ಚೀನಾದ ಜಿನ್ ಪಿಂಗ್ ಕೆಳಕ್ಕಿಳಿದರೆ, "ಇನ್ನಿಬ್ಬರು" ಕೂಡ ಅಧಿಕಾರ ಕಳಕೊಳ್ಳಬಹುದು ; ಸುಬ್ರಹ್ಮಣ್ಯ ಸ್ವಾಮಿ ಟ್ವೀಟ್ ತಿವಿತ 

16-05-22 11:25 am       HK Desk News   ದೇಶ - ವಿದೇಶ

ಕೋವಿಡ್‌-19 ಸಾಂಕ್ರಾಮಿಕ ರೋಗವನ್ನು ಸೂಕ್ತವಾಗಿ ನಿರ್ವಹಿಸದ ಕಾರಣಕ್ಕೆ ಚೀನಾ ಅಧ್ಯಕ್ಷ ಕ್ಸಿ‌ ಜಿನ್‌ಪಿಂಗ್‌ ಅಧಿಕಾರದಿಂದ ಕೆಳಗಿಳಿಯಲಿದ್ದಾರೆ ಎನ್ನುವ ರೀತಿ ಚೀನಾದ ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿಗಳು ಹರಿದಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್‌ ಸ್ವಾಮಿ, ಅದನ್ನು ಭಾರತಕ್ಕೆ ಅನ್ವಯಿಸಿ ಪ್ರತಿಕ್ರಿಯಿಸಿದ್ದಾರೆ. 

ನವದೆಹಲಿ, ಮೇ 16: ಕೋವಿಡ್‌-19 ಸಾಂಕ್ರಾಮಿಕ ರೋಗವನ್ನು ಸೂಕ್ತವಾಗಿ ನಿರ್ವಹಿಸದ ಕಾರಣಕ್ಕೆ ಚೀನಾ ಅಧ್ಯಕ್ಷ ಕ್ಸಿ‌ ಜಿನ್‌ಪಿಂಗ್‌ ಅಧಿಕಾರದಿಂದ ಕೆಳಗಿಳಿಯಲಿದ್ದಾರೆ ಎನ್ನುವ ರೀತಿ ಚೀನಾದ ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿಗಳು ಹರಿದಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್‌ ಸ್ವಾಮಿ, ಅದನ್ನು ಭಾರತಕ್ಕೆ ಅನ್ವಯಿಸಿ ಪ್ರತಿಕ್ರಿಯಿಸಿದ್ದಾರೆ. 

ವದಂತಿ ಕುರಿತಾದ 'ದಿ ಎಕನಾಮಿಕ್‌ ಟೈಮ್ಸ್‌‌' ವರದಿಯನ್ನು ಉಲ್ಲೇಖಿಸಿರುವ ಸುಬ್ರಮಣಿಯನ್‌ ಸ್ವಾಮಿ, 'ಹಾಗೊಂದು ವೇಳೆ ಸಂಭವಿಸಿದಲ್ಲಿ ಅಲ್ಲಿನ ಒಬ್ಬರು ಕೆಳಗಿಳಿಯಲಿದ್ದಾರೆ ಮತ್ತು ಇನ್ನಿಬ್ಬರು ಕೂಡ ಅದೇ ಹಾದಿ ಹಿಡಿಯಲಿದ್ದಾರೆ' ಎಂದು ಟ್ವೀಟ್‌ ಮಾಡಿದ್ದಾರೆ.

Pm Modi Tells States To Prepare Heat Action Plans Amid Rising Temperatures  | Mint

ಸುಬ್ರಮಣಿಯನ್‌ ಸ್ವಾಮಿ ಉಲ್ಲೇಖಿಸಿರುವ ಇನ್ನಿಬ್ಬರು ಅನ್ನುವುದು ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಇರಬಹುದು ಎಂದು ಶಂಕಿಸಿ ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ. ಸ್ವಾಮಿ ಟ್ವೀಟ್ ನಲ್ಲಿ ಯಾರೆಂದು ಸುಳಿವು ನೀಡಿರದಿದ್ದರೂ, ಇತ್ತೀಚಿನ ದಿನಗಳಲ್ಲಿ ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಅವರನ್ನು ಸುಬ್ರಮಣಿಯನ್‌ ಸ್ವಾಮಿ ಟೀಕಿಸುತ್ತಾ ಬಂದಿದ್ದರಿಂದ ಅದೇ ರೀತಿಯ ಅರ್ಥ ಬರುವಂತಾಗಿದೆ.

Nirmala Sitharaman - Wikipedia

ಇತ್ತೀಚೆಗೆ ಹಣದುಬ್ಬರವು ಬಡವರಿಗಿಂತ ಶ್ರೀಮಂತರನ್ನೇ ಹೆಚ್ಚು ಬಾಧಿಸುತ್ತಿದೆ ಎಂಬ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಹೇಳಿಕೆಯನ್ನು 'ಬ್ರೆಡ್‌ ಕೊಳ್ಳಲು ಸಾಧ್ಯವಾಗದಿದ್ದರೆ ಕೇಕ್‌ ತಿನ್ನಲಿ ಬಿಡಿ' ಎಂಬ ಫ್ರೆಂಚ್‌ ಆಡು ಮಾತೊಂದನ್ನು ಉಲ್ಲೇಖಿಸಿ ಸುಬ್ರಹ್ಮಣ್ಯ ಸ್ವಾಮಿ ಚಾಟಿ ಬೀಸಿದ್ದರು.

ಚೀನಾದ ಜಿನ್‌ಪಿಂಗ್‌ ಅಧಿಕಾರದಿಂದ ಕೆಳಗಿಳಿಯುವ ಕುರಿತು ಸಾಮಾಜಿಕ ತಾಣಗಳಲ್ಲಿ ವದಂತಿ ಹರಡುವ ಮುನ್ನ ಕೆನಡಿಯನ್‌ ಮೂಲದ ಬ್ಲಾಗರ್‌ ಒಬ್ಬರ ವಿಡಿಯೊ ವ್ಯಾಪಕವಾಗಿ ವೈರಲ್ ಆಗಿತ್ತು. ಚೀನಾದ ಕಮ್ಯುನಿಸ್ಟ್‌ ಪಕ್ಷದ ಮುಖಂಡರು ನಡೆಸಿದ ಉನ್ನತ ಸಭೆಯ ಬಳಿಕ ಕ್ಸಿ ಜಿನ್‌ಪಿಂಗ್‌ ಅಧಿಕಾರದಿಂದ ಕೆಳಗಿಳಿಯುತ್ತಾರೆಂಬ ವದಂತಿ ದಟ್ಟವಾಗಿದೆ.

Subramanian Swamy, quoting a report on Chinese social media, said that President Xi Jin Ping will step down because he did not properly handle the Covid-19 pandemic.