ಬ್ರೇಕಿಂಗ್ ನ್ಯೂಸ್
10-08-23 02:38 pm Source: News18 Kannada ಸಿನಿಮಾ
ಸೌತ್ ಸೂಪರ್‌ಸ್ಟಾರ್ ರಜನಿಕಾಂತ್ ಅವರ ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಅದನ್ನು ವಿಶೇಷವಾಗಿ ಹೇಳಬೇಕಾಗಿಲ್ಲ. ಏಳನೇ ವಯಸ್ಸಿನಲ್ಲೂ ಆ್ಯಕ್ಷನ್ ಸಿನಿಮಾಗಳಲ್ಲಿ ನಟಿಸುತ್ತಿದ್ದು, ರಿಯಲ್ ಸೂಪರ್ ಸ್ಟಾರ್ ನಂತೆ ಕಾಣುತ್ತಿದ್ದಾರೆ. ಗುರುವಾರ ವಿಶ್ವಾದ್ಯಂತ ಬಿಡುಗಡೆಯಾದ ಜೈಲರ್ ಚಿತ್ರದ ಮೂಲಕ ತಲೈವಾ ಮತ್ತೊಮ್ಮೆ ತಮ್ಮ ಹವಾ ಸಾಬೀತುಪಡಿಸಿದ್ದಾರೆ. ಜೈಲರ್ ನಲ್ಲಿ ತಮ್ಮ ಆ್ಯಕ್ಷನ್ ಆ್ಯಂಗಲ್ ಗಳನ್ನು ತೋರಿಸುವ ಮೂಲಕ ಅಭಿಮಾನಿಗಳಿಗೆ ಹಾಗೂ ಇಂಡಸ್ಟ್ರಿಗೆ ಮತ್ತೊಂದು ಹಿಟ್ ಕೊಟ್ಟಿದ್ದಾರೆ ರಜನಿಕಾಂತ್.
ಸೌತ್ ಸೂಪರ್ ಸ್ಟಾರ್ ಜೈಲರ್ ಚಿತ್ರ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ಇದು ಎಲ್ಲಾ ಕಡೆ ಹಿಟ್ ಆಗಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಿರುವ ರಜನಿಕಾಂತ್ ಸ್ವಲ್ಪ ಗ್ಯಾಪ್ ನ ನಂತರ ಹಿಟ್ ಸಿನಿಮಾ ಪಡೆದಿದ್ದಾರೆ. ರಜನಿಕಾಂತ್ ಅಭಿಮಾನಿಗಳು ಡಿಫರೆಂಟ್. ಜೈಲರ್ ಚಿತ್ರದ ಮೇನಿಯಾ ಅದಕ್ಕೆ ಉದಾಹರಣೆ. ವಿದೇಶದಿಂದ ರಜನಿಕಾಂತ್ ಅಭಿನಯದ ಜೈಲರ್ ಚಿತ್ರ ವೀಕ್ಷಿಸಲು ದಂಪತಿ ಚೆನ್ನೈಗೆ ಬಂದಿದ್ದರು. ಅಭಿಮಾನಿಗಳ ಮಧ್ಯೆ ಥಿಯೇಟರ್‌ನಲ್ಲಿ ತಮ್ಮ ನೆಚ್ಚಿನ ನಟನ ಚಿತ್ರ ವೀಕ್ಷಿಸಲು ಬಂದಿದ್ದೇವೆ ಎಂದು ದಂಪತಿ ಹೇಳಿದ್ದಾರೆ.
ಜಪಾನ್‌ನ ಒಸಾಕಾ ಪಟ್ಟಣದವರಾದ ಯೂಸುದಾ ಹಿಡೆತೋಶಿ ಅವರು ತಮ್ಮ ಪತ್ನಿಯೊಂದಿಗೆ ವಿಮಾನದಲ್ಲಿ ಚೆನ್ನೈಗೆ ಬಂದಿದ್ದರು. ಜಪಾನ್ ನಲ್ಲಿ ಹೋಟೆಲ್ ಮ್ಯಾನೇಜರ್ ಆಗಿರುವ ಯೂಸುದಾ, ರಜನಿಕಾಂತ್ ಅಭಿಮಾನಿಗಳ ಸಂಘದ ನಾಯಕರೂ ಆಗಿದ್ದಾರೆ. ಜಪಾನಿ ದಂಪತಿ ಜೈಲರ್ ಟೀ ಶರ್ಟ್ ಧರಿಸಿ ಚೆನ್ನೈ ಥಿಯೇಟರ್ ನಲ್ಲಿ ಸಿನಿಮಾ ವೀಕ್ಷಿಸಿದ್ದಾರೆ. ರಜನಿಕಾಂತ್ ತಮ್ಮ ನೆಚ್ಚಿನವರು ಎಂದ ಅವರು, ಜಪಾನ್‌ನಲ್ಲಿ ಚಿತ್ರ ಪ್ರದರ್ಶನವಾಗುತ್ತಿದ್ದರೂ, ಬಿಗ್ ಸ್ಕ್ರೀನ್ನಲ್ಲಿ ನಟನನ್ನು ನೋಡಲು ಭಾರತಕ್ಕೆ ಬಂದಿದ್ದೇವೆ. ಈಗಷ್ಟೇ ಅಲ್ಲ ಈ ಹಿಂದೆಯೂ ಹಲವು ಬಾರಿ ರಜನಿಕಾಂತ್ ಅವರ ಸಿನಿಮಾವನ್ನು ಬಿಡುಗಡೆ ದಿನ ನೋಡಲು ಚೆನ್ನೈಗೆ ಬಂದಿದ್ದೆ ಎಂದರು.
ಈ ಜಪಾನಿ ದಂಪತಿ ಬುಧವಾರ ಚೆನ್ನೈ ತಲುಪಿ ಗುರುವಾರ ಬೆಳಗಿನ ಶೋ ವೀಕ್ಷಿಸಿದರು. ಚೆನ್ನೈನ ಆಲ್ಬರ್ಟ್ ಥಿಯೇಟರ್ ನಲ್ಲಿ ಜೈಲರ್ ಸಿನಿಮಾ ವೀಕ್ಷಿಸಿದ ಬಳಿಕ ತಮ್ಮ ಖುಷಿಯನ್ನು ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ. ಬಿಗ್ ಸ್ಕ್ರೀನ್ ಮೇಲೆ ರಜನಿಕಾಂತ್ ನೋಡಿದ್ರೆ ಆ ಕಿಕ್ ಬೇರೆ ಎಂದಿದ್ದಾರೆ. ರಜನಿಕಾಂತ್ ಅವರ ಸಿನಿಮಾಗಾಗಿ ಮಾಸ್ ಮತ್ತು ಕ್ಲಾಸ್ ಪ್ರೇಕ್ಷಕರು ಮಾತ್ರವಲ್ಲದೆ ಹುಡುಗರು, ಹುಡುಗಿಯರು ಮತ್ತು ಮಹಿಳೆಯರು ಸಹ ಕಾತುರದಿಂದ ಕಾಯುತ್ತಿದ್ದಾರೆ. ಅದರಲ್ಲೂ ಅವರ ನಟನಾ ಶೈಲಿ ಮತ್ತು ಡೈಲಾಗ್‌ಗಳಿಗೆ ಅಭಿಮಾನಿಗಳಲ್ಲದವರೂ ಥಿಯೇಟರ್‌ನಲ್ಲಿ ಚಪ್ಪಾಳೆ ಮತ್ತು ಶಿಳ್ಳೆ ಹೊಡೆಯುತ್ತಾರೆ.
ಜೈಲರ್ ಮೊದಲು ಬಿಡುಗಡೆಯಾದ ಚಿತ್ರಗಳು ರಜನಿಕಾಂತ್ ಅವರಿಗೆ ದೊಡ್ಡ ಹಿಟ್ ಆಗಿರಲಿಲ್ಲ. ಒಳ್ಳೆಯ ಕಥೆಯನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಜೈಲರ್ ಚಿತ್ರವು ಹಿಟ್ ಟಾಕ್‌ನೊಂದಿಗೆ ಹೌಸ್‌ಫುಲ್ ಕಲೆಕ್ಷನ್‌ಗಳೊಂದಿಗೆ ತೆರೆ ಕಾಣುತ್ತಿದೆ. ಜೈಲರ್ ಚಿತ್ರದ ಯಶಸ್ಸನ್ನು ಚಿತ್ರತಂಡವೂ ಸಂಭ್ರಮಿಸುತ್ತಿದೆ.
Rajinikanth Fan Couple Comes to India from japan to Watch Jailer.
16-01-25 05:30 pm
HK News Desk
Sp Belagavi, Minister Laxmi Hebbalkar car acc...
15-01-25 09:17 pm
ಮುಡಾ ಪ್ರಕರಣ ; ಸಿಬಿಐ ತನಿಖೆ ಕೋರಿದ್ದ ಅರ್ಜಿ ಜ.27ಕ...
15-01-25 08:22 pm
Dolly Chaiwala, Mangalore; ಅಮೆರಿಕದ ಬಿಲ್ ಗೇಟ್ಸ...
15-01-25 06:37 pm
Minister Zameer Ahmed, Bangalore; ಹಸು ಕೆಚ್ಚಲು...
15-01-25 06:21 pm
16-01-25 09:01 pm
HK News Desk
Actor Saif Ali Khan attack stabbed: ಬಾಲಿವುಡ್...
16-01-25 04:24 pm
Bonnie Blue: 12 ಗಂಟೆಯಲ್ಲಿ 1,000ಕ್ಕೂ ಅಧಿಕ ಪುರು...
15-01-25 10:51 pm
Mallikarjun Kharges, L N T chairman: ಕಾಂಗ್ರೆಸ...
15-01-25 10:06 pm
ಮಹಾ ಕುಂಭ ಮೇಳಕ್ಕೆ ಗೂಗಲ್ ಪುಷ್ಪ ವೃಷ್ಟಿ ! ಮೊಬೈಲ್...
14-01-25 07:18 pm
17-01-25 05:06 pm
HK News Desk
Mangalore accident, Konaje: ಕೊಣಾಜೆಯ ನಡುಪದವು ಬ...
17-01-25 01:43 pm
CM Siddaramaiah in Mangalore; ಸಿಎಂ ಸಿದ್ದರಾಮಯ್...
17-01-25 12:59 pm
Actor Sunil Shetty, Mangalore, Tulu Movie Jai...
17-01-25 12:45 pm
Actor Ganesh, Mangalore, Tulu movie: ನನ್ನ ಹೆಂ...
16-01-25 10:12 pm
17-01-25 03:02 pm
Mangaluru Correspondent
Bidar SBI Bank Robbery Update, Hyderabad Firi...
17-01-25 02:48 pm
Bidar SBI Bank Robbery; ಬೀದರ್; ATM ಹಣಹಾಕಲು ಬಂ...
16-01-25 03:10 pm
Fake Stock Market scam, Mangalore, Police: ನಕ...
15-01-25 11:06 pm
Kerala rape News: ಇನ್ಸ್ಟಾಗ್ರಾಂನಲ್ಲಿ ಪರಿಚಯ, ರ...
14-01-25 10:40 pm