ಬಾಯ್ಕಾಟ್ ಬಗ್ಗೆ ಅರ್ಜುನ್ ಕಪೂರ್ ಹೇಳಿಕೆ; 'ಸಾರ್ವಜನಿಕರಿಗೆ ಬೆದರಿಕೆ ಹಾಕಬೇಡಿ'- ನರೋತ್ತಮ್ ಮಿಶ್ರಾ

18-08-22 01:40 pm       Source: Vijayakarnataka   ಸಿನಿಮಾ

ಬಾಲಿವುಡ್ ನಟ ಅರ್ಜುನ್ ಕಪೂರ್ ಇತ್ತೀಚೆಗೆ ಸಿನಿಮಾಗಳು, ಕಲಾವಿದರ ಬಾಯ್ಕಾಟ್ ಟ್ರೆಂಡ್ ಬಗ್ಗೆ ಮಾತನಾಡಿದ್ದಾರೆ. ಆಮಿರ್ ಖಾನ್ ನಟನೆಯ 'ಲಾಲ್ ಸಿಂಗ್ ಛಡ್ಡಾ', ಅಕ್ಷಯ್ ಕುಮಾರ್.

ಆಮಿರ್ ಖಾನ್ ನಟನೆಯ 'ಲಾಲ್ ಸಿಂಗ್ ಛಡ್ಡಾ', ಅಕ್ಷಯ್ ಕುಮಾರ್ 'ರಕ್ಷಾ ಬಂಧನ್' ಸಿನಿಮಾಗಳನ್ನು ಬಾಯ್ಕಾಟ್ ಮಾಡಬೇಕು ಎಂಬ ಕೂಗು ಕೇಳಿ ಬಂದಿತ್ತು. ಆಲಿಯಾ ಭಟ್, ಕರೀನಾ ಕಪೂರ್ ಮುಂತಾದ ನಟರನ್ನು ಕೆಲ ಕಾರಣಗಳಿಗೆ ಬಾಯ್ಕಾಟ್ ಮಾಡಬೇಕು ಎಂದು ಹೇಳಲಾಗಿತ್ತು. ಈ ಬಗ್ಗೆ ಅರ್ಜುನ್ ಕಪೂರ್ ( Arjun Kapoor ) ಹೇಳಿಕೆ ನೀಡಿ ಸಂಚಲನ ಮೂಡಿಸಿದ್ದಾರೆ. ಈ ಮಾತು ಬಿಜೆಪಿಯ ನರೋತ್ತಮ್ ಮಿಶ್ರಾ ( Narottam Mishra ) ಕಿವಿಗೂ ಬಿದ್ದಿದೆ.

ಹ್ಯಾಶ್‌ಟ್ಯಾಗ್‌ಗೂ, ರಿಯಾಲಿಟಿಗೂ ಸಂಬಂಧ ಇಲ್ಲದಾಗಿದೆ!
"ನಾವು ತುಂಬ ಸಮಯದಿಂದ ಮೌನವಾಗಿದ್ದು ತಪ್ಪು ಮಾಡಿದೆವು. ನಮ್ಮ ಶಿಸ್ತನ್ನು ವೀಕ್‌ನೆಸ್‌ ಆಗಿ ಪರಿಗಣಿಸಲಾಗಿದೆ. ಕೆಲಸ ಮಾತನಾಡಬೇಕು ಎಂದು ನಂಬಿದ್ದೇವೆ, ನಾವು ತುಂಬ ಸಹಿಸಿಕೊಂಡೆವು ಅಂತ ಅನಿಸುತ್ತದೆ, ಅದನ್ನೇ ಜನರು ಈಗ ಬಳಸಿಕೊಂಡಿದ್ದಾರೆ. ನಾವೆಲ್ಲ ಒಟ್ಟಾಗಿ ಪ್ರಾಮಾಣಿಕತೆಯಿಂದ ಏನಾದರೂ ಮಾಡಬೇಕು. ಈಗ ಏನು ಬರೆಯಲಾಗುತ್ತಿದೆಯೋ, ಏನು ಹ್ಯಾಶ್‌ಟ್ಯಾಗ್ ಕ್ರಿಯೇಟ್ ಮಾಡಲಾಗುತ್ತಿದೆಯೋ ಅದು ರಿಯಾಲಿಟಿಯಿಂದ ತುಂಬ ದೂರ ಇದೆ" ಎಂದು ಅರ್ಜುನ್ ಕಪೂರ್ ಹೇಳಿದ್ದಾರೆ.

ಸಿನಿಮಾ ಚೆನ್ನಾಗಿ ಪ್ರದರ್ಶನ ಕಾಣುತ್ತಿಲ್ಲ

Narottam Mishra scolded Arjun Kapoor, who threatened the public, said -  give attention to your acting, narottam mishra gave a befitting reply to arjun  kapoor
"ಚಿತ್ರರಂಗ ಅದರ ಕಾಂತಿಯನ್ನು ಕಳೆದುಕೊಳ್ಳುತ್ತಿದೆ. ನಾವು ಅಂಧರಾಗಿ ಹೋಗಲಿ ಬಿಡಿ ಎನ್ನುವಂತೆ ಇದ್ದೇವೆ. ಥಿಯೇಟರ್ ಓಪನ್ ಆಗುತ್ತಿದ್ದಂತೆ ಸಿನಿಮಾ ಚೆನ್ನಾಗಿ ಪ್ರದರ್ಶನ ಕಾಣುತ್ತದೆ, ಎಲ್ಲವೂ ಒಳ್ಳೆಯದಾಗುತ್ತದೆ ಎಂದುಕೊಂಡಿದ್ದೆವು. ಕಳೆದ ಎರಡು ತಿಂಗಳಿನಿಂದ ಸುಮಾರು ಸಿನಿಮಾಗಳು ಉತ್ತಮ ಪ್ರದರ್ಶನ ಕಂಡಿಲ್ಲ" ಎಂದಿದ್ದಾರೆ ಅರ್ಜುನ್ ಕಪೂರ್ ಅರ್ಜುನ್ ಕಪೂರ್ ನಟನೆಯ 'ಏಕ್ ವಿಲನ್ ರಿಟರ್ನ್ಸ್' ಸಿನಿಮಾ ಚೆನ್ನಾಗಿ ಕಮಾಯಿ ಮಾಡಿರಲಿಲ್ಲ. ಒಟ್ಟೂ 40 ಕೋಟಿ ರೂಪಾಯಿ ಗಳಿಸಿದ್ದ ಈ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿರಲಿಲ್ಲ.

ಬಿಜೆಪಿ ನರೋತ್ತಮ್ ಮಿಶ್ರಾ ಹೇಳಿದ್ದೇನು?

Narottam Mishra is new Health Minister of MP - The Hitavada
ಅರ್ಜುನ್ ಕಪೂರ್ ಅವರ ಮಾತುಗಳನ್ನು ಕೇಳಿಸಿಕೊಂಡ ಬಿಜೆಪಿಯ ನರೋತ್ತಮ್ ಮಿಶ್ರಾ ಅವರು, "ನಟ ಅರ್ಜುನ್ ಕಪೂರ್ ಅವರು ಸಮಾಜಕ್ಕೆ ಧಮ್‌ಕಿ ಹಾಕೋದು ಸರಿಯಲ್ಲ. ಸಾರ್ವಜನಿಕರಿಗೆ ಬೆದರಿಕೆ ಹಾಕುವ ಬದಲು, ನಟನೆ ಬಗ್ಗೆ ಗಮನ ಕೊಡಲಿ. ತಮ್ಮ ಸಿನಿಮಾಗಳಲ್ಲಿ ಹಿಂದೂ ಧರ್ಮವನ್ನು ಗುರಿಯಾಗಿಟ್ಟುಕೊಂಡು ಕೆಲ ಗ್ಯಾಂಗ್ ಸಾರ್ವಜನಿಕರಿಗೆ ಬಾಯ್ಕಾಟ್ ವಿಚಾರವಾಗಿ ಬೆದರಿಕೆಯನ್ನು ಏಕೆ ಹಾಕುತ್ತಾರೆ?" ಎಂದು ಪ್ರಶ್ನೆ ಮಾಡಿದ್ದಾರೆ.

ಅರ್ಜುನ್ ಕಪೂರ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬಂದ ಕಾಮೆಂಟ್ಸ್ ಇಂತಿವೆ

  • ಗಮನ ಸಿಗಬೇಕು ಅಂತ ಬಾಯ್ಕಾಟ್ ಬಗ್ಗೆ ಅರ್ಜುನ್ ಕಪೂರ್ ಮಾತನಾಡಿದ್ದಾರೆ
  • ಅರ್ಜುನ್ ಕಪೂರ್ ಅವರಿಗೆ ಏನೋ ಸಮಸ್ಯೆಯಾಗಿದೆ, ಅದಕ್ಕೆ ಮಾತನಾಡಿದ್ದಾರೆ
  • ಸಾರ್ವಜನಿಕರಿಗೆ ಬಾಯ್ಕಾಟ್ ಮಾಡುವ ಬಗ್ಗೆ ಮಾತನಾಡ್ತೀರಿ, ನೋಡಿಕೊಳ್ತೀವಿ
  • ಅರ್ಜುನ್ ಕಪೂರ್ ನಟನೆ ಬಿಟ್ಟರಂತೆ, ಆಗ ಬಾಯ್ಕಾಟ್ ಮಾಡುವ ಪ್ರಮೇಯ ಬರೋದಿಲ್ಲ
  • ಅರ್ಜುನ್ ಕಪೂರ್ ಅವರಿಗೆ ಕರಿಯರ್ ಇಲ್ಲ, ಹಾಗಾಗಿ ಬಾಯ್ಕಾಟ್ ಅವರಿಗೆ ಯಾವ ಸ ಮಸ್ಯೆಯನ್ನೂ ತರೋದಿಲ್ಲ
  • ಬಾಲಿವುಡ್‌ನವರು ಒಂದಾಗಿ ಪ್ರೇಕ್ಷಕರನ್ನು ಬಾಯ್ಕಾಟ್ ಮಾಡಬೇಕು

Narottam Mishra Reaction On Arjun Kapoor Opinion About Boycott Trend.