ಚೀನಾ ವಿರುದ್ಧ ಕೆನಡಾದಲ್ಲಿ ಭಾರೀ ಪ್ರತಿಭಟನೆ - ಭಾರತ ಸೇರಿ ವಿವಿಧ ದೇಶದ ನಾಗರಿಕರು ಭಾಗಿ

02-08-20 08:21 am       Headline Karnataka News Network   ದೇಶ - ವಿದೇಶ

ಚೀನಾದ ಆಕ್ರಮಣಕಾರಿ ಹಾಗೂ ದಮನಕಾರಿ ನೀತಿಯನ್ನು ಖಂಡಿಸಿ ಕೆನಡಾ ರಾಜಧಾನಿ ಟೋರಂಟೋದಲ್ಲಿ ಭಾರೀ ಪ್ರತಿಭಟನೆ ನಡೆದಿದ್ದು ಇದರಲ್ಲಿ ಭಾರತ ಸೇರಿದಂತೆ ಟಿಬೆಟಿಯನ್ನರು, ವಿಯೆಟ್ನಾಂ ಹಾಗೂ ತೈವಾನ್ ದೇಶದ ನಾಗರಿಕರು ಭಾಗಿಯಾಗಿದ್ದಾರೆ.

ಟೋರಂಟೋ, ಆ. 02: ಚೀನಾದ ಆಕ್ರಮಣಕಾರಿ ಹಾಗೂ ದಮನಕಾರಿ ನೀತಿಯನ್ನು ಖಂಡಿಸಿ ಕೆನಡಾ ರಾಜಧಾನಿ ಟೋರಂಟೋದಲ್ಲಿ ಭಾರೀ ಪ್ರತಿಭಟನೆ ನಡೆದಿದ್ದು ಇದರಲ್ಲಿ ಭಾರತ ಸೇರಿದಂತೆ ಟಿಬೆಟಿಯನ್ನರು, ವಿಯೆಟ್ನಾಂ ಹಾಗೂ ತೈವಾನ್ ದೇಶದ ನಾಗರಿಕರು ಭಾಗಿಯಾಗಿದ್ದಾರೆ.

ಚೀನಾ ಆತಂಕಕಕಾರಿ, ದಮನಕಾರಿ ನೀತಿಯನ್ನು ಅನುಸರಿಸುತ್ತಿದ್ದು ಚೀನಿಯರ ಹಕ್ಕುಗಳನ್ನು ಮೊಟಕುಗೊಳಿಸಲಾಗಿದೆ. ಭಾರತ, ಭೂತಾನ್‌ಗೆ ಸೇರಿದ ಪ್ರದೇಶವನ್ನು ತನ್ನ ವಶಕ್ಕೆ ಪಡೆಯುವ ಯತ್ನ ನಡೆಸುತ್ತಿದೆ. ಚೀನಾದ ಇಂತಹ ದಮನಕಾರಿ ನೀತಿಯನ್ನು ಸಹಿಸಲಾಗದು. ಹೀಗೆಯೇ ಮುಂದುವರಿದರೆ ಚೀನಾ ಕಠಿಣ ದಿನಗಳನ್ನು ಅನುಭವಿಸ ಬೇಕಾಗುತ್ತದೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚೀನಾದಲ್ಲಿ ರಾಜಕೀಯ, ಆರ್ಥಿಕ ಹಾಗೂ ಧಾರ್ಮಿಕ ಸ್ವಾತಂತ್ರ್ಯಗಳ ಮೇಲೆ ದಾಳಿ ನಡೆಯುತ್ತಿದೆ. ಚೀನಾದಲ್ಲಿ ಪ್ರಜಾಪ್ರಭುತ್ವ ಗಟ್ಟಿಗೊಳಿಸಬೇಕಾಗಿದೆ. ವಿಶ್ವವೇ ಚೀನಾ ಆಡಳಿತದ ವಿರುದ್ಧ ಭುಗಿಲೇಳಬೇಕಿದೆ ಎಂದು ಪ್ರತಿಭಟನಕಾರರು ಕಿಡಿಕಾರಿದ್ದಾರೆ.