ಪುಷ್ಪ ತಂಡಕ್ಕೆ ಬಾಲಿವುಡ್ ನಟನ ಎಂಟ್ರಿ! ಖಡಕ್ ಪೊಲೀಸ್ ಪಾತ್ರಕ್ಕೆ ಬರ್ತಿರೋದ್ಯಾರು?

25-05-23 01:11 pm       Source: news18   ಸಿನಿಮಾ

ಪುಷ್ಪ 2 ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ ನಟ ಎಂಟ್ರಿ ಕೊಡುತ್ತಿದ್ದಾರೆ. ಪಾತ್ರ ಯಾವುದು ಗೊತ್ತಾ?

ಪುಷ್ಪ ದಿ ರೈಸ್ ಸಿನಿಮಾದ ಮೂಲಕ ಮಿಂಚಿದ್ದ ಅಲ್ಲು ಅರ್ಜುನ್ ಅವರು ಬ್ಲಾಕ್​ಬಸ್ಟರ್ ಕೊಟ್ಟಿದ್ದಾರೆ. ಅವರು ತಮ್ಮ ಸಿನಿಮಾ ಮೂಲಕ ಪುಷ್ಪ ಫಿವರ್ ಶುರು ಮಾಡಿದ್ದಾರೆ. ಇದರಲ್ಲಿ ನಟಿಸಿದ ಇತರ ಕಲಾವಿದರ ಅಭಿನಯವೂ ಅಷ್ಟೇ ಸಖತ್ ಆಗಿದೆ. ಇದೀಗ ಈ ಸಿನಿಮಾದ ಸೀಕ್ವೆಲ್ ಬಗ್ಗೆ ಸಾಕಷ್ಟು ಕುತೂಹಲ ಸೃಷ್ಟಿಯಾಗಿದ್ದು ಒಂದೊಂದೇ ಎಕ್ಸೈಟಿಂಗ್ ಅಪ್ಡೇಟ್ಸ್ ಸಿಗುತ್ತಿದೆ. ಈಗ ಸಿಕ್ಕಿರುವ ಅಪ್ಡೇಟ್ ಕೇಳಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಈ ವಿಚಾರ ಇನ್ನೂ ಖಚಿತವಾಗದಿದ್ದರೂ ಇಂಥ ಸಾಧ್ಯತೆ ಬಗ್ಗೆ ಎಲ್ಲೆಡೆ ಚರ್ಚೆಯಾಗಿದೆ.

ಈಗ ಸಿಕ್ಕಿರೋ ಸಖತ್ ಥ್ರಿಲ್ಲಿಂಗ್ ವಿಚಾರ ಏನೆಂದರೆ ಇದರಲ್ಲಿ ದೀಪಿಕಾ ಪಡುಕೋಣೆ ಅವರ ಪತಿ ನಟ ರಣವೀರ್ ಸಿಂಗ್ ನಟಿಸಲಿದ್ದಾರಂತೆ. ಇದು ಸದ್ಯ ವೈರಲ್ ಆಗುತ್ತಿರುವ ಸುದ್ದಿ. ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ. ಅಲ್ಲು ಅರ್ಜುನ್ ಪುಷ್ಪ 2 ಸಿನಿಮಾದ ಕೆಲಸದಲ್ಲಿ ತುಂಬಾ ಬ್ಯುಸಿಯಾಗಿದ್ದಾರೆ. ಅವರ ಕುರಿತು ಒಂದೊಂದೇ ವಿಚಾರ ಎಲ್ಲರ ಕುತೂಹಲ ಕೆರಳಿಸುತ್ತಿದ್ದು ಈಗ ಈ ಪ್ರಾಜೆಕ್ಟ್​ಗೆ ಬಾಲಿವುಡ್ ನಟ ರಣವೀರ್ ಸಿಂಗ್ ಸೇರಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

 ಪುಷ್ಪ ದಿ ರೈಸ್ ಸಿನಿಮಾದ ಮೂಲಕ ಮಿಂಚಿದ್ದ ಅಲ್ಲು ಅರ್ಜುನ್ ಅವರು ಬ್ಲಾಕ್​ಬಸ್ಟರ್ ಕೊಟ್ಟಿದ್ದಾರೆ. ಅವರು ತಮ್ಮ ಸಿನಿಮಾ ಮೂಲಕ ಪುಷ್ಪ ಫಿವರ್ ಶುರು ಮಾಡಿದ್ದಾರೆ. ಇದರಲ್ಲಿ ನಟಿಸಿದ ಇತರ ಕಲಾವಿದರ ಅಭಿನಯವೂ ಅಷ್ಟೇ ಸಖತ್ ಆಗಿದೆ. ಇದೀಗ ಈ ಸಿನಿಮಾದ ಸೀಕ್ವೆಲ್ ಬಗ್ಗೆ ಸಾಕಷ್ಟು ಕುತೂಹಲ ಸೃಷ್ಟಿಯಾಗಿದ್ದು ಒಂದೊಂದೇ ಎಕ್ಸೈಟಿಂಗ್ ಅಪ್ಡೇಟ್ಸ್ ಸಿಗುತ್ತಿದೆ.

 ಈಗ ಸಿಕ್ಕಿರುವ ಅಪ್ಡೇಟ್ ಕೇಳಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಈ ವಿಚಾರ ಇನ್ನೂ ಖಚಿತವಾಗದಿದ್ದರೂ ಇಂಥ ಸಾಧ್ಯತೆ ಬಗ್ಗೆ ಎಲ್ಲೆಡೆ ಚರ್ಚೆಯಾಗಿದೆ.

 ಪ್ರಕಾರ ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ ಅವರು ಹಿಂದಿ ಸಿನಿಮಾದಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ರಣವೀರ್ ಅವರು ಪುಷ್ಪ 2 ಸಿನಿಂಆದಲ್ಲಿ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಳ್ಳಲಿದ್ದಾರಂತೆ. ಇದು ಸಿನಿಮಾಗೆ ಹೊಸ ದಿಕ್ಕನ್ನು ತೋರಿಸುತ್ತದೆ ಎನ್ನಲಾಗಿದೆ. ಸಿನಿಮಾದ ಕುರಿತು ಸಾಕಷ್ಟು ಹೈಪ್ ಕ್ರಿಯೇಟ್ ಮಾಡಲು ನಿರ್ದೇಶಕ ಸುಕುಮಾರ್ ಅವರು ಹಲವಾರು ಬಿಗ್ ಶಾಟ್ಸ್ ಪ್ಲಾನ್ ಮಾಡಿದ್ದಾರೆ. ರಣವೀರ್ ಅವರು ಸಿನಿಮಾದಲ್ಲಿ ಅತಿಥಿ ಪಾತ್ರವನ್ನು ಮಾಡಲಿದ್ದಾರಂತೆ.

 ಅಲ್ಲು ಅರ್ಜುನ್ ಪುಷ್ಪ 2 ಸಿನಿಮಾದ ಕೆಲಸದಲ್ಲಿ ತುಂಬಾ ಬ್ಯುಸಿಯಾಗಿದ್ದಾರೆ. ಅವರ ಕುರಿತು ಒಂದೊಂದೇ ವಿಚಾರ ಎಲ್ಲರ ಕುತೂಹಲ ಕೆರಳಿಸುತ್ತಿದ್ದು ಈಗ ಈ ಪ್ರಾಜೆಕ್ಟ್​ಗೆ ಬಾಲಿವುಡ್ ನಟ ರಣವೀರ್ ಸಿಂಗ್ ಸೇರಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

 Siasat.com ಪ್ರಕಾರ ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ ಅವರು ಹಿಂದಿ ಸಿನಿಮಾದಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ರಣವೀರ್ ಅವರು ಪುಷ್ಪ 2 ಸಿನಿಂಆದಲ್ಲಿ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಳ್ಳಲಿದ್ದಾರಂತೆ. ಇದು ಸಿನಿಮಾಗೆ ಹೊಸ ದಿಕ್ಕನ್ನು ತೋರಿಸುತ್ತದೆ ಎನ್ನಲಾಗಿದೆ. ಸಿನಿಮಾದ ಕುರಿತು ಸಾಕಷ್ಟು ಹೈಪ್ ಕ್ರಿಯೇಟ್ ಮಾಡಲು ನಿರ್ದೇಶಕ ಸುಕುಮಾರ್ ಅವರು ಹಲವಾರು ಬಿಗ್ ಶಾಟ್ಸ್ ಪ್ಲಾನ್ ಮಾಡಿದ್ದಾರೆ. ರಣವೀರ್ ಅವರು ಸಿನಿಮಾದಲ್ಲಿ ಅತಿಥಿ ಪಾತ್ರವನ್ನು ಮಾಡಲಿದ್ದಾರಂತೆ.

ಪುಷ್ಪ 2 ಸಿನಿಮಾದಲ್ಲಿ ಆ್ಯಕ್ಷನ್ಸ್ ಜಾಸ್ತಿ ಆಗಲಿದೆ. ನಟ ರಣವೀರ್ ಅವರು ರಾಕಿ ಔರ್ ರಾನಿ ಕಿ ಪ್ರೇಮ್ ಕಹಾನಿ ಸಿನಿಮಾ ಮಾಡುತ್ತಿದ್ದಾರೆ. ಇದರಲ್ಲಿ ಆಲಿಯಾ ಭಟ್ ನಟಿಸುತ್ತಿದ್ದಾರೆ.

ranveer singh to play cop in allu arjuns pushpa 2 movie.