ಯೂಟರ್ನ್ ಹೊಡೆದ ಮುನಿರತ್ನ! ಉರಿಗೌಡ-ನಂಜೇಗೌಡ ಸಿನಿಮಾಗೆ ಬ್ರೇಕ್! ದಿಢೀರ್ ನಿರ್ಧಾರಕ್ಕೆ ಕಾರಣವೇನು?

20-03-23 12:30 pm       Source: news18   ಸಿನಿಮಾ

ರಾಜ್ಯದಲ್ಲಿ ಭಾರೀ ಚರ್ಚೆ ಆಗ್ತಿದ್ದ ಉರಿಗೌಡ-ನಂಜೇಗೌಡ ಸಿನಿಮಾಕ್ಕೆ (Urigowda Nanjegowda Movie) ಇದೀಗ ಬ್ರೇಕ್​ ಬಿದ್ದಿದೆ. ನಿರ್ಮಲಾನಂದ ಸ್ವಾಮಿಗಳ ಭೇಟಿ ಬಳಿಕ ಇದ್ದಕ್ಕಿದ್ದಂತೆ ಮುನಿರತ್ನ (Munirathna) ಯೂಟರ್ನ್ ಹೊಡೆದಿದ್ದಾರೆ.

ಉರಿಗೌಡ-ನಂಜೇಗೌಡ (Urigowda Nanjegowda) ಅವರನ್ನು ಆಧರಿಸಿದ ಸಿನಿಮಾ ಮಾಡಲು ನಿರ್ಮಾಪಕ, ಹಾಲಿ ಸಚಿವ ಮುನಿರತ್ನ (Munirathna) ಫಿಲ್ಮ್​ ಚೇಂಬರ್​ನಲ್ಲಿ ಟೈಟಲ್ ರಿಜಿಸ್ಟರ್​ಗೆ ಅರ್ಜಿ ಹಾಕಿದ್ದರು. ಅಲ್ಲದೇ ಸಿನಿಮಾದ ಮುಹೂರ್ತ ದಿನಾಂಕವನ್ನೂ ಘೋಷಿಸಿದ್ದರು. ಕೆಲ ದಿನಗಳ ಹಿಂದಷ್ಟೇ ಟ್ವೀಟ್ ಮಾಡಿದ್ದ ಮುನಿರತ್ನ ಮೇ 18 ರಂದು ಉರಿಗೌಡ-ನಂಜೇಗೌಡ ಸಿನಿಮಾ ಮುಹೂರ್ತ ಮಾಡಲಾಗುವುದು ಎಂದು ಪೋಸ್ಟ್ ಮಾಡಿದ್ದರು.

ನಿರ್ಮಾಪಕ ಮುನಿರತ್ನ ಟ್ವೀಟ್​ 

ವೃಷಬಾದ್ರಿ ಪ್ರೊಡಕ್ಷನ್ ನಿರ್ಮಾಣದ ಐತಿಹಾಸಿಕ ಸತ್ಯ ಘಟನೆಗಳ ಆಧಾರಿತ ‘ಉರೀಗೌಡ ನಂಜೇಗೌಡ’ ಚಿತ್ರದ ಮುಹೂರ್ತ ಮೇ 18ರಂದು ಕಂಠೀರವ ಸ್ಟುಡಿಯೋದಲ್ಲಿ ನಡೆಯಲಿದೆ. ಡಾ.ಸಿ.ಎನ್.ಅಶ್ವಥ್ ನಾರಾಯಣ್ ಚಿತ್ರಕಥೆ ಇರುವ ಈ ಚಿತ್ರವನ್ನು ಆರ್.ಎಸ್.ಗೌಡ ನಿರ್ದೇಶನ ಮಾಡುತ್ತಿದ್ದಾರೆ ಎಂದು ಸಚಿವ ಮುನಿರತ್ನ ಅವರು ಟ್ವೀಟ್‌ ಮೂಲಕ ತಿಳಿಸಿದ್ದರು.

Bhargavi on Twitter: ".@MunirathnaMLA is all set to produce a film 'Uri  Gowda Nanje Gowda.' The Shoot Begins with the Muhurata set on May 18 at the  Kanteerava Studio, 10AM #UriGowdaNanjeGowda Story

ನಿರ್ಮಲಾನಂದನಾಥ ಸ್ವಾಮೀಜಿ ಜೊತೆ ಚರ್ಚೆ

ಉರಿಗೌಡ ದೊಡ್ಡನಂಜೇಗೌಡ ಸಿನಿಮಾ ಮಾಡುವ ನಿರ್ಧಾರದಿಂದ ಮುನಿರತ್ನ ಹಿಂದೆ ಸರಿಯಲು ಕಾರಣ ಏನು ಎನ್ನುವ ಪ್ರಶ್ನೆ ಇದೀಗ ಮೂಡಿದೆ. ನಿರ್ಮಲಾನಂದನಾಥ ಸ್ವಾಮೀಜಿ ಜೊತೆ ಮಾತುಕತೆ ಬಳಿಕ ಮುನಿರತ್ನ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗ್ತಿದೆ. ಇನ್ನು ಈ ಮುನಿರತ್ನ ಅವರೇ ಸ್ಪಷ್ಟನೆ ನೀಡಿದ್ದಾರೆ. ಭಾನುವಾರ ನಾನು ಪೋಸ್ಟ್​ ಹಂಚಿಕೊಂಡಿದ್ದೆ. ಮೇ 18ಕ್ಕೆ ಚಿತ್ರ ಮಾಡಲು ನಿರ್ಧರಿಸಿದ್ದೆ ಎಂದ್ರು.

ಯಾರ ಮನಸ್ಸಿಗೂ ನೋವುಂಟು ಮಾಡುವ ಸಿನಿಮಾ ಮಾಡಲ್ಲ

ಕುರುಕ್ಷೇತ್ರ ಸಿನಿಮಾ ಬಳಿಕ ದೊಡ್ಡ ಮಟ್ಟದ ಪೌರಾಣಿಕ ಚಿತ್ರ ಮಾಡಲು ನಿರ್ಧಾರ ಮಾಡಿದ್ದೆ. ಕುಮಾರಸ್ವಾಮಿ, ಅಶ್ವಥ್ ನಾರಾಯಣ್ ಸಿನಿಮಾ ಮಾಡಲು ಮುನಿರತ್ನಗೆ ಹೇಳಿರಬೇಕು ಅಂತ ಅನೇಕರು ಹೇಳಿದೆ. ನಾನು ಈ ಸಿನಿಮಾ ಮಾಡಲು ಮುಂದಾಗಿದೆ. ಈ ವೇಳೆ ಚಿತ್ರ ಮಾಡಲು ಸ್ವಾಮೀಜಿ ಜೊತೆ ಚೆರ್ಚೆ ಮಾಡಿದೆ. ಚರ್ಚೆ ಬಳಿಕ ಬೇರೆಯವ್ರ ಮನಸ್ಸಿಗೆ ನೋವು ಮಾಡೋದು ಬೇಡ ಅಂತ ಅಂದ್ಕೊಂಡು ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಮುನಿರತ್ನ ಹೇಳಿದ್ದಾರೆ.

ನಾನು ಬೇರೆ ಕಥೆ ಹುಡುಕಿಕೊಳ್ಳುವೆ

ಯಾರಿಗೂ ನೋವುಂಟು ಮಾಡುವ ಸಿನಿಮಾ ಮಾಡಲ್ಲ ಎಂದು ಸ್ವಾಮಿಜಿಗೆ ಹೇಳಿದ್ದೇನೆ. ನಾನು ಬೇರೆ ಕಥೆ ಹುಡುಕಿಕೊಳ್ತಿನಿ. ಈ ಸಿನಿಮಾ ಬಗ್ಗೆ ನಾನು ಇನ್ಮುಂದೆ ಯಾವುದೇ ಕಾರಣಕ್ಕೂ ಮಾತಾಡಲ್ಲ. ಶ್ರೀಗಳು ನೈಜತೆ ಬಗ್ಗೆ ನೋಡಿ ಸಿನಿಮಾ ಮಾಡಿ ಎಂದಿದ್ದಾರೆ. ಹೀಗಾಗಿ ಉರಿಗೌಡ ನಂಜೇಗೌಡ ಸಿನಿಮಾ ಮಾಡುವ ನಿರ್ಧಾರದಿಂದ ಹಿಂದೆ ಸರಿದಿದ್ದೇನೆ ಎಂದು ಮುನಿರತ್ನ ಹೇಳಿದ್ದಾರೆ.

ರಾಜ್ಯದಲ್ಲಿ ಉರಿಗೌಡ-ನಂಜೇಗೌಡ ಬಗ್ಗೆ ಭಾರೀ ಚರ್ಚೆ ಆಗ್ತಿದ್ದು, ರಾಜಕೀಯ ರಂಗೇರಿದೆ. ಇಬ್ಬರ ಬಗ್ಗೆ ಪರ-ವಿರೋಧ ಚರ್ಚೆಗಳು ಜೋರಾಗಿದೆ. ಈ ವಿವಾದದ ಕಿಚ್ಚಿಗೆ ಬಿಸಿ ತುಪ್ಪ ಸುರಿಯಲು ಮುಂದಾಗಿದ್ದ ಮುನಿರತ್ನ ಇದೀಗ ತಣ್ಣಗಾಗಿದ್ದಾರೆ.

urigowda nanjegowda movie plan has been dropped by munirathna.