ಶಿವಾಜಿ ಗಣೇಶನ್ ರಿಜೆಕ್ಟ್ ಮಾಡಿದ್ರು! ರಾಜ್ ಕಸ್ತೂರಿ ನಿವಾಸ ಒಪ್ಪಿಕೊಂಡು ಗೆದ್ದರು

13-04-23 01:21 pm       Source: news18   ಸಿನಿಮಾ

ಡಾಕ್ಟರ್ ರಾಜಕುಮಾರ್ ಅಭಿನಯದ ಕಸ್ತೂರಿ (Kasturi Nivasa Movie) ನಿವಾಸ ಸೋತು ಗೆದ್ದ ಸಿನಿಮಾನೇ ಆಗಿದೆ. ಈ ಚಿತ್ರ ರಿಲೀಸ್ ಆದಾಗ ಯಾರಿಗೂ ಭರವಸೆ ಇರಲಿಲ್ಲ. ಮೊದಲ ದಿನ ಈ ಚಿತ್ರಕ್ಕೆ ಅಂತಹ ಕಲೆಕ್ಷನ್ (Kasturi Nivasa Untold Story) ಏನೂ ಆಗಿರಲಿಲ್ಲ.

ಕಸ್ತೂರಿ ನಿವಾಸ ಚಿತ್ರದ ಹಿಂದೆ ಇಂತಹ ಹಲವು ಇಂಟ್ರಸ್ಟಿಂಗ್ ಕಥೆಗಳಿವೆ. ಹೌದು, ಈ ಚಿತ್ರದ ಕಥೆಯನ್ನ ತಮಿಳನ ಸೂಪರ್ ಸ್ಟಾರ್ ಶಿವಾಜಿ ಗಣೇಶನ್ ಅವರಿಗೆ ಬರೆಯಲಾಗಿತ್ತು. ಕಥೆಗಾರ ಜಿ. ಬಾಲಸುಬ್ರಹ್ಮಣ್ಯಂ ಈ ಕಥೆಯನ್ನ ಶಿವಾಜಿ ಗಣೇಶನ್ ಹೇಳಿದರು.

ಅದನ್ನ ಕೇಳಿದ್ದ ಡೈರೆಕ್ಟರ್ ಶಂಕರ್ ಹಾಗೂ ನಿರ್ಮಾಪಕ ನೂರ್ ತುಂಬಾನೇ ಇಷ್ಟಪಟ್ಟಿದ್ದರು. ಆದರೆ ಸೂಪರ್ ಸ್ಟಾರ್ ಶಿವಾಜಿ ಗಣೇಶನ್ ಕಥೆ ಕೇಳಿದ್ಮೇಲೆ ತಮ್ಮ ಅಭಿಪ್ರಾಯ ಹೇಳಿಯೇ ಬಿಟ್ಟರು. ಕಥೆಯ ಕೊನೆಯಲ್ಲಿ ಟ್ರ್ಯಾಜಿಡಿ ಇದೆ. ಇದನ್ನ ನಾನು ಮಾಡೋದೆ ಇಲ್ಲ ಅಂತ ಹೇಳಿದ್ದರು.

ಆದರೆ ಚಿ. ಉದಯಶಂಕರ್ ಅವರಿಗೆ ಈ ಕಥೆ ಮೇಲೆ ಭರವಸೆ ಇತ್ತು. ರಾಜ್ ಸಹೋದರ ವರದಣ್ಣ ಕೂಡ ಒಂದ್ ಚಾನ್ಸ್ ತೆಗೆದುಕೊಳ್ಳುಲು ಧೈರ್ಯ ಮಾಡಿದರು. ಹಾಗಾಗಿಯೇ ಜಿ. ಬಾಲಸುಬ್ರಹ್ಮಣ್ಯಂ ಕಥೆ ಕನ್ನಡದಲ್ಲಿ ಕಸ್ತೂರಿ ನಿವಾಸ ಹೆಸರಲ್ಲಿ ಸೆಟ್ಟೇರಿತ್ತು.

Top ten Kannada films to have been remade

ಕಸ್ತೂರಿ ನಿವಾಸ ಕಥೆಯ ಹಕ್ಕು 38 ಸಾವಿರಕ್ಕೆ ಖರೀದಿ!

ಹಾಗೇನೆ ಕೇವಲ 38 ಸಾವಿರಕ್ಕೆ ಈ ಕಥೆಯ ಹಕ್ಕನ್ನ ಆಗ ಖರೀದಿಸಲಾಗಿತ್ತು. ಹಾಗೇ ಖರೀದಿಸಿದ್ದ ಈ ಚಿತ್ರಕ್ಕೆ ದೊರೆ-ಭಗವಾನ್ ನಿರ್ದೇಶಕರಾದರು. ಜನವರಿ 29 ,1971 ರಂದು ರಾಜ್ಯಾದ್ಯಂತ ಕನ್ನಡದ ಕಸ್ತೂರಿ ನಿವಾಸ ಸಿನಿಮಾ ರಿಲೀಸ್ ಆಯಿತು.

ಆದರೆ ಮೊದಲ ದಿನ ಈ ಚಿತ್ರಕ್ಕೆ ಅಂತಹ ಹೇಳಿಕೊಳ್ಳುವ ರೆಸ್ಪಾನ್ಸ್ ಏನೂ ಇರಲಿಲ್ಲ. ಸಿನಿಮಾ ನೋಡಿದ ವಿಮರ್ಶಕರು ಈ ಚಿತ್ರದ ಗೆಲುವಿನ ಶಕ್ತಿಯನ್ನ ಗಮನಿಸಿದ್ದರು. ಆ ಎಲ್ಲ ಅಂಶಗಳನ್ನ ಇಟ್ಟುಕೊಂಡೇ ಚಿತ್ರದ ವಿಮರ್ಶೆ ಮಾಡಿದರು ನೋಡಿ.

ಮೌತ್ ಟಾಕ್‌ನಿಂದಲೇ ಕಸ್ತೂರಿ ನಿವಾಸ ಸಿನಿಮಾ ಹಿಟ್

ಆಗಲೇ ಈ ಚಿತ್ರದ ಬಗ್ಗೆ ಮೌತ್ ಟಾಕ್ ಶುರು ಆಯಿತು. ಒಳ್ಳೆ ರಿವ್ಯೂ ಮತ್ತು ಮೌತ್ ಟಾಕ್ ಸೇರಿ ಈ ಚಿತ್ರಕ್ಕೆ ಜನರನ್ನ ಕರೆದುಕೊಂಡು ಬಂತು. ಮೊದಲ ದಿನ ಏನೂ ಅಲ್ಲದ ಕನ್ನಡದ ಕಸ್ತೂರಿ ನಿವಾಸ ಹೋಗ್ತಾ ಹೋಗ್ತಾ ಒಳ್ಳೆ ಕಲೆಕ್ಷನ್ ಮಾಡಿತು.

ರಾಜ್ಯದ 16 ಥಿಯೇಟರ್‌ನಲ್ಲಿ ರಾಜ್‌ಕುಮಾರ್ ಅವರ ಕಸ್ತೂರಿ ನಿವಾಸ 100 ದಿನ ಯಶಸ್ವಿ ಪ್ರದರ್ಶನ ಕಂಡಿತ್ತು. ನಿರ್ಮಾಪಕ ಕೆ. ಸಿ. ಎನ್. ಗೌಡರೂ ಫುಲ್ ಖುಷ್ ಆದರು. ಸಿನಿಮಾ ಪ್ರೇಮಿಗಳಿಗೆ ರಾಜ್ ಅಭಿನಯದ ರವಿ ವರ್ಮ ಪಾತ್ರ ಬಹುವಾಗಿಯೇ ಇಷ್ಟ ಆಯಿತು.

Kannada Classic Kasturi Nivasa Movie Untold Interesting Story

ಕಲರ್ ಕಸ್ತೂರಿ ನಿವಾಸ ಕೂಡ ಸೂಪರ್ ಹಿಟ್

ಇಂತಹ ಈ ಚಿತ್ರ 2014 ರಲ್ಲಿ ಕಲರ್ ಆಯಿತು. ಬೆಂಗಳೂರಿನ ಭೂಮಿಕಾ ಥಿಯೇಟರ್‌ನಲ್ಲೂ ರಿಲೀಸ್ ಆಗಿತ್ತು. ರಾಜ್ಯದ ಹಲವು ಕಡೆಗೂ ಈ ಚಿತ್ರ ತೆರೆಗೆ ಬಂದಿತ್ತು. ಹಾಗೆ ತೆರೆ ಕಂಡ ಈ ಚಿತ್ರವನ್ನ 2 ಕೋಟಿ ವೆಚ್ಚದಲ್ಲಿಯೇ ಕಲರ್ ಮಾಡಿಸಲಾಗಿತ್ತು. ನಿರ್ಮಾಪಕ ಕೆ.ಸಿ.ಎನ್. ಗೌಡ್ರ ಪುತ್ರ ಕೆ.ಸಿ.ಎನ್. ಮೋಹನ್ ಈ ಚಿತ್ರವನ್ನ ಕಲರ್ ಮಾಡಿಸಿ ರಿಲೀಸ್ ಮಾಡಿದ್ದರು.

ಈ ಚಿತ್ರಕ್ಕೂ ಒಳ್ಳೆ ರೆಸ್ಪಾನ್ಸ್ ಬಂದಿತ್ತು. ಒಳ್ಳೆ ರಿವ್ಯೂ ಕೂಡ ಬಂದಿದ್ದವು. ಕಮರ್ಷಿಯಲಿ ಕಲರ್ ಕಸ್ತೂರಿ ನಿವಾಸ ಸಿನಿಮಾ ಸಕ್ಸಸ್ ಆಗಿತ್ತು. ಹಾಗೇ ರಾಜ್ ಚಿತ್ರ ಜೀವನದ ಕಸ್ತೂರಿ ನಿವಾಸ ಚಿತ್ರದಲ್ಲಿ ಜಯಂತಿ ಅಭಿನಯಿಸಿದ್ದರು.

ಆರತಿ ಮತ್ತು ಅಶ್ವಥ್ ಅಭಿನಯಿಸಿದ್ದರು. ಕಸ್ತೂರಿ ನಿವಾಸದ ಮೂಲಕ ಡಾಕ್ಟರ್ ರಾಜಕುಮಾರ್ ಸಮಾಜದಲ್ಲಿ ಇಂತಹ ವ್ಯಕ್ತಿಗಳೂ ಇರ್ತಾರೆ ಅನ್ನೋದನ್ನ ಸಾರಿ ಹೇಳಿದ್ದರು.

kannada classic kasturi nivasa movie untold interesting story.