ಪವರ್ ಸ್ಟಾರ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಸರ್ಪ್ರೈಸ್ ಗಿಫ್ಟ್; ಒಟಿಟಿಯಲ್ಲಿ ನೋಡಿ ಗಂಧದ ಗುಡಿ!

14-03-23 01:21 pm       Source: news18   ಸಿನಿಮಾ

ಪುನೀತ್ ರಾಜ್​ಕುಮಾರ್ ಹುಟ್ಟುಹಬ್ಬ ಕೆಲವೇ ದಿನಗಳು ಬಾಕಿ ಇದೆ. ಪವರ್ ಸ್ಟಾರ್ ಬರ್ತ್ ಡೇಯನ್ನು ಸಂಭ್ರಮದಿಂದ ಆಚರಿಸಲು ಅಭಿಮಾನಿಗಳು ಕಾಯ್ತಿದ್ದಾರೆ.

ಪುನೀತ್ ರಾಜ್​ಕುಮಾರ್ ಅವರ ಕನಸಾಗಿದ್ದ ಗಂಧದ ಗುಡಿ ಸಿನಿಮಾವನ್ನು ಅಶ್ವಿನಿ ಪುನೀತ್ ರಾಜ್​ಕುಮಾರ್ ಯಶಸ್ವಿಯಾಗಿ ತೆರೆ ಮೇಲೆ ತಂದರು. ಜನರು ಕೂಡ ಅಷ್ಟೇ ಪ್ರೀತಿಯಿಂದ ಅಪ್ಪು ಕೊನೆಯ ಸಿನಿಮಾವನ್ನು ನೋಡಿ ಮೆಚ್ಚಿಕೊಂಡ್ರು. ಕಳೆದ ವರ್ಷ ಅಕ್ಟೋಬರ್ 29ರಂದು ಗಂಧದ ಗುಡಿ ಸಿನಿಮಾ ತೆರೆ ಕಂಡಿತ್ತು. ಕಳೆದ ವರ್ಷ ಅಕ್ಟೋಬರ್  29ಕ್ಕೆ ಪುನೀತ್ ನಿಧನರಾಗಿ 1 ವರ್ಷಗಳೇ ಕಳದು ಹೋಗಿದೆ. ಪುಣ್ಯ ಸ್ಮರಣೆಯ ಅಂಗವಾಗಿ ಗಂಧದ ಗುಡಿ ಸಿನಿಮಾವನ್ನು ರಿಲೀಸ್ ಮಾಡಲಾಯ್ತು.

ಸಿನಿಮಾ ಕೂಡ ಯಶಸ್ವಿ ಪ್ರದರ್ಶನ ಕಂಡಿತು. ಪುನೀತ್ ಕೊನೆಯ ಸಿನಿಮಾ ಎಂದು ಅಭಿಮಾನಿಗಳು ಅಷ್ಟೇ ಅಲ್ಲದೇ ಅನೇಕ ಗಣ್ಯರು, ರಾಜಕಾರಣಿಗಳು ಕೂಡ ಸಿನಿಮಾ ನೋಡಿದ್ರ. ನಾಡು-ನುಡಿಯ ಬಗ್ಗೆ ಪುನೀತ್ ರಾಜ್​ಕುಮಾರ್ ಅವರಿಗೆ ಇದ್ದ ಅಭಿಮಾನವನ್ನು ಕೊಂಡಾಡಿದ್ರು,. ಗಂಧದ ಗುಡಿ ಸಾಕ್ಷ್ಯಚಿತ್ರ ರಿಲೀಸ್ ಆಗಿ ಕೆಲ ತಿಂಗಳುಗಳೇ ಕಳೆದು ಹೋಗಿದೆ. ಇಷ್ಟು ದಿನವಾದ್ರೂ ಅಶ್ವಿನಿ ಪುನೀತ್ ರಾಜ್​ಕುಮಾರ್​ ಅವರು ಒಟಿಟಿಯಲ್ಲಿ ರಿಲೀಸ್ ಮಾಡುವ ಬಗ್ಗೆ ಘೋಷಣೆ ಮಾಡಿರಲಿಲ್ಲ.

 

 ಗಂಧದ ಗುಡಿ ಸಾಕ್ಷ್ಯಚಿತ್ರ ರಿಲೀಸ್ ಆಗಿ ಕೆಲ ತಿಂಗಳುಗಳೇ ಕಳೆದು ಹೋಗಿದೆ. ಇಷ್ಟು ದಿನವಾದ್ರೂ ಅಶ್ವಿನಿ ಪುನೀತ್ ರಾಜ್​ಕುಮಾರ್​ ಅವರು ಒಟಿಟಿಯಲ್ಲಿ ರಿಲೀಸ್ ಮಾಡುವ ಬಗ್ಗೆ ಘೋಷಣೆ ಮಾಡಿರಲಿಲ್ಲ. ಸಿನಿಮಾ ಕೂಡ ಯಶಸ್ವಿ ಪ್ರದರ್ಶನ ಕಂಡಿತು. ಪುನೀತ್ ಕೊನೆಯ ಸಿನಿಮಾ ಎಂದು ಅಭಿಮಾನಿಗಳು ಅಷ್ಟೇ ಅಲ್ಲದೇ ಅನೇಕ ಗಣ್ಯರು, ರಾಜಕಾರಣಿಗಳು ಕೂಡ ಸಿನಿಮಾ ನೋಡಿದ್ರ. ನಾಡು-ನುಡಿಯ ಬಗ್ಗೆ ಪುನೀತ್ ರಾಜ್​ಕುಮಾರ್ ಅವರಿಗೆ ಇದ್ದ ಅಭಿಮಾನವನ್ನು ಕೊಂಡಾಡಿದ್ರು,.

ಯಾವಾಗ ಗಂಧದ ಗುಡಿ ಸಿನಿಮಾ ಒಟಿಟಿಯಲ್ಲಿ ಬರುತ್ತೆ ಎಂದು ಅಭಿಮಾನಿಗಳು ಕಾಯ್ತಿದ್ರು. ಕೊನೆಗೂ ಕಾಲ ಕೂಡಿ ಬಂದಿದ್ದು, ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬದ ದಿನವೇ ಗಂಧದ ಗುಡಿ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಲಿದೆ. ಇಂದು (ಮಾರ್ಚ್ 14) ಅಶ್ವಿನಿ ಪುನೀತ್ ರಾಜ್ಕುಮಾರ್ ಅವರ ಹುಟ್ಟುಹಬ್ಬ ಕೂಡ. ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ತಮ್ಮ ಹುಟ್ಟುಹಬ್ಬದ ದಿನ ಅಪ್ಪು ಗಂಧದ ಗುಡಿ ಸಿನಿಮಾದ ಒಟಿಟಿ ರಿಲೀಸ್ ದಿನಾಂಕವನ್ನು ಘೋಷಿಸಿದ್ದು, ಪಿಆರ್​ಕೆ ಪ್ರೊಡೆಕ್ಷನ್​ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

 ಮಾರ್ಚ್ 17ರಂದು ಅಮೆಜಾನ್ ಪ್ರೈಮ್ ಒಟಿಟಿಯಲ್ಲಿ ಗಂಧದ ಗುಡಿ ರಿಲೀಸ್ ಆಗಲಿದೆ. ನಟ ಪುನೀತ್ ರಾಜ್​ಕುಮಾರ್ ಹುಟ್ಟುಹಬ್ಬದ ದಿನ ಅಭಿಮಾನಿಗಳು ಅಪ್ಪು ಕೊನೆಯ ಸಿನಿಮಾವನ್ನು ನೋಡಿ ಕಣ್ತುಂಬಿಕೊಳ್ಳಬಹುದಾಗಿದೆ.

ಮಾರ್ಚ್ 17ರಂದು ಅಮೆಜಾನ್ ಪ್ರೈಮ್ ಒಟಿಟಿಯಲ್ಲಿ ಗಂಧದ ಗುಡಿ ರಿಲೀಸ್ ಆಗಲಿದೆ. ನಟ ಪುನೀತ್ ರಾಜ್​ಕುಮಾರ್ ಹುಟ್ಟುಹಬ್ಬದ ದಿನ ಅಭಿಮಾನಿಗಳು ಅಪ್ಪು ಕೊನೆಯ ಸಿನಿಮಾವನ್ನು ನೋಡಿ ಕಣ್ತುಂಬಿಕೊಳ್ಳಬಹುದಾಗಿದೆ. ಥಿಯೇಟರ್​ನಲ್ಲಿ ಪುನೀತ್ ಕೊನೆಯ ಸಿನಿಮಾ ಗಂಧದ ಗುಡಿಯನ್ನು ಮಿಸ್ ಮಾಡಿಕೊಂಡವರು ಇದೀಗ ಒಟಿಟಿಯಲ್ಲಿ ನೋಡಿ ಖುಷಿ ಪಡಬಹುದಾಗಿದೆ. ಮಾರ್ಚ್ 17ರಂದು ಪವರ್ ಸ್ಟಾರ್ ಹುಟ್ಟುಹಬ್ಬ ಆಚರಿಸಲು ಅಭಿಮಾನಿಗಳು ಕೂಡ ಕಾಯ್ತಿದ್ದಾರೆ.

Puneeth Rajkumar birthday is on march 17 Gandhad Gudi movie release in ott.