ಸಮಂತಾ, ನಾಗ ಚೈತನ್ಯಗೆ ಶುರುವಾಯ್ತಾ ಬ್ಯಾಡ್ ಲಕ್!? ಸಿನಿ ಕೆರಿಯರ್​ಗೆ ಎದುರಾಯ್ತಾ ಸಂಕಷ್ಟ?

16-05-23 12:12 pm       Source: news18   ಸಿನಿಮಾ

ನಟಿ ಸಮಂತಾ ಬಹು ನಿರೀಕ್ಷಿತ ಸಿನಿಮಾ ಶಾಕುಂತಲಂ ಚಿತ್ರ ಸೋಲು ಕಂಡಿತ್ತು. ಸಮಂತಾ ಸೋಲಿನ ಬಳಿಕ ನಟ ನಾಗ ಚೈತನ್ಯ ಸಿನಿಮಾ ಕೂಡ ರಿಲೀಸ್ ಆಗಿದ್ದು, ನಿರೀಕ್ಷಿತ ಗಳಿಕೆ ಮಾಡಿಲ್ಲ. ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.

ಸಮಂತಾ ನಂತರ ನಾಗ ಚೈತನ್ಯ ಕೂಡ ಹಿನ್ನಡೆ ಅನುಭವಿಸಿದ್ದಾರೆ. ನಟನ ಇತ್ತೀಚಿನ ಚಿತ್ರ ಕಸ್ಟಡಿ ನಿರೀಕ್ಷೆಯಂತೆ ಪ್ರದರ್ಶನ ನೀಡಲು ವಿಫಲವಾಗಿದೆ. ಗಲ್ಲಾಪೆಟ್ಟಿಗೆಯಲ್ಲೂ ನಿರಾಶೆ ಮೂಡಿಸಿದೆ. ಕಸ್ಟಡಿ ಚಿತ್ರವನ್ನು ಚೊಚ್ಚಲ ನಿರ್ದೇಶಕ ವೆಂಕಟ್ ಪ್ರಭು ನಿರ್ದೇಶಿಸಿದ್ದಾರೆ. ನಾಗ ಚೈತನ್ಯ ಅವರ ಹೊಸ ಚಿತ್ರಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಆದರೆ, ನಟನ ಚಿತ್ರ ನಿರೀಕ್ಷೆಯಂತಿಲ್ಲ ಎಂದು ಹೇಳಲಾಗ್ತಿದೆ.

ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಚಿತ್ರವು ಬಿಡುಗಡೆಯಾದ ಮೊದಲ ವಾರದಲ್ಲಿ ಹಿನ್ನೆಡೆಯನ್ನು ಎದುರಿಸಿತು. ಮೊದಲ ವಾರದ ನಂತರ, ಕೇವಲ 8.6 ಕೋಟಿ ಕಲೆಕ್ಷನ್ ಮಾಡಿದೆ. ಈ ಸಿನಿಮಾದಲ್ಲಿ ನಾಗ ಚೈತನ್ಯ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅರವಿಂದ್ ಸ್ವಾಮಿ, ಶರತ್ ಕುಮಾರ್, ಕೀರ್ತಿ ಶೆಟ್ಟಿ, ಪ್ರಿಯಾಮಣಿ, ಪ್ರೇಮ್ಜಿ, ವೆನ್ನಲ ಕಿಶೋರ್ ಮತ್ತು ಸಂಪತ್ ರಾಜ್ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

 ಸಮಂತಾ ನಂತರ ನಾಗ ಚೈತನ್ಯ ಕೂಡ ಹಿನ್ನಡೆ ಅನುಭವಿಸಿದ್ದಾರೆ. ನಟನ ಇತ್ತೀಚಿನ ಚಿತ್ರ ಕಸ್ಟಡಿ ನಿರೀಕ್ಷೆಯಂತೆ ಪ್ರದರ್ಶನ ನೀಡಲು ವಿಫಲವಾಗಿದೆ. ಗಲ್ಲಾಪೆಟ್ಟಿಗೆಯಲ್ಲೂ ನಿರಾಶೆ ಮೂಡಿಸಿದೆ.

Custody Box Office Collection: Naga Chaitanya's Film Earns Merely Rs 1  Crore on Day 4

ಇತ್ತೀಚೆಗಷ್ಟೇ ನಾಗ ಚೈತನ್ಯ ಅವರ ಮಾಜಿ ಪತ್ನಿ ಸಮಂತಾ ಸಿನಿಮಾ ಶಾಕುಂತಲಂ ದೊಡ್ಡ ಫ್ಲಾಪ್ ಆಗಿತ್ತು. ಇದಾದ ನಂತರ ನಾಗ ಚೈತನ್ಯ ಅವರ ಚಿತ್ರವೂ ಸೋಲು ಕಂಡಿದ್ದು, ವಿಚ್ಛೇದನ ಬಳಿಕ ಇಬ್ಬರ ಲಕ್ ಬದಲಾಗಿ ಹೋಗಿದೆ. ತೆಲುಗು ಅಲ್ಲದೆ ತಮಿಳಿನಲ್ಲೂ ಚಿತ್ರ ಬಿಡುಗಡೆಯಾಗಿದೆ. ಈ ಚಿತ್ರ ತಮಿಳಿನಲ್ಲಿ ನಾಗ ಚೈತನ್ಯ ಅವರ ಚೊಚ್ಚಲ ಚಿತ್ರವೂ ಆಗಿತ್ತು. ನಟ ನಾಗ ಚೈತನ್ಯ ಅವರೇ ಸ್ವತಃ ಡಬ್ಬಿಂಗ್ ಮಾಡಿದ್ದಾರೆ.

 ಈ ಚಿತ್ರವು ಮೊದಲ ದಿನ ಎರಡೂ ತೆಲುಗು ರಾಜ್ಯಗಳಲ್ಲಿ ಒಟ್ಟು 1.82 ಕೋಟಿ ಕಲೆಕ್ಷನ್ ಮಾಡಿದೆ. ಎರಡನೇ ದಿನದಲ್ಲಿ 80 ಲಕ್ಷ ಮತ್ತು ಭಾನುವಾರದಂದು 78 ಲಕ್ಷಗಳನ್ನು ಸಂಗ್ರಹಿಸಿದೆ. ಒಟ್ಟಾರೆಯಾಗಿ, ಕಸ್ಟಡಿ ಈ 3 ದಿನಗಳಲ್ಲಿ 3.40 Cr ನಿವ್ವಳ ಮತ್ತು 6.25 Cr~ ಗ್ರಾಸ್ ಸಂಗ್ರಹಿಸಿದೆ.

ಈ ಚಿತ್ರವು ಮೊದಲ ದಿನ ಎರಡೂ ತೆಲುಗು ರಾಜ್ಯಗಳಲ್ಲಿ ಒಟ್ಟು 1.82 ಕೋಟಿ ಕಲೆಕ್ಷನ್ ಮಾಡಿದೆ. ಎರಡನೇ ದಿನದಲ್ಲಿ 80 ಲಕ್ಷ ಮತ್ತು ಭಾನುವಾರದಂದು 78 ಲಕ್ಷಗಳನ್ನು ಸಂಗ್ರಹಿಸಿದೆ. ಒಟ್ಟಾರೆಯಾಗಿ, ಕಸ್ಟಡಿ ಈ 3 ದಿನಗಳಲ್ಲಿ 3.40 Cr ನಿವ್ವಳ ಮತ್ತು 6.25 Cr~ ಗ್ರಾಸ್ ಸಂಗ್ರಹಿಸಿದೆ.

naga chaitanya custody disappoints at box office.