2017ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ; ಸಾಧಕರ ಲಿಸ್ಟ್ ಇಲ್ಲಿದೆ

25-04-22 01:08 pm       Source: Vijayakarnataka   ಸಿನಿಮಾ

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಡಾ. ರಾಜ್‌ಕುಮಾರ್‌ ಅವರ 94ನೇ ಜನ್ಮ ದಿನಾಚರಣೆ ಮತ್ತು 2017ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು...

ಶೀಘ್ರದಲ್ಲೇ ಅರಮನೆ ಮೈದಾನದಲ್ಲಿ ಬೃಹತ್‌ ಕಾರ್ಯಕ್ರಮವೊಂದನ್ನು ಆಯೋಜಿಸಿ, ದಿವಂಗತ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಡಾ. ರಾಜ್‌ಕುಮಾರ್‌ ಅವರ 94ನೇ ಜನ್ಮ ದಿನಾಚರಣೆ ಮತ್ತು 2017ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, "ನಟನೆ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ಮಾಡಲು ಅರ್ಹವಾದ ನಟ ರಾಜ್‌ ಕುಮಾರ್‌ ಆಗಿದ್ದಾರೆ. ಹುಟ್ಟಿದಾಗ ಪ್ರತಿಯೊಬ್ಬರು ಮುಗ್ಧವಾಗಿರುತ್ತಾರೆ. ಅಣ್ಣಾವ್ರು ಜೀವನದ ಅಂತ್ಯದವರೆಗೂ ತಮ್ಮ ಮಗುವಿನ ಮುಗ್ಧತೆಯನ್ನು ಕಾಪಾಡಿಕೊಂಡಿದ್ದವರು. ಇದು ಅತ್ಯಂತ ದೊಡ್ಡ ಸಾಧನೆ" ಎಂದರು. "ವಾಣಿಜ್ಯ ಮಂಡಳಿಯು ಸರಕಾರದ ಸಬ್ಸಿಡಿಯನ್ನು 120 ಸಿನಿಮಾದಿಂದ 150ಕ್ಕೆ ಹೆಚ್ಚಿಸಲು ಬೇಡಿಕೆ ಇಟ್ಟಿತ್ತು. ಅದನ್ನು 200ಕ್ಕೆ ಏರಿಕೆ ಮಾಡಲಾಗಿದೆ. ಹಾಗಾಗಿ, ಚಿತ್ರರಂಗಧಿದವರು ಗುಣಮಟ್ಟದ ಸಿನಿಮಾಗಳನ್ನು ಮಾಡಬೇಕು. ಮೈಸೂರಿನಲ್ಲಿ ಚಿತ್ರನಗರಿ ನಿರ್ಮಿಸಲಾಗುತ್ತಿದ್ದು, ಇದೇ ವರ್ಷದಲ್ಲಿ ಕಾಮಗಾರಿ ಆರಂಭವಾಗಲಿದೆ," ಎಂದರು.

Did you know these facts about Dr Rajkumar? | The Times of India

ರಾಘವೇಂದ್ರ ರಾಜ್‌ಕುಮಾರ್‌ ಅವರು ಮಾತನಾಡಿದರು. ಚಲನಚಿತ್ರ ಅಕಾಧಿಡೆಮಿಯ ಅಧ್ಯಕ್ಷ ಸುನೀಲ್‌ ಪುರಾಣಿಕ್‌, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್‌.ಜೈರಾಜ್‌, ನಿರ್ಮಾಪಕ ಎಸ್‌.ಎ. ಚಿನ್ನೇಗೌಡ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ಎನ್‌.ಮಂಜುನಾಥ್‌ ಪ್ರಸಾದ್‌, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಡಾ. ಪಿ.ಎಸ್‌.ಹರ್ಷ ಉಪಸ್ಥಿತರಿದ್ದರು. ಸಮಾರಂಭಕ್ಕೆ ಮುನ್ನ ಸೋನುಗೌಡ ಮತ್ತು ದೀಕ್ಷಿತ್‌ ಶೆಟ್ಟಿ ತಂಡವು ಅಣ್ಣಾವ್ರ ಮತ್ತು ಪುನೀತ್‌ ಹಾಡುಗಳಿಗೆ ನೃತ್ಯ ಮಾಡಿದರು. ಮನೋಜವಂ ಸಾರಥ್ಯದಲ್ಲಿ ಗಾಯನ ನಮನ ನಡೆಯಿತು.

Raghavendra Rajkumar: Raghavendra Rajkumar to play a man like him in his  next | Kannada Movie News - Times of India

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ Basavaraj Bommai ಅವರು ಇಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿದ್ದ ಡಾ. ರಾಜ್ ಕುಮಾರ್ ಅವರ ಜನ್ಮ ದಿನಾಚರಣೆ ಹಾಗೂ 2017ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಮಾಡಿದರು. ಚಿತ್ರನಟಿ ಲಕ್ಷ್ಮೀ ಅವರಿಗೆ ಜೀವಮಾನ ಸಾಧನೆಗೆ ಡಾ. ರಾಜಕುಮಾರ ಪ್ರಶಸ್ತಿ ಪ್ರದಾನ ಮಾಡಿದರು.

bommai: Karnataka CM Basavaraj Bommai calls Hubballi violence a 'big  conspiracy' | Hubballi News - Times of India

ಖ್ಯಾತ ನಿರ್ದೇಶಕ ಎಸ್ ನಾರಾಯಣ ಅವರಿಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಪ್ರದಾನ ಮಾಡಿದರು. ವಿಷ್ಣು ವರ್ಧನ ಪ್ರಶಸ್ತಿ ದಿ. ಜಿ ಎಂ ಲಕ್ಷ್ಮೀಪತಿ ಅವರಿಗೆ ಘೋಷಿಸಲಾಯಿತು. ಪ್ರಶಸ್ತಿಯನ್ನು ಲಕ್ಷ್ಮೀಪತಿ ಅವರ ಪರವಾಗಿ ಅವರ ಪುತ್ರ ರಾಮ್ ಪ್ರಸಾದ ಅವರು ಸ್ವೀಕರಿಸಿದರು. ಇನ್ನುಳಿದಂತೆ 2017ನೇ ಸಾಲಿನ ಕನ್ನಡ ಚಲನಚಿತ್ರ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

ಲಕ್ಷ್ಮಿ- ಡಾ.ರಾಜ್‌ಕುಮಾರ್‌ ಪ್ರಶಸ್ತಿ
ನಾರಾಯಣ್‌- ಪುಟ್ಟಣ್ಣ ಕಣಗಾಲ್‌ ಪ್ರಶಸ್ತಿ
ಜಿ.ಎನ್‌.ಲಕ್ಷ್ಮೇ ಪತಿ - ಡಾ. ವಿಷ್ಣುವರ್ಧನ್‌ ಪ್ರಶಸ್ತಿ
ಮೊದಲ ಅತ್ಯುತ್ತಮ ಚಲನಚಿತ್ರ- ಶುದ್ಧಿ
ದ್ವೀತಿಯ ಅತ್ಯುತ್ತಮ ಚಿತ್ರ- ಮಾರ್ಚ್ 22
3ನೇ ಅತ್ಯುತ್ತಮ ಚಿತ್ರ- ಪಡ್ಡಾಯಿತ(ತುಳು)
ಸಾಮಾಜಿಕ ಕಾಳಜಿ ಚಿತ್ರ- ಹೆಬ್ಬೆಟ್‌ ರಾಮಕ್ಕ ಜನಪ್ರಿಯ ಚಿತ್ರ- ರಾಜಕುಮಾರ
ಮಕ್ಕಳ ಚಿತ್ರ- ಎಳೆಯರು ನಾವು ಗೆಳೆಯರು
ಪ್ರಥಮ ನಿರ್ದೇಶನದ ಚಿತ್ರ- ಅಯನ ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ: ಸೋಫಿಯಾ(ಕೊಂಕಣಿ)
ಅತ್ಯುತ್ತಮ ನಟ- ವಿಶೃತ್‌ ನಾಯ್ಕ (ಮಂಜರಿ)
ಅತ್ಯುತ್ತಮ ನಟಿ- ತಾರಾ ಅನುರಾಧ (ಹೆಬ್ಬೆಟ್‌ ರಾಮಕ್ಕ)
ಅತ್ಯುತ್ತಮ ಪೋಷಕ ನಟ- ಮಂಜುನಾಥ ಹೆಗಡೆ (ಲಕ್ಷ್ಮೇ ನಾರಾಯಣನ ಪ್ರಪಂಚನೇ ಬೇರೆ)
ಅತ್ಯುತ್ತಮ ಪೋಷಕ ನಟಿ- ರೇಖಾ (ಮೂಕ ನಾಯಕ)
ಅತ್ಯುತ್ತಮ ಕಥೆ- ಹನುಮಂತ ಜಿ ಹಾಲಿಗೇರಿ(ಕೆಂಗುಲಾಬಿ)
ಅತ್ಯುತ್ತಮ ಕಥೆ- ಅಮರೇಶ ನುಗಡೋಣಿ (ನೀರು ತಂದವರು)

Chief Minister Basavaraja Bommai Presented The Karnataka State Award