ಬ್ರೇಕಿಂಗ್ ನ್ಯೂಸ್
08-03-22 06:40 pm HK News Desk ದೇಶ - ವಿದೇಶ
ನವದೆಹಲಿ, ಮಾ.8: ಬಹು ನಿರೀಕ್ಷಿತ ಪಂಚ ರಾಜ್ಯಗಳ ಚುನಾವಣೆಯ ಮತದಾನ ಮುಗಿದಿದ್ದು, ಅಂತಿಮ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದೆ. ಇದೇ ವೇಳೆ, ಮತದಾನೋತ್ತರ ಸಮೀಕ್ಷೆಗಳು ಹೊರಬಿದ್ದಿದ್ದು, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅತ್ಯಂತ ಮಹತ್ವದ್ದು ಎನ್ನಲಾಗುವ ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರ ಉಳಿಸಿಕೊಳ್ಳುವ ಸಾಧ್ಯತೆ ವ್ಯಕ್ತವಾಗಿದೆ. ಪಂಜಾಬ್ ನಲ್ಲಿ ಆಪ್ ಕ್ಲೀನ್ ಸ್ವೀಪ್ ಮಾಡುವ ಬಗ್ಗೆಯೂ ಸಮೀಕ್ಷೆ ಅಂದಾಜು ಮಾಡಿದೆ.
ಫೆ.10ರಿಂದ ಮಾ.7ರ ನಡುವೆ 403 ವಿಧಾನಸಭೆ ಕ್ಷೇತ್ರಗಳ ಬಲದ ಉತ್ತರ ಪ್ರದೇಶದಲ್ಲಿ ಏಳು ಹಂತಗಳಲ್ಲಿ ಚುನಾವಣೆ ನಡೆದಿತ್ತು. 60 ಸದಸ್ಯ ಬಲದ ಮಣಿಪುರದಲ್ಲಿ ಎರಡು ಹಂತ, 117 ಸದಸ್ಯ ಬಲದ ಪಂಜಾಬ್, 70 ಸದಸ್ಯ ಬಲದ ಉತ್ತರಾಖಂಡ ಮತ್ತು 40 ಕ್ಷೇತ್ರಗಳ ಗೋವಾದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆದಿತ್ತು. ಎಲ್ಲ ಐದು ರಾಜ್ಯಗಳ ಚುನಾವಣೆ ಫಲಿತಾಂಶ ಮಾರ್ಚ್ 10ರಂದು ಹೊರಬೀಳಲಿದೆ. ಈ ಪೈಕಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹೊಂದಿತ್ತು.ಯುಪಿಯಲ್ಲಿ ಯೋಗಿ ಕಮಾಲ್ !
ಇಂಡಿಯಾ ಟುಡೇ ಮತ್ತು ಎಕ್ಸಿಸ್ ಮೈ ಇಂಡಿಯಾ ಜಂಟಿಯಾಗಿ ನಡೆಸಿದ ಸಮೀಕ್ಷೆಯಲ್ಲಿ ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮತ್ತೆ ಪೂರ್ಣ ಬಹುಮತ ಪಡೆಯಲಿದ್ದಾರೆ. 403 ಕ್ಷೇತ್ರಗಳಲ್ಲಿ 288ರಿಂದ 326ರ ವರೆಗೆ ಬಿಜೆಪಿ ಸದಸ್ಯರು ಗೆಲ್ಲುವ ಸಾಧ್ಯತೆ ಇದೆಯೆಂದು ಸಮೀಕ್ಷೆಯಲ್ಲಿ ಭವಿಷ್ಯ ನುಡಿದಿದೆ. ಅಂದಾಜು 307 ಸ್ಥಾನಗಳು ಬಿಜೆಪಿಗೆ ಬರಲಿದೆ ಎಂದು ಹೇಳಲಾಗಿದೆ. ಇದೇ ವೇಳೆ, ಸಮಾಜವಾದಿ ಪಾರ್ಟಿ ಈ ಹಿಂದಿಗಿಂತ ಉತ್ತಮ ಸಾಧನೆ ಮಾಡಲಿದ್ದು, 86ರಿಂದ 100 ಸ್ಥಾನಗಳನ್ನು ಪಡೆಯುವುದಾಗಿ ಹೇಳಿದೆ. ಉಳಿದಂತೆ ಬಿಎಸ್ಪಿ 6, ಕಾಂಗ್ರೆಸ್ 2, ಇತರರು 3 ಸ್ಥಾನಗಳನ್ನು ಪಡೆಯಲಿದ್ದಾರೆ.ಸಿ ವೋಟರ್ ಸಮೀಕ್ಷೆಯಲ್ಲಿ ಬಿಜೆಪಿಗೆ ಕಡಿಮೆ
ಇದೇ ವೇಳೆ, ಸಿ ವೋಟರ್ ತಂಡ ನಡೆಸಿರುವ ಸಮೀಕ್ಷೆಯಲ್ಲಿ ಬಿಜೆಪಿಗೆ ಉತ್ತರ ಪ್ರದೇಶದಲ್ಲಿ ಹಿಂದಿಗಿಂತ ತುಂಬ ಕಡಿಮೆ ಸ್ಥಾನಗಳನ್ನು ಪಡೆಯುವುದಾಗಿ ಹೇಳಲಾಗಿದೆ. 228ರಿಂದ 244 ಸ್ಥಾನಗಳನ್ನಷ್ಟೇ ಬಿಜೆಪಿ ಪಡೆಯಲಿದ್ದರೆ, ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಾರ್ಟಿ 132ರಿಂದ 142 ಸ್ಥಾನಗಳನ್ನು ಗೆಲ್ಲುವುದಾಗಿ ಹೇಳಿದೆ. 13ರಿಂದ 21 ಸ್ಥಾನ ಬಿಎಸ್ಪಿಗೆ, 4-8 ಕಾಂಗ್ರೆಸ್, ಇತರರು 6 ಸ್ಥಾನ ಪಡೆಯಲಿದ್ದಾರೆ. ಸಿವೋಟರ್ ಸಮೀಕ್ಷೆಯಲ್ಲಿ ಮಣಿಪುರದಲ್ಲಿ ಬಿಜೆಪಿ 23ರಿಂದ 27 ಸ್ಥಾನ ಪಡೆಯಲಿದೆ. 12ರಿಂದ 16 ಕಾಂಗ್ರೆಸ್, 10-14 ಎನ್ ಪಿಪಿ, 3ರಿಂದ 7 ಎನ್ ಪಿಎಫ್ ಪಡೆಯಲಿದೆ. ಗೋವಾದಲ್ಲಿ 13ರಿಂದ 17 ಬಿಜೆಪಿ, 12ರಿಂದ 16 ಕಾಂಗ್ರೆಸ್, 5ರಿಂದ 9 ಟಿಎಂಸಿ, ಇತರರು ನಾಲ್ಕು ಸ್ಥಾನ ಪಡೆಯಲಿದ್ದಾರೆ.ಉತ್ತರಾಖಂಡದಲ್ಲಿ ಮತ್ತೆ ಬಿಜೆಪಿಗೆ ಮಣೆ ?
ಇದೇ ವೇಳೆ, ಇಂಡಿಯಾ ಟುಡೇ ಸಮೀಕ್ಷೆ ಮಣಿಪುರದಲ್ಲೂ ಬಿಜೆಪಿ ಬಹುಮತ ಪಡೆಯುವುದಾಗಿ ಹೇಳಿದೆ. 33ರಿಂದ 43 ಸೀಟು ಬಿಜೆಪಿಗೆ, 4ರಿಂದ 8 ಕಾಂಗ್ರೆಸ್, ಇತರರು 6 ಸ್ಥಾನ ಪಡೆಯಲಿದ್ದಾರೆ ಎಂದಿದೆ. ಸಿವೋಟರ್ ಸಮೀಕ್ಷೆಯಲ್ಲಿ ಉತ್ತರಾಖಂಡದಲ್ಲಿ ಬಿಜೆಪಿ 26ರಿಂದ 32 ಸ್ಥಾನ ಪಡೆಯಲಿದೆ. 32ರಿಂದ 38 ಸೀಟು ಕಾಂಗ್ರೆಸ್ ಪಡೆಯಲಿದ್ದು, ಅಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುವುದಾಗಿ ಹೇಳಿದೆ. ಇದೇ ವೇಳೆ, ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಹುತೇಕ ನಿಚ್ಚಳ ಭವಿಷ್ಯ ನುಡಿದಿದ್ದ ಚಾಣಕ್ಯ ತಂಡವು ಉತ್ತರಾಖಂಡದಲ್ಲಿ ಬಿಜೆಪಿ 43, ಕಾಂಗ್ರೆಸ್ 24 ಸ್ಥಾನ ಪಡೆಯುವುದಾಗಿ ಹೇಳಿದೆ. ಟೈಮ್ಸ್ ನೌ ಬಿಜೆಪಿಗೆ 37 ಸ್ಥಾನ ಕೊಟ್ಟಿದ್ದರೆ, ಕಾಂಗ್ರೆಸ್ 31 ಸ್ಥಾನ ಪಡೆಯಲಿದೆ ಎಂದು ಹೇಳಿದೆ.ಪಂಜಾಬ್ ನಲ್ಲಿ ಆಪ್ ಅಧಿಕಾರ ಸಾಧ್ಯತೆ
ಸಿವೋಟರ್ ಸಮೀಕ್ಷೆ ಪ್ರಕಾರ, ಕಾಂಗ್ರೆಸ್ ಅಧಿಕಾರದಲ್ಲಿದ್ದ ಪಂಜಾಬ್ ನಲ್ಲಿ ಆ ಪಕ್ಷವು 22ರಿಂದ 28 ಸ್ಥಾನ ಪಡೆಯುವುದಾಗಿ ಹೇಳಿದೆ. 7ರಿಂದ 13 ಬಿಜೆಪಿ, 51ರಿಂದ 61 ಸ್ಥಾನಗಳನ್ನು ಆಪ್ ಗೆಲ್ಲುವುದಾಗಿ ಹೇಳಿದೆ. 20ರಿಂದ 16 ಅಕಾಲಿ ದಳ ಗೆಲ್ಲಲಿದೆ. ಚಾಣಕ್ಯ ತಂಡವು ಪಂಜಾಬ್ ನಲ್ಲಿ ಆಪ್ ಪಕ್ಷವು ಭರ್ತಿ ನೂರು ಸ್ಥಾನಗಳನ್ನು ಗೆಲ್ಲುವುದಾಗಿ ಭವಿಷ್ಯ ಹೇಳಿದೆ. ಕಾಂಗ್ರೆಸ್ 10, ಆರು ಅಕಾಲಿ ದಳ ಗೆಲ್ಲುವುದಾಗಿ ಹೇಳಿದೆ. ಟೈಮ್ಸ್ ನೌ- ವೀಟೋ ತಂಡವು, ಆಪ್ ಪಕ್ಷಕ್ಕೆ 70 ಸ್ಥಾನಗಳನ್ನು ನೀಡಿದ್ದರೆ, 22 ಕಾಂಗ್ರೆಸ್, 15 ಅಕಾಲಿದಳ, 5 ಬಿಜೆಪಿ ಗೆಲ್ಲುವುದಾಗಿ ಹೇಳಿದೆ. ಜನ್ ಕಿ ಬಾತ್ ತಂಡವು 18-31 ಕಾಂಗ್ರೆಸ್, 60-84 ಆಪ್, 12-19 ಅಕಾಲಿದಳ, 3-7 ಬಿಜೆಪಿ ಗೆಲ್ಲುವ ಭವಿಷ್ಯ ನುಡಿದಿದೆ.
ಗೋವಾದಲ್ಲಿ ಇಂಡಿಯಾ ಟುಡೇ ಪ್ರಕಾರ, ಅತಂತ್ರ ಫಲಿತಾಂಶ ಬರಲಿದೆ. ಆಡಳಿತಾರೂಢ ಕಾಂಗ್ರೆಸ್ ಮತ್ತು ಇತರರು 15ರಿಂದ 20, ಬಿಜೆಪಿ 14ರಿಂದ 18 ಸ್ಥಾನ ಗೆಲ್ಲುವ ಭವಿಷ್ಯ ಹೇಳಿದೆ. ಟಿಎಂಸಿ ನಾಲ್ಕು ಸ್ಥಾನ ಪಡೆಯುವುದಾಗಿ ಹೇಳಿದೆ. ಇದೇ ವೇಳೆ, ಗೋವಾ ಸಿಎಂ ಪ್ರಮೋದ್ ಸಾವಂತ್, ರಾಜ್ಯದಲ್ಲಿ ಮತ್ತೆ ಬಿಜೆಪಿಯೇ ಅಧಿಕಾರ ನಡೆಸಲಿದೆ, ಬಹುಮತ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಿ ವೋಟರ್ ಪ್ರಕಾರ, ಗೋವಾದಲ್ಲಿ 13ರಿಂದ 17 ಬಿಜೆಪಿ, 12ರಿಂದ 16 ಕಾಂಗ್ರೆಸ್, 5ರಿಂದ 9 ಟಿಎಂಸಿ, ಇತರರು ನಾಲ್ಕು ಸ್ಥಾನ ಪಡೆಯಲಿದ್ದಾರೆ.
ಚುನಾವಣೆ ನಡೆದಿರುವ ಪಂಚ ರಾಜ್ಯಗಳಲ್ಲಿ ನಾಲ್ಕು ಕಡೆ ಬಿಜೆಪಿ ಅಧಿಕಾರದಲ್ಲಿತ್ತು. ಪಂಜಾಬ್ ನಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಸಮೀಕ್ಷೆಯಲ್ಲಿ ಬಿಜೆಪಿ ಗೋವಾ ಕಳಕೊಂಡರೆ, ಇತರ ಮೂರು ಕಡೆ ಬಹುಮತ ಗಳಿಸುವ ಸಾಧ್ಯತೆ ಕಂಡುಬಂದಿದೆ. ಪಂಜಾಬಲ್ಲಿ ಕಾಂಗ್ರೆಸ್ ಅಧಿಕಾರ ಕಳಕೊಳ್ಳುವುದು ನಿಶ್ಚಿತವಾಗಿದೆ.
uttar pradesh, which has a strength of 403 assembly constituencies between feb 10 and m7, went to polls in seven phases. in 60-member manipur, two phases, 117-member punjab, 70-member uttarakhand and 40-member goa went to polls in the same phase. the election results of all the five states will be out on march 10. the bjp had power in four of these states.yogi kamal in up!
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm