನಾ ಜೊತೆಗೆ ಆಕೆಯ ಗಂಡ ಅಜೀದ್ ಕೂಡ ಡ್ರಗ್ ದಂಧೆಯಲ್ಲಿ ಇದ್ದಾನೆ. ಇನ್ನು ಲವ್ ಜಿಹಾದ್ ಮತ್ತು ಡ್ರಗ್ಸ್ ದಂಧೆ ಇವೆರಡಕ್ಕೂ ನೇರ ಕನೆಕ್ಟ್ ಇದೆ. ಇವೆಲ್ಲ ಪಾತಕಗಳಿಗೆ ಪಾಕಿಸ್ತಾನದಲ್ಲಿ ಕುಳಿತ ದಾವೂದ್ ಇಬ್ರಾಹಿಮನೇ ಮೂಲ ಪುರುಷ. ಹಿಂದೆ ಅಜೀಮ್ ಅಸ್ತಾನ ಎಂಬ ದೇಶದ್ರೋಹಿ ಇದ್ದ. ಇವರೆಲ್ಲರೂ ಇಡೀ ಚಿತ್ರರಂಗವನ್ನು ಆವರಿಸಿದ್ದಾರೆ. ಬಾಲಿವುಡ್ ಸೇರಿ ಎಲ್ಲ ಕಡೆಯೂ ಇವರ ಕಬಂಧ ಬಾಹು ಇದೆ ಎಂದಿದ್ದಾರೆ ಮುತಾಲಿಕ್.

ಈ ಜಮೀರ ತನ್ನ ಚುನಾವಣಾ ಪ್ರಚಾರಕ್ಕೆ ಮುಂಬೈನಿಂದ ಚಿತ್ರ ನಟ- ನಟಿಯರನ್ನು ಕರೆಸುತ್ತಾರೆ. ಏನ್ ಸುಮ್ನೆ ಬರ್ತಾರಾ ಅವ್ರೆಲ್ಲ.. ವ್ಯವಸ್ಥಿತ ಜಾಲದಲ್ಲಿ ಜಮೀರ್ ಇರೋದು ನಿಶ್ಚಿತವಾಗಿದೆ. ಈಗ ಬಿಜೆಪಿ ಸರಕಾರ ಧಮ್ ತೋರಿಸಬೇಕು. ಜಮೀರ್ ನನ್ನು ಒದ್ದು ಒಳಗೆ ಹಾಕಬೇಕು, ಪಾದರಾಯನಪುರ, ಡಿಜೆ ಹಳ್ಳಿ ಗಲಾಟೆಗೂ ಡ್ರಗ್ಸ್ ಕಾರಣ ಆಗಿತ್ತು. ಆಗೆಲ್ಲ ಜಮೀರ್ ಹೆಸರು ಕೂಡ ಕೇಳಿಬಂದಿತ್ತು. ಈಗ ಅವಕಾಶ ಬಂದಿದೆ, ಈತನನ್ನು ಜೈಲಿಗೆ ತಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಡ್ರಗ್ಸ್ ಪ್ರಕರಣವನ್ನು ಸಿಬಿಐಗೆ ವಹಿಸಬಾರದು. ಸಿಬಿಐ ಬಗ್ಗೆ ವಿಶ್ವಾಸವಿಲ್ಲ. ಎಲ್ಲ ಸೇರಿ ಮುಚ್ಚಿ ಹಾಕುತ್ತಾರೆ ಎಂದು ಹೇಳಿದರು.
Join our WhatsApp group for latest news updates
24-08-26 03:16 pm
HK News Staffer
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
ದೇಶದ ರಾಜಕೀಯದಲ್ಲಿ ಬಹುದೊಡ್ಡ ಬಿರುಗಾಳಿ; ವಿರುದ್ಧ ಧ...
21-08-26 03:42 pm
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
24-08-26 06:25 pm
HK News Staffer
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
ಅಡಿಕೆ ಎಲೆ ಚುಕ್ಕಿ ರೋಗ ನಿಯಂತ್ರಣಕ್ಕೆ ಸಿಪಿಸಿಆರ್ ಐ...
24-08-26 04:11 pm
ಎಂಆರ್ ಪಿಎಲ್ ನಲ್ಲಿ 26 ಇಂಜಿನಿಯರಿಂಗ್ ಹುದ್ದೆಗಳ ಭರ...
24-08-26 01:13 pm
ಹಲ್ಲೆಗೀಡಾದವರ ಮೇಲೆ ಕೊಲೆಯತ್ನ ಕೇಸು ಹಾಕಿದ್ದಾರೆ, ಹ...
23-08-26 06:17 pm
24-08-26 07:04 pm
HK News Staffer
ಚಿಕ್ಕಮಗಳೂರಿನಲ್ಲಿ ಈದ್ ಮೆರವಣಿಗೆ ಸಿದ್ಧತೆ ; ಬೃಹತ್...
24-08-26 02:35 pm
ಕುಂಬಳೆಯ ಮುಸ್ಲಿಂ ವ್ಯಾಪಾರಿಗೆ ಹನಿಟ್ರ್ಯಾಪ್ ; ವಿಡಿ...
24-08-26 02:25 pm
ನದಿಗೆ ಬಿದ್ದ ಫುಟ್ಬಾಲ್ ಹೆಕ್ಕಲು ಹೋಗಿ ಜೀವ ಕಳಕೊಂಡ...
24-08-26 01:03 pm
ಬ್ರಹ್ಮಾವರದಲ್ಲಿ ಬೆಚ್ಚಿಬೀಳಿಸುವ ಕೃತ್ಯ ; ಹೆತ್ತ ತಂ...
24-08-26 12:06 pm