ಕಬ್ಜ 2 ಸಿನಿಮಾದಲ್ಲಿ ಪವನ್ ಕಲ್ಯಾಣ್! ಚಿತ್ರತಂಡದಿಂದ ಸಿಕ್ತು ಹಿಂಟ್

21-03-23 12:56 pm       Source: news18   ಸಿನಿಮಾ

ಕಬ್ಜ ಸಿನಿಮಾ ಸೂಪರ್ ಹಿಟ್ ಆಗಿದ್ದು ಸಿನಿಮಾದ ಎರಡನೇ ಭಾಗದ ಬಗ್ಗೆ ಈಗಾಗಲೇ ಕುತೂಹಲ ಶುರುವಾಗಿದೆ. ಈ ಸಿನಿಮಾದಲ್ಲಿ ತೆಲುಗಿನ ಸ್ಟಾರ್ ನಟ ನಟಿಸಲಿದ್ದಾರೆ.

ಆರ್. ಚಂದ್ರು ಅವರು ನಿರ್ದೇಶನ ಮಾಡಿರುವ ಕನ್ನಡದ ಕಬ್ಜ ಸಿನಿಮಾ ಎಲ್ಲೆಡೆ ಸದ್ದು ಮಾಡುತ್ತಿದೆ. ತಮಿಳು, ತೆಲುಗು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಕೂಡಾ ಈ ಕನ್ನಡ ಸಿನಿಮಾ ರಿಲೀಸ್ ಆಗಿದೆ. ವಿಶೇಷ ಎಂದರೆ ಇದು ಮಲ್ಟಿ ಸ್ಟಾರರ್ ಸಿನಿಮಾ. ಇದರಲ್ಲಿ ಶಿವಣ್ಣ, ಕಿಚ್ಚ ಸುದೀಪ್ ಕೂಡಾ ನಟಿಸಿದ್ದಾರೆ. ಶಿವಣ್ಣ ಅವರು ಕೊನೆಯ ಸೀನ್​ನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಸುದೀಪ್ ಕಥೆ ಹೇಳುತ್ತಾರೆ.

 ವಿಶೇಷ ಎಂದರೆ ಇದು ಮಲ್ಟಿ ಸ್ಟಾರರ್ ಸಿನಿಮಾ. ಇದರಲ್ಲಿ ಶಿವಣ್ಣ, ಕಿಚ್ಚ ಸುದೀಪ್ ಕೂಡಾ ನಟಿಸಿದ್ದಾರೆ. ಶಿವಣ್ಣ ಅವರು ಕೊನೆಯ ಸೀನ್​ನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಸುದೀಪ್ ಕಥೆ ಹೇಳುತ್ತಾರೆ.

 ಕನ್ನಡ ಸಿನಿಮಾಗಳಿಗೆ ತೆಲುಗಿನಲ್ಲಿ ಮಾರ್ಕೆಟ್ ಇದೆ. ಕೆಜಿಎಫ್ ಸಿನಿಮಾದ ನಂತರವಂತೂ ತೆಲುಗಿನಲ್ಲಿಯೂ ಕನ್ನಡ ಸಿನಿಮಾಗಳು ಭರ್ಜರಿಯಾಗಿ ಸದ್ದು ಮಾಡುತ್ತವೆ.

 ಇದೀಗ ಬಂದಿರೋ ಸುದ್ದಿ ಏನಪ್ಪಾ ಅಂದ್ರೆ ಉಪೇಂದ್ರ ಅಭಿನಯದ ಕಬ್ಜ ಸಿನಿಮಾದ ಮುಂದುವರಿದ ಭಾಗ ಕಬ್ಜ 2ನಲ್ಲಿ ಟಾಲಿವುಡ್ ಸ್ಟಾರ್ ನಟ ಅಭಿನಯಿಸಲಿದ್ದಾರೆ ಎನ್ನುವ ಸುದ್ದಿಯೊಂದು ಹೊರಬಿದ್ದಿದೆ. ಕನ್ನಡ ಸಿನಿಮಾಗಳಿಗೆ ತೆಲುಗಿನಲ್ಲಿ ಮಾರ್ಕೆಟ್ ಇದೆ. ಕೆಜಿಎಫ್ ಸಿನಿಮಾದ ನಂತರವಂತೂ ತೆಲುಗಿನಲ್ಲಿಯೂ ಕನ್ನಡ ಸಿನಿಮಾಗಳು ಭರ್ಜರಿಯಾಗಿ ಸದ್ದು ಮಾಡುತ್ತವೆ. ಈ ಸಿನಿಮಾದಲ್ಲಿ ಟಾಲಿವುಡ್ ನಟ ಹಾಗೂ ರಾಜಕಾರಣಿ ಪವನ್ ಕಲ್ಯಾಣ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ. ಈ ಸುದ್ದಿ ಕೇಳಿ ಸಿನಿಪ್ರಿಯರು ಥ್ರಿಲ್ ಆಗಿದ್ದಾರೆ.

 ಕಬ್ಜ ಸಿನಿಮಾ ಮೊದಲ ದಿನವೇ 25 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಸಿನಿಮಾ ಬೇರೆ ಭಾಷೆಗಳಲ್ಲಿಯೂ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಇದರಲ್ಲಿ ನಟಿ ಶ್ರಿಯಾ ನಟಿಸಿದ್ದಾರೆ.

 ಕಬ್ಜ ಸಿನಿಮಾದಲ್ಲಿ ಉಪೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸಿದ್ದು ನಟಿ ಶ್ರಿಯಾ ಶರಣ್ ಹೀರೋಯಿನ್. ಕಿಚ್ಚ, ಶಿವಣ್ಣ ಕೂಡಾ ಸ್ಪೆಷಲ್ ಆಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾ 5 ಭಾಷೆಗಳಲ್ಲಿ ರಿಲೀಸ್ ಆಗಿದೆ.

ಕಬ್ಜ ಸಿನಿಮಾ ಮೊದಲ ದಿನವೇ 25 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಸಿನಿಮಾ ಬೇರೆ ಭಾಷೆಗಳಲ್ಲಿಯೂ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಇದರಲ್ಲಿ ನಟಿ ಶ್ರಿಯಾ ನಟಿಸಿದ್ದಾರೆ. ಕಬ್ಜ ಸಿನಿಮಾದಲ್ಲಿ ಉಪೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸಿದ್ದು ನಟಿ ಶ್ರಿಯಾ ಶರಣ್ ಹೀರೋಯಿನ್. ಕಿಚ್ಚ, ಶಿವಣ್ಣ ಕೂಡಾ ಸ್ಪೆಷಲ್ ಆಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾ 5 ಭಾಷೆಗಳಲ್ಲಿ ರಿಲೀಸ್ ಆಗಿದೆ.

Tollywood actor pawan kalyan to join kabzaa 2 team.