ಬ್ರೇಕಿಂಗ್ ನ್ಯೂಸ್
19-04-23 01:43 pm Source: news18 ಸಿನಿಮಾ
ಆದರೆ ಕೆಆರ್‌ಕೆ ಈ ಚಿತ್ರದ ಫಸ್ಟ್ಲುಕ್ನಿಂದ ಅಷ್ಟೊಂದು ಪ್ರಭಾವಿತರಾಗಿಲ್ಲ. ಈ ಪೋಸ್ಟರ್ ಬಗ್ಗೆ ಟ್ವೀಟ್ ಮಾಡಿರುವ ಕೆಆರ್‌ಕೆ “ಈ ಪೋಸ್ಟರ್ ನೋಡಿ ನಾನು ಕನ್ಫ್ಯೂಸ್ ಅಗಿದ್ದೇನೆ. ಇದು ಲಕ್ಷ್ಮಿ 2 ಅಥವಾ ಕಾಂಚನಾ ಥರ ಕಾಣ್ತಿದೆ, ಇದು ಪುಷ್ಪಾ ಸೀಕ್ವೆಲ್ ಥರ ಕಾಣ್ತಿಲ್ಲ” ಎಂದು ಬರೆದಿದ್ದರು. ಇದಕ್ಕೆ ನೆಟ್ಟಿಗರು ಕೆಆರ್‌ಕೆ ಅವರನ್ನು ಸಖತ್ತಾಗಿ ಟ್ರೋಲ್ ಮಾಡಿದ್ದರು.
ಬಾಲಿವುಡ್ ನಟರ ಕೂದಲಿನ ಬಗ್ಗೆ ಕಾಮೆಂಟ್ ಮಾಡಿದ ಕೆಆರ್‌ಕೆ
ಕೆಆರ್‌ಕೆ ಯಾವುದೇ ಕಾರಣವಿಲ್ಲದೆ ಬಾಲಿವುಡ್ ಸೆಲೆಬ್ರಿಟಿಗಳನ್ನು ಅವಮಾನಿಸುವಲ್ಲಿ ತುಂಬಾನೇ ಎತ್ತಿದ ಕೈ. ಇದೇ ಕಾರಣಕ್ಕಾಗಿ, ಅವರು ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಫಾಲೋವರ್ ಗಳನ್ನು ಸಹ ಹೊಂದಿದ್ದಾರೆ. ಬಾಲಿವುಡ್ ಅನ್ನು ಇಷ್ಟಪಡದವರಿಗೆ ಇವರ ಹೇಳಿಕೆಗಳು ಒಂದು ರೀತಿ ಮಸಾಲಾ ಮತ್ತು ಮನರಂಜನಾ ಸುದ್ದಿಗಳು ಇದ್ದಂತೆ. ಈಗ ಕೆಆರ್‌ಕೆ ನಟರಾದ ಹೃತಿಕ್ ರೋಷನ್ ಮತ್ತು ರಣಬೀರ್ ಕಪೂರ್ ಇಬ್ಬರು ಹೇರ್ ಪ್ಯಾಚ್ ಗಳನ್ನು ಬಳಸ್ತಾರೆ. ಇನ್ನೂ ಬೇಕಾದರೆ ನಟ ಶಾರುಖ್ ಖಾನ್ ಅವರ ಕೂದಲು ಚೆನ್ನಾಗಿವೆ ನೋಡಿ ಅಂತ ಹೇಳಿದ್ದಾರೆ.
ಈ ಹಿಂದೆ ಸಹ ಅನೇಕ ಬಾರಿ ಕಮಲ್ ಬಾಲಿವುಡ್ ನಟರ ಬಗ್ಗೆ ಕೆಲವು ಅಸಹ್ಯ ಮತ್ತು ವೈಯಕ್ತಿಕ ಟೀಕೆಗಳನ್ನು ಮಾಡಿದ್ದಾರೆ. ಈಗ, ಅವರು ಬಾಲಿವುಡ್ ನ ಈ ಇಬ್ಬರು ನಟರಾದ ಹೃತಿಕ್ ಮತ್ತು ರಣಬೀರ್ ಅವರ ಹಿಂದೆ ಬಿದ್ದಿದ್ದಾರೆ. ಹಿಂದಿ ಚಲನಚಿತ್ರೋದ್ಯಮದ ಬಹುತೇಕ ಎಲ್ಲಾ ದೊಡ್ಡ ನಟರು ತಮ್ಮ ಮುಖ ಇನ್ನಷ್ಟು ಸುಂದರವಾಗಿ ಕಾಣಲು ಹೇರ್ ಪ್ಯಾಚ್ ಗಳನ್ನು ಅಥವಾ ವಿಗ್ ಗಳನ್ನು ಬಳಸುತ್ತಾರೆ ಅನ್ನೋ ಸುದ್ದಿಗಳು ತುಂಬಾನೇ ಕೇಳಿರುತ್ತೇವೆ. ಆದರೆ ಕೆಲವರು ಇದು ಶುದ್ದ ಸುಳ್ಳು ಅಂತ ಸಹ ಹೇಳ್ತಾರೆ.
SRK doesn’t use hair patches like #Hrithik and #Ranbir because mashallah he is having good hair.
— KRK (@kamaalrkhan) April 16, 2023
ನಟ ಶಾರುಖ್ ಅವರ ಕೂದಲ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ ಕೆಆರ್‌ಕೆ
ಅಷ್ಟಕ್ಕೇ ನಿಲ್ಲದ ಕೆಆರ್‌ಕೆ ಅವರು ಶಾರುಖ್ ಖಾನ್ ಅವರು ನೈಸರ್ಗಿಕ ಕೂದಲನ್ನು ಹೊಂದಿರುವುದಕ್ಕೆ ಶ್ಲಾಘಿಸಿದ್ದಾರೆ. ಆದಾಗ್ಯೂ, ಅದೇ ಟ್ವೀಟ್ ನಲ್ಲಿ ಹೃತಿಕ್ ರೋಷನ್ ಮತ್ತು ರಣಬೀರ್ ಕಪೂರ್ ಹೇರ್ ಪ್ಯಾಚ್ ಗಳನ್ನು ಬಳಸುತ್ತಾರೆ ಎಂದು ಅವರು ಹೇಳಿದ್ದಾರೆ. "ಎಸ್‌ಆರ್‌ಕೆ ಅವರು ಹೃತಿಕ್ ಮತ್ತು ರಣಬೀರ್ ಅವರ ಹಾಗೆ ಹೇರ್ ಪ್ಯಾಚ್ ಗಳನ್ನು ಬಳಸುವುದಿಲ್ಲ, ಏಕೆಂದರೆ ಅವರು ಒಳ್ಳೆಯ ಕೂದಲನ್ನು ಹೊಂದಿದ್ದಾರೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.
ಈ ಟ್ವೀಟ್ಗೆ ಪ್ರತಿಕ್ರಿಯಿಸಿದ ಹಲವಾರು ನೆಟ್ಟಿಗರು ಕೆಆರ್‌ಕೆ ಅವರ ನಕಲಿ ಕೂದಲಿನ ಬಗ್ಗೆ ಟ್ರೋಲ್ ಮಾಡಿದ್ದಾರೆ. "ಇವರ ಜೊತೆ ತನ್ನ ಹೆಸರು ಏಕೆ ತೆಗೆದುಕೊಳ್ಳಲಿಲ್ಲ ನೀವು” ಅಂತ ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬ ಟ್ವಿಟ್ಟರ್ ಬಳಕೆದಾರರು "ಇವರೇ ನಕಲಿ ಕೂದಲನ್ನು ಹಚ್ಚಿಕೊಂಡಿದ್ದಾರೆ, ಮತ್ತೊಬ್ಬರ ಬಗ್ಗೆ ಏನ್ ಮಾತಾಡ್ತಾರೆ” ಅಂತ ಬರೆದಿದ್ದಾರೆ.
ಶಾರುಖ್ ಖಾನ್ ಅವರ ಪಠಾಣ್ ಚಿತ್ರ ಭಾರಿ ಯಶಸ್ಸನ್ನು ಗಳಿಸಿದ ನಂತರ ಇದೇ ಕೆಆರ್‌ಕೆ ತಮ್ಮ ಮಾತನ್ನು ಬದಲಾಯಿಸಿದ್ದಕ್ಕಾಗಿ ಇತ್ತೀಚಿನ ದಿನಗಳಲ್ಲಿ ತುಂಬಾನೇ ಟ್ರೋಲ್ ಆಗಿದ್ದರು. ಈ ಹಿಂದೆ ಚಿತ್ರ ಬಿಡುಗಡೆಯಾಗುವ ಮೊದಲು, ಅವರು ಪಠಾಣ್ ಚಿತ್ರವನ್ನು ‘ಡಿಸಾಸ್ಟರ್’ ಅಂತ ಕರೆದಿದ್ದರು. ಈಗ, ಅವರು ಶಾರುಖ್ ಅವರ ಪಠಾಣ್ ಚಿತ್ರವನ್ನು ಹೊಗಳುತ್ತಿದ್ದಾರೆ.
krk tweeted about actors hrithik roshan shahrukh and ranbirs hair stg pjl.
13-03-25 02:56 pm
HK News Desk
Karwar, Honnavar, Cow Slaughter, Crime; ಗರ್ಭ...
13-03-25 12:32 pm
Madikeri Earthquake: ಮಡಿಕೇರಿಯಲ್ಲಿ ಲಘು ಭೂಕಂಪನ...
13-03-25 11:57 am
Pramod Muthalik, Love Jihad: ವೇಶ್ಯಾವಾಟಿಕೆ, ಭಯ...
12-03-25 03:51 pm
Mangalore Chakravarti Sulibele, Prakash Raj:...
11-03-25 06:19 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
13-03-25 09:20 pm
Mangalore Correspondent
PFI, Mangalore Crime, Police: ಪಿಎಫ್ಐ ಮುಖಂಡರಿಗ...
13-03-25 08:46 pm
Mangalore News, crime, Suicide: ಉತ್ತರ ಪ್ರದೇಶ...
13-03-25 10:08 am
Mangalore rain, Heat wave: ಮಂಗಳೂರು ನಗರಕ್ಕೆ ಸಿ...
12-03-25 11:10 pm
Diganth Missing case, Reunite with family: 17...
12-03-25 10:16 pm
13-03-25 06:44 pm
Mangalore Correspondent
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm
Bangalore Suicide, Bank Staff, Crime; ಹಿರಿಯ ಅ...
09-03-25 03:06 pm