ಬ್ರೇಕಿಂಗ್ ನ್ಯೂಸ್
10-05-23 03:39 pm Source: news18 ಸಿನಿಮಾ
ದಿ ಕೇರಳ ಸ್ಟೋರಿ ಬಾಕ್ಸ್ ಆಫೀಸ್ ಕಲೆಕ್ಷನ್, ಅದ್ಬುತ ನಟನೆ ಹಾಗೂ ಹಲವು ವಿವಾದಗಳಿಂದ ಸುದ್ದಿಯಲ್ಲಿದ್ದಾರೆ. ಚಿತ್ರವನ್ನು ನಿಷೇಧಿಸುವಂತೆ ಆಗ್ರಹಿಸಿ ಸುಪ್ರೀಂ ಕೋರ್ಟ್ನಿಂದ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿತ್ತು. ಈ ಚಿತ್ರವನ್ನು ಹಲವು ರಾಜ್ಯಗಳಲ್ಲಿ ತೆರಿಗೆ ಮುಕ್ತಗೊಳಿಸಲಾಗಿದ್ದರೂ, ತಮಿಳುನಾಡು, ಪಶ್ಚಿಮ ಬಂಗಾಳದಲ್ಲಿ ಈ ಚಿತ್ರ ಪ್ರದರ್ಶನವಾಗುತ್ತಿಲ್ಲ.ಈ ಚಿತ್ರ ಸತ್ಯ ಘಟನೆಗಳನ್ನು ಆಧರಿಸಿದೆ ಎಂದು ಹೇಳಲಾಗುತ್ತಿದೆ. ಈ ಚಿತ್ರದ ಜೀವಾಳವಾಗಿರುವ ಆ 4 ಹುಡುಗಿಯರ ಸುತ್ತ ಚಿತ್ರದ ಸಂಪೂರ್ಣ ಕಥೆಯನ್ನು ಎಣೆಯಲಾಗಿದೆ. ದಿ ಕೇರಳ ಸ್ಟೋರಿ ನೋಡಿದ ಪ್ರೇಕ್ಷಕರು ಕೂಡ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ.
ಸುದೀಪ್ತೋ ಸೇನ್ ನಿರ್ದೇಶನದಲ್ಲಿ 'ದಿ ಕೇರಳ ಸ್ಟೋರಿ' ಸಿನಿಮಾ ತಯಾರಾಗಿದೆ. ವಿಪುಲ್ ಅಮೃತಲಾಲ್ ಶಾ ಸಿನಿಮಾ ನಿರ್ಮಾಪಕರಾಗಿದ್ದಾರೆ. ಸುಮಾರು 40 ಕೋಟಿ ಬಜೆಟ್ನಲ್ಲಿ ತಯಾರಾದ ಈ ಚಿತ್ರ ದೇಶದಾದ್ಯಂತ ಸುಮಾರು 1,300 ಸ್ಕ್ರೀನ್ಗಳಲ್ಲಿ ಬಿಡುಗಡೆಯಾಗಿದೆ.ಅದಾ ಶರ್ಮಾ (ಶಾಲಿನಿ ಉನ್ನಿಕೃಷ್ಣನ್), ಯೋಗಿತಾ ಬಿಹಾನಿ (ನಿಮಾಹ್), ಸಿದ್ಧಿ ಇದ್ನಾನಿ (ಗೀತಾಂಜಲಿ) ಮತ್ತು ಸೋನಿಯಾ ಬಲಾನಿ (ಆಸಿಫಾ) ಈ ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ಎಲ್ಲರ ಮೆಚ್ಚುಗೆಗೆ ಮಾತ್ರರಾಗಿದ್ದಾರೆ.
ದಿ ಕೇರಳ ಸ್ಟೋರಿ ಚಿತ್ರದಲ್ಲಿ ಶಾಲಿನಿ ಉನ್ನಿಕೃಷ್ಣನ್ ಪಾತ್ರವನ್ನು ಅದಾ ಶರ್ಮಾ ನಿರ್ವಹಿಸಿದ್ದಾರೆ. ಅವರು ಚಿತ್ರದ ನಾಯಕ ನಟಿ. ಅದಾ ಶರ್ಮಾ ಚಿತ್ರರಂಗಕ್ಕೆ ಬಂದು 15 ವರ್ಷಗಳಾಗಿವೆ. ಅವರ ಮೊದಲ ಚಿತ್ರ 1920 ಈ ಸಿನಿಮಾ ನಟನೆಯನ್ನು ಜನ ಮೆಚ್ಚಿಕೊಂಡಿದ್ದಾರೆ. ಈ ಚಿತ್ರದ ನಂತರ, ಹಸೀ ತೋ ಫಾಸಿ, ಫಿರ್, ಕಮಾಂಡೋ 2, ಸೆಲ್ಫಿ ಮುಂತಾದ ಚಿತ್ರಗಳಲ್ಲಿ ಕೆಲಸ ಮಾಡಿದರು. ಸೌತ್ ಸಿನಿಮಾಗಳಲ್ಲಿ ಕೆಲಸ ಮಾಡಿದ ನಟಿಗೆ ಕೇರಳ ಸ್ಟೋರಿ ಒಳ್ಳೆ ಹೆಸರು ತಂದುಕೊಟ್ಟಿದೆ.
ಯೋಗಿತಾ ಬಿಹಾನಿ 'ದಿ ಕೇರಳ ಸ್ಟೋರಿ' ಚಿತ್ರದಲ್ಲಿ ನಿಮಾಹ್ ಪಾತ್ರದಲ್ಲಿ ನಟಿಸಿದ್ದಾರೆ. ಸಖತ್ ಅಭಿನಯ ಮಾಡಿದ್ದಾರೆ. 27 ವರ್ಷದ ಯೋಗಿತಾ, ಬಿಹಾನಿ ಕುಟುಂಬಕ್ಕೆ ಸೇರಿದವರು, ಅವರು ದೆಹಲಿಯಲ್ಲಿ ಜನಿಸಿದರು. ಏಕ್ತಾ ಕಪೂರ್ ಅವರ ಟಿವಿ ಶೋ 'ದಿಲ್ ಹಿ ತೋ ಹೈ' ಮೂಲಕ ಜನಪ್ರಿಯರಾದ್ರು. ಕರಣ್ ಕುಂದ್ರಾ ಎದುರು ನಾಯಕಿಯಾಗಿ ನಟಿಸಿದರು. ಇದಾದ ನಂತರ ‘ಕವಚ’ ಚಿತ್ರದಲ್ಲೂ ಕಾಣಿಸಿಕೊಂಡಿದ್ದರು. 'ವಿಕ್ರಮ್ ವೇದ' ಚಿತ್ರದ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟ ನಟಿ, ಇದೀಗ 'ದಿ ಕೇರಳ ಸ್ಟೋರಿ' ಮೂಲಕ ಸುದ್ದಿಯಲ್ಲಿದ್ದಾರೆ.
'ದಿ ಕೇರಳ ಸ್ಟೋರಿ'ಯಲ್ಲಿ ಗೀತಾಂಜಲಿ ಪಾತ್ರದಲ್ಲಿ ನಟಿಸಿರುವ ಸಿದ್ಧಿ ಇದ್ನಾನಿ ಸೌತ್ ಇಂಡಸ್ಟ್ರಿಯಲ್ಲಿ ಖ್ಯಾತ ನಟಿಯಾಗಿ ಜನಪ್ರಿಯರಾಗಿದ್ದಾರೆ. ತನ್ನ ಗ್ಲಾಮರಸ್ ಚಿತ್ರಗಳಿಂದ ಸುದ್ದಿಯಾಗಿದ್ದಾರೆ. ಸಿದ್ಧಿ 2018 ರಲ್ಲಿ 'ಜಂಬ ಲಕಿಡಿ ಪಂಬ' ಚಿತ್ರದ ಮೂಲಕ ಸೌತ್ ಇಂಡಸ್ಟ್ರಿಗೆ ಕಾಲಿಟ್ಟರು. ಇಂಡಸ್ಟ್ರಿಯಲ್ಲಿ ಡಿಂಪಲ್ ಕ್ವೀನ್ ಎಂಬ ಹೆಸರಿನಿಂದಲೂ ಫೇಮಸ್ ಆಗಿದ್ದಾರೆ ‘ದಿ ಕೇರಳ ಸ್ಟೋರಿ’ಯಲ್ಲಿ ಸೋನಿಯಾ ಬಾಲಾನಿ, ಆಸಿಫಾ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಅವರದ್ದು ನೆಗೆಟಿವ್ ಪಾತ್ರವಾಗಿದೆ. ಹಿಂದಿ ಟಿವಿ ಶೋನ 'ಡಿಟೆಕ್ಟಿವ್ ದೀದಿ' ಎಂದು ಸೋನಿಯಾ ಪ್ರಸಿದ್ಧರಾಗಿದ್ದರು. ಸೀರಿಯಲ್ಗಳಲ್ಲಿಯೂ ನಟಿಸಿದ್ದಾರೆ. ಆಗ್ರಾದ ನಿವಾಸಿಯಾಗಿರುವ ಸೋನಿಯಾ ಟ್ರೆಂಡ್ ಡ್ಯಾನ್ಸರ್ ಕೂಡ. ಟಿವಿಯ ಹೊರತಾಗಿ, ಅವರು ಹಲವಾರು ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. 2016ರಲ್ಲಿ ಮೊದಲ ಚಿತ್ರ ತುಮ್ ಬಿನ್ ಹೈ ತೆರೆಕಂಡಿತ್ತು. ಎರಡನೇ ಚಿತ್ರ ಬಜಾರ್ ಆಗಿದ್ದು, ಕೇರಳ ಸ್ಟೋರಿ ಸೋನಿಯಾ ಅವರ ಮೂರನೇ ಸಿನಿಮಾ ಆಗಿದೆ.
the kerala story cast real story is here now know few interesting and unknown facts about adah sharma yogita bihani sonia balani siddhi idnani.
10-02-25 10:51 pm
HK News Desk
BJ show cause notice, Yatnal; 'ಭಿನ್ನರ ಬಣ'ದ ನಾ...
10-02-25 10:19 pm
Hubballi Dead Man Ambulance: ಆಸ್ಪತ್ರೆಯಲ್ಲಿ ಸತ...
10-02-25 07:01 pm
13th edition Kumbh Mela, Triveni Sangama, T N...
10-02-25 05:18 pm
Magadi MLA Balakrishna, Bdcc bank, fake gold:...
10-02-25 01:40 pm
10-02-25 05:48 pm
HK News Desk
CBI arrest, Tirupati laddu: ತಿರುಪತಿ ಲಡ್ಡಿನಲ್ಲ...
10-02-25 02:13 pm
ಮೆಕ್ಸಿಕೋ ; ಟ್ರಕ್ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ...
09-02-25 09:32 pm
Delhi Election Results 2025, BJP Win; ದೆಹಲಿಯಲ...
08-02-25 02:23 pm
BJP Delhi, AAP, Live result, Election: 27 ವರ್...
08-02-25 12:14 pm
10-02-25 11:09 pm
Mangalore Correspondent
Drone, Puttur Konark Rai, Indian Army: ಆಕಾಶದಿ...
10-02-25 10:34 pm
Mangalore News, Wenlock hospital, operation:...
09-02-25 11:03 pm
ಸುಳ್ಯದಲ್ಲಿ ಬೈಕ್ ಅಪಘಾತ ; ತೀವ್ರ ಗಾಯಗೊಂಡಿದ್ದ ಕಂಕ...
09-02-25 10:31 pm
Mangalore, Derlakatte, Drowning: ಕಪ್ಪೆ ಚಿಪ್ಪು...
09-02-25 07:40 pm
09-02-25 07:35 pm
Mangalore Correspondent
Bangalore, Udupi crime, Fraud: ಕ್ಯಾಸಿನೋ, ಬಿಟ್...
08-02-25 10:16 pm
ಕಲಬುರಗಿ | ಪರಸ್ತ್ರೀ ಜೊತೆ ಸುತ್ತಾಡುತ್ತಿದ್ದ ಪತಿಯ...
08-02-25 06:21 pm
Mangalore Mayor raid, slaughterhouse Kudroli:...
08-02-25 04:36 pm
Bidar murder crime: ಬೀದರ್ ; ಮನೆಮಂದಿ ನೋಡಿದ ಹುಡ...
08-02-25 01:00 pm