ಬ್ರೇಕಿಂಗ್ ನ್ಯೂಸ್
04-07-23 01:35 pm Source: Vijayakarnataka ಸಿನಿಮಾ
ಜಗತ್ತೇ ಒಂದು ಮನೆ, ನಾವೆಲ್ಲ ಒಂದೇ ಸೂರಿನಡಿ ಬದುಕುತ್ತಿರುವವರು ಎನ್ನುವ ಭಾವೈಕ್ಯತೆಯ ಸಂದೇಶ ಸಾರುವ ಸ್ಟ್ರಾಂಗ್ ಕಂಟೆಂಟ್ ಒಳಗೊಂಡಿದ್ದ 'ತೋತಾಪುರಿ' ಚಿತ್ರವು ಪ್ರೇಕ್ಷಕರಿಂದ, ವಿಮರ್ಶಕರಿಂದ ಯಾವ ರೀತಿಯ ಪ್ರತಿಕ್ರಿಯೆ ಪಡೆದಿದೆ ಎನ್ನೋದು ಎಲ್ಲರಿಗೂ ತಿಳಿದಿರುವ ವಿಚಾರವೇ! ಆಗಲೇ 'ತೋತಾಪುರಿ' ಚಿತ್ರದ ಎರಡನೇ ಭಾಗವನ್ನು ಮಾಡುತ್ತಿರುವುದಾಗಿ ನಿರ್ದೇಶಕ ವಿಜಯಪ್ರಸಾದ್ ಸೂಚನೆ ನೀಡಿದ್ದರು. ಅದರಂತೆ ಈಗ ತೋತಾಪುರಿ ಭಾಗ-2 ನಿರ್ಮಾಣವಾಗಿದ್ದು, ಶೀಘ್ರದಲ್ಲೇ ತೆರೆ ಕಾಣಲು ಸಿದ್ದವಾಗುತ್ತಿದೆ.
'ತೋತಾಪುರಿ-2' ಚಿತ್ರದ ಫಸ್ಟ್‌ಲುಕ್ ರಿಲೀಸ್
ಮೊದಲ ಭಾಗದ ಅಂತ್ಯದಲ್ಲಿ ಕಾಣಿಸಿಕೊಂಡು ಒಂದು ಸ್ಪೆಷಲ್ ಲುಕ್ ನೀಡಿದ್ದ ನಟ ಡಾಲಿ ಧನಂಜಯ್ ಈ ಚಿತ್ರದಲ್ಲಿ ಪೂರ್ಣಪ್ರಮಾಣದ ನಾಯಕನಾಗಿ ಹೊರಹೊಮ್ಮಿದ್ದಾರೆ. ಅವರ ಪಾತ್ರ ಚಿತ್ರದಲ್ಲಿ ತುಂಬಾ ವಿಶೇಷವಾಗಿ ಮೂಡಿಬಂದಿದೆ, ನಿನ್ನೆ(ಸೋಮವಾರ)ಗುರುಪೂರ್ಣಿಮೆ. ಅದರಂಗವಾಗಿ 'ತೋತಾಪುರಿ-2' ಚಿತ್ರದ ಫಸ್ಟ್‌ಲುಕ್‌ನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಈ ಪೋಸ್ಟರ್‌ನಲ್ಲಿ ನಾಯಕರಾದ ಡಾಲಿ ಡಾಲಿ ಧನಂಜಯ್ ಹಾಗೂ ಜಗ್ಗೇಶ್ ಅವರ ಕ್ಯಾರೆಕ್ಟರ್ ಹೇಗಿರುತ್ತೆ ಅನ್ನೋದರ ಝಲಕ್ ಇದೆ.
ಸೆನ್ಸಾರ್ ಪ್ರಕ್ರಿಯೆ ಮುಗಿಯುತ್ತಿದ್ದಮತೆ ರಿಲೀಸ್ ಡೇಟ್ ಅನೌನ್ಸ್
ಮೊದಲ ಭಾಗದಲ್ಲಿ 'ನವರಸ ನಾಯಕ' ಜಗ್ಗೇಶ್, ಅದಿತಿ ಪ್ರಭುದೇವ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ವಿಜಯ ಪ್ರಸಾದ್ ಅವರ ನಿರ್ದೇಶನದ ಈ ಚಿತ್ರವನ್ನು ಶಿವಲಿಂಗ ಖ್ಯಾತಿಯ ನಿರ್ಮಾಪಕ ಕೆ ಎ ಸುರೇಶ್ ಅವರು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದರು. ಈಗ ಚಿತ್ರತಂಡ ತೋತಾಪುರಿ-2 ಪೋಸ್ಟರ್ ಬಿಡುಗಡೆ ಮಾಡಿದ್ದು, ಸದ್ಯದಲ್ಲೇ ಚಿತ್ರ ತೆರೆಗೆ ಬರುವ ಸೂಚನೆಯನ್ನು ನೀಡಿದೆ, ಸದ್ಯದಲ್ಲೇ ಚಿತ್ರದ ಟೀಸರ್, ಟ್ರೈಲರ್, ಹಾಡುಗಳ ಬಿಡುಗಡೆಯ ಬಗ್ಗೆ ಚಿತ್ರತಂಡ ಮಾಹಿತಿ ನೀಡಲಿದೆ. ಅಲ್ಲದೆ ಸೆನ್ಸಾರ್ ಪ್ರಕ್ರಿಯೆ ಮುಗಿದ ಕೂಡಲೇ ರಿಲೀಸ್ ಡೇಟ್ ಕೂಡ ಅನೌನ್ಸ್ ಮಾಡಲಿದೆ.
![]()
ಚಿತ್ರದಲ್ಲಿ ಮನರಂಜನಾತ್ಮಕ ಕಂಟೆಂಟ್
'ತೋತಾಪುರಿ ಪಾರ್ಟ್-2' ಮೊದಲಿಗಿಂತ ಹೆಚ್ಚಿನ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಡಾಲಿ ಅಭಿಮಾನಿಗಳಿಗಂತೂ ಫುಲ್ ಮೀಲ್ಸ್ ಅನ್ನಬಹುದು. ಅಲ್ಲದೆ ಪೋಸ್ಟ್ ಪ್ರೊಡಕ್ಷನ್ ಹಂತದ ಸಣ್ಣಪುಟ್ಟ ಕೆಲಸಗಳು ನಡೆಯುತ್ತಿದ್ದು, ಸದ್ಯದಲ್ಲೇ ಫಸ್ಟ್ ಕಾಪಿ ಹೊರಬರಲಿದೆ. ನಂತರ ರಿಲೀಸ್ ಡೇಟ್ ಅನೌನ್ಸ್ ಮಾಡಲಾಗುವುದು, ನಮ್ಮ ನಿರೀಕ್ಷೆಯಂತೆಯೇ ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ಪ್ರೇಕ್ಷಕರಿಗೆ ಇಷ್ಟವಾಗುವ ಮನರಂಜನಾತ್ಮಕ ಕಂಟೆಂಟ್ ಚಿತ್ರದಲ್ಲಿದೆ.
ದೊಡ್ಡ ತಾರಾಗಣವಿರುವ ಸಿನಿಮಾ
ಥಿಯೇಟರ್‌ಗೆ ಬರುವ ಪ್ರೇಕ್ಷಕರಿಗೆ ಉತ್ತಮ ಮನರಂಜನೆಯ ಜೊತೆ ಕಾಮಿಡಿ ಪಂಚಿಂಗ್ ನೀಡಲಿದೆ ಎಂದು ಚಿತ್ರದ ನಿರ್ಮಾಪಕ ಕೆ.ಎ.ಸುರೇಶ್ ಅವರು ಹೇಳಿದ್ದಾರೆ. ಈ ಚಿತ್ರದಲ್ಲಿ ಡಾಲಿ ಧನಂಜಯ ಅಲ್ಲದೆ ಜಗ್ಗೇಶ್, ದತ್ತಣ್ಣ, ಸುಮನ ರಂಗನಾಥ್, ಅದಿತಿ ಪ್ರಭುದೇವ, ವೀಣಾ ಸುಂದರ್, ಹೇಮಾದತ್ ಹೀಗೆ ಮೊದಲ ಭಾಗದಲ್ಲಿದ್ದ ಬಹುತೇಕ ಪಾತ್ರಗಳು ಮುಂದುವರಿಯಲಿವೆ.
ಥಿಯೇಟರ್‌ಗೆ ಬರುವ ಪ್ರೇಕ್ಷಕರಿಗೆ ಉತ್ತಮ ಮನರಂಜನೆಯ ಜೊತೆ ಕಾಮಿಡಿ ಪಂಚಿಂಗ್ ನೀಡಲಿದೆ ಎಂದು ಚಿತ್ರದ ನಿರ್ಮಾಪಕ ಕೆ.ಎ.ಸುರೇಶ್ ಅವರು ಹೇಳಿದ್ದಾರೆ. ಈ ಚಿತ್ರದಲ್ಲಿ ಡಾಲಿ ಧನಂಜಯ ಅಲ್ಲದೆ ಜಗ್ಗೇಶ್, ದತ್ತಣ್ಣ, ಸುಮನ ರಂಗನಾಥ್, ಅದಿತಿ ಪ್ರಭುದೇವ, ವೀಣಾ ಸುಂದರ್, ಹೇಮಾದತ್ ಹೀಗೆ ಮೊದಲ ಭಾಗದಲ್ಲಿದ್ದ ಬಹುತೇಕ ಪಾತ್ರಗಳು ಮುಂದುವರಿಯಲಿವೆ.
Jaggesh Dhananjaya starrer Totapuri 2 movie first look.
18-06-26 01:25 pm
HK News Staffer
Jayadeva Hospital, Mysuru: ಮೈಸೂರಿನ ಜಯದೇವ ಆಸ್ಪ...
18-06-26 01:17 pm
ಧರ್ಮಸ್ಥಳ ಕೇಸ್ ; ಎಡಪಂಥೀಯರ ಒತ್ತಡಕ್ಕೆ ಎಸ್ಐಟಿ, ಷಡ...
17-06-26 10:12 pm
ಆರ್ಎಸ್ಎಸ್ ಲೆಕ್ಕ ಕೇಳಲು ಇವನ್ಯಾರು? ಪ್ರಿಯಾಂಕ್ ಖ...
17-06-26 06:59 pm
ಜಿಮ್ ಮುಗಿಸಿ ಮನೆಗೆ ಬಂದ ಯುವಕನಿಗೆ ಹೃದಯಾಘಾತ ; ಹೆ...
17-06-26 06:35 pm
18-06-26 01:23 pm
HK News Staffer
ಹೊರ್ಮುಜ್ ಬಿಕ್ಕಟ್ಟು; ಒಮಾನ್ ಕರಾವಳಿಯಲ್ಲಿ ಮತ್ತೊಂದ...
15-06-26 11:18 am
ಬಿರಿಯಾನಿ ಹೆಸರಲ್ಲಿ ಮಹಿಳೆಯ ಮಾನ ಕಳೆದ ಟೆಕ್ಕಿ! ತಮಾ...
14-06-26 09:46 pm
ಸಹಕಾರಿ ಬ್ಯಾಂಕುಗಳಲ್ಲಿ ಸರ್ವಾಧಿಕಾರಕ್ಕೆ ಬ್ರೇಕ್ !...
14-06-26 07:17 pm
ಅಸ್ಸಾಂನಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಆಧಾರ್ ಕಾರ್ಡ...
14-06-26 04:49 pm
18-06-26 12:33 pm
HK News Staffer
ಬಸ್ಸೋ, ಬಸ್ ನಿಲ್ದಾಣವೋ ? ಗುರುಪುರ ಬಂಡಸಾಲೆಯಲ್ಲಿ ವ...
16-06-26 11:35 am
ಧರ್ಮಸ್ಥಳ ಬುರುಡೆ ಪ್ರಕರಣ ; ಗಿರೀಶ್ ಮಟ್ಟಣ್ಣನವರ್,...
15-06-26 04:52 pm
ಅಂಬಾನಿ ಕುಟುಂಬದ ಗುರೂಜಿ ಜೊತೆ ಕೊಲ್ಲೂರು ಮೂಕಾಂಬಿಕೆ...
14-06-26 09:47 pm
ದ.ಕ. ಜಿಲ್ಲೆಯ 14 ಪ್ರಮುಖ ರಸ್ತೆ ಅಭಿವೃದ್ದಿ ಕಾಮಗಾರ...
14-06-26 02:37 pm
18-06-26 01:20 pm
HK News Staffer
ಸ್ಕೂಟರಲ್ಲಿ ನಾಲ್ವರು ಹೆಣ್ಮಕ್ಕಳ ಜಾಲಿ ರೈಡ್; ನಿಯಂತ...
17-06-26 01:41 pm
ವಾಯುಪಡೆ ಅಧಿಕಾರಿ ಪತ್ನಿಗೆ ಅಮಲು ಪದಾರ್ಥ ನೀಡಿ ಅತ್ಯ...
16-06-26 08:32 pm
SIT Car Accident: ಎಸ್ಐಟಿ ಎಸ್ಪಿ ಸೈಮನ್ ಪ್ರಯಾಣಿಸ...
16-06-26 05:10 pm
Chandrashekhar, Belthangady: ಬೆಳ್ತಂಗಡಿ ಸರ್ಕಾರ...
16-06-26 02:34 pm