ರಾಹುಲ್ ಗಾಂಧಿ ಜೊತೆ ಕೈ ಜೋಡಿಸಿದ ಶಿವಣ್ಣ, ರಾಜಕೀಯದ ಎಂಟ್ರಿ ಬಗ್ಗೆ ಏನಂದ್ರು ಹ್ಯಾಟ್ರಿಕ್ ಹೀರೋ?

02-05-23 12:55 pm       Source: news18   ಸಿನಿಮಾ

ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ (Karnataka Assembly Election) ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಚುನಾವಣೆಯ (Election 2023) ಕಾವು ಜೋರಾಗಿದ್ದು, ಕನ್ನಡ ಚಿತ್ರರಂಗದ (Kannada Cinema Industry) ಘಟಾನುಘಟಿ ನಾಯಕರು ಈ ಬಾರಿ ಎಲೆಕ್ಷನ್ ಅಖಾಡಕ್ಕಿಳಿದು ನೆಚ್ಚಿನ ನಾಯಕರ ಪರ ಅಬ್ಬರದ ಪ್ರಚಾರಕ ಮಾಡುತ್ತಿದ್ದಾರೆ.

ಶಿವಮೊಗ್ಗದಲ್ಲಿ ಕಾಂಗ್ರೆಸ್​ ಅಬ್ಬರ ಪ್ರಚಾರಕ್ಕೆ ಶಿವಣ್ಣ ನಾಂದಿ ಹಾಡಿದ್ದಾರೆ. ಸಿದ್ದರಾಮಯ್ಯ ಕ್ಷೇತ್ರ ವರುಣಾ ಸೇರಿದಂತೆ ಅನೇಕ ನಾಯಕ ಪರವಾಗಿ ಶಿವರಾಜ್ ಕುಮಾರ್ ಮತಬೇಟೆಗಿಳಿದ್ದಾರೆ. ಪತ್ನಿ ಗೀತಾ ಶಿವರಾಜ್​ ಕುಮಾರ್ ಕಾಂಗ್ರೆಸ್​ಗೆ ಸೇರ್ಪಡೆಯಾಗುತ್ತಿದ್ದಂತೆ ಶಿವಣ್ಣ ಫೀಲ್ಡ್​ಗೆ ಇಳಿದಿದ್ದಾರೆ. ಪತ್ನಿ ಗೀತಾ ಶಿವರಾಜ್ ಕುಮಾರ್ ಜೊತೆ ಶಿವಮೊಗ್ಗದ ಮೂರು ಕ್ಷೇತ್ರದಲ್ಲಿ ರೋಡ್ ಶೋ ನಡೆಸಲಿದ್ದಾರೆ.

ಹುಬ್ಬಳ್ಳಿ ,ವರುಣಾ, ಶಿರಸಿ ಸೇರಿದಂತೆ ಹಲವು ಕಡೆಗಳಲ್ಲಿ ಶಿವಣ್ಣ ಭರ್ಜರಿ ಪ್ರಚಾರ ನಡೆಸಲಿದ್ದಾರೆ.  ಸಾಗರ ಕಾಂಗ್ರೆಸ್ ಅಭ್ಯರ್ಥಿ ಬೇಳೂರು ಗೋಪಾಲಕೃಷ್ಣ ಪರ ಅಬ್ಬರದ ಪ್ರಚಾರ ನಡೆಸಿದ್ರು. ಇಂದು ಶಿವಣ್ಣ ರಾಹುಲ್ ಗಾಂಧಿ ಜೊತೆ ಪ್ರಚಾರದ ವೇದಿಕೆ ಹಂಚಿಕೊಳ್ಳಲಿದ್ದಾರೆ. ಜೊತೆಗೆ
ತೀರ್ಥಹಳ್ಳಿಯಲ್ಲಿ ಕಿಮ್ಮನೆ ಪರ ಮತಯಾಚನೆ  ಮಾಡಲಿದ್ದಾರೆ.

Geeta Shivarajkumar joins Congress, to campaign in support of her brother  Madhu Bangarappa - The Hindu

ನಾನು ರಾಜಕೀಯಕ್ಕೆ ಬರಲ್ಲ ಎಂದ ಶಿವಣ್ಣ 

ಶಿವರಾಜ್​ಕುಮಾರ್ ಪತ್ನಿ ಗೀತಾ ಶಿವರಾಜ್​ಕುಮಾರ್ (Geetha Shivarajkumar)  ಕಾಂಗ್ರೆಸ್ ಸೇರ್ಪಡೆ ಆಗಿದ್ದು, ಶಿವಣ್ಣ (Shivanna) ಕೂಡ ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ ಎನ್ನುವ ಮಾತುಗಳು ಕೂಡ ಕೇಳಿ ಬರ್ತಿದೆ.  ಈ ಬಗ್ಗೆ ಅವರು ಮಾತನಾಡಿದ ಶಿವಣ್ಣ. ‘ಒಳ್ಳೆಯ ಕೆಲಸ ಮಾಡುವವರ ಪರವಾಗಿ ನಾನು ಪ್ರಚಾರ ಮಾಡುತ್ತೇನೆ ಅಷ್ಟೇ. ಭೀಮಣ್ಣ ನಮಗೆ ಸಂಬಂಧಿಕರು. ಜಗದೀಶ್ ಶೆಟ್ಟರ್ ಜೊತೆ ಒಳ್ಳೆಯ ಫ್ರೆಂಡ್​ಶಿಪ್ ಇದೆ. ಆದರೆ, ರಾಜಕೀಯ ಸೇರುವ ಆಲೋಚನೆ ಇಲ್ಲ  ಎಂದು ಶಿವರಾಜ್​ ಕುಮಾರ್​, ಗೀತಾ ಅವರೇ ಇಲ್ಲಿ ಸ್ಟಾರ ಪ್ರಚಾರಕ್ಕೂ ಎಂದು ಹೇಳಿದ್ದಾರೆ.

ಮತ್ತೊಂದು ತಮಿಳು ಸಿನಿಮಾದಲ್ಲಿ ಶಿವಣ್ಣ ಅತಿಥಿ ಪಾತ್ರ! | Shiva Rajkumar Acting  Along With Tamil Star Dhanush In Captain Miller Movie - Kannada Filmibeat

ಶಿವಣ್ಣ ಈ ಕ್ಷೇತ್ರಕ್ಕೆ ಶಕ್ತಿ ತುಂಬಿದ್ದಾರೆ

ಸಾಗರ ಕಾಂಗ್ರೆಸ್ ಅಭ್ಯರ್ಥಿ ಗೋಪಾಲಕೃಷ್ಣ ಅವರು ಶಿವಣ್ಣ ಬಗ್ಗೆ ಮಾತಾಡಿದ್ರು. ನನ್ನ ಪರ ಪ್ರಚಾರಕ್ಕೆ ಶಿವರಾಜಕುಮಾರ್ ಹಾಗೂ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ , ಮಧು ಬಂಗಾರಪ್ಪ ಮೂವರು ಬಂದಿದ್ದಾರೆ. ಅವರು ಬಂದಿರುವುದು ಬಹಳ ಖುಷಿಯಾಗಿದೆ. ನಿಜಕ್ಕೂ ಈ ಕ್ಷೇತ್ರಕ್ಕೆ ಶಕ್ತಿ ತುಂಬಿದಂತೆ ಆಗಿದೆ. ಒಂದು ಅಲೆ ಆರಂಭವಾಗಿದೆ ಈ ತನಕ ಯಾರು ಕೂಡ ಈ ಕ್ಷೇತ್ರಕ್ಕೆ ಸ್ಟಾರ್ ಪ್ರಚಾರಕರು ಬಂದಿರಲಿಲ್ಲ. ಈಗ ಪ್ರಚಾರಕ್ಕೆ ವೇಗ ಬಂದಿದೆ ಎಂದ್ರು.

ನಿರೀಕ್ಷೆಗೂ ಮೀರಿ ಜನರ ಆಗಮನ

ಶಿವರಾಜ್ ಕುಮಾರ್ ನೋಡಲು ನಿರೀಕ್ಷೆಗೂ ಮೀರಿ ಜನ ಬಂದಿದ್ದಾರೆ. ಈ ಚುನಾವಣೆ ನಿರೀಕ್ಷೆ ಹೆಚ್ಚು ಕಾಣುತ್ತಿದೆ. ನನ್ನ ಪರ ಜನರ ತಕ್ತಿ ತುಂಬಾ ಚೆನ್ನಾಗಿದೆ. ಇಂಥಾ ಚುನಾವಣೆಯನ್ನು ನಾನು 2004ರಲ್ಲಿ ಸಾಗರದಲ್ಲಿ ನೋಡಿದೆ.  ಪ್ರಿಯಾಂಕಾ ಗಾಂಧಿ ಕೂಡ ಸಾಗರಕ್ಕೆ ಬರಲಿದ್ದಾರೆ ಎಂದು  ಗೋಪಾಲಕೃಷ್ಣ ಹೇಳಿದ್ದಾರೆ.

actor shivaraj kumar will take the stage with rahul gandhi.