ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿದೆ 'ಜವಾನ್'​ ; ಎರಡೇ ದಿನದಲ್ಲಿ 100 ಕೋಟಿ ರೂ. ಗಡಿ ದಾಟಿದೆ ಸಿನಿಮಾ !

09-09-23 02:35 pm       HK News Desk   ಸಿನಿಮಾ

ಬಾಲಿವುಡ್​ ಸೂಪರ್​ಸ್ಟಾರ್​ ಶಾರುಖ್​ ಖಾನ್​ ನಟನೆಯ 'ಜವಾನ್'​ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿದೆ. ಅಟ್ಲೀ ನಿರ್ದೇಶನದ ಈ ಚಿತ್ರಕ್ಕೆ ಪ್ರೇಕ್ಷಕರಿಂದ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ​ ಸಿಕ್ಕಿದೆ.

ಬಾಲಿವುಡ್​ ಸೂಪರ್​ಸ್ಟಾರ್​ ಶಾರುಖ್​ ಖಾನ್​ ನಟನೆಯ 'ಜವಾನ್'​ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿದೆ. ಅಟ್ಲೀ ನಿರ್ದೇಶನದ ಈ ಚಿತ್ರಕ್ಕೆ ಪ್ರೇಕ್ಷಕರಿಂದ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ​ ಸಿಕ್ಕಿದೆ. ಸೆಪ್ಟಂಬರ್​ 7ರಂದು ತೆರೆಕಂಡ ಚಿತ್ರ ಮೊದಲ ದಿನದ ಗಳಿಕೆಯಲ್ಲೇ ಹೊಸ ದಾಖಲೆಯನ್ನು ಬರೆದಿದೆ. ಶಾರುಖ್​ ಹೊರತುಪಡಿಸಿ, ನಯನತಾರಾ, ವಿಜಯ್​ ಸೇತುಪತಿ ಅವರಿಗೂ 'ಜವಾನ್​' ಉತ್ತಮ ಹೆಸರು ತಂದುಕೊಟ್ಟಿದೆ. ಎರಡು ದಿನದ ಕಲೆಕ್ಷನ್​ನೊಂದಿಗೆ ಸಿನಿಮಾವು ಭಾರತದಲ್ಲಿ 100 ಕೋಟಿ ರೂ. ಗಡಿ ದಾಟಿದೆ.

ಜವಾನ್​' ಕಲೆಕ್ಷನ್': 'ಜವಾನ್​' ಸಿನಿಮಾ ಮೊದಲ ದಿನವೇ ಬಾಕ್ಸ್​ ಆಫೀಸ್​ನಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದೆ. ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಬಿಡುಗಡೆಯಾದ ಚಿತ್ರ ಫಸ್ಟ್​ ಡೇ 74.5 ಕೋಟಿ ರೂಪಾಯಿಗೂ ಹೆಚ್ಚು ಸಂಪಾದಿಸಿದೆ. ಸಿನಿಮಾವು ಹಿಂದಿ ಭಾಷೆಯಲ್ಲಿ 65.50 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದ್ದರೆ, ಉಳಿದ ಮೊತ್ತವು ಸಿನಿಮಾದ ಆವೃತ್ತಿಯಿಂದ ಬಂದಿದೆ. ವಿಶ್ವದಾದ್ಯಂತ ಮೊದಲ ದಿನವೇ ಚಿತ್ರವು 100 ಕೋಟಿ ಕ್ಲಬ್​ ಸೇರಿದೆ. ಚಿತ್ರ ಸುಮಾರು 129.6 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿದೆ.

Shah Rukh Khan starrer Jawan predicted to earn Rs 100 crores+ at the box  office on opening day

Jawan Movie Review and Box office Live Updates: Shah Rukh Khan film breaks  records, packs surprises

EXCLUSIVE: Trailer Of Shah Rukh Khan's Jawan To Be Out Tomorrow, Thursday  31st August

ಸ್ಯಾಕ್ನಿಲ್​ ಅಂದಾಜು ವರದಿಯ ಪ್ರಕಾರ, ಜವಾನ್​ ಆರಂಭಿಕ ದಿನಕ್ಕಿಂತ ಎರಡನೇ ದಿನ ಕಡಿಮೆ ಗಳಿಸಿದೆ. ಚಿತ್ರವು ಸೆಕೆಂಡ್​ ಡೇ ಒಟ್ಟು 50.50 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಈ ಅಂದಾಜು ಸರಿಯಾದಲ್ಲಿ ಚಿತ್ರ ಒಟ್ಟು ಭಾರತದ ಬಾಕ್ಸ್​​ ಆಫೀಸ್​ನಲ್ಲಿ 125 ಕೋಟಿ ರೂಪಾಯಿ ಸಂಗ್ರಹಿಸಿದೆ. ವಿಶ್ವದಾದ್ಯಂತ ನೋಡುವುದಾದರೆ, ಚಿತ್ರವು 200 ಕೋಟಿ ರೂಪಾಯಿಗಳನ್ನು ದಾಟಿರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಇಂದು ಮತ್ತು ನಾಳೆ ಕಲೆಕ್ಷನ್​ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.

Jawan Box Office Day 1 Expectation: With Insane Craze All Over, India Alone  To Contribute 100 Crores Opening For Shah Rukh Khan's Biggie?

Jawan Box Office Day 1 Expectation: With Insane Craze All Over, India Alone  To Contribute 100 Crores Opening For Shah Rukh Khan's Biggie?

ಮೂರನೇ ದಿನದ ಕಲೆಕ್ಷನ್​?: ವಾರಾಂತ್ಯವಾದ ಇಂದು ಮತ್ತು ನಾಳೆ ಥಿಯೇಟರ್​ಗಳಲ್ಲಿ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗಲಿದೆ. ಚಿತ್ರವು ಮೂರನೇ ದಿನಕ್ಕೆ ಕಾಲಿಟ್ಟಿದ್ದು, 200 ಕೋಟಿಯತ್ತ ಸಾಗುತ್ತಿದೆ. ಮೊದಲ ವಾರಾಂತ್ಯದಲ್ಲಿ ವಿಶ್ವದಾದ್ಯಂತ ಜವಾನ್​ 250 ಕೋಟಿಗೂ ಹೆಚ್ಚು ಬ್ಯುಸಿನೆಸ್​ ಮಾಡಲಿದೆ. ಶನಿವಾರವಾದ ಇಂದು ಚಿತ್ರವು ಗಲ್ಲಾಪೆಟ್ಟಿಗೆ ತುಂಬಿಸಲಿದೆ. ಇಂದು ವಿಶ್ವದಾದ್ಯಂತ ಗಳಿಕೆಯೂ 200 ಕೋಟಿ ರೂಪಾಯಿಗಳನ್ನು ದಾಟಲಿದೆ. ಸ್ಯಾಕ್ನಿಲ್​ ಪ್ರಕಾರ, ಚಿತ್ರವು ಮೂರನೇ ದಿನಕ್ಕೆ ಭಾರತದಲ್ಲಿ 70 ಕೋಟಿ ಗಳಿಸಲಿದೆ. ಈ ಮೂಲಕ ವಿಶ್ವದಾದ್ಯಂತ ಚಿತ್ರದ ಕಲೆಕ್ಷನ್​ 200 ಕೋಟಿ ದಾಟಲಿದೆ.

'ಜವಾನ್' ಸಿನಿಮಾವನ್ನು ತಮಿಳು ನಿರ್ದೇಶಕ ಅಟ್ಲಿ ನಿರ್ದೇಶಿಸಿದ್ದಾರೆ.​ ಚಿತ್ರದಲ್ಲಿ ಶಾರುಖ್​ ಖಾನ್​ ಅಲ್ಲದೇ, ದಕ್ಷಿಣ ಭಾರತದ ಪ್ರಮುಖ ನಟ ನಟಿಯರಾಗಿರುವ ನಯನತಾರ, ವಿಜಯ್​​ ಸೇತುಪತಿ ಇದೇ ಮೊದಲ ಬಾರಿಗೆ ಬಾಲಿವುಡ್​ನಲ್ಲಿ ಮಿಂಚು ಹರಿಸಿದ್ದಾರೆ. ಇದರ ಜೊತೆಗೆ ಪ್ರಿಯಾಮಣಿ, ಸಾನ್ಯಾ ಮಲ್ಹೋತ್ರಾ, ರಿದ್ದಿ ಡೊಗ್ರಾ ಕೂಡ ಬಣ್ಣ ಹಚ್ಚಿದ್ದಾರೆ. ಗೌರವ ಪಾತ್ರದಲ್ಲಿ ದೀಪಿಕಾ ಪಡುಕೋಣೆ, ಸಂಜಯ್​ ದತ್​​​ ನಟನೆ ಚಿತ್ರದ ಮತ್ತೊಂದು ಹೈಲೈಟ್​ ಆಗಿದೆ.

After earth-shattering success of Pathaan, Shah Rukh Khan returned to the big screen with Atlee's Jawan. The film stars Nayanthara as the female lead and Vijay Sethupathi as the antagonist and released on September 7. On its opening day, Jawan emerged to be the biggest opener of all time in Hindi cinema, and seemingly, the Jawan fever is not going to rest anytime soon.