ಧರ್ಮಸ್ಥಳ ಶವ ಹೂತ ಪ್ರಕರಣ ; ಎಸ್ಐಟಿ, ಸೌಜನ್ಯಾ ಹೋರಾಟಗಾರರನ್ನೇ ಯಾಮಾರಿಸಿದ್ನಾ ಚಿನ್ನಯ್ಯ? ತಪ್ಪಾದ ಜಾಗ ತೋರಿಸಿ ದಿಕ್ಕು ತಪ್ಪಿಸಿದ ಸಂಶಯ, ಎರಡು ವರ್ಷಗಳ ಹಳೆ ವಿಡಿಯೋದಲ್ಲಿ ಸ್ಫೋಟಕ ಮಾಹಿತಿಗಳು 

21-09-25 10:19 pm       Mangalore Correspondent   ನ್ಯೂಸ್ View

ಧರ್ಮಸ್ಥಳ ಆಸುಪಾಸಿನಲ್ಲಿ ನೂರಾರು ಹೆಣಗಳನ್ನು ಹೂತಿದ್ದೇನೆಂದು ಹೇಳಿ ದೇಶಾದ್ಯಂತ ಸಂಚಲನ ಮೂಡಿಸಿದ್ದ ಚಿನ್ನಯ್ಯ ಎಸ್ಐಟಿ ಅಧಿಕಾರಿಗಳನ್ನು ಮತ್ತು ಸೌಜನ್ಯಾ ಹೋರಾಟಗಾರರನ್ನು ಯಾಮಾರಿಸಿದ್ದನೇ ಎನ್ನುವ ಸಂಶಯ ಬರತೊಡಗಿದೆ.

ಮಂಗಳೂರು, ಸೆ.21 : ಧರ್ಮಸ್ಥಳ ಆಸುಪಾಸಿನಲ್ಲಿ ನೂರಾರು ಹೆಣಗಳನ್ನು ಹೂತಿದ್ದೇನೆಂದು ಹೇಳಿ ದೇಶಾದ್ಯಂತ ಸಂಚಲನ ಮೂಡಿಸಿದ್ದ ಚಿನ್ನಯ್ಯ ಎಸ್ಐಟಿ ಅಧಿಕಾರಿಗಳನ್ನು ಮತ್ತು ಸೌಜನ್ಯಾ ಹೋರಾಟಗಾರರನ್ನು ಯಾಮಾರಿಸಿದ್ದನೇ ಎನ್ನುವ ಸಂಶಯ ಬರತೊಡಗಿದೆ. ಆತ ಹೇಳಿರುವ ಜಾಗದಲ್ಲಿ ಶವ ಹೂತಿದ್ದರ ಸಾಕ್ಷ್ಯ ಸಿಗದಿರುವುದು ಮತ್ತು ತಲೆಬುರುಡೆಯ ಬಗ್ಗೆ ಖಚಿತ ಮಾಹಿತಿ ನೀಡದೇ ಇದ್ದುದು ಒಂದೆಡೆಯಾದರೆ, ತನಿಖೆಯ ಮಧ್ಯದಲ್ಲಿ ಚಿನ್ನಯ್ಯ ಎರಡು ವರ್ಷಗಳ ಹಿಂದೆ ಸೌಜನ್ಯಾ ಹೋರಾಟಗಾರರ ಮುಂದೆ ಹೇಳಿದ್ದ ವಿಡಿಯೋ ಬಿಡುಗಡೆಯಾಗಿರುವುದು ಒಟ್ಟು ಪ್ರಕರಣ ದಿಕ್ಕು ತಪ್ಪಿರುವ ಸಂಶಯ ಮೂಡಿಸಿದೆ.  

ಚಿನ್ನಯ್ಯನನ್ನು ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆಯುವ ಮೊದಲೇ ಹಲವು ಯೂಟ್ಯೂಬ್ ವಾಹಿನಿಗಳಿಗೆ ಸಂದರ್ಶನ ನೀಡಿದ್ದ. ಅಲ್ಲದೆ, ಸೌಜನ್ಯಾ ಹೋರಾಟಗಾರರು ಕೂಡ ಆತನ ಹೇಳಿಕೆಯನ್ನು ಮೊಬೈಲಿನಲ್ಲಿ ಚಿತ್ರೀಕರಿಸಿದ್ದರು. ಎರಡು ವರ್ಷಗಳ ಹಿಂದೆ 2023ರ ಆಗಸ್ಟ್ ತಿಂಗಳಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಭೇಟಿಯಾಗಿ ಮಾತನಾಡಿದ್ದ ವೇಳೆ ರೆಕಾರ್ಡ್ ಆಗಿದ್ದೆನ್ನಲಾದ ವಿಡಿಯೋ ತುಣುಕುಗಳನ್ನು ಈಗ ರಿಲೀಸ್ ಮಾಡಲಾಗಿದೆ. ಮಹೇಶ್ ಶೆಟ್ಟಿ ಮನೆಯಲ್ಲಿ ಚಿನ್ನಯ್ಯ ಮತ್ತು ಆತನ ಪತ್ನಿ ಶವಗಳನ್ನು ಹೂತು ಹಾಕಿರುವ ಬಗ್ಗೆ ಹೇಳುತ್ತಿರುವ ವಿಡಿಯೋ ಇದಾಗಿದ್ದು, ಸೌಜನ್ಯಾ ಕೊಲೆ ಸೇರಿದಂತೆ ಹಲವು ವಿಚಾರಗಳನ್ನು ಹೇಳಿಕೊಂಡಿದ್ದಾನೆ.

Redesigning the Snan Ghat at River Netravati, Dharmasthala

Soujanya case: court slams CBI, police for 'bungling' probe

ಬಾಹುಬಲಿ ಬೆಟ್ಟದ ಮಧ್ಯದ ರಸ್ತೆ ತಿರುವಿನ ಆಚೀಚೆ 8-10 ಶವಗಳನ್ನು ಹೂತು ಹಾಕಿದ್ದಾಗಿಯೂ ಹೇಳಿದ್ದಾನೆ. 14-15ರ ಬಾಲಕಿಯರನ್ನೂ ಹೂತಿದ್ದಾಗಿ ಹೇಳಿಕೆ ನೀಡಿದ್ದಾನೆ. ಅಲ್ಲದೆ, ನೇತ್ರಾವತಿ ಸ್ನಾನಘಟ್ಟದ ಬಳಿ ಶವ ಹೂತು ಹಾಕಿದ್ದಕ್ಕೆ ಲೆಕ್ಕವಿಲ್ಲ. ಹೆಚ್ಚಿನವು ಪೊಲೀಸರು ಇಲ್ಲದೆ, ಪೋಸ್ಟ್ ಮಾರ್ಟಂ ಆಗದೇ ಹೂತು ಹಾಕಿರುವುದು. ತನಗೆ ಕೇವಲ ಶವ ಹೂತು ಹಾಕಲು ಮಾತ್ರ ಕೆಲಸ ಇತ್ತು. ಕೆಲವೊಮ್ಮೆ ತರಕಾರಿಗಳನ್ನು ಮಾರುವ ಗಾಡಿಯಲ್ಲಿ ಶವಗಳನ್ನು ತಂದು ಎರಡು ಅಡಿ ಗುಂಡಿ ತೋಡಿ ಹೂತಿದ್ದಾಗಿಯೂ ಹೇಳಿದ್ದಾನೆ. ಆರು ವಿಡಿಯೋ ತುಣುಕುಗಳನ್ನು ಈಗ ಬಿಡುಗಡೆ ಮಾಡಲಾಗಿದ್ದು, ಅವನ್ನು ಸೌಜನ್ಯಾ ಪರ ಹೋರಾಟಗಾರರ ಯೂಟ್ಯೂಬ್ ನಲ್ಲಿ ಪ್ರಸಾರ ಮಾಡಲಾಗಿದೆ. 

Dharmasthala: చిన్నయ్య.. పెద్ద అబద్దాలకోరు.. | complainant-chinnayya -a-habitual-liar

ಈ ವಿಡಿಯೋದಲ್ಲಿ ಮಹೇಶ್ ಶೆಟ್ಟಿ, ಇದನ್ನು ಕೋರ್ಟಿಗೆ ತಿಳಿಸಿ ತನಿಖೆಗೆ ಆದೇಶ ಮಾಡಿಸಿದರೆ ಶವ ಹೂತು ಹಾಕಿರುವ ಜಾಗ ತೋರಿಸಲು ರೆಡಿ ಇದ್ದೀಯಾ ಎಂದು ಕೇಳುತ್ತಾರೆ. ಹೇಳುವುದಕ್ಕೆ ರೆಡಿ ಇದ್ದೇನೆ, ಶವಗಳನ್ನು ಹೂತು ಹಾಕಿದ್ದು ಬೇಸರ ಇದೆ ಎಂದು ಹೇಳುತ್ತಾನೆ. ಆನಂತರ, ಸೌಜನ್ಯಾ ಪ್ರಕರಣದ ಬಳಿಕ ತನಗೆ ಹಣ ಕೊಟ್ಟು ಇಲ್ಲಿಂದ ಪತ್ನಿ ಸಮೇತ ಹೋಗುವಂತೆ ಸೂಚಿಸಿದ್ದಾಗಿಯೂ ಹೇಳಿದ್ದಾನೆ. ಸೌಜನ್ಯಾ ಪ್ರಕರಣದ ಬಗ್ಗೆ ತನಗೆ ವಿಷಯ ಗೊತ್ತಿದೆ ಅನ್ನುವ ಕಾರಣಕ್ಕೆ ತೆರಳಲು ಹೇಳಿದ್ದರು ಎಂದೂ ಚಿನ್ನಯ್ಯ ಹೇಳಿದ್ದಾನೆ.

Special Investigation Team (SIT) for Textile Sector Renamed "New Cloth  Market Wing" | Textile Magazine, Textile News, Apparel News, Fashion News

ಇಷ್ಟೆಲ್ಲ ಹೇಳಿರುವ ಚಿನ್ನಯ್ಯ, ಆನಂತರ ಸಮಗ್ರ ತನಿಖೆಗೆ ಎಸ್ಐಟಿ ರಚನೆಗೊಂಡು ಶವ ಶೋಧಕ್ಕೆ ಮುಂದಾಗಿ ಮಾರ್ಕ್ ಮಾಡಿದಾಗ ಆ ಜಾಗಗಳನ್ನೇ ತಪ್ಪಾಗಿ ತೋರಿಸಿದ್ದನೇ ಎಂಬ ಸಂಶಯ ಮೂಡುವಂತಾಗಿದೆ. ಯಾಕಂದ್ರೆ, ನೇತ್ರಾವತಿ ಸ್ನಾನಘಟ್ಟದಲ್ಲಿ ಜಾಗ ಮಾರ್ಕ್ ಮಾಡಿದಾಗಲೇ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು, ಪೋಸ್ಟ್ ಮಾರ್ಟಂ ಮಾಡಿರುವ ವೈದ್ಯರು ಕೂಡ ಅಲ್ಲಿ ನೂರಕ್ಕೂ ಹೆಚ್ಚು ಹೆಣಗಳನ್ನು ಹೂತಿದ್ದು ಸತ್ಯ, ಅಲ್ಲಿ ಹುಡುಕಿದರೆ ಶವದ ಅವಶೇಷ ಸಿಕ್ಕರೆ ಅಚ್ಚರಿ ಇಲ್ಲ ಎಂದೇ ಹೇಳಿದ್ದರು. ಆದರೆ ಶವ ಶೋಧ ನಡೆದ ಸಂದರ್ಭದಲ್ಲಿ ನಿರೀಕ್ಷೆ ಮಾಡಿದಷ್ಟು ಸಾಕ್ಷ್ಯ ಸಿಕ್ಕಿರಲಿಲ್ಲ. ಆರನೇ ಪಾಯಿಂಟ್ ಒಂದರಲ್ಲಿ ಮಾತ್ರ ಶವದ ಅವಶೇಷ ಸಿಕ್ಕಿತ್ತು. 

Girish Mattannavar | Public TV - Latest Kannada News, Public TV Kannada  Live, Public TV News

ಆನಂತರ, ತಲೆಬುರುಡೆಯ ಬಗ್ಗೆ ಶೋಧಕ್ಕೆ ಮುಂದಾದ ಅಧಿಕಾರಿಗಳನ್ನೂ ಚಿನ್ನಯ್ಯ ಯಾಮಾರಿಸಲು ನೋಡಿದ್ದಾನೆ. ಇದೇ ಕಾರಣಕ್ಕೆ ದೂರುದಾರನಾಗಿದ್ದ ಚಿನ್ನಯ್ಯ, ತಲೆಬುರುಡೆಯ ಬಗ್ಗೆ ಸರಿಯಾದ ಮಾಹಿತಿ ನೀಡುತ್ತಿಲ್ಲವೆಂದು ಅಧಿಕಾರಿಗಳು ಬಂಧನ ಮಾಡಿದ್ದರು. ಪ್ರಕರಣ ದಾಖಲಿಸಿ ಆತನನ್ನೇ ನಂಬರ್ ವನ್ ಆರೋಪಿಯೆಂದು ಹೆಸರಿಸಿದ್ದರು. ಆದರೆ ಈತನಿಗೆ ನೆರವು ನೀಡಿದ್ದಾರೆಂದು ಹೇಳಲಾಗಿದ್ದ ಗಿರೀಶ್ ಮಟ್ಟಣ್ಣವರ್, ಜಯಂತ್, ವಿಠಲ ಗೌಡರನ್ನು ಅಧಿಕಾರಿಗಳು ತನಿಖೆ ನಡೆಸಿದಾಗ ಮತ್ತಷ್ಟು ವಿಚಾರಗಳು ಹೊರ ಬಂದಿದ್ದವು. ಹೆಚ್ಚಿನ ಪ್ರಮುಖ ಮಾಧ್ಯಮಗಳಲ್ಲಿ ಅಲ್ಲೀ ವರೆಗೂ ಲ್ಯಾಬ್ ನಿಂದ ತರಲಾಗಿತ್ತು ಎಂದೇ ಹೇಳಲಾಗಿದ್ದ ತಲೆಬುರುಡೆಯನ್ನು ಬಂಗ್ಲೆಗುಡ್ಡೆ ಕಾಡಿನಿಂದ ತರಲಾಗಿತ್ತು ಎನ್ನುವುದೂ ಬಹಿರಂಗವಾಗಿತ್ತು. ವಿಠಲ ಗೌಡ ಮತ್ತು ಇತರರು ಈ ಬುರುಡೆಯನ್ನು ತಂದು ಚಿನ್ನಯ್ಯನ ಕೈಗೆ ಒಪ್ಪಿಸಿದ್ದರು ಎನ್ನುವ ಮಾಹಿತಿಯೂ ಬಂದಿತ್ತು. 

Mangalore Today | Latest main news of mangalore, udupi - Page  Dharmasthala-Case-SIT-Reveals-Sowjanya-s-maternal-uncle-First-Retrieved-Skull-from-Forest

ಆಬಳಿಕ ವಿಠಲ ಗೌಡನನ್ನು ವಶಕ್ಕೆ ಪಡೆದು ಸ್ಥಳ ಮಹಜರು ನಡೆಸಲು ಬಂಗ್ಲೆಗುಡ್ಡೆಗೆ ತೆರಳಿದ್ದಾಗ ಮತ್ತಷ್ಟು ಶವದ ಅವಶೇಷಗಳು, ತಲೆಬುರುಡೆಗಳು ಪತ್ತೆಯಾಗಿದ್ದವು. ಹಾಗಾಗಿ, ಎಸ್ಐಟಿ ಅಧಿಕಾರಿಗಳು ಬಂಗ್ಲೆಗುಡ್ಡೆ ಕಾಡಿನಲ್ಲಿ ಮತ್ತೆ ಎರಡು ದಿನ ಶೋಧ ಕಾರ್ಯ ನಡೆಸಿದಾಗ ಬಹಳಷ್ಟು ಶವದ ಅವಶೇಷಗಳು, ಏಳು ತಲೆಬುರುಡೆಗಳು ಪತ್ತೆಯಾಗಿದ್ದವು. ಆದರೆ ಬಂಗ್ಲೆಗುಡ್ಡೆಯಲ್ಲಿ ಶವದ ಅವಶೇಷ ನೆಲದ ಮೇಲ್ಭಾಗದಲ್ಲಿಯೇ ಸಿಕ್ಕಿದ್ದು ಒಟ್ಟು ಪ್ರಕರಣಕ್ಕೆ ಮಹತ್ತರ ತಿರುವು ನೀಡಿತ್ತು.

ಚಿನ್ನಯ್ಯ ಜುಲೈ 3ರಂದು ಧರ್ಮಸ್ಥಳ ಠಾಣೆಗೆ ನೀಡಿದ್ದ ದೂರಿನಲ್ಲಿ ಯುವತಿಯರು, ಮಹಿಳೆಯರು ಸೇರಿದಂತೆ ನೂರಾರು ಶವಗಳನ್ನು ಹೂತು ಹಾಕಿದ್ದೇನೆಂದು ಹೇಳಿದ್ದ. ಅದರಲ್ಲಿ ಕೆಲವು ಅಪ್ರಾಪ್ತ ಬಾಲಕಿಯರೂ ಇದ್ದರೆಂಬುದನ್ನು ಉಲ್ಲೇಖಿಸಿದ್ದು ಒಟ್ಟು ಪ್ರಕರಣ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಲು ಕಾರಣವಾಗಿತ್ತು. ಆದರೆ 15 ಕಡೆ ಮಾರ್ಕ್ ಮಾಡಿ ಅಗೆದರೂ ಶವದ ಸುಳಿವು ಸಿಗದೇ ಇದ್ದಾಗ ನಡುವೆ ನೇರವಾಗಿ ಬಂಗ್ಲೆಗುಡ್ಡೆ ಕಾಡಿಗೆ ಕರೆದೊಯ್ದು ಅಲ್ಲಿನ ಬಂಡೆ ಕಲ್ಲೊಂದರ ಎಡೆಯಲ್ಲಿ ನೆಲದ ಮೇಲ್ಮೈನಲ್ಲಿ ಇದ್ದ ಶವದ ಅವಶೇಷ ತೋರಿಸಿದ್ದ. ಹಲವು ಕಡೆ ಮಾರ್ಕ್ ಹಾಕಿದ್ದ ವ್ಯಕ್ತಿ ಹಠಾತ್ತಾಗಿ ಬಂಗ್ಲೆಗುಡ್ಡೆಗೆ ಕರೆದೊಯ್ದಿದ್ದು ಅಲ್ಲಿ ಹೊಸತಾಗಿ ಶವ ತೋರಿಸಿದ್ದೂ ಸಂಶಯಕ್ಕೆ ಕಾರಣವಾಗಿತ್ತು.

Dharmasthala 'mass burials': SIT exhumes four sites

ಚಿನ್ನಯ್ಯ ನೀಡಿರುವ ಮೂಲ ದೂರಿನಲ್ಲಿ ಬಂಗ್ಲೆಗುಡ್ಡೆ ಕಾಡಿನ ಬಗ್ಗೆ ತಿಳಿಸಿರಲಿಲ್ಲ. ಅಲ್ಲಿ ಮೇಲ್ಭಾಗದಲ್ಲಿಯೇ ಶವಗಳ ಅವಶೇಷ ಇದೆಯೆಂಬ ವಿಚಾರವನ್ನೂ ಹೇಳಿರಲಿಲ್ಲ. ಎಸ್ಐಟಿ ಅಧಿಕಾರಿಗಳ ಪಾಲಿಗೆ ಇದು ಹೊಸ ವಿಚಾರವಾಗಿದ್ದು ಕೆದಕುವುಕ್ಕೂ ಅಲ್ಲ, ಹಾಗೇ ಬಿಟ್ಟು ಬಿಡುವುದಕ್ಕೂ ಆಗದ ಕಗ್ಗಂಟಾಗಿದೆ. ಆತ್ಮಹತ್ಯೆ ಮಾಡಿಕೊಂಡ ಹೆಣಗಳದ್ದೇ ಅಂದುಕೊಂಡರೂ ಅದರ ಬಗ್ಗೆ ಸ್ಥಳೀಯ ಧರ್ಮಸ್ಥಳ ಠಾಣೆಯಲ್ಲಿ ಹೊಸತಾಗಿ ಎಫ್ಐಆರ್ ಮಾಡಿಸಿ ತನಿಖೆ ಮಾಡಿಸಬೇಕಾಗುತ್ತದೆ. ಶವ ಹೂತಿದ್ದೇನೆಂಬ ದೂರಿಗೂ ಇದಕ್ಕೂ ಸಂಬಂಧ ಇಲ್ಲದ ಸಂಗತಿ ಹೌದಾಗಿದ್ದರೂ, ಶೋಧ ಸಂದರ್ಭದಲ್ಲಿ ಸಿಕ್ಕಿರುವುದರಿಂದ ಎಸ್ಐಟಿ ಇದರ ತನಿಖೆ ಮಾಡದ ಹೊರತು ತಾರ್ಕಿಕ ಅಂತ್ಯ ನೀಡುವುದಕ್ಕೆ ಆಗಲ್ಲ.

Powers and functions of the Supreme Court - iPleaders

ಇವೆಲ್ಲದರ ಮಧ್ಯೆ ಎರಡು ವರ್ಷಗಳ ಹಿಂದೆ ಚಿನ್ನಯ್ಯ ತನ್ನ ಪತ್ನಿಯೊಂದಿಗೆ ಬಂದು ಸೌಜನ್ಯಾ ಹೋರಾಟಗಾರರ ಮುಂದೆ ನೂರಾರು ಶವಗಳನ್ನು ಹೂತಿದ್ದೇನೆಂದು ಹೇಳಿಕೆ ನೀಡಿರುವುದು ಬಹಿರಂಗವಾಗಿದೆ. ಇದೇ ರೀತಿಯ ಹೇಳಿಕೆಯನ್ನು ಬೆಳ್ತಂಗಡಿ ಕೋರ್ಟಿನಲ್ಲಿ 164 ಅಡಿ ನೀಡಿದ್ದಾನೆ. ಅಲ್ಲದೆ, ಈತನ ಹೇಳಿಕೆಯನ್ನು ಸುಪ್ರೀಂ ಕೋರ್ಟ್ ವಕೀಲರಿಗೂ ಸಲ್ಲಿಸಿದ್ದಾನೆ. ಆದರೆ ಒಟ್ಟು ಪ್ರಕರಣದಲ್ಲಿ ಈತನ ಹೇಳಿಕೆಗಳು ಮತ್ತು ಆನಂತರದ ವರ್ತನೆಗಳು ಒಂದಕ್ಕೊಂದು ತಾಳೆಯಾಗದ ರೀತಿ ಇದೆ. ಈಗ ನೋಡಿದರೆ ಶವ ಹೂತಿದ್ದು ನಿಜವೋ, ಸುಳ್ಳೋ ಅಥವಾ ಈತ ನೀಡಿರುವ ಹೇಳಿಕೆಯೇ ಸುಳ್ಳೋ ಎನ್ನುವ ಗುಮಾನಿ ಬರುವಂತಾಗಿದೆ. ಬಂಧನ ಆಗೋದಕ್ಕೂ ಮುನ್ನ ಹಲವಾರು ಕಡೆ ಏಕ ಪ್ರಕಾರದಲ್ಲಿ ಶವಗಳನ್ನು ಹೂತಿರುವ ಬಗ್ಗೆ ಹೇಳಿಕೆ ನೀಡಿದ್ದರೂ, ನೇತ್ರಾವತಿ ಆಸುಪಾಸಿನಲ್ಲಿ ಹಲವಾರು ಶವಗಳನ್ನು ಹೂತಿದ್ದು ಸತ್ಯವೆಂದು ಫಾರೆನ್ಸಿಕ್ ವೈದ್ಯರು ಹೇಳಿದ್ದರೂ ಆತ ತೋರಿಸಿದ ಜಾಗದಲ್ಲಿ ಮಾತ್ರ ಏನೊಂದು ಸಾಕ್ಷ್ಯವೂ ಸಿಗದೇ ಇರುವುದು ಒಟ್ಟು ಬೆಳವಣಿಗೆ ಸಹಜ ಎಂದು ತೋರುತ್ತಿಲ್ಲ. ಇಂತಹದ್ದೇ ಪ್ರಶ್ನೆಗಳು ಎಸ್ಐಟಿ ಅಧಿಕಾರಿಗಳಿಗೂ ಬಂದಿದ್ದು, ಚಿನ್ನಯ್ಯ ತಪ್ಪಾದ ಜಾಗ ತೋರಿಸಿ ಯಾಮಾರಿಸಿದ್ನಾ ಎಂಬ ಸಂಶಯ ಬರುವಂತಾಗಿದೆ.

The sensational Dharmasthala case, in which Chinnayya claimed to have buried hundreds of bodies in and around Dharmasthala, has taken a confusing turn. There are growing suspicions that Chinnayya may have misled both the Special Investigation Team (SIT) and the Soujanya activists fighting for justice.