ಬ್ರೇಕಿಂಗ್ ನ್ಯೂಸ್
16-03-23 01:07 pm Source: news18 ಸಿನಿಮಾ
ಡಿವೈನ್ ಸ್ಟಾರ್ ರಿಷಬ್ ಶೆಟ್ರ ಖ್ಯಾತಿ ದೇಶ ವಿದೇಶದಲ್ಲಿ ಮಾತ್ರ ಇತ್ತು. ಈಗ ಇದೇ ಕಾಂತಾರ ರಿಷಬ್ ಶೆಟ್ರ ಖ್ಯಾತಿ ವಿಶ್ವ ಸಂಸ್ಥೆಗೂ ತಲುಪಿದೆ ನೋಡಿ. ತಮ್ಮ ಚಿತ್ರದ ಮೂಲಕ ಕಾಡಂಚಿನ ಜನರ ಸಮಸ್ಯೆಯನ್ನ ಹೇಳಿದ್ದ ಶೆಟ್ರು ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ. ಕಾಂತಾರ ಚಿತ್ರದ ಮೂಲಕ ರಿಷಬ್ ಶೆಟ್ರು ಕಾಡಂಚಿನ ಜನರ ಕಷ್ಟವನ್ನ ಹೇಳಿದ್ದಾರೆ. ಮೊನ್ನೆ ಮೊನ್ನೆ ರಿಷಬ್ ಶೆಟ್ರು ಈ ಸಮಸ್ಯೆಗಳನ್ನ ಅರ್ಥ ಮಾಡಿಕೊಂಡಿದ್ದಾರೆ. ಸಿಎಂ. ಬಸವರಾಜ್ ಬೊಮ್ಮಾಯಿ ಅವರನ್ನ ಭೇಟಿಯಾಗಿ ಕಾಡಂಚಿನ ಸಮಸ್ಯೆಗಳನ್ನ ವಿವರವಾಗಿಯೇ ಹೇಳಿದ್ದಾರೆ.
ಕಾಂತಾರ ಸಿನಿಮಾದ ಖ್ಯಾತಿ ಎಲ್ಲೆಡೆ ಇದ್ದು ಈ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ವಾರ್ಷಿಕ ಸಭೆಯಲ್ಲಿ ರಿಷಬ್ ಶೆಟ್ರು ಭಾಗಿ ಆಗುತ್ತಿದ್ದಾರೆ. ಇಲ್ಲಿ ಕಾಡಂಚಿನ ಸಮಸ್ಯೆಗಳನ್ನ ಕೂಡ ರಿಷಬ್ ಶೆಟ್ರು ಚರ್ಚೆ ಮಾಡಲಿದ್ದಾರೆ ಅನ್ನುವ ಮಾಹಿತಿನೂ ಇದೆ. ಜಿನಿವಾದಲ್ಲಿ ನಡೆಯುತ್ತಿರೋ ವಿಶ್ವಸಂಸ್ಥೆಯ ವಾರ್ಷಿಕ ಸಭೆಯಲ್ಲಿ ರಿಷಬ್ ಶೆಟ್ರು ಕನ್ನಡದಲ್ಲಿಯೇ ಮಾತನಾಡಲಿದ್ದಾರೆ. ಕಾಡಂಚಿನ ಜನರ ಸಮಸ್ಯೆಯನ್ನ ಇಲ್ಲಿ ವಿವರವಾಗಿ ಹೇಳಿದ್ದಾರೆ ಅನ್ನುವ ಸುದ್ದಿನೂ ಇದೆ.
ವಿಶ್ವಸಂಸ್ಥೆಯ ವಾರ್ಷಿಕ ಸಭೆಯಲ್ಲಿ ವಿಶ್ವದ ಹಲವು ದೇಶದ ಪ್ರತಿನಿಧಿಗಳು ಭಾಗಿ ಆಗುತ್ತಿದ್ದಾರೆ. ಈ ನಿಟ್ಟಿನಲ್ಲಿ ರಿಷಬ್ ಶೆಟ್ರು ಕೂಡ ಭಾಗಿ ಆಗುತ್ತಿದ್ದಾರೆ. ಸಿನಿಮಾ ಮೂಲಕ ಪರಿಸರ ಮತ್ತು ಅರಣ್ಯದಂಚಿನಲ್ಲಿರೋ ಜನರ ಸಮಸ್ಯೆಗಳನ್ನೂ ರಿಷಬ್ ತೋರಿದ್ದಾರೆ. ಅದೇ ವಿಷಯವನ್ನ ರಿಷಬ್ ಇಲ್ಲೂ ಮಾತನಾಡಲಿದ್ದಾರೆ ಅನ್ನೋದು ಈಗಿನ ಮಾಹಿತಿ. ಸ್ವಿಜರ್‌ಲ್ಯಾಂಡ್ ಜಿನಿವಾದಲ್ಲಿ ನಡೆಯುತ್ತಿರೋ ವಿಶ್ವ ಸಂಸ್ಥೆಯ ವಾರ್ಷಿಕ ಸಭೆಯಲ್ಲಿ ಕನ್ನಡದ ರಿಷಬ್ ಶೆಟ್ರು ಭಾಗಿ ಆಗುತ್ತಿದ್ದಾರೆ ಎಂದು ಬಿಜೆಪಿ ಹೇಳಿದೆ. ಬಿಜೆಪಿ ಕರ್ನಾಟಕ ಟ್ವಿಟರ್ ಅಕೌಂಟ್ ಪೇಜ್‌ನಲ್ಲಿ ಅಧಿಕೃತವಾಗಿಯೇ ಮೊನ್ನೆ 13 ರಂದು ಈ ವಿಷಯ ತಿಳಿಸಿದೆ.
ಕಾಂತಾರ ಚಿತ್ರದ ನಟ-ನಿರ್ದೇಶಕ ರಿಷಬ್ ಶೆಟ್ರು ಇಲ್ಲಿ ಇನ್ನೂ ಒಂದು ಕೆಲಸ ಮಾಡಲಿದ್ದಾರೆ. ತಮ್ಮ ಕಾಂತಾರ ಚಿತ್ರವನ್ನ ಇಲ್ಲಿ ವಿವಿಧ ದೇಶದ ಪ್ರತಿನಿಧಿಗಳ ಜೊತೆಗೆ ವೀಕ್ಷಿಸಲಿದ್ದಾರೆ. ಅಪ್ಪು ಜನ್ಮ ದಿನ ಮಾರ್ಚ್-17 ರಂದು ಕಾಂತಾರ ಸಿನಿಮಾ ಇಲ್ಲಿ ಪ್ರದರ್ಶನ ಆಗುತ್ತದೆ ಅನ್ನು ಸುದ್ದಿನೂ ಇದೆ.
kannada devine star rishab shetty latest updates kantara special show in america.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm