ಬ್ರೇಕಿಂಗ್ ನ್ಯೂಸ್
01-08-23 07:51 pm Source: Filmy Beat kannada ಸಿನಿಮಾ
ಕನ್ನಡದಲ್ಲಿ ಹಲವಾರು ವ್ಯಕ್ತಿಗಳ ಬಯೋಪಿಕ್‌ಗಳು ಬೆಳ್ಳಿತೆರೆ ಮೇಲೆ ಮೂಡಿಬಂದಿವೆ. ಇನ್ನು ಬಯೋಪಿಕ್ ವಿಚಾರಕ್ಕೆ ಬಂದರೆ ಕನ್ನಡದಲ್ಲಿ ರೌಡಿಗಳ ಜೀವನಾಧಾರಿತ ಚಿತ್ರಗಳೇ ಹೆಚ್ಚಾಗಿ ಮೂಡಿ ಬಂದಿವೆ. ಇವುಗಳನ್ನು ಹೊರತುಪಡಿಸಿ ಬೇರೆಯವರ ಬಯೋಪಿಕ್ ಹುಡುಕಿದರೆ ಸಿಗುವುದು ಅಲ್ಲೊಂದು ಇಲ್ಲೊಂದು.
ಇನ್ನು ಸಿನಿಮಾಗಳಲ್ಲಿ ರಾಜಕಾರಣಿಗಳ ಜೀವನಾಧಾರಿತ ಸಿನಿಮಾಗಳು ಬಂದಿರುವುದು ತುಂಬಾ ಕಡಿಮೆಯೇ. ಆದರೆ ಇತ್ತೀಚಿನ ದಿನಗಳಲ್ಲಿ ರಾಜಕಾರಣಿಗಳ ಬಯೋಪಿಕ್‌ಗೆ ಸಿನಿ ರಸಿಕರು ತುಸು ಆಸಕ್ತಿ ತೋರಿದಂತಿದೆ. ಹೌದು, 2019ರಲ್ಲಿ ನರೇಂದ್ರ ಮೋದಿ ಅವರ ಬಯೋಪಿಕ್ ಪಿ ಎಂ ನರೇಂದ್ರ ಮೋದಿ ತೆರೆಗೆ ಬಂದಿತ್ತು. ಅಲ್ಲದೇ 2021ರಲ್ಲಿ ತಮಿಳುನಾಡಿನ ಕ್ರಾಂತಿಕಾರಿ ರಾಜಕಾರಣಿ ಜಯಲಲಿತಾ ಅವರ ಬಯೋಪಿಕ್ ತಲೈವಿ ಸಹ ಬಿಡುಗಡೆಯಾಗಿತ್ತು. ಕೇವಲ ಬಯೋಪಿಕ್ ಚಲನಚಿತ್ರ ಮಾತ್ರವಲ್ಲದೇ ಜಯಲಲಿತಾ ಜೀವನಾಧಾರಿತ ವೆಬ್ ಸರಣಿ ಕ್ವೀನ್ ಸಹ ಬಿಡುಗಡೆಯಾಗಿತ್ತು.
ಜಯಲಲಿತಾ ಬಯೋಪಿಕ್‌ನಲ್ಲಿ ಜಯಲಲಿತಾ ಪಾತ್ರದಲ್ಲಿ ಮಿಂಚಿದ್ದ ನಟಿ ಕಂಗನಾ ರನೌತ್ ಇದೀಗ ಮತ್ತೋರ್ವ ರಾಜಕಾರಣಿ ಇಂದಿರಾ ಗಾಂಧಿ ಬಯೋಪಿಕ್ ಚಿತ್ರದಲ್ಲಿಯೂ ಸಹ ಬಣ್ಣ ಹಚ್ಚಿದ್ದಾರೆ. ಹೀಗೆ ಪರ ರಾಜ್ಯಗಳ ರಾಜಕಾರಣಿಗಳ ಬಯೋಪಿಕ್ ಸೆಟ್ಟೇರಿತು, ಟ್ರೈಲರ್ ಬಿಡುಗಡೆಯಾಯಿತು, ಚಿತ್ರ ಹಾಗಿದೆಯಂತೆ, ಚಿತ್ರ ಇಷ್ಟು ಗಳಿಸಿತಂತೆ ಎಂದು ಕೇಳುತ್ತಿದ್ದ ಕನ್ನಡಿಗರಿಗೆ ಇದೀಗ ಕರ್ನಾಟಕದ ರಾಜಕಾರಣಿಯ ಬಯೋಪಿಕ್ ಅನ್ನು ತೆರೆ ಮೇಲೆ ನೋಡುವ ಅವಕಾಶ ಸನಿಹದಲ್ಲಿದೆ.
ಹೌದು, ಕಾಂಗ್ರೆಸ್ ಪಕ್ಷದ ನಾಯಕ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೀವನಾಧಾರಿತ ಸಿನಿಮಾವನ್ನು ತೆರೆ ಮೇಲೆ ತರಲು ಭರದ ಸಿದ್ಧತೆಗಳು ನಡೆದಿವೆ. ಮಾರ್ಚ್ 30ರಂದು ಈ ಚಿತ್ರದ ಕುರಿತು ಪೋಸ್ಟರ್ ಸಹ ಬಿಡುಗಡೆಗೊಂಡಿತ್ತು. ಮಾರ್ಚ್ 30ರಂದು ಶ್ರೀ ರಾಮನವಮಿ ಹಬ್ಬದ ಪ್ರಯುಕ್ತ ಈ ಚಿತ್ರದ ಪೋಸ್ಟರ್ ಬಿಡುಗಡೆಗೊಂಡಿತ್ತು. ಚಿತ್ರಕ್ಕೆ ಲೀಡರ್ ರಾಮಯ್ಯ ಎಂದು ಹೆಸರಿಡಲಾಗಿದ್ದು, ಎ ಕಿಂಗ್ ರೈಸ್ಡ್ ಬೈ ದ ಪೀಪಲ್ ಎಂಬ ಅಡಿಬರಹವನ್ನು ಬರೆಯಲಾಗಿತ್ತು. ಈ ಚಿತ್ರಕ್ಕೆ ನಿರ್ದೇಶಕ ಸತ್ಯರತ್ನಂ ನಿರ್ದೇಶನ ಹಾಗೂ ಚಿತ್ರಕಥೆ ಇದ್ದು, ಎಂ ಎಸ್ ಕ್ರಿಯೇಟಿವ್ ವರ್ಕ್ಸ್ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿದೆ. ಇನ್ನು ಈ ಚಿತ್ರ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ತಯಾರಾಗಲಿದ್ದು, ಪ್ಯಾನ್ ಇಂಡಿಯಾ ಸಿನಿಮಾವಾಗಲಿದೆ. ಇನ್ನು ಈ ಚಿತ್ರದಲ್ಲಿ ಸಿದ್ದರಾಮಯ್ಯ ಅವರ ಪಾತ್ರವನ್ನು ತಮಿಳಿನ ಪ್ರತಿಭಾವಂತ ನಟ ವಿಜಯ್ ಸೇತುಪತಿ ನಿರ್ವಹಿಸಲಿದ್ದಾರೆ ಎಂಬ ಮಾತುಗಳು ಈ ಹಿಂದಿನಿಂದಲೂ ಸಹ ಕೇಳಿ ಬರುತ್ತಿದ್ದು, ಇದೀಗ ಮೂಲಗಳೂ ಸಹ ವಿಜಯ್ ಸೇತುಪತಿ ಅವರೇ ಸಿದ್ದರಾಮಯ್ಯ ಅವರ ಪಾತ್ರ ನಿರ್ವಹಿಸಲಿದ್ದಾರೆ ಎಂಬುದನ್ನು ತಿಳಿಸಿವೆ.
ಇನ್ನು ಲೀಡರ್ ರಾಮಯ್ಯ ಚಿತ್ರ ಎರಡು ಭಾಗಗಳಲ್ಲಿ ಬರಲಿದ್ದು, ಮೊದಲ ಭಾಗದಲ್ಲಿ ಸಿದ್ದರಾಮಯ್ಯನವರ ಬಾಲ್ಯ, ಕಾಲೇಜು ಹಾಗೂ ವಕೀಲರಾಗಿದ್ದ ಕಥೆಯನ್ನು ತೋರಿಸಲಿದ್ದಾರೆ. ಈ ಭಾಗದಲ್ಲಿ ಬಾಲ್ಯದ ಹಾಗೂ ಕಾಲೇಜು ದಿನಗಳಲ್ಲಿ ಬಾಲ ನಟ ಹಾಗೂ ಬೇರೊಬ್ಬ ನಟ ಸಿದ್ದರಾಮಯ್ಯರಾಗಿ ಕಾಣಿಸಿಕೊಳ್ಳಲಿದ್ದು, ಲಾಯರ್ ಗೆಟಪ್‌ಗೆ ವಿಜಯ್ ಸೇತುಪತಿ ಬಣ್ಣ ಹಚ್ಚಲಿದ್ದಾರೆ.
Leader Ramaiah Vijay Sethupathi likely to play Siddaramaiah role in leader Ramaiah movie.
14-01-25 03:36 pm
HK News Desk
Lakshmi Hebbalkar Car Accident: ಅಡ್ಡ ಬಂದ ನಾಯಿ...
14-01-25 12:32 pm
Vijayapura News: ಕೌಟುಂಬಿಕ ಕಲಹ ; ಮಕ್ಕಳನ್ನ ಕಾಲು...
13-01-25 10:30 pm
Hassan Mangalore Suicide: ಹುಡ್ಗೀರು ಏನ್ಮಾಡಿದ್ರ...
13-01-25 06:21 pm
ಹಸುವಿನ ಕೆಚ್ಚಲು ಕೊಯ್ದ ಪ್ರಕರಣ ; ಬಿಹಾರ ಮೂಲದ ಆರೋಪ...
13-01-25 10:48 am
14-01-25 07:18 pm
HK News Desk
Mahakumbh 2025: ಮಹಾ ಕುಂಭ ಮೇಳದಲ್ಲಿ ಭಾರತ ದರ್ಶನ...
13-01-25 10:49 pm
ನನ್ನ ಹೆಂಡತಿ ಸುಂದರಿಯಾಗಿದ್ದಾಳೆ, ಅವಳನ್ನು ನೋಡಲು ಇ...
13-01-25 09:58 am
ಪಾಕಿಸ್ತಾನ ಪರಮಾಣು ಇಂಧನ ಆಯೋಗದ 18 ವಿಜ್ಞಾನಿಗಳನ್ನು...
12-01-25 05:07 pm
Hollywood hills, Los Angeles fires: ಲಾಸ್ ಏಂಜ...
09-01-25 12:11 pm
14-01-25 08:36 pm
Mangalore Correspondent
\MP Brijesh Chowta, Kadaba, Solar Park: ಕಡಬ ತ...
14-01-25 02:27 pm
BJP protest, Mangalore, cow udders row: ಹಸುವ...
13-01-25 09:08 pm
Kadri Kalamele 2025, Mangalore: ಕದ್ರಿ ಕಲಾಮೇಳಕ...
13-01-25 08:43 pm
Bangalore Cow Incident: ಹಸುವಿನ ಕೆಚ್ಚಲು ಕೊಯ್ದ...
13-01-25 10:48 am
14-01-25 10:40 pm
HK News Desk
Mangalore crime, Diesel thieves: ಸುರತ್ಕಲ್ ; ಟ...
14-01-25 04:47 pm
Mangalore, Tannirbhavi beach, crime: ತಣ್ಣೀರುಬ...
13-01-25 03:30 pm
Mangalore, crime, rape: ಬ್ಯಾಂಕ್ ಉದ್ಯೋಗಿ ಯುವತಿ...
11-01-25 10:21 pm
Mumbai Crime, Fruad, Torres Ponzi: ಚೈನ್ ಸ್ಕೀಮ...
10-01-25 11:05 pm