ಬ್ರೇಕಿಂಗ್ ನ್ಯೂಸ್
30-06-23 04:02 pm Source: Vijayakarnataka ಸಿನಿಮಾ
ಹರೀಶ್ ಬಸವರಾಜ್
ರಾಜ್ ಬಿ ಶೆಟ್ಟಿ ಎಂದರೆ ‘ಒಂದು ಮೊಟ್ಟೆಯ ಕಥೆ’ ಸಿನಿಮಾವನ್ನೇ ಜನ ನೆನಪಿಸಿಕೊಳ್ಳುತ್ತಾರೆ. ಅವರನ್ನು ಹಾಸ್ಯ ನಟ ಎಂದು ಗುರುತಿಸುತ್ತಾರೆ. ಆ ಟ್ರೇಡ್ ಮಾರ್ಕ್ ಅನ್ನು ಹೊಡೆದು ಹಾಕಲು ರಾಜ್ ಬಿ ಶೆಟ್ಟಿ ‘ಗರುಡ ಗಮನ ವೃಷಭ ವಾಹನ’ ಎಂಬ ಮಾಸ್ ಸಿನಿಮಾವನ್ನು ಮಾಡಿದರು. ಈಗ ‘ಟೋಬಿ’ ಎಂಬ ವಿಭಿನ್ನ ಸಿನಿಮಾದ ಮೂಲಕ ಗಮನ ಸೆಳೆಯಲು ಸಜ್ಜಾಗಿದ್ದಾರೆ. ಕೆಲವು ವಾರಗಳ ಹಿಂದೆ ಅದರ ಟೈಟಲ್ ಅನೌನ್ಸ್ ಆಗಿತ್ತು. ಈಗ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಅದೀಗ ಸ್ಯಾಂಡಲ್‌ವುಡ್‌ನಲ್ಲಿ ಸಂಚಲನವನ್ನು ಸೃಷ್ಟಿಸಿದೆ.
ಹೌದು, ಗುರುವಾರ ರಿಲೀಸ್ ಆಗಿರುವ ಫಸ್ಟ್ ಲುಕ್‌ನಲ್ಲಿ ರಾಜ್ ಬಿ ಶೆಟ್ಟಿಯವರ ಅವತಾರವೇ ವಿಭಿನ್ನವಾಗಿದೆ. ಏಟು ಬಿದ್ದು ರಕ್ತಸಿಕ್ತವಾದ ಮುಖ, ಮೂಗಿಗೆ ಬಳೆಯಷ್ಟು ದೊಡ್ಡದಾದ ಮೂಗುತಿ. ಸಿಟ್ಟು ಹೀಗೆ ರಾಜ್ ಅವರ ಲುಕ್ ಕ್ರೋದವನ್ನು ಎತ್ತಿ ತೋರಿಸುತ್ತಿದೆ. ಇಂತಹ ಲುಕ್‌ನಲ್ಲಿ ರಾಜ್ ಬಿ ಶೆಟ್ಟಿ ಅವರನ್ನು ಜನ ಇದೇ ಮೊದಲ ಬಾರಿಗೆ ನೋಡುತ್ತಿದ್ದಾರೆ. ದೊಡ್ಡ ಮೂಗತಿಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ರಾಜ್ ಬಿ ಶೆಟ್ಟಿ ಲವಲವಿಕೆ ಜತೆ ಮಾತನಾಡಿದ್ದಾರೆ.
![]()
ಅಚ್ಚರಿಯಾಗುವಂತಹ ಸಾಕಷ್ಟು ವಿಷಯಗಳಿವೆ
'ಟೋಬಿ ಪಾತ್ರಧಾರಿ ಅಂತಹ ಮೂಗುತಿಯನ್ನು ತೊಡಲು ಅದಕ್ಕೆ ಅದರದ್ದೇ ಆದ ಕಾರಣವಿದೆ. ಇದೊಂದು ರೀತಿಯಲ್ಲಿ ನನ್ನೊಳಗೆ ಮತ್ತು ಪಾತ್ರದಲ್ಲಿ ಆದಂತಹ ಬದಲಾವಣೆಯನ್ನು ತೋರಿಸುತ್ತದೆ. ಈ ಪೋಸ್ಟರ್ ನೋಡಿ ಅಚ್ಚರಿಯಾಗುತ್ತಾರೆ. ಅದೇ ರೀತಿ ಸಿನಿಮಾದಲ್ಲಿ ಅಚ್ಚರಿಯಾಗುವಂತಹ ಸಾಕಷ್ಟು ವಿಷಯಗಳಿವೆ. ಈ ಪೋಸ್ಟರ್‌ನಲ್ಲಿ ಕ್ರೋಧ ಎದ್ದು ಕಾಣುತ್ತದೆ. ಅದು ಬರೀ ಕ್ರೋಧವಲ್ಲ, ಅದರಲ್ಲಿಆಕ್ರಮಣಕಾರಿ ಸಹ ಆಗಿರುತ್ತದೆ’ ಎಂದು ಹೇಳಿದ್ದಾರೆ ರಾಜ್.
ನನ್ನ ಸಿಟ್ಟು ಯಾರಿಗೂ ತೊಂದರೆ ಕೊಡುವುದಿಲ್ಲ
‘ನಾನು ಇಡೀ ಸಿನಿಮಾ ಈ ಮೂಗುತಿಯನ್ನು ತೊಟ್ಟಿರುವುದಿಲ್ಲ. ಆದರೆ ಯಾವುದೋ ಒಂದು ಹಂತದಲ್ಲಿ ಅನಿವಾರ್ಯತೆ ಸೃಷ್ಟಿಯಾಗಿ ಅದನ್ನು ತೊಡುತ್ತೇನೆ. ಇದು ಜನರಿಗೆ ಇಷ್ಟವಾಗುತ್ತದೆ ಎಂಬುದು ನನ್ನ ನಂಬಿಕೆ. ನನ್ನ ಸಿಟ್ಟು ಸಹ ಟೋಬಿಯ ಪಾತ್ರವನ್ನು ರೂಪಿಸಲು ಸಹಾಯವಾಗಿದೆ. ನನ್ನ ಸಿಟ್ಟು ಯಾರಿಗೂ ತೊಂದರೆ ಕೊಡುವುದಿಲ್ಲ, ಬದಲಿಗೆ ಅದರಿಂದ ಪ್ರೊಡಕ್ಟಿವ್ ಮತ್ತು ಕ್ರಿಯೇಟಿವ್ ಕೆಲಸಗಳು ಆಗುತ್ತವೆ’ ಎನ್ನುತ್ತಾರೆ ರಾಜ್ ಬಿ ಶೆಟ್ಟಿ.

ಉತ್ತಮ ಸಿನಿಮಾನೇ ಒಂದು ಪ್ರಚಾರವಿದ್ದಂತೆ
ಈ ರೀತಿಯ ವಿಚಿತ್ರ ಪೋಸ್ಟರ್‌ಗಳ ಬಗ್ಗೆಯೂ ಮಾತನಾಡಿರುವ ರಾಜ್, ‘ಸಿನಿಮಾ ಮೇಕರ್‌ಗಳು ಯಾವಾಗಲೂ ಜನರನ್ನು ಹೊಸ ಪ್ರಯೋಗದತ್ತ ಕರೆದುಕೊಂಡು ಹೋಗುವ ಪ್ರಯತ್ನ ಮಾಡುತ್ತೇವೆ. ಸಿನಿಮಾ ಮತ್ತು ಪ್ರಚಾರ ಎರಡನ್ನೂ ನಾನು ಮಿಕ್ಸ್ ಮಾಡುವುದಿಲ್ಲ. ನನಗೆ ಉತ್ತಮ ಸಿನಿಮಾನೇ ಒಂದು ಪ್ರಚಾರವಿದ್ದಂತೆ. ಯಾವಾಗಲೂ ಪೋಸ್ಟರ್‌ಗಳು ಸಿನಿಮಾಗಳ ಕನ್ನಡಿಯಂತೆ ಕಾಣಬೇಕು. ಒಳ್ಳೆಯ ಸಿನಿಮಾ ಎನಿಸುವುದು ಸಹ ಪೋಸ್ಟರ್ ನೋಡಿದರೆ ಗೊತ್ತಾಗಬೇಕು’ ಎನ್ನುವುದು ರಾಜ್ ಬಿ ಶೆಟ್ಟಿಯವರ ಮಾತು.
‘ನನ್ನ ಮೊದಲ ಸಿನಿಮಾ ‘ಒಂದು ಮೊಟ್ಟೆಯ ಕಥೆ’ ನನ್ನದೇ ವೈಯಕ್ತಿಕ ಅನುಭವವನ್ನು ಇಟ್ಟುಕೊಂಡು ಮಾಡಿದ ಚಿತ್ರ. ಅದರ ಬಜೆಟ್ ಬಹಳ ಚಿಕ್ಕದಾಗಿತ್ತು. ಆ ಬಜೆಟ್ ಅನ್ನು ‘ಗರುಡ ಗಮನ ವೃಷಭ ವಾಹನ’ ಸಿನಿಮಾದ ಮೂಲಕ ಇನ್ನಷ್ಟು ಹೆಚ್ಚು ಮಾಡಿದೆವು. ಈ ಬಾರಿ ಮತ್ತಷ್ಟು ಹೆಚ್ಚಿಸಿ ‘ಟೋಬಿ’ ಮಾಡಿದ್ದೇವೆ. ಹಾಗಾಗಿ ಸಿನಿಮ್ಯಾಟಿಕ್ ಅನುಭವ ಮೊದಲ ಎರಡು ಸಿನಿಮಾಗಳಿಗಿಂತಲೂ ದೊಡ್ಡದಾಗಿರುತ್ತದೆ’ಎಂದು ಹೇಳಿದ್ದಾರೆ. ‘ಟೋಬಿ’ ಸಿನಿಮಾವನ್ನು ರಾಜ್ ಅವರ ಜತೆ ಕೆಲಸ ಮಾಡುತ್ತಿದ್ದ ಬಾಸಿಲ್ ಎಂಬುವವರು ನಿರ್ದೇಶನ ಮಾಡಿದ್ದಾರೆ. ಸಂಯಕ್ತಾ ಹೊರನಾಡು, ಚೈತ್ರಾ ಜೆ ಆಚಾರ್ ನಟಿಸಿದ್ದಾರೆ.
Raj B Shetty Samyukta hornad Chaithra j achars toby movie first look released.
26-12-25 09:38 pm
HK News Desk
ಬೈಕ್ ಗೆ ಟಿಪ್ಪರ್ ಡಿಕ್ಕಿ ; ಚರ್ಚ್ ನಲ್ಲಿ ಕ್ರಿಸ್ ಮ...
26-12-25 01:35 pm
ಸದ್ಯಕ್ಕಿಲ್ಲ ಸಿಎಂ ಬದಲಾವಣೆ ! ರಾಜ್ಯದಿಂದ ಕೇಂದ್ರ ನ...
25-12-25 08:00 pm
Chitradurga Seabird Bus accident: ಚಿತ್ರದುರ್ಗ...
25-12-25 06:26 pm
SeaBird Bus Fire Accident, Chitradurga: ಕಂಟೈನ...
25-12-25 12:12 pm
26-12-25 09:41 pm
HK News Desk
ಕ್ರೈಸ್ತರ ಮೇಲೆ ದಾಳಿ ; ನೈಜೀರಿಯಾದಲ್ಲಿ ಐಸಿಸ್ ಉಗ್ರ...
26-12-25 05:50 pm
ರೈಲ್ವೆಯಲ್ಲಿ ಒಂದೇ ವರ್ಷಕ್ಕೆ ಎರಡನೇ ಬಾರಿ ಪ್ರಯಾಣ ದ...
26-12-25 03:04 pm
ಹೆತ್ತವರು ಮನೆಯಲ್ಲಿ ಆತ್ಮಹತ್ಯೆ ; ಬೆಳೆದು ನಿಂತ ಪುತ...
26-12-25 02:50 pm
ಜಗತ್ತಿನ ಅತಿ ದೊಡ್ಡ ಮುಸ್ಲಿಂ ದೇಶದಲ್ಲಿ 4500 ವರ್ಷ...
24-12-25 11:13 pm
26-12-25 10:34 pm
Mangalore Correspondent
Grace Ministry Christmas 2025: ಗ್ರೇಸ್ ಮಿನಿಸ್ಟ...
26-12-25 06:37 pm
ಎಂಆರ್ ಜಿ ಗ್ರೂಪಿನಿಂದ ಆಶಾ ಪ್ರಕಾಶ್ ಶೆಟ್ಟಿ ನೆರವು...
25-12-25 10:54 pm
ಡಿ.27ರಂದು 9ನೇ ವರ್ಷದ ಮಂಗಳೂರು ಕಂಬಳ ; ನವ ವರ್ಷ- ನ...
24-12-25 10:30 pm
ಬಜಪೆಯಲ್ಲಿ ಕಾಂಗ್ರೆಸ್ ಓಟಕ್ಕೆ ಎಸ್ಡಿಪಿಐ ಅಡ್ಡಗಾಲು...
24-12-25 06:07 pm
26-12-25 11:21 pm
Bangalore Correspondent
ಪಡುಬಿದ್ರೆ ; ನೇಮೊತ್ಸದಲ್ಲಿ ವೃದ್ಧೆಯ ಸರ ಕಳ್ಳತನ, ಮ...
26-12-25 11:06 pm
ವರದಕ್ಷಿಣೆಗಾಗಿ ದೌರ್ಜನ್ಯ- ಕಿರುಕುಳ ; ಗಂಡನ ಮನೆಯಲ್...
26-12-25 10:44 pm
ಬಾಂಗ್ಲಾದಲ್ಲಿ ಮತ್ತೊಬ್ಬ ಹಿಂದು ಯುವಕನ ಹತ್ಯೆ ; ಕೋಮ...
26-12-25 03:31 pm
ಶಂಕಿತ ಬಾಂಗ್ಲಾ ವ್ಯಕ್ತಿಗೆ ಪಾಸ್ಪೋರ್ಟ್ ; ಸಹೋದ್ಯೋಗ...
23-12-25 01:41 pm