ಕನ್ನಡ ಸಿನಿಮಾಕ್ಕೆ ಮತ್ತೊಂದು ಹೆಗ್ಗಳಿಕೆ ; ಇಟಾಲಿಯನ್, ಸ್ಪಾನಿಷ್ ಭಾಷೆಗೆ ಡಬ್ ಆಗಲಿದೆ ಕಾಂತಾರ !

19-03-23 03:17 pm       Headline Karnataka Staffer   ಸಿನಿಮಾ

ಭಾರತದಲ್ಲಿ ಭರ್ಜರಿ ಪ್ರದರ್ಶನ ಕಂಡಿದ್ದ ಕಾಂತಾರ ಇದೀಗ ಕೆಲವು ವಿದೇಶಿ ಭಾಷೆಗಳಲ್ಲಿ ರಿಲೀಸ್ ಆಗಲು ಸಜ್ಜಾಗಿದೆ. ರಿಷಬ್​ ಶೆಟ್ಟಿ ನಿರ್ದೇಶನದ ಈ ಚಿತ್ರಕ್ಕೆ ಬೇರೆ ಬೇರೆ ದೇಶಗಳ ಪ್ರೇಕ್ಷಕರಿಂದ ಬೇಡಿಕೆ ಬಂದಿದೆ. ಹಾಗಾಗಿ ಇಟಾಲಿಯನ್​ ಮತ್ತು ಸ್ಪ್ಯಾನಿಶ್​​ ಭಾಷೆಗಳಿಗೆ ಡಬ್​ ಮಾಡಿ ರಿಲೀಸ್ ಮಾಡಲು ಸಿದ್ಧತೆ ನಡೆದಿದೆ. ಈ ವಿಚಾರವನ್ನು ಸ್ವತಃ ಹೊಂಬಾಳೆ ಫಿಲ್ಮ್ಸ್ ತಂಡವೇ ಬಹಿರಂಗ ಪಡಿಸಿದೆ.

ಬೆಂಗಳೂರು, ಮಾ.19: ಭಾರತದಲ್ಲಿ ಭರ್ಜರಿ ಪ್ರದರ್ಶನ ಕಂಡಿದ್ದ ಕಾಂತಾರ ಇದೀಗ ಕೆಲವು ವಿದೇಶಿ ಭಾಷೆಗಳಲ್ಲಿ ರಿಲೀಸ್ ಆಗಲು ಸಜ್ಜಾಗಿದೆ. ರಿಷಬ್​ ಶೆಟ್ಟಿ ನಿರ್ದೇಶನದ ಈ ಚಿತ್ರಕ್ಕೆ ಬೇರೆ ಬೇರೆ ದೇಶಗಳ ಪ್ರೇಕ್ಷಕರಿಂದ ಬೇಡಿಕೆ ಬಂದಿದೆ. ಹಾಗಾಗಿ ಇಟಾಲಿಯನ್​ ಮತ್ತು ಸ್ಪ್ಯಾನಿಶ್​​ ಭಾಷೆಗಳಿಗೆ ಡಬ್​ ಮಾಡಿ ರಿಲೀಸ್ ಮಾಡಲು ಸಿದ್ಧತೆ ನಡೆದಿದೆ. ಈ ವಿಚಾರವನ್ನು ಸ್ವತಃ ಹೊಂಬಾಳೆ ಫಿಲ್ಮ್ಸ್ ತಂಡವೇ ಬಹಿರಂಗ ಪಡಿಸಿದೆ.

ಕಾಂತಾರ ಸಿನಿಮಾವನ್ನು ಮೊದಲು ಕನ್ನಡದಲ್ಲಿ ಮಾತ್ರ ರಿಲೀಸ್ ಮಾಡಲಾಗಿತ್ತು. ಕನ್ನಡ ಪ್ರೇಕ್ಷಕರಿಂದ ಸೂಪರ್ ಹಿಟ್ ಎಂಬ ಹೊಗಳಿಕೆ ಬಳಿಕ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗೆ ಡಬ್​ ಮಾಡಲಾಗಿತ್ತು. ಭಾರತೀಯ ಭಾಷೆಗಳಲ್ಲಿ ಸಿನಿಮಾ ಹೊರಬಂದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದಲ್ಲದೆ ಭರ್ಜರಿ ಕಲೆಕ್ಷನ್ ಕೂಡ​ ಆಗಿತ್ತು. ಒಟಿಟಿ ಪ್ರೇಕ್ಷಕರಿಗಾಗಿ ಇಂಗ್ಲಿಷ್​ ವರ್ಷನ್​ ಕೂಡ ರಿಲೀಸ್​ ಆಗಿತ್ತು. ಈಗ ಕನ್ನಡ ಚಿತ್ರಕ್ಕೆ ಮತ್ತೊಂದು ಹೆಗ್ಗಳಿಕೆ ಮುಡಿಗೇರಿದ್ದು ವಿದೇಶದ ಇಟಾಲಿಯನ್​ ಮತ್ತು ಸ್ಪ್ಯಾನಿಶ್​​ ಭಾಷೆಗಳಿಗೆ ಡಬ್​ ಆಗುತ್ತಿದೆ.

ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಬಹಿರಂಗ ಪಡಿಸಿದೆ. 'ಈ ವಿಷಯ ತಿಳಿಸಲು ನಮಗೆ ತುಂಬಾ ಖುಷಿಯಾಗಿದೆ. ಅಂತಾರಾಷ್ಟ್ರೀಯ ಪ್ರೇಕ್ಷಕರಿಂದ ಬೇಡಿಕೆ ಬಂದಿರುವುದಕ್ಕೆ ಧನ್ಯವಾದಗಳು. ಇಟಾಲಿಯನ್​ ಮತ್ತು ಸ್ಪ್ಯಾನಿಶ್​​ ಭಾಷೆಯಲ್ಲಿ ಕಾಂತಾರ ಚಿತ್ರವನ್ನು ಎಡಿಟ್​ ಮಾಡಲಾಗುತ್ತಿದೆ' ಎಂದು ಇಟಾಲಿಯನ್​ ಭಾಷೆಯಲ್ಲಿ ಹೊಂಬಾಳೆ ಫಿಲ್ಮ್ಸ್​ ಟ್ವೀಟ್​ ಮಾಡಿದೆ. ಹೊಂಬಾಳೆ ಫಿಲ್ಮ್ಸ್ ಈ ಬಗ್ಗೆ ಬಹಿರಂಗ ಪಡಿಸುತ್ತಿದ್ದಂತೆ ಜಪಾನಿ ಭಾಷೆಯಲ್ಲೂ ರಿಲೀಸ್​ ಮಾಡಿ ಎಂದು ನೆಟ್ಟಿಗರು ಕಮೆಂಟ್​ ಮಾಡಿದ್ದಾರೆ.

ಕಾಂತಾರ' ಸಿನಿಮಾದ ಬಳಿಕ ರಿಷಬ್​ ಶೆಟ್ಟಿ ​ಖ್ಯಾತಿ ವಿಶ್ವಮಟ್ಟದಲ್ಲಿ ಹಬ್ಬಿದೆ. ಇತ್ತೀಚೆಗಷ್ಟೆ ರಿಷಬ್ ಶೆಟ್ಟಿ ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡುವ ಮೂಲಕ ಗಮನ ಸೆಳೆದಿದ್ದರು. ಜಿನೀವಾದಲ್ಲೂ ಕಾಂತಾರ ಸಿನಿಮಾ ವಿಶೇಷ ಪ್ರದರ್ಶನ ಮತ್ತು ಸಂವಾದ ಏರ್ಪಡಿಸಲಾಗಿತ್ತು. ಈ ಮೂಲಕ ರಿಷಬ್ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿದ್ದಾರೆ

Sandalwood divine blockbuster Kantara has made the headlines again. Directed by Rishab Shetty, who also played the lead, the movie has Sapthami Gowda as the female lead. The latest update is that the movie is going to release in two more languages very soon. According to the latest announcement from the makers, the film will be released in Italy and Spain in their native languages. The dubbing works are currently underway.