ನೀಲಗಿರಿ ಬೆಟ್ಟಗಳ ಮಧ್ಯೆ ವಾಯುಪಡೆ ಹೆಲಿಕಾಪ್ಟರ್ ದುರಂತ ; ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಕುಟುಂಬ ಸದಸ್ಯರು ಪಾರು, ಇಬ್ಬರು ಸಾವು ! 

08-12-21 02:29 pm       HK Desk news   ದೇಶ - ವಿದೇಶ

ತಮಿಳುನಾಡಿನ ನೀಲಗಿರಿ ಬೆಟ್ಟಗಳ ಮಧ್ಯೆ ಭಾರತೀಯ ವಾಯುಪಡೆಗೆ ಸೇರಿದ ಹೆಲಿಕಾಪ್ಟರ್ ಪತನವಾಗಿದ್ದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಮತ್ತು ಅವರ ಕುಟುಂಬ ಸದಸ್ಯರು, ಇತರ ಸಿಬಂದಿ ಕಾಪ್ಟರ್ ನಲ್ಲಿದ್ದರು. ಘಟನೆಯಲ್ಲಿ ಇಬ್ಬರು ಮೃತಪಟ್ಟ ಬಗ್ಗೆ ವಾಯುಪಡೆ ಮಾಹಿತಿ ನೀಡಿದೆ. 

ಚೆನ್ನೈ, ಡಿ.9: ತಮಿಳುನಾಡಿನ ನೀಲಗಿರಿ ಬೆಟ್ಟಗಳ ಮಧ್ಯೆ ಭಾರತೀಯ ವಾಯುಪಡೆಗೆ ಸೇರಿದ ಹೆಲಿಕಾಪ್ಟರ್ ಪತನವಾಗಿದ್ದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಮತ್ತು ಅವರ ಕುಟುಂಬ ಸದಸ್ಯರು, ಇತರ ಸಿಬಂದಿ ಕಾಪ್ಟರ್ ನಲ್ಲಿದ್ದರು. ಘಟನೆಯಲ್ಲಿ ಇಬ್ಬರು ಮೃತಪಟ್ಟ ಬಗ್ಗೆ ವಾಯುಪಡೆ ಮಾಹಿತಿ ನೀಡಿದೆ. 

ಕೊಯಂಬತ್ತೂರು ಬಳಿಯ ಕೂನೂರು ಎಂಬಲ್ಲಿ ಬೆಟ್ಟಗಳ ನಡುವೆ ಘಟನೆ ನಡೆದಿದೆ. ಹೆಲಿ ಕಾಪ್ಟರ್ ಗೆ ಬೆಂಕಿ ಹತ್ತಿಕೊಂಡಿದ್ದು ಮೂವರು ತೀವ್ರ ಸುಟ್ಟ ಗಾಯಗೊಂಡಿದ್ದಾರೆ. ಒಟ್ಟು 14 ಮಂದಿ ಕಾಪ್ಟರ್ ನಲ್ಲಿದ್ದರು ಎನ್ನಲಾಗಿದ್ದು ಸಿಬಂದಿ ಮತ್ತು , ಕುಟುಂಬ ಸದಸ್ಯರ ಬಗ್ಗೆ ಹುಡುಕಾಟ ನಡೆದಿದೆ. ಸೂಲೂರ್ ನಲ್ಲಿ ಮಿಲಿಟರಿ ಬೇಸ್ ಇದ್ದು ಕೂನೂರಿಗೆ ಬಂದಿದ್ದ ಬಿಪಿನ್ ರಾವತ್ ಮತ್ತು ಕುಟುಂಬ ಸದಸ್ಯರು ಕೊಯಂಬತ್ತೂರು ಬಳಿಯ ಸೂಲೂರಿಗೆ ತೆರಳುತ್ತಿದ್ದಾಗ ಅವಘಡ ನಡೆದಿದೆ. 

ಕಾಪ್ಟರಿಗೆ ಬೆಂಕಿ ಹತ್ತಿಕೊಂಡು ಉರುಳಿ ಬಿದ್ದಿದ್ದು ಕಾಡಿನ ಮಧ್ಯೆ ಕಾಳ್ಗಿಚ್ಚಿನ ರೀತಿ ಕಂಡುಬಂದಿದೆ. ಘಟನೆ ಬಗ್ಗೆ ವಾಯುಪಡೆ ತನಿಖೆಗೆ ಆದೇಶ ಮಾಡಿದ್ದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅಪಾಯದಿಂದ ಪಾರಾಗಿದ್ದಾರೆ ಎಂಬ ಮಾಹಿತಿಯಿದೆ.

A chopper belonging to the Indian Army on Wednesday reportedly crashed at Coonoor in Nilgiris district of Tamil Nadu. As per preliminary reports, the helicopter was carrying senior Defence officials including CDS Bipin Rawat. The Indian Air Force (IAF) tweeted, "An IAF Mi-17V5 helicopter, with CDS Gen Bipin Rawat on board, met with an accident today near Coonoor, Tamil Nadu. An Inquiry has been ordered to ascertain the cause of the accident."