Rajinikanth: ಯೋಗಿ ಆದಿತ್ಯನಾಥ್​ ಕಾಲಿಗೆ ಬಿದ್ದ ವಿಚಾರ! ಒಂದೇ ಮಾತಿನಲ್ಲಿ ವಿವಾದಕ್ಕೆ ಬ್ರೇಕ್ ಹಾಕಿದ ರಜನಿಕಾಂತ್

22-08-23 02:04 pm       Source: News18 Kannada   ಸಿನಿಮಾ

ಸೂಪರ್‌ಸ್ಟಾರ್ ರಜನಿಕಾಂತ್ (Super Star Rajinikanth) ಅವರು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗಿ ಸಿಎಂ ಕಾಲಿಗೆ ಬಿದ್ದು ನಮಸ್ಕರಿಸಿದ್ದು, ತೀವ್ರ ಚರ್ಚೆಗೆ ಕಾರಣವಾಗಿತ್ತು. ಲಕ್ನೋದಲ್ಲಿರುವ ಸಿಎಂ ಅಧಿಕೃತ ನಿವಾಸದಲ್ಲಿ ರಜನಿಕಾಂತ್, ಯೋಗಿ ಆದಿತ್ಯನಾಥ್ (CM Yogi Adityanath) ಅವರ ಕಾಲಿಗೆ ನಮಸ್ಕರಿಸಿದ್ರು.

ಇದೇ ವಿಚಾರಕ್ಕೆ ಕೆಲವು ತಮಿಳು ಅಭಿಮಾನಿಗಳು ರಜನಿಕಾಂತ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಟ್ರೋಲ್ ಮಾಡಿದ್ರು. ಯುವಕರ ಕಣ್ಣು ಹೇಗೆ ತೆರೆಯುತ್ತೀರಿ ಎಂದು ಕೆಲವರು ರಜನಿಕಾಂತ್ ಅವರನ್ನು ಟೀಕಿಸಿದ್ರು. ತಮಿಳಿನ ಗೌರವವನ್ನು ಯುಪಿ ಜೊತೆ ಒತ್ತೆ ಇಟ್ಟಿದ್ದೀರಾ? ಎಂದೆಲ್ಲಾ ಕಮೆಂಟ್​ ಮಾಡಿದ್ರು. ಇನ್ನು ಕೆಲವರು ರಜನಿ ಸ್ಟೈಲ್‌ಗೆ ಬೆಂಬಲ ನೀಡಿದರು.    ಈ ವಿಚಾರವಾಗಿ ಪ್ರತಿಕ್ರಿಯಿಸಿದ ರಜನಿಕಾಂತ್ ಒಂದೇ ಮಾತಿನಲ್ಲಿ ವಿವಾದಕ್ಕೆ ತೆರೆ ಎಳೆದಿದ್ದಾರೆ.

ಇತ್ತೀಚೆಗಷ್ಟೇ ಚೆನ್ನೈಗೆ ಬಂದಿಳಿದ ರಜನಿಕಾಂತ್ ಈ ವಿವಾದದ ಬಗ್ಗೆ ಮಾಧ್ಯಮಗಳ ಮುಂದೆ ಪ್ರತಿಕ್ರಿಯಿಸಿದರು. ತಮ್ಮ ಬಗ್ಗೆ ಕೇಳಿ ಬಂದ ಟೀಕೆಗಳಿಗೆ ಉತ್ತರ ನೀಡಿದರು. ಧಾರ್ಮಿಕ ಗುರುಗಳು, ಮಠಾಧೀಶರು, ಯೋಗಿ ಅಥವಾ ಸ್ವಾಮೀಜಿಗಳು ಯುವಕರಾಗಲಿ, ಹಿರಿಯರಾಗಲಿ ಅವರ ಪಾದಗಳಿಗೆ ನಮಸ್ಕರಿಸುತ್ತೇನೆ. ಅದು ನನ್ನ ಅಭ್ಯಾಸ ಎಂದು ರಜನಿಕಾಂತ್ ಹೇಳಿದ್ದಾರೆ. ಈ ಮೂಲಕ ವಿವಾದಕ್ಕೆ ತೆರೆ ಎಳೆದಂತಿದೆ.

Why Rajinikanth Touched UP CM Yogi Adityanath's Feet? The Actor Clarifies;  READ

500 ಕೋಟಿ ಭರ್ಜರಿ ಕಲೆಕ್ಷನ್​

ಇತ್ತೀಚೆಗಷ್ಟೇ ಜೈಲರ್ ಸಿನಿಮಾದ ಮೂಲಕ ರಜನಿಕಾಂತ್ ಸೂಪರ್ ಸಕ್ಸಸ್ ಪಡೆದಿದ್ದರು. ಸಿಎಂ ಯೋಗಿ ಆದಿತ್ಯನಾಥ್ ಅವರೊಂದಿಗೆ ಲಕ್ನೋದ ಪಿವಿಆರ್ ನಲ್ಲಿ ಜೈಲರ್ ಸಿನಿಮಾ ವೀಕ್ಷಿಸಿದರು. ಲಕ್ನೋದಲ್ಲಿ ಸಿನಿಮಾ ನೋಡುವ ಮುನ್ನ ‘ಸಿಎಂ ಜೊತೆ ಸಿನಿಮಾ ನೋಡುತ್ತೇನೆ, ಸಿನಿಮಾ ಹಿಟ್ ಆಗಿರುವುದು ದೇವರ ಆಶೀರ್ವಾದ’ ಎಂದು ರಜನಿ ಹೇಳಿದ್ದರು.. ಸದ್ಯ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಈ ಸಿನಿಮಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದು 500 ಕೋಟಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ.

Be it a sanyasi or...: Rajinikanth on why he touched Yogi Adityanath's feet  - India Today

ಅಯೋಧ್ಯೆಯೇ ಒಂದು ಅದ್ಭುತ

ಜೈಲರ್ ಸಿನಿಮಾ ಸಕ್ಸಸ್​ ಖುಷಿಯಲ್ಲಿರುವ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ (Super Star Rajanikanth) ನಿನ್ನೆ (ಆಗಸ್ಟ್​ 20) ಅಯೋಧ್ಯೆಗೆ ಭೇಟಿ ನೀಡಿದ್ರು. ಪತ್ನಿ ಜೊತೆಗೆ ಅಯೋಧ್ಯೆಗೆ (Ayodhya) ಭೇಟಿ ಕೊಟ್ಟ ನಟ ರಜನಿಕಾಂತ್​, ನಿರ್ಮಾಣ ಹಂತದಲ್ಲಿರುವ ರಾಮ ಮಂದಿರದ ರಾಮ ಲಲ್ಲಾ ಪ್ರತಿಮೆ ಇರಿಸಲಾಗಿರುವ ತಾತ್ಕಾಲಿಕ ದೇಗುಲಕ್ಕೆ ನಮಿಸಿದ್ರು. ರಾಮ ಮಂದಿರಕ್ಕೆ ಬರುವ ಮುನ್ನ ಹನುಮಾನ್ ಗರ್ಹಿ ದೇವಸ್ಥಾನಕ್ಕೂ ರಜನಿಕಾಂತ್ ಭೇಟಿ ನೀಡಿದ್ದರು. ಮಾಧ್ಯಮಗಳ ಜೊತೆ ಮಾತನಾಡಿದ ರಜನಿಕಾಂತ್, ತಮ್ಮ ಬಹುದಿನಗಳ ಕನಸು ನನಸಾಗಿದೆ. ಅಯೋಧ್ಯೆಗೆ ಭೇಟಿ ನೀಡುವ ಭಾಗ್ಯ ಸಿಕ್ಕಿದೆ ಎಂದು ಹೇಳಿದ್ರು. ಜೊತೆಗೆ ಅಯೋಧ್ಯೆಯೇ ಒಂದು ಅದ್ಭುತ ಎಂದು ವರ್ಣಿಸಿದ್ದರು.

Actor Rajinikanth Clarifies why he Touching Yogi Adityanath Feet.