ಬಾಲಿವುಡ್ ಡ್ರಗ್ ನಂಟು ; ಖ್ಯಾತ ನಿರ್ದೇಶಕ ಕರಣ್ ಜೋಹರ್ ಗೆ ಎನ್ ಸಿಬಿ ಬುಲಾವ್ 

17-12-20 09:42 pm       Headline Karnataka News Network   ಸಿನಿಮಾ

ಬಾಲಿವುಡ್ ಡ್ರಗ್​ ಪ್ರಕರಣ ಸಂಬಂಧಿಸಿ ಖ್ಯಾತ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್​ಗೆ ಎನ್​ಸಿಬಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.

ಮುಂಬೈ, ಡಿ.17: ಬಾಲಿವುಡ್ ಡ್ರಗ್​ ಪ್ರಕರಣ ಸಂಬಂಧಿಸಿ ಖ್ಯಾತ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್​ಗೆ ಎನ್​ಸಿಬಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.

ಬಾಲಿವುಡ್ ನಟ- ನಟಿಯರ ಮಾದಕವಸ್ತು ಜಾಲದ ನಂಟಿನ ಬಗ್ಗೆ ಎನ್‌ಸಿಬಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈಗಾಗ್ಲೇ ಹಲವು ನಟ-ನಟಿಯರನ್ನು ವಿಚಾರಣೆಗೊಳಪಡಿಸಿರುವ ಅಧಿಕಾರಿಗಳು ಈಗ ನಿರ್ಮಾಪಕ ಕರಣ್ ಜೋಹರ್​ಅವರನ್ನು ವಿಚಾರಣೆಗೆ ಕರೆದಿದ್ದಾರೆ. 

ನಟ ಸುಶಾಂತ್ ಸಿಂಗ್ ಅಸಹಜ ಸಾವು ಪ್ರಕರಣದ ಬಳಿಕ ಬಾಲಿವುಡ್​ನಲ್ಲಿ ಡ್ರಗ್ಸ್​ ದಂಧೆ ನಡೆಯುತ್ತಿರುವ ವಿಚಾರ ಹೊರಬಿದ್ದಿತ್ತು. ನಟಿಯರನ್ನು ವಿಚಾರಣೆಗೆ ಒಳಪಡಿಸಿದಾಗ, ಅವರ ಆಪ್ತರು ಡ್ರಗ್ಸ್ ಸರಬರಾಜು ಮಾಡುವ ಆರೋಪ ಕಂಡುಬಂದಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಎನ್​ಸಿಬಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. 

ಕರಣ್ ಜೋಹರ್​ ಬಗ್ಗೆ ಈ ಮೊದಲೇ ಹಲವು ಬಾರಿ ಅನುಮಾನಗಳು ವ್ಯಕ್ತವಾಗಿದ್ದವು. ಕರಣ್ ಪಾಲುದಾರಿಕೆ ಹೊಂದಿದ್ದ ಮ್ಯಾನೇಜ್ಮೆಂಟ್ ಕಂಪನಿಗಳ ಮ್ಯಾನೇಜರ್ ಸಿಕ್ಕಿಬಿದ್ದ ವೇಳೆ ಕರಣ್ ವಿಚಾರಣೆ ಆಗುತ್ತೆ ಎನ್ನಲಾಗಿತ್ತು. ಈಗ ಕೊನೆಗೂ ನೋಟಿಸ್ ಜಾರಿಯಾಗಿದ್ದು ವಿಚಾರಣೆಗೆ ಹಾಜರಾಗಲು ಸೂಚಿಸಿದ್ದಾರೆ. 

ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ, 47 ವರ್ಷದ ನಟ ಅರ್ಜುನ್ ರಾಂಪಾಲ್‌ಗೂ ಎರಡನೇ ಬಾರಿ ನೋಟೀಸ್ ನೀಡಿ ವಿಚಾರಣೆಗೆ ಕರೆದಿತ್ತು. ಆದರೆ, ಅರ್ಜುನ್ ರಾಂಪಾಲ್ ಒಂದು ವಾರ ಕಾಲಾವಕಾಶ ಕೋರಿದ್ದಾರೆ. ನವೆಂಬರ್ 13 ರಂದು ಮೊದಲ ಬಾರಿ, ಎನ್‌ಸಿಬಿ ಸುಮಾರು ಏಳು ಗಂಟೆಗಳ ಕಾಲ ನಟ ರಾಂಪಾಲ್ ಅವರನ್ನು ವಿಚಾರಣೆ ನಡೆಸಿತ್ತು. ನಟನ ಆಸ್ಟ್ರೇಲಿಯಾದ ಸ್ನೇಹಿತ ಪಾಲ್ ಬಾರ್ಟೆಲ್ ಅವರನ್ನು ಮಾದಕವಸ್ತು ಸಂಬಂಧಿತ ಪ್ರಕರಣದಲ್ಲಿ ಬಂಧಿಸಿದ ನಂತರ ಇವರನ್ನು ಪ್ರಶ್ನಿಸಲಾಗಿತ್ತು. ಇದೇ ನಂಟಿನಲ್ಲಿ ಖ್ಯಾತ ಹಾಸ್ಯ ನಟಿ ಭಾರತಿ ಸಿಂಗ್ ಮತ್ತು ಅವರ ಪತಿಯನ್ನು ಎನ್‌ಸಿಬಿ ವಿಚಾರಣೆ ನಡೆಸಿತ್ತು. ನಂತರ ಬಾಂಬೆ ಹೈಕೋರ್ಟ್ ಜಾಮೀನು ನೀಡಿತ್ತು.

In the latest piece of news, the Narcotics Control Bureau (NCB) on Thursday issued summons to director-producer Karan Johar in the Bollywood drugs nexus case.