Jawan Movie: ಕನ್ನಡ ಕಡೆಗಣಿಸಿದ್ರಾ ಶಾರುಖ್ ಖಾನ್​!? ಕನ್ನಡದಲ್ಲೇಕೆ ರಿಲೀಸ್​ ಆಗಲಿಲ್ಲ ಜವಾನ್ ಟ್ರೈಲರ್?​

31-08-23 02:33 pm       Source: News18 Kannada   ಸಿನಿಮಾ

ಬಾಲಿವುಡ್​ ನಟ ಶಾರುಖ್ ಖಾನ್ (Shah Rukh Khan)​ ಸಿನಿಮಾ ಟ್ರೈಲರ್ (Jawan Movie Trailer) ರಿಲೀಸ್​ ಆದ ಗಂಟೆಯಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ಸದ್ದು ಮಾಡ್ತಿದ್ದೆ.

ಶಾರುಖ್ ಖಾನ್ ಜವಾನ್ ಸಿನಿಮಾ ಟ್ರೈಲರ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕಿಂಗ್ ಖಾನ್ ಒಂದೊಂದು ಡೈಲಾಗ್ ಕೂಡ ಟ್ರೆಂಡ್​ ಕ್ರಿಯೇಟ್ ಮಾಡ್ತಿದೆ. ಈ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಕರುನಾಡಿನ ಶಾರುಖ್ ಖಾನ್ ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದಾರೆ. ಹಿಂದಿ, ತಮಿಳು, ತೆಲುಗಿನಲ್ಲಿ ಟ್ರೈಲರ್​ ರಿಲೀಸ್ ಮಾಡಲಾಗಿದೆ ಆದ್ರೆ ಕನ್ನಡದಲ್ಲಿ ಜವಾನ್ ಸಿನಿಮಾ ಟ್ರೈಲರ್ ರಿಲೀಸ್​  ಮಾಡಿಲ್ಲ ಎಂದು ಪ್ರಶ್ನೆ ಕೇಳ್ತಿದ್ದಾರೆ.

ಅನೇಕ ಕನ್ನಡಿಗರು ಕೂಡ ಶಾರುಖ್ ಖಾನ್ ಅಭಿಮಾನಿಗಳಾಗಿದ್ದಾರೆ. ಕರ್ನಾಟಕದಲ್ಲಿ ಶಾರುಖ್ ಸಿನಿಮಾ ಕೂಡ ಭರ್ಜರಿಯಾಗಿಯೇ ಕಲೆಕ್ಷನ್ ಮಾಡುತ್ತದೆ. ಆದ್ರೂ ಚಿತ್ರತಂಡ ಜವಾನ್ ಸಿನಿಮಾ ಟ್ರೈಲರ್​ ಅನ್ನು ಕನ್ನಡದಲ್ಲಿ ಯಾಕೆ ರಿಲೀಸ್ ಮಾಡಲಿಲ್ಲ ಎಂದು ಅನೇಕರು ಅಸಮಾಧಾನ ಹೊರಹಾಕಿದ್ದಾರೆ.

Jawan | Trailer | Shah Rukh Khan, Vijay Sethupathi, Nayanthara | jawan  teaser trailer update | SRK - YouTube

ಚಾಹಿಯೇ ತೋ ಆಲಿಯಾ ಭಟ್

ಜವಾನ್ ಟ್ರೇಲರ್‌ನಲ್ಲಿ ಶಾರುಖ್ ಖಾನ್ ಪವರ್‌ಫುಲ್ ಡೈಲಾಗ್ ಕೇಳಿ ಫ್ಯಾನ್ಸ್ ಖುಷ್ ಆಗಿದ್ದಾರೆ. ಇಲ್ಲಿ ನಾನೇ ಹೀರೋ, ನಾನೇ ವಿಲನ್ ಎಂದು ಎಂಟ್ರಿ ಕೊಟ್ಟ ಶಾರುಖ್​ ಟ್ರೈನ್ ಹೈಜಾಕ್​ ಮಾಡುತ್ತಾರೆ. ನಿನಗೆ ಏನು ಬೇಕು ಎಂದು ಕೇಳಿದ ಅಧಿಕಾರಿಗೆ  ಚಾಹಿಯೇ ತೋ ಆಲಿಯಾ ಭಟ್ ಎಂದು ಡೈಲಾಗ್ ಹೊಡೆಯುತ್ತಾರೆ. ಬಾಲಿವುಡ್ ನಟಿ ಆಲಿಯಾ ಭಟ್​ ಹೆಸರು  ಜವಾನ್​ ಖಡಕ್ ಡೈಲಾಗ್ ಭಾಗಿದೆ. ನೀವು ನನ್ನ ಮಗನನ್ನು ಮುಟ್ಟುವ ಮೊದಲು, ಅವನ ತಂದೆಯೊಂದಿಗೆ ಮಾತಾಡು ಎನ್ನುವ ಡೈಲಾಗ್​ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ದ್ವಿಪಾತ್ರದಲ್ಲಿ ಶಾರುಖ್​

ಜವಾನ್ ಸಿನಿಮಾದಲ್ಲಿ ದ್ವಿಪಾತ್ರದಲ್ಲಿ ಶಾರುಖ್ ಖಾನ್​ ಮೋಡಿ ಮಾಡಲಿದ್ದಾರೆ. ದೇಶ ಕಾಯುವ ಸೈನಿಕನಾಗಿ ಕಾಣಿಸಿಕೊಳ್ಳುವ ಕಿಂಗ್​ ಖಾನ್​, ವಿಲನ್​ ಆಗಿ ಟ್ರೈನ್​ ಹೈಜಾಕ್​ ಕೂಡ ಮಾಡಿದ್ದಾರೆ. ಶಾರುಖ್ ಖಾನ್ ಚಿತ್ರದಲ್ಲಿ ಮಾಜಿ ಸೈನಿಕನಾಗಿ ನಟಿಸಿದ್ದಾರೆ. 6 ಮಹಿಳೆಯರ ತಂಡವನ್ನು ಅವರು ದೇಶಾದ್ಯಂತ ವಿವಿಧ ದರೋಡಗಳಿಗೆ ಬಳಸಿಕೊಳ್ಳುತ್ತಾರೆ. ಮೆಟ್ರೋವನ್ನು ಹೈಜಾಕ್ ಮಾಡುತ್ತಾರೆ.  ನಯನತಾರಾ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.

ಕನ್ನಡ ಕಡೆಗಣಿಸಿದ್ರಾ ಶಾರುಖ್ ಖಾನ್​!? ಕನ್ನಡದಲ್ಲೇಕೆ ರಿಲೀಸ್​ ಆಗಲಿಲ್ಲ ಜವಾನ್  ಟ್ರೈಲರ್?​– News18 Kannada

ಶಾರುಖ್​-ನಯನತಾರಾ ರೊಮ್ಯಾನ್ಸ್​

ಶಾರುಖ್ ಇದ್ದ ಮೇಲೆ ರೊಮ್ಯಾನ್ಸ್ ಇರಲೇಬೇಕು ಅಲ್ವಾ, ಒಂದೆರಡು ದೃಶ್ಯಗಳಲ್ಲಿ ನಯನತಾರಾ ಜೊತೆ  ಶಾರುಖ್ ರೋಮ್ಯಾನ್ಸ್ ಕಾಣಬಹುದಾಗಿದೆ. ​ ದೀಪಿಕಾ ಪಡುಕೋಣೆ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕುಸ್ತಿ ಪಂದ್ಯದಲ್ಲಿ ಶಾರುಖ್ ಅವರನ್ನು ಸೋಲಿಸಿದ್ದಾರೆ. ವಿಜಯ್ ಸೇತುಪತಿ ವಿಭಿನ್ನ ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ ಆದರೆ 'ವಿಶ್ವದ ನಾಲ್ಕನೇ ಅತಿದೊಡ್ಡ ಶಸ್ತ್ರಾಸ್ತ್ರ ವ್ಯಾಪಾರಿ' ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ.

ಅಟ್ಲಿ ನಿರ್ದೇಶನದ ಆಕ್ಷನ್ ಪ್ಯಾಕ್ಡ್​ ಸಿನಿಮಾ

ಶಾರುಖ್ ಮತ್ತು ನಯನತಾರಾ ಜೊತೆಗೆ, ಜವಾನ್ ವಿಜಯ್ ಸೇತುಪತಿ , ಸನ್ಯಾ ಮಲ್ಹೋತ್ರಾ, ಪ್ರಿಯಾಮಣಿ, ಗಿರಿಜಾ ಓಕ್, ಸಂಜೀತಾ ಭಟ್ಟಾಚಾರ್ಯ, ರಿಧಿ ಡೋಗ್ರಾ ಮತ್ತು ಸುನಿಲ್ ಗ್ರೋವರ್ ಸೇರಿದಂತೆ ಇತರರು ಅಭಿನಯಿಸಿದ್ದಾರೆ. ತಮಿಳು ಸ್ಟಾರ್​ ನಿರ್ದೇಶಕ ಅಟ್ಲೀ  ಶಾರುಖ್​ಗೆ ಆ್ಯಕ್ಷನ್ ಕಟ್​ ಹೇಳಿದ್ದು, ಶಾರುಖ್ ಮತ್ತು ಗೌರಿ ಖಾನ್ ಅವರ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್  ಜವಾನ್‌ ಸಿನಿಮಾ ನಿರ್ಮಿಸಿದೆ.

Shah Rukh Khan Ignored Kannada why Jawan Trailer was not Released in Kannada.