ಬ್ರೇಕಿಂಗ್ ನ್ಯೂಸ್
22-06-23 01:32 pm Source: Vijayakarnataka ಸಿನಿಮಾ
ತಮ್ಮ ಅಭಿನಯದ ಮೂಲಕ ಅಭಿಮಾನಿಗಳ ಮನ ಗೆದ್ದಿರುವ 'ಡೆಡ್ಲಿ ಸೋಮ' ಖ್ಯಾತಿಯ ಆದಿತ್ಯ ನಾಯಕರಾಗಿ ನಟಿಸುತ್ತಿರುವ ಚಿತ್ರವೊಂದು ಸದ್ದಿಲ್ಲದೆ ಆರಂಭವಾಗಿದೆ. ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ.
ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರದ ಸಿನಿಮಾವಿದು
ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಕಿಶೋರ್ ಮೇಗಳಮನೆ ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಕಿಶೋರ್ ಮೇಗಳಮನೆ ಅವರೆ ಬರದಿದ್ದಾರೆ. ಕಿಶೋರ್ ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ.
ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದ್ದು, ಚಿಕ್ಕಮಗಳೂರು ಹಾಗೂ ಬೆಂಗಳೂರು ಸುತ್ತಮುತ್ತ ಹದಿನೇಳು ದಿನಗಳ ಚಿತ್ರೀಕರಣ ನಡೆದಿದೆ.
ಈ ಸಿನಿಮಾ ನಿರ್ಮಾಪಕರು ಯಾರು?
ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಫ್ಯಾಕ್ಟರಿ ಮಾಲೀಕರಾದ ಚನ್ನಕೇಶವ ಬಿ.ಸಿ, ನರಸಿಂಹಮೂರ್ತಿ ಚಕ್ರಭಾವಿ, ರಮೇಶ್ ಬಂಡೆ, ಸ್ವಾಮಿ ಚಕ್ರಭಾವಿ, ರವಿ ಕೀಲರ ಮಂಡ್ಯ ಹಾಗೂ ರಾಮಚಂದ್ರಯ್ಯ ಕೆ.ಜಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ತಂತ್ರಜ್ಞರು ಯಾರು?
ಗಾಯಕರಾಗಿ ಹೆಸರು ಮಾಡಿರುವ ಶಶಾಂಕ್ ಶೇಷಗಿರಿ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಉದಯ್ ಲೀಲಾ ಛಾಯಾಗ್ರಹಣ ಹಾಗೂ ಅರ್ಜುನ್ ಕಿಟ್ಟು ಸಂಕಲನ ಈ ನೂತನ ಚಿತ್ರಕ್ಕಿದೆ.
ರಂಜನಿ ರಾಘವನ್ ನಾಯಕಿ
ಆದಿತ್ಯ ಅವರಿಗೆ ನಾಯಕಿಯಾಗಿ ರಂಜನಿ ರಾಘವನ್ ನಟಿಸುತ್ತಿದ್ದಾರೆ. ಕನ್ನಡ ಕಿರುತೆರೆಯಲ್ಲಿ ರಂಜನಿ ಅವರು ಕೆಲ ಧಾರಾವಾಹಿಗಳಲ್ಲಿ ನಟಿಸಿ ಹೆಸರು ಗಳಿಸಿದ್ದಾರೆ. ಶಿವಮಣಿ (ನಿರ್ದೇಶಕ), ಅಶ್ವಿನ್ ಹಾಸನ್, ಕರಿಸುಬ್ಬು ಮುಂತಾದವರು ತಾರಾಬಳಗದಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಸಿನಿಮಾ ತಂಡ ಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿ ನೀಡಲಿದೆಯಂತೆ.
ಈ ಸಿನಿಮಾ ಟೈಟಲ್ ಏನು?
ಸದ್ಯದಲ್ಲೇ ಕನ್ನಡದ ಚಿತ್ರರಂಗದ ಖ್ಯಾತ ನಟರೊಬ್ಬರು ಚಿತ್ರದ ಶೀರ್ಷಿಕೆ ಅನಾವರಣ ಮಾಡಲಿದ್ದಾರೆ ಎಂದು ನಿರ್ದೇಶಕರು ತಿಳಿಸಿದ್ದಾರೆ.
ನಟ ಆದಿತ್ಯ ಸಿನಿಮಾಗಳು
ಆದಿತ್ಯ ಅವರು 'ಮುಂದುವರೆದ ಅಧ್ಯಾಯ' ನಂತರ 'ನಾನೇ ನೆಕ್ಸ್ಟ್ ಸಿಎಂ', '5ಡಿ' ಸಿನಿಮಾದಲ್ಲಿ ನಟಿಸಿದ್ದರು. 'ಎದೆಗಾರಿಕೆ' ಸಿನಿಮಾ ನಂತರದಲ್ಲಿ ಆದಿತ್ಯ ಅವರಿಗೆ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿಲ್ಲ. 2017ರ ನಂತರ ಅಷ್ಟಾಗಿ ಸಿನಿಮಾ ಮಾಡದ ಆದಿತ್ಯ ಇತ್ತೀಚೆಗೆ ಒಂದಾದ ಮೇಲೆ ಒಂದರಂತೆ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ.
ರಂಜನಿ ರಾಘವನ್ ಸಿನಿಮಾಗಳು
ರಂಜನಿ ರಾಘವನ್ ನಟನೆಯ 'ಕನ್ನಡತಿ' ಧಾರಾವಾಹಿ ಕೆಲ ತಿಂಗಳುಗಳ ಹಿಂದೆ ಅಂತ್ಯ ಆಗಿತ್ತು. ಈಗ ರಂಜನಿ ರಾಘವನ್ ಅವರು ಸಿನಿಮಾ ಕಡೆಗೆ ಹೆಚ್ಚು ಗಮನ ನೀಡುತ್ತಿದ್ದಾರೆ. ರಂಜನಿ ರಾಘವನ್ ಅವರು 'ರಾಜಹಂಸ', 'ಠಕ್ಕರ್', 'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ', 'ನೈಟ್ ಕರ್ಫ್ಯೂ', 'ಸತ್ಯಂ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರಂಜನಿ ರಾಘವನ್ ಅವರಿಗೆ 'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಸಿನಿಮಾ ಒಂದಷ್ಟು ಹೆಸರು ತಂದುಕೊಟ್ಟಿತ್ತು.
ರಂಜನಿ ರಾಘವನ್ ಅವರು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ತೀರ್ಥಯಾತ್ರೆಗಳಿಗೆ ಹೋದ ಫೋಟೋಗಳನ್ನು ಹಂಚಿಕೊಂಡು, "ಮಾಹೇಶ್ವರದ ನರ್ಮದಾ ಘಾಟ್, ಮರಾಠ ಸಂಸ್ಥಾನದ ಧೀಮಂತ ರಾಣಿ ಅಹಿಲ್ಯಾಬಾಯಿ ಹೋಳ್ಕರ್ ಳ ಹಿರಿಮೆ ಗರಿಮೆಗಳನ್ನ ಸಾರೋ ರಾಜವಾಡ ಅರಮನೆ ಮತ್ತು ದೇವಸ್ಥಾನಗಳನ್ನು ಕಣ್ಮುಂಬಿಕೊಂಡು ಸಂತಸಪಟ್ಟಿದ್ದು ಹೀಗೆ" ಎಂದು ಹೇಳಿದ್ದರು.
Kannada actor Aditya upcoming suspense thriller movie with Ranjani Raghavan.
04-10-24 09:18 pm
HK News Desk
ಬೆಂಗಳೂರು ; 3 ಪ್ರತಿಷ್ಠಿತ ಕಾಲೇಜುಗಳಿಗೆ ಹುಸಿ ಬಾಂ...
04-10-24 08:25 pm
Dinesh Gundu Rao, Savarkar: ಸಾವರ್ಕರ್ ಮಾಂಸಾಹಾರ...
04-10-24 12:38 pm
Vijay Tata, HD Kumaraswamy, Ramesh Gowda: ಚನ್...
04-10-24 12:02 pm
Lawyer Jagadish, Big Boss Kannada: ಬಿಗ್ ಬಾಸ್...
03-10-24 08:37 pm
05-10-24 06:40 pm
HK News Desk
Tirupati laddu row, CBI: ತಿರುಪತಿ ಲಡ್ಡಿನಲ್ಲಿ ಕ...
04-10-24 07:10 pm
Isha foundation raid, Court: ಇಶಾ ಫೌಂಡೇಶನ್ ಆಶ್...
02-10-24 02:10 pm
Israel-Iran war: ಇಸ್ರೇಲ್ ಮೇಲೆ ಮುಗಿಬಿದ್ದ ಇರಾನ್...
02-10-24 11:43 am
Fire in Thailand: ಥಾಯ್ಲೆಂಡ್ ; ಸ್ಕೂಲ್ ಬಸ್ ಟಯರ...
01-10-24 07:36 pm
05-10-24 10:54 pm
Mangalore Correspondent
Mangalore crime, Arun Ullal: ಬೇರೆಯವರ ಹಾಲ್ ಗಳಲ...
05-10-24 10:06 pm
Mangalore Pradeep Acharya, powerlifting: ಕಾಮನ...
05-10-24 07:11 pm
Mangalore News, Israel Travels Bus: ಇಸ್ರೇಲ್ ಟ...
05-10-24 04:42 pm
Nalin Kateel, Mangalore: ನಮ್ಮನ್ನು 40 ಪರ್ಸೆಂಟ್...
05-10-24 03:54 pm
05-10-24 08:26 pm
Mangalore Correspondent
ಬೆಂಗಳೂರು ಏರ್ಪೋರ್ಟಲ್ಲಿ ಸಿಕ್ಕಿಬಿದ್ದಿದ್ದೇನೆ, ದೊಡ...
03-10-24 10:49 pm
BMTC Conductor Stabbed, Bangalore crime; ಫುಟ್...
02-10-24 05:44 pm
CCB Mangalore Police, Drugs: ತಲಪಾಡಿ ಗಡಿಭಾಗದಲ್...
02-10-24 04:45 pm
Vardhman Group, Digital Arrest, Fraud; ವರ್ಧಮಾ...
02-10-24 04:03 pm