ಬ್ರೇಕಿಂಗ್ ನ್ಯೂಸ್
29-07-23 04:26 pm Source: Filmy Beat ಸಿನಿಮಾ
ಕಳೆದ ಶುಕ್ರವಾರ (ಜುಲೈ 21) ಹಾಲಿವುಡ್ ಟು ಸ್ಯಾಂಡಲ್‌ವುಡ್ ಹಲವು ಬಹು ನಿರೀಕ್ಷಿತ ಸಿನಿಮಾಗಳು ಬಿಡುಗಡೆಗೊಂಡವು. ಹಾಲಿವುಡ್‌ನಲ್ಲಿ ಕ್ರಿಸ್ಟಫರ್ ನೋಲನ್ ನಿರ್ದೇಶನದ ದೊಡ್ಡ ಚಿತ್ರ ಆಪನ್‌ಹೈಮರ್ ಹಾಗೂ ಬಾರ್ಬಿ ಚಿತ್ರಗಳು ಬಿಡುಗಡೆಗೊಂಡರೆ, ಕನ್ನಡದಲ್ಲಿ ಹೊಸಬರ ಬಹು ನಿರೀಕ್ಷಿತ ಸಿನಿಮಾ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ತೆರೆಗೆ ಬಂದಿತ್ತು.
ಈ ಪೈಕಿ ಈ ಎರಡು ದೈತ್ಯ ಸಿನಿಮಾಗಳನ್ನು ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ ಓವರ್ ಟೇಕ್ ಮಾಡಿದ ಸಿನಿಮಾ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಎನಿಸಿಕೊಂಡಿದೆ. ಹೌದು, ಹೊಸಬರ ತಂಡ ಸೇರಿ ಮಾಡಿರುವ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ರಾಜ್ಯ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದ್ದು, ಮೊದಲ ದಿನಕ್ಕಿಂತ ಎರಡು ಹಾಗೂ ಮೂರನೇ ದಿನದ ಪ್ರದರ್ಶನಗಳಲ್ಲಿ ದುಪ್ಪಟ್ಟು, ಮೂರು ಪಟ್ಟು ಕಲೆಕ್ಷನ್ ಅನ್ನು ಮಾಡಿ ಕನ್ನಡ ಸಿನಿ ರಸಿಕರಿಂದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ರೀತಿ ಗೆದ್ದು ಬೀಗುವವರು ಬೇಕಾಗಿದ್ದಾರೆ ಎಂದು ಕನ್ನಡ ಸಿನಿ ರಸಿಕರು ಹಾಡಿ ಹೊಗಳುತ್ತಿದ್ದಾರೆ.
ಇನ್ನು ಈ ಚಿತ್ರ ಅದೇ ಶುಕ್ರವಾರ ಬಿಡುಗಡೆಗೊಂಡಿದ್ದ ಹಾಲಿವುಡ್‌ನ ದೊಡ್ಡ ಚಿತ್ರಗಳಾದ ಬಾರ್ಬಿ ಹಾಗೂ ಆಪನ್‌ಹೈಮರ್ ಚಿತ್ರಗಳಿಗೆ ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ ತೀವ್ರ ಪೈಪೋಟಿ ಕೊಡುತ್ತಿದ್ದು, ಈ ಎರಡೂ ಚಿತ್ರಗಳಿಗೆ ಆರಂಭದ ದಿನಗಳಲ್ಲಿ ಸಿಕ್ಕಿದ್ದ ಪ್ರದರ್ಶನಗಳನ್ನು ಕಸಿದುಕೊಂಡಿದೆ. ಹೌದು, ಮೊದಲ ದಿನ ಕಡಿಮೆ ಸಂಖ್ಯೆಯ ಪ್ರದರ್ಶನಗಳನ್ನು ಬೆಂಗಳೂರು ವಲಯದಲ್ಲಿ ಪಡೆದುಕೊಂಡಿದ್ದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ನಂತರ ದಿನದಿಂದ ದಿನಕ್ಕೆ ಹೆಚ್ಚೆಚ್ಚು ಪ್ರದರ್ಶನಗಳನ್ನು ಪಡೆದುಕೊಂಡಿದೆ. ನಿನ್ನೆ ( ಜುಲೈ 28 ) ಮತ್ತಷ್ಟು ಹೊಸ ಚಿತ್ರಗಳು ಬಿಡುಗಡೆಗೊಂಡಿದ್ದು, ಆಪನ್‌ಹೈಮರ್ ಹಾಗೂ ಬಾರ್ಬಿ ಚಿತ್ರಗಳು ತಮ್ಮ ಶೋಗಳನ್ನು ಬೆಂಗಳೂರಿನಲ್ಲಿ ಕಳೆದುಕೊಂಡಿದ್ದರೂ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಮಾತ್ರ ಇನ್ನೂ ಸಹ ಶೋಗಳನ್ನು ಪಡೆದುಕೊಳ್ಳುವಲ್ಲಿ ಬಿಗಿಹಿಡಿತ ಸಾಧಿಸಿದೆ. ಸದ್ಯ ಇಂದು ( ಜುಲೈ 29 ) 9ನೇ ದಿನದ ಪ್ರದರ್ಶನವನ್ನು ಚಿತ್ರ ಕಾಣುತ್ತಿದ್ದು, ಇಂದೂ ಸಹ ತನ್ನ ಹವಾ ಮುಂದುವರಿಸಿದೆ. ಹಾಗಿದ್ದರೆ ಈ 9 ದಿನಗಳಲ್ಲಿ ಚಿತ್ರಗಳು ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ, ಆಪನ್‌ಹೈಮರ್ ಹಾಗೂ ಬಾರ್ಬಿ ಚಿತ್ರಗಳು ಎಷ್ಟು ಪ್ರದರ್ಶನಗಳನ್ನು ಪಡೆದುಕೊಂಡಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ..
ಜುಲೈ 21 : ಆಪನ್‌ಹೈಮರ್ - 394 ಪ್ರದರ್ಶನಗಳು
ಮಿಷನ್ ಇಂಪಾಸಿಬಲ್ - 157 ಪ್ರದರ್ಶನಗಳು
ಬೇಬಿ - 139 ಪ್ರದರ್ಶನಗಳು
ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ - 132 ಪ್ರದರ್ಶನಗಳು
ಜುಲೈ 22: ಆಪನ್‌ಹೈಮರ್ - 383 ಪ್ರದರ್ಶನಗಳು
ಬಾರ್ಬಿ - 228 ಪ್ರದರ್ಶನಗಳು
ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ - 214 ಪ್ರದರ್ಶನಗಳು
ಮಿಷನ್ ಇಂಪಾಸಿಬಲ್ - 162 ಪ್ರದರ್ಶನಗಳು
ಜುಲೈ 23: ಆಪನ್‌ಹೈಮರ್ - 380 ಪ್ರದರ್ಶನಗಳು
ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ - 214 ಪ್ರದರ್ಶನಗಳು
ಬಾರ್ಬಿ - 246 ಪ್ರದರ್ಶನಗಳು
ಜುಲೈ 24: ಆಪನ್‌ಹೈಮರ್ - 362 ಪ್ರದರ್ಶನಗಳು
ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ - 274 ಪ್ರದರ್ಶನಗಳು
ಬಾರ್ಬಿ - 241 ಪ್ರದರ್ಶನಗಳು
ಜುಲೈ 25: ಆಪನ್‌ಹೈಮರ್ - 354 ಪ್ರದರ್ಶನಗಳು
ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ - 281 ಪ್ರದರ್ಶನಗಳು
ಬಾರ್ಬಿ - 240 ಪ್ರದರ್ಶನಗಳು
ಜುಲೈ 26: ಆಪನ್‌ಹೈಮರ್ - 350 ಪ್ರದರ್ಶನಗಳು
ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ - 290 ಪ್ರದರ್ಶನಗಳು
ಬಾರ್ಬಿ - 237 ಪ್ರದರ್ಶನಗಳು
ಜುಲೈ 28: ಬ್ರೋ: 355 ಪ್ರದರ್ಶನಗಳು
ರಾಕಿ ಔರ್ ರಾಣಿ ಪ್ರೇಮ್ ಕಹಾನಿ - 242 ಪ್ರದರ್ಶನಗಳು
ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ - 211 ಪ್ರದರ್ಶನಗಳು
ಆಪನ್‌ಹೈಮರ್ - 201 ಪ್ರದರ್ಶನಗಳು
ಬಾರ್ಬಿ - 129 ಪ್ರದರ್ಶನಗಳು
ಜುಲೈ 29: ಬ್ರೋ: 320 ಪ್ರದರ್ಶನಗಳು
ರಾಕಿ ಔರ್ ರಾಣಿ ಪ್ರೇಮ್ ಕಹಾನಿ - 240 ಪ್ರದರ್ಶನಗಳು
ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ - 221 ಪ್ರದರ್ಶನಗಳು
ಆಪನ್‌ಹೈಮರ್ - 198 ಪ್ರದರ್ಶನಗಳು
ಬಾರ್ಬಿ - 139 ಪ್ರದರ್ಶನಗಳು
Hostel hudugaru bekagiddare movie got more shows than oppenheimer in bangalore on 29th july.
18-04-25 05:38 pm
HK News Desk
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
Chennaiyya Swamiji, Caste census: ಪರಿಶಿಷ್ಟ ಜಾ...
17-04-25 11:41 am
Shamanur, CM Siddaramaiah: ರಾಜ್ಯದಲ್ಲಿ ಲಿಂಗಾಯತ...
16-04-25 11:03 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
18-04-25 10:17 pm
Mangalore Correspondent
Mangalore Waqf Protest, Adyar, Police, Live:...
18-04-25 12:54 pm
Waqf Protest, Mangalore, Traffic: ಎಪ್ರಿಲ್ 18...
17-04-25 11:06 pm
Karnataka High Court, Waqf protest Mangalore...
17-04-25 10:27 pm
ಸುರತ್ಕಲ್ ಎನ್ಐಟಿಕೆ ಸಂಸ್ಥೆಯಲ್ಲಿ ಮಹತ್ತರ ಫೈಲ್ ಡಿಲ...
17-04-25 04:39 pm
18-04-25 10:59 pm
Mangalore Correspondent
Hyderabad Murder, Mother suicide: ತೆಂಗಿನಕಾಯಿ...
18-04-25 08:14 pm
Dead Baby Found, Garbage, Bangalore crime: ಅಪ...
18-04-25 03:41 pm
Ullal Gang rape, Mangalore, Arrest: ಪಶ್ಚಿಮ ಬಂ...
17-04-25 09:56 pm
Gang Rape, Mangalore, Ullal, Crime: ಪಶ್ಚಿಮ ಬಂ...
17-04-25 03:19 pm