ಬ್ರೇಕಿಂಗ್ ನ್ಯೂಸ್
03-04-23 01:22 pm Source: news18 ಸಿನಿಮಾ
ಮುಂಬೈಯಲ್ಲಿ ಡೇಟಿಂಗ್ ನೈಟ್‌ಗೆ ಹೋದ ಪ್ರಿಯಾಂಕಾ ಮತ್ತು ನಿಕ್
ಅದರಲ್ಲೂ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಪತಿ ನಿಕ್ ಜೋನಸ್ ಜೊತೆಗೆ ಇಲ್ಲಿಗೆ ಬಂದಿದ್ದು ಮತ್ತು ಪ್ರಿಯಾಂಕಾ ಅವರು 2015 ರ ಹಿಟ್ ಚಿತ್ರ ‘ದಿಲ್ ಧಡಕ್ನೆ ದೋ’ ಚಿತ್ರದ ಗ್ಯಾಲನ್ ಗೂಡಿಯಾ ಹಾಡಿಗೆ ಡ್ಯಾನ್ಸ್ ಮಾಡಿದರು. ಆ ಎರಡು ದಿನಗಳ ಕಾರ್ಯಕ್ರಮದ ನಂತರ ನಟಿ ಪ್ರಿಯಾಂಕಾ ಮತ್ತು ನಿಕ್ ಇಬ್ಬರು ಮುಂಬೈ ನಲ್ಲಿ ಡೇಟಿಂಗ್ ನೈಟ್ ಗೆ ಹೋಗಿದ್ದು, ಅಲ್ಲಿ ಕ್ಲಿಕ್ಕಿಸಿಕೊಂಡ ಫೋಟೋಗಳನ್ನು ಈಗ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ ನೋಡಿ.
ಡೇಟಿಂಗ್ ನೈಟ್ ನಲ್ಲಿ ನಡೆದ ಫೋಟೋ ಸೆಷನ್ ನಲ್ಲಿ ನಟಿ ಪ್ರಿಯಾಂಕಾ ಮತ್ತು ಪತಿ ನಿಕ್ ಮುಂಬೈನ ಬೀದಿಗಳಲ್ಲಿ ಆಟೋರಿಕ್ಷಾ ಬಳಿ ನಿಂತು ಪೋಸ್ ನೀಡುವುದರ ಮೂಲಕ ಸಾಕಷ್ಟು ಮೋಜು ಮಾಡಿರುವುದನ್ನು ನಾವು ನೋಡಬಹುದು. ಮುಂಬೈನಲ್ಲಿ ನಡೆದ ವಿವಾಹ ಆರತಕ್ಷತೆಯ ನಂತರ ನಿಕ್ ಭಾರತಕ್ಕೆ ಇದೇ ಮೊದಲನೇ ಬಾರಿ ಭೇಟಿ ನೀಡಿದ್ದು ಅಂತ ಹೇಳಲಾಗುತ್ತಿದೆ. ಅಲ್ಲದೆ ಈ ದಂಪತಿಗಳು ತಮ್ಮ ಮಗಳು ಮಾಲತಿ ಮೇರಿ ಹುಟ್ಟಿದ ನಂತರ ಮೊದಲ ಬಾರಿಗೆ ಆಕೆಯನ್ನು ಭಾರತಕ್ಕೆ ಕರೆ ತಂದಿರುವುದು.
ಭವ್ಯವಾದ ಕಾರ್ಯಕ್ರಮದಲ್ಲಿ ತನ್ನ ಡಿಸೈನರ್ ಗಳಿಗೆ ಥ್ಯಾಂಕ್ಸ್ ಹೇಳಿದ ನಟಿ
ಪ್ರಿಯಾಂಕಾ ತನ್ನ ಸೋಶಿಯಲ್ ಮೀಡಿಯಾದ ಪೋಸ್ಟ್ ನಲ್ಲಿ, ಭವ್ಯ ಕಾರ್ಯಕ್ರಮಕ್ಕೆ ಅಂತಾನೇ ತನಗಾಗಿ ಡಿಸೈನ್ ಮಾಡಿದ ಉಡುಪಿನ ಡಿಸೈನರ್ ಗಳಿಗೆ ಮತ್ತು ಆಕೆಯನ್ನು ಇನ್ನಷ್ಟು ಸುಂದರವಾಗಿ ಕಾಣುವಲ್ಲಿ ಸಹಾಯ ಮಾಡಿದವರಿಗೆ ಥ್ಯಾಂಕ್ಸ್ ಹೇಳಿದ್ದಾರೆ. "ನಿಮ್ಮ ಅದ್ಭುತ ಸಹಯೋಗಕ್ಕಾಗಿ ಎಂದಿನಂತೆ @stylebyami ಧನ್ಯವಾದಗಳು. ಆಧುನಿಕ ಟಚ್ ಇರುವ ಹಳೆಯ ಶೈಲಿಯ ಉಡುಪನ್ನು ಧರಿಸಲಿದ್ದೇನೆ ಅಂತ ನನಗೆ ತಿಳಿದಿತ್ತು. ಭಾರತೀಯ ಕಲೆ ಮತ್ತು ಫ್ಯಾಷನ್ ಅನ್ನು ತೋರಿಸುವ ಈ ಸುಂದರವಾದ ಡಿಸೈನ್ ಅನ್ನು ರಚಿಸಿದ್ದಕ್ಕಾಗಿ ಅಮಿತ್ ಅಗರ್ವಾಲ್ ಗೆ ತುಂಬಾನೇ ಥ್ಯಾಂಕ್ಸ್” ಅಂತ ಪ್ರಿಯಾಂಕಾ ಹೇಳಿದ್ದಾರೆ.
“ಈ ಸುಂದರವಾದ ಉಡುಪನ್ನು 65 ವರ್ಷ ಹಳೆಯ ವಿಂಟೇಜ್ ಬನಾರಸಿ ಪಟೋಲಾ ಸೀರೆಯೊಂದಿಗೆ ಸಿಲ್ವರ್ ಥ್ರೆಡ್ ಮತ್ತು ಖಾದಿ ರೇಷ್ಮೆಯ ಮೇಲೆ ಗೋಲ್ಡ್ ಎಲೆಕ್ಟ್ರೋಪ್ಲೇಟಿಂಗ್ ಬಳಸಿ ರಚಿಸಲಾಗಿದೆ. ನಿಮ್ಮ ಪ್ರತಿಭೆಗೆ ಮತ್ತು ನಿಮ್ಮ ಪ್ರತಿಭಾನ್ವಿತ ತಂಡಕ್ಕೆ ಧನ್ಯವಾದಗಳು ಅಮಿತ್" ಎಂದು ಪ್ರಿಯಾಂಕಾ ಫೋಟೋ ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.
ಕಾರ್ಯಕ್ರಮಕ್ಕೆ ಆಹ್ವಾನಿಸಿದಕ್ಕೆ ನೀತಾ ಅಂಬಾನಿಗೂ ಧನ್ಯವಾದ ಹೇಳಿದ ನಟಿ
ಈ ಕಾರ್ಯಕ್ರಮಕ್ಕೆ ತನ್ನನ್ನು ಮತ್ತು ತನ್ನ ಪತಿಯನ್ನು ಆಹ್ವಾನಿಸಿದ್ದಕ್ಕಾಗಿ ಪ್ರಿಯಾಂಕಾ ಅವರು ನೀತಾ ಅಂಬಾನಿಗೆ ಧನ್ಯವಾದ ಹೇಳಿದರು. "@nmacc ಇತಿಹಾಸದಲ್ಲಿ ಭಾರತೀಯ ಫ್ಯಾಷನ್ ನ ಅದ್ಭುತ ಪ್ರದರ್ಶನವನ್ನು ರಚಿಸಿದ್ದಕ್ಕಾಗಿ #NitaAmbani ಮತ್ತು @_iiishmagish ಅವರಿಗೆ ಅಭಿನಂದನೆಗಳು. ಈ ಸೊಗಸಾದ ಸ್ಥಳ ಮತ್ತು ಭಾರತೀಯ ಕಲೆ, ವಿನ್ಯಾಸವನ್ನು ಉತ್ತೇಜಿಸುವ ಸಾಮರ್ಥ್ಯದ ಬಗ್ಗೆ ನಾನು ತುಂಬಾನೇ ಹೆಮ್ಮೆ ಪಡುತ್ತೇನೆ” ಅಂತ ಬರೆದುಕೊಂಡಿದ್ದಾರೆ ಪ್ರಿಯಾಂಕಾ.
actress priyanka chopra and husband nick jonas photoshoot in an auto rickshaw viral in social media.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 04:24 pm
Mangalore Correspondent
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
Waqf Protest, Mangalore, Traffic: ಎಪ್ರಿಲ್ 18...
17-04-25 11:06 pm
19-04-25 11:01 am
Bangalore Correspondent
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm
Hyderabad Murder, Mother suicide: ತೆಂಗಿನಕಾಯಿ...
18-04-25 08:14 pm
Dead Baby Found, Garbage, Bangalore crime: ಅಪ...
18-04-25 03:41 pm