ಬ್ರೇಕಿಂಗ್ ನ್ಯೂಸ್
20-05-21 03:03 pm Mangalore Correspondent ನ್ಯೂಸ್ View
ಮಂಗಳೂರು, ಮೇ 20: ಚಂಡಮಾರುತದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲೋಕೋಪಯೋಗಿ, ಪಂಚಾಯತ್ ರಾಜ್ ಮತ್ತು ಮೀನುಗಾರಿಕೆ ಇಲಾಖೆಯ ರಸ್ತೆಗಳು ಕೊಚ್ಚಿ ಹೋಗಿದ್ದು ಸುಮಾರು 126 ಕೋಟಿ ರೂಪಾಯಿ ನಷ್ಟವಾಗಿದೆ. ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ರಸ್ತೆ ಸರಿಪಡಿಸಲು ಹಣ ಮಂಜೂರು ಮಾಡುವಂತೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.
ಮಳೆಗಾಲದ ಆರಂಭದಲ್ಲಿ ಚಂಡಮಾರುತ ಸಾಮಾನ್ಯ. ಪ್ರತಿವರ್ಷ ಚಂಡಮಾರುತದ ಬಳಿಕ ಅದೇ ಬಲದಿಂದ ಮಳೆ ಬಿರುಸು ಪಡೆದು ಆನಂತರ ಮುಂಗಾರು ಆವರಿಸಿಕೊಳ್ಳುತ್ತದೆ. ಆದರೆ, ಈ ಬಾರಿ ಚಂಡಮಾರುತದ ತೀವ್ರತೆ ಹೆಚ್ಚಿದ್ದರಿಂದ ಸಮುದ್ರ ತೀರದಲ್ಲಿ ತುಸು ಹೆಚ್ಚೇ ವಿಕೋಪಗಳು ಎದುರಾಗಿದ್ದವು. ಉಳ್ಳಾಲದ ಸೋಮೇಶ್ವರ, ಉಚ್ಚಿಲ, ಪಣಂಬೂರು ಬಳಿಯ ಸಸಿಹಿತ್ಲು , ಸುರತ್ಕಲ್ ಬಳಿ ಸಮುದ್ರ ಕೊರೆತ ಎದುರಾಗಿದ್ದರಿಂದ ಆಭಾಗದ ಮನೆಗಳು ಮತ್ತು ರಸ್ತೆಗಳಿಗೆ ಹಾನಿಯಾಗಿದ್ದವು. ಆದರೆ, ಈ ರೀತಿಯ ಹಾನಿ ಆಗಿದ್ದು ಕೆಲವು ಕಡೆ ಮಾತ್ರ. ಅಲ್ಲದೆ, ಅದು ಎರಡು ದಿನಕ್ಕೆ ನಿಂತು ಹೋಗಿದೆ.
ಕಳೆದ ಬಾರಿ ಕಾಂಗ್ರೆಸ್ ಸರಕಾರ ಇದ್ದಾಗ ಸಮುದ್ರ ಕೊರೆತ ತಡೆ ಕಾಮಗಾರಿಗಾಗಿಯೇ 250 ಕೋಟಿ ಸುರಿದ ಬಗ್ಗೆ ಲೆಕ್ಕ ನೀಡಲಾಗಿತ್ತು. ಹಾಗೆಂದು, ಈ ಕಾಮಗಾರಿಯಿಂದ ಯಾವುದೇ ಕಡೆ ಕಡಲ್ಕೊರೆತಕ್ಕೆ ಶಾಶ್ವತ ತಡೆ ಬಿದ್ದಿದ್ದು ಕಂಡಿದ್ದಿಲ್ಲ. ಉಳ್ಳಾಲದಲ್ಲಿ ಫ್ರಾನ್ಸ್ ತಂತ್ರಜ್ಞಾನ ಎಂದು ಹೇಳಿ ಪಾಲಿಥೀನ್ ಚೀಲದಲ್ಲಿ ಮರಳು ತುಂಬಿ ಕಡಲಿಗೇ ಸುರಿದು ಹಣ ಬಾಚಲಾಗಿದೆ. ಈ ಭಾಗದ ಅಧಿಕಾರಿ, ಕಂಟ್ರಾಕ್ಟರ್, ರಾಜಕಾರಣಿಗಳೆಲ್ಲ ಈ ಹಣವನ್ನು ತಿಂದು ತೇಗಿದ್ದೇ ಸಾಧನೆಯಾಗಿತ್ತು. ಬಂದರು ಇಲಾಖೆಯಡಿ ಬರುವ ಈ ರೀತಿಯ ಅನುದಾನವನ್ನು ತಿನ್ನುವುದಕ್ಕಾಗಿಯೇ ಪ್ರತಿ ಬಾರಿ ಕಡಲ್ಕೊರೆತ ಎದುರಾದ ವೇಳೆ ಸಚಿವರು, ಅಧಿಕಾರಸ್ಥರು ಹೋಗಿ ತೀರದಲ್ಲಿ ನಿಂತು ಪೋಸು ಕೊಡುತ್ತಾರೆ. ಮೊನ್ನೆ ಉಳ್ಳಾಲಕ್ಕೆ ಬಂದಿದ್ದ ಈ ಬಾರಿಯ ಹೊಸ ಬಂದರು ಸಚಿವ ಎಸ್. ಅಂಗಾರ ಮಾತ್ರ ಜನರ ಎದುರಲ್ಲಿ ನಿಂತು ಇದೇ ರೀತಿಯ ನೋವು ಹೇಳಿಕೊಂಡಿದ್ದರು. ನಾವು ಪ್ರತಿ ಬಾರಿ ಪೋಸು ಕೊಡಲು ಬರುತ್ತೇವೋ ಎನ್ನುವಂತೆ ನಿಮಗನಿಸಬಹುದು. ನಿಮ್ಮ ನೋವು ನನಗೆ ಅರ್ಥ ಆಗುತ್ತದೆ ಎಂದಿದ್ದರು ಅಂಗಾರ. ಈ ಭಾಗದ ಬಂದರು ಇಲಾಖೆಯಲ್ಲಿರುವ ತಿಮಿಂಗಿಲಗಳ ಬಗ್ಗೆ ಗೊತ್ತಿದ್ದೇ ಈ ಮಾತು ಹೇಳಿದ್ದಿರಬೇಕು. ಸ್ವಂತಕ್ಕೆ ಯೋಚಿಸದ ವ್ಯಕ್ತಿಯಿಂದ ಮಾತ್ರ ಈ ರೀತಿಯ ಅಣಿಮುತ್ತು ಬರಲು ಸಾಧ್ಯ ಬಿಡಿ.
ಆದರೆ, ದ.ಕ. ಜಿಲ್ಲಾಡಳಿತ ಈ ಬಾರಿ ಒಂದೆರಡು ದಿನ ಸುರಿದು ಹೋದ ಮೊದಲ ಮಳೆಗೇ ಲೋಕೋಪಯೋಗಿ ಮತ್ತು ಪಂಚಾಯತ್ ರಾಜ್ ರಸ್ತೆಗಳು ಹಾನಿಯಾಗಿದ್ದನ್ನು ಹೇಳಿಕೊಂಡಿದ್ದು ದೊಡ್ಡ ಪ್ರಶ್ನೆ ಮೂಡುವಂತೆ ಮಾಡಿದೆ. ಲೋಕೋಪಯೋಗಿ ಇಲಾಖೆಯಿಂದ 48 ಕೋಟಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ರೂ. 18 ಕೋಟಿ ನಷ್ಟ ಆಗಿರುವುದನ್ನು ಹೇಳಲಾಗಿದೆ. ಮೀನುಗಾರಿಕೆ ಇಲಾಖೆ ವ್ಯಾಪ್ತಿಯ ಹಾನಿಯಾದ ರಸ್ತೆಗಳಿಗಾಗಿ 30 ಕೋಟಿ, ಕಡಲ್ಕೊರೆತದಿಂದ 30 ಕೋಟಿಯ ಹಾನಿ ಬಗ್ಗೆ ಲೆಕ್ಕ ನೀಡಲಾಗಿದೆ. ಇದಕ್ಕಾಗಿ ತಕ್ಷಣಕ್ಕೆ ನೂರು ಕೋಟಿ ನೀಡುವಂತೆ ಉಸ್ತುವಾರಿ ಸಚಿವರ ಮೂಲಕ ಸಿಎಂ ಬಳಿ ಕೇಳಿಕೊಳ್ಳಲಾಗಿದೆ.
ಮೊದಲ ಮಳೆಗೇ ಹೀಗಾದರೆ ಮುಂದೆ ಬರುವ ನಾಲ್ಕು ತಿಂಗಳ ಮಳೆಗಾಲದಲ್ಲಿ ಯಾವ ರೀತಿಯ ಮಳೆಹಾನಿಯ ಲೆಕ್ಕ ಇರಬಹುದು. ಹೀಗಾಗಿ, ಈ ಬಾರಿ ಒಂದು ಜಿಲ್ಲೆಯ ಮಳೆಹಾನಿಯ ಬಜೆಟ್ಟೇ ಸಾವಿರ ಕೋಟಿ ದಾಟಬಹುದೇ ಅನ್ನುವ ಪ್ರಶ್ನೆ ಮೂಡುವಂತಾಗಿದೆ. ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಂಭಾವಿತರು ಮತ್ತು ಅತ್ಯಂತ ಸರಳ ಜೀವಿಯೆಂದು ಹೆಸರು ಮಾಡಿದವರು. ಮೊದಲೇ ಕೊರೊನಾ ಸಂಕಷ್ಟದಿಂದ ಜನ ಸಾಯುತ್ತಿರುವಾಗ ಲೋಕೋಪಯೋಗಿ ಹೆಸರಲ್ಲಿ ಜನರ ದುಡ್ಡನ್ನು ಪೋಲು ಮಾಡದೆ ಅಗತ್ಯಕ್ಕೆ ಮಾತ್ರ ಬಳಸಿಕೊಳ್ಳುವಂತೆ ಸಾಮಾನ್ಯ ಜನರ ನೆಲೆಯಲ್ಲಿ ಆಗ್ರಹ ಮಾಡಬೇಕಾಗುತ್ತದೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ಕೆಲಸ ಇಲ್ಲದೆ ಹೈರಾಣಾಗಿರುವ ವಿವಿಧ ವರ್ಗದ ಮಂದಿಗೆ ಹಣ ಇಲ್ಲವೆಂದು ರಾಜ್ಯ ಸರಕಾರ ಜುಜುಬಿ ಪರಿಹಾರ ನೀಡಿರುವ ಸಂದರ್ಭದಲ್ಲಿ ಮಳೆಹಾನಿ ಹೆಸರಲ್ಲಿ ಸ್ಥಳೀಯ ರಾಜಕಾರಣಿಗಳು, ಕಂಟ್ರಾಕ್ಟುದಾರರು ಸೇರಿ ಜನರ ದುಡ್ಡನ್ನು ಬಾಚಿಕೊಳ್ಳುವ ಈ ಪರಿಯ ದಾಹಕ್ಕೆ ಏನೆನ್ನಬೇಕು. ಅಧಿಕಾರಸ್ಥರ ನೂರು ಕೋಟಿಯ ದಾಹಕ್ಕೆ ಉಸ್ತುವಾರಿ ಸಚಿವರೇ ಕಡಿವಾಣ ಹಾಕಬೇಕಾಗಿದೆ.
ಯಾಕಂದ್ರೆ, ಚಂಡಮಾರುತದಿಂದ ಎದುರಾಗಿದ್ದ ಮಳೆ ಬೇಸಗೆಯಲ್ಲಿ ಬಸವಳಿದಿದ್ದ ಜನರಿಗೆ ಮತ್ತು ಸಸ್ಯಸಂಪತ್ತಿಗೆ ಜೀವಕಳೆ ನೀಡಿದ್ದು ಸತ್ಯ. ಗ್ರಾಮಾಂತರ ಪ್ರದೇಶ ಸೇರಿ ಜಿಲ್ಲೆಯಾದ್ಯಂತ ಮಳೆಯಾಗಿ ನೀರಿಲ್ಲದೆ ಸಂಕಷ್ಟ ಎದುರಿಸಿದ ಕೃಷಿಕರಿಗೆ, ಅಡಕೆ ತೋಟಗಳ ಮಾಲೀಕರಿಗೆ ಆಸರೆಯಾಗಿದ್ದು ಸತ್ಯ. ಹಾಗೆಂದು, ಚಂಡಮಾರುತದ ಮಳೆಗೆ ಗ್ರಾಮೀಣ ಪ್ರದೇಶದಲ್ಲಿ ಯಾವುದೇ ಕಡೆ ರಸ್ತೆ ಬಿರಿಯುವಷ್ಟು ತೊಂದರೆ ಆಗಿಲ್ಲ. ರಸ್ತೆಗೆ ಹಾನಿಯಾಗಲು ಜುಲೈಯಲ್ಲಿ ಸುರಿಯುವ ರೀತಿ ಕುಂಭದ್ರೋಣ ಮಳೆಯೂ ಆಗಿಲ್ಲ. ಹಾಗಿದ್ದರೂ, ನಮ್ಮ ಅಧಿಕಾರಿಗಳು, ಅಧಿಕಾರಸ್ಥರು ಸೇರಿ ಮೊದಲ ಮಳೆಯ ಹಾನಿಯನ್ನೇ ನೂರ ಇಪ್ಪತ್ತಾರು ಕೋಟಿಗೆ ಏರಿಸಿದ್ದು ಸಂಶಯ ಮೂಡಿಸುತ್ತದೆ. ಕಷ್ಟದ ಸನ್ನಿವೇಶದಲ್ಲಿ ಜನರ ದುಡ್ಡನ್ನೇ ಬಾಚಿ ಮಹಲು ಕಟ್ಟುವ ಹಣದಾಹ ಇದರ ಹಿಂದಿದೆ ಅನ್ನುವುದಕ್ಕೆ ಬೇರೆ ಸಾಕ್ಷಿ ಬೇಕಿಲ್ಲ..
Read: ಕಡಲಬ್ಬರ ; ಸೋಮೇಶ್ವರಕ್ಕೆ ಸಚಿವ ಅಂಗಾರ ಭೇಟಿ, ಸಂತ್ರಸ್ತರ ಸ್ಥಳಾಂತರಕ್ಕೆ ಸಲಹೆ
ದಕ್ಷಿಣ ಕನ್ನಡ ಜಿಲ್ಲೆಯ ಸಚಿವರು-ಶಾಸಕರ ಮುಖ್ಯಮಂತ್ರಿಗಳಾದ ಶ್ರೀ @BSYBJP ರನ್ನು ಭೇಟಿಯಾಗಿ ಚಂಡಮಾರುತದ ನಷ್ಟ, ಕೊರೊನಾ ನಿಯಂತ್ರಣದ ಬಗ್ಗೆ ಮಹತ್ವದ ಚರ್ಚೆ ನಡೆಸಲಾಯಿತು.ಚಂಡಮಾರುತದ ಹಾನಿಗೆ 126 ಕೋಟಿ ಪರಿಹಾರ ಕೇಳಲಾಯಿತು. ಸಚಿವರಾದ @AngaraSBJP ಹಾಗೂ ಶಾಸಕರಾದ @URajeshNaik ಮತ್ತು @s_matandoor ಉಪಸ್ಥಿತರಿದ್ದರು. pic.twitter.com/IuTCN3Oqgh
— Kota Shrinivas Poojari (@KotasBJP) May 20, 2021
District In-charge minister Kota Srinivas Poojary, Fisheries, and Port minister S Angara, and MLAs Sanjeeva Matandoor and Rajesh Naik met chief minister (CM) B S Yediyurappa and submitted a memorandum to sanction Rs 100 crore for Dakshina Kannada (DK) under State Disaster Response Fund on Thursday, May 20.
22-11-24 05:16 pm
HK News Desk
Kodava News, children : ಕೊಡವ ಜನಸಂಖ್ಯೆ ಹೆಚ್ಚಿಸ...
22-11-24 03:53 pm
Dinesh Gundu Rao, Bangalore: ಸರ್ಕಾರಿ ಆಸ್ಪತ್ರೆ...
21-11-24 09:32 pm
Bangalore Fire showroom: ಇಲೆಕ್ಟ್ರಿಕ್ ವಾಹನ ಶೋರ...
20-11-24 09:57 pm
Liquor Bandh, Mangalore: ನ.20ರ ಮದ್ಯ ವ್ಯಾಪಾರ ಬ...
19-11-24 11:05 pm
18-11-24 03:54 pm
HK News Desk
ಶ್ರದ್ಧಾ ವಾಳ್ಕರ್ ಹತ್ಯೆಗೆ ಸೇಡು ತೀರಿಸಲು ಬಿಷ್ಣೋಯಿ...
18-11-24 01:09 pm
ಭಾರತೀಯ ರೈಲ್ವೇ ಹೊಸ ಇತಿಹಾಸದತ್ತ ಹೆಜ್ಜೆ ; ವಿದ್ಯುತ...
14-11-24 11:11 pm
ಅಮೆರಿಕದ ಗುಪ್ತಚರ ಸಂಸ್ಥೆ ಮುಖ್ಯಸ್ಥರಾಗಿ ಹಿಂದು ಮಹಿ...
14-11-24 05:58 pm
ಸುದೀರ್ಘ 18 ವರ್ಷಗಳ ಹಿಂದೆ ಕೊಲೆಯಾದ ಕೊಡಗಿನ ಸಫಿಯಾಗ...
12-11-24 09:00 pm
22-11-24 11:55 am
Mangalore Correspondent
Kundapura Accident, Udupi: ಕುಂಭಾಶಿ ; ಹೆದ್ದಾರಿ...
21-11-24 11:08 pm
Mangalore, Rev Hannibal Cabral, Rachitha Cabr...
21-11-24 09:57 pm
Mangalore, Belthangady, Elephant attack: ಬೆಳ್...
21-11-24 09:22 pm
Saket Rajan encounter, Vikram Gowda e counter...
21-11-24 06:19 pm
22-11-24 04:14 pm
Bangalore Correspondent
Belthangady, Mangalore, Crime : ಟೋರ್ನ್ ಜೀನ್ಸ್...
22-11-24 03:04 pm
Mangalore court, crime, Rape: ಅಜ್ಜಿ ಮನೆಯಲ್ಲಿ...
22-11-24 01:33 pm
Naxal leader Vikram Gowda Encounter, Ground R...
19-11-24 07:40 pm
Hassan Murder, Dowry; ಹಾಸನ ; ಗರ್ಭಿಣಿ ಪತ್ನಿಗೆ...
19-11-24 05:56 pm